For Quick Alerts
ALLOW NOTIFICATIONS  
For Daily Alerts

ರೆಸಿಪಿ: ಸುಲಭವಾಗಿ ಮಾಡಬಹುದು ಚೈನೀಸ್ ಕೇಕ್

Posted By:
|

ಹೊಸ ವರ್ಷ ಬರ್ತಾ ಇದೆ. ಕೊರೊನ ಹಾವಳಿಯಿಂದ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ.ಹಾಗಂತ ಮನೆಯಲ್ಲಿ ಹೊಸ ವರ್ಷ ಆಚರಣೆ ಮಾಡಬಾರದೆಂಬ ಯಾವುದೇ ನಿಯಂತ್ರಣವನ್ನು ಯಾರೂ ಹೇರಿಲ್ಲ. ನಿಮ್ಮ ಕುಟುಂಬದವರ ಹಾಗೂ ಪ್ರೀತಿ ಪಾತ್ರರ ಜೊತೆಗೆ ಹೊಸ ವರ್ಷವನ್ನು ಸ್ವಾಗತಿಸಬಹುದು. ಹೊಸ ವರ್ಷಕ್ಕೆ ಮೊದಲು ಬೇಕಾಗೋದು ವಿಧವಿಧವಾದ ಸ್ವೀಟ್ಸ್ ಹಾಗೂ ಕೇಕ್‌ಗಳು.

Chinese New Year Cake Recipe

ಹೆಚ್ಚಿನವರು ಮನೆಯಲ್ಲಿಯೇ ವಿವಿಧ ತರಹದ ಕೇಕ್ ತಯಾರಿಸಿ, ಮನೆಯವರೆನ್ನೆಲ್ಲಾ ಸಂತೋಷಗೊಳಸಿಬೇಕು ಎಂಬ ಆಸೆ ಹೊಂದಿರುತ್ತಾರೆ.

ಅಂತಹವರಿಗೆ ಇಂದು ನಾವು ಸುಲಭವಾಗಿ ಯಾವುದೇ ಓವನ್ ಇಲ್ಲದೇ ಸರಳವಗಿ ಕೇಕ್ ತಯಾರಿಸುವುದು ಎಂಬುದನ್ನು ಹೇಳಿದ್ದೇವೆ. ಈ ಕೇಕ್‌ನ್ನು ಮನೆಯಲ್ಲಿಯೇ ತಯಾರಿಸಿ ಹಾಗೂ ಹೊಸ ವರ್ಷವನ್ನು ಸಿಹಿಯಿಂದ ಸ್ವಾಗತಿಸಿ.

Chinese New Year Cake Recipe, ಚೈನೀಸ್ ಕೇಕ್ ರೆಸಿಪಿ
Chinese New Year Cake Recipe, ಚೈನೀಸ್ ಕೇಕ್ ರೆಸಿಪಿ
Prep Time
30 Mins
Cook Time
30M
Total Time
1 Hours0 Mins

Recipe By: Shreeraksha

Recipe Type: sweet

Serves: 4

Ingredients
  • ಬೇಕಾಗುವ ಸಾಮಾಗ್ರಿಗಳು:

    2 ಕಪ್ ಬಿಸಿ ನೀರು

    1 ಪ್ಯಾಕೇಜ್ ಚೈನೀಸ್ ಬ್ರೌನ್ ಶುಗರ್

    3 ಕಪ್ ಸಿಹಿ ಅಕ್ಕಿ ಹಿಟ್ಟು (ಸುಮಾರು 3 ಕಪ್)

    2 ಚಮಚ ವೆಜೆಟೇಬಲ್ ಎಣ್ಣೆ

    2 ಚಮಚ ಬಾದಾಮಿ ಪೌಡರ್

    1/2 ಚಮಚ ಹುರಿದ ಎಳ್ಳು

    ಅಲಂಕರಿಸಲು 10 ಒಣಗಿದ ಖರ್ಜೂರ

Red Rice Kanda Poha
How to Prepare
  • ತಯಾರಿಸುವ ವಿಧಾನ:

    1. ಸಮನಾದ ಅಳತೆಯೊಂದಿಗೆ ನೀರು ಮತ್ತು ಬೌನ್ ಶುಗರ್‌ನ್ನು ಪಾತ್ರೆಗೆ ಸೇರಿಸಿ. ಇದನ್ನು ಮೀಡಿಯಂ ಫ್ಲೇಮ್‌ನೊಂದಿಗೆ ಕಾಯಿಸಿ. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ಸುಮಾರು 10 ನಿಮಿಷಗಳವರೆಗೆ ಬೆರೆಸಿ.(ಅದನ್ನು ಕುದಿಯಲು ಬಿಡಬೇಡಿ.) ಸ್ಟವ್ ಆಫ್ ಮಾಡಿ, ಮುಟ್ಟಲು ಆಗುವಷ್ಟು ತಣ್ಣಗಾಗಲು ಬಿಡಿ.

    2. ಮಿಕ್ಸಿಂಗ್ ಬೌಲ್‌ನಲ್ಲಿ ಅಕ್ಕಿ ಹಿಟ್ಟನ್ನು ಹಾಕಿ, ಅದಕ್ಕೆ ಸಕ್ಕರೆ ನೀರಿನ ಮಿಶ್ರಣವನ್ನು ನಿಧಾನವಾಗಿ ಸುರಿಯುತ್ತಾ, ಅಕ್ಕಿಹಿಟ್ಟನ್ನು ನಿಧಾನವಾಗಿ ಮಿಶ್ರಣ ಮಾಡುತ್ತಾ ಬನ್ನಿ. ಸುಮಾರು 2ನಿಮಿಷಗಳ ಕಾಲ ಹದ ದೊರೆಯುವ ತನಕ ಮಿಶ್ರಣ ಮಾಡಿ.

    3. ಇದಕ್ಕೆ ಎರಡು ಚಮಚದಷ್ಟು ಎಣ್ಣೆಯನ್ನು ಸೇರಿಸಿ ಮತ್ತು ಈ ಎಣ್ಣೆ ಮಿಶ್ರಣದೊಂದಿಗೆ ಸರಿಯಾಗಿ ಹೊಂದಿಕೆ ಆಗುವವರೆಗೂ ತಿರುಗಿಸಿ. ಸುಮಾರು 5 ನಿಮಿಷಗಳ ಕಾಲ ತೆಗೆದುಕೊಳ್ಳಬಹುದು. ನಂತರ ಅದಕ್ಕೆ ಬಾದಾಮಿ ಸಾರವನ್ನು ಸೇರಿಸಿ ಮಿಶ್ರಣ ಮಾಡಿ.

    4. ನಿಮ್ಮ ಬಳಿ ಮಿಕ್ಸ್ ಮಡುವಂತಹ ಮಿಕ್ಸರ್ ಇದ್ದರೆ ಅದನ್ನು ಬಳಸಿದರೆ ಉತ್ತಮ, ಇಲ್ಲವಾದಲ್ಲಿ ಕೈಯಲ್ಲಿಯೂ ಮಿಶ್ರಣ ಮಾಡಬಹುದು.

    5. ಈ ಮಿಶ್ರಣವನ್ನು ಸಸ್ಯಜನ್ಯ ಎಣ್ಣೆ ಲೇಪನ ಮಾಡಿದ ಕೇಕ್ ಮಾಡುವ ಬಾಣಲೆಯಲ್ಲಿ ಅಥವಾ ಪಾತ್ರೆಯಲ್ಲಿ ಹಾಕಿ ಸ್ಟೀಮ್‌ನಲ್ಲಿಡಿ. ಅಂದರೆ ದೊಡ್ಡ ಪಾತ್ರೆಗೆ ನೀರು ಹಾಕಿ ಅದರೊಳಗೆ ಕೇಕ್ ಮಿಶ್ರಣ ಹಾಕಿರುವಂತಹ ಕೇಕ್ ಪ್ಯಾನ್ ಇಡಬೇಕು. ಸುಮಾರು 40 ರಿಂದ 45 ನಿಮಿಷಗಳ ಕಾಲ ಬೇಯಿಸಿ ನಂತರ ತಣ್ಣಗಾಗಲು ಬಿಡಿ.

    6. ಬಳಿಕ ಅದನ್ನು ಚಾಕುವಿನ ಸಹಾಯದಿಂದ ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ, ಖರ್ಜೂರ ಹಾಗೂ ಹುರಿದ ಎಳ್ಳಿನಿಂದ ಅಲಂಕರಿಸಿದರೆ ರುಚಿಯಾದ ಕೇಕ್ ಸವಿಯಲು ಸಿದ್ಧ.

Instructions
  • ಇದನ್ನು ನೀವು ಮೈಕ್ರೋವೇವ್‌ನಲ್ಲೂ ಮಾಡಬಹುದು
Nutritional Information
  • ಕೊಬ್ಬು- - 10ಗ್ರಾಂ
  • ಪ್ರೋಟೀನ್- - 5.2ಗ್ರಾ
[ 4.5 of 5 - 50 Users]
Story first published: Friday, December 25, 2020, 13:07 [IST]
X
Desktop Bottom Promotion