Just In
Don't Miss
- News
ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Automobiles
ಕೈಗೆಟುಕುವ ದರದ ಕ್ವಿಡ್ ಕಾರಿನ ಟಿವಿಸಿ ಬಿಡುಗಡೆಗೊಳಿಸಿದ ರೆನಾಲ್ಟ್
- Movies
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
- Education
IBPS PO/MT Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕರ ಸಂಕ್ರಾಂತಿ ಸ್ಪೆಷಲ್ ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ ಇಲ್ಲಿದೆ
ನಿಮಗೆಲ್ಲಾ ನೆನಪಿರಬಹುದು, ಚಿಕ್ಕಂದಿನಲ್ಲಿ, ಕೈಯಲ್ಲಿ ಏನೂ ಇಲ್ಲದ ಸಮಯದಲ್ಲಿ ಎಲ್ಲರ ಬಾಯಿ ಸಿಹಿ ಮಾಡುತ್ತಿದ್ದಿದ್ದು ಈ ಶೇಂಗಾ ಚಿಕ್ಕಿ. ಚೂರೇ ಕಾಸಿನಲ್ಲಿ ಕೈ ತುಂಬಾ ಸಿಹಿ ಬರುತ್ತಿದ್ದ ಕಾಲವದು. ನಮಗೆಲ್ಲಾ ಇದೇ ಹಬ್ಬದೂಟ. ಆದರೆ ಈಗಿನ ಕಾಲದಲ್ಲಿ ಇದಿಕ್ಕೂ ಬೆಲೆ ಜಾಸ್ತಿಯಾಗಿದೆ ಬಿಡಿ.
ಆದರೆ ನಾವಿಂದು ಹೇಳ ಹೊರಟಿರುವುದು ಈ ಶೇಂಗಾ ಚಿಕ್ಕಿಯ ಬೆಲೆಯ ವಿಚಾರವಲ್ಲ. ಇದರ ಪ್ರಾಮುಖ್ಯತೆಯ ಬಗ್ಗೆ. ಎಲ್ಲ ಹಬ್ಬಗಳಲ್ಲೂ ಪ್ರತಿಯೊಬ್ಬರೂ ಇಷ್ಟ ಪಟ್ತು ತಿನ್ನುವ, ತಯಾರಿಸುವ ಸಿಹಿತಿನಿಸು ಈ ಶೇಂಗಾ ಚಿಕ್ಕಿ. ಆದರೆ ಹೆಚ್ಚಿನವ್ರಿಗೆ ಇದನ್ನು ತಯಾರು ಮಾಡುವುದರಲ್ಲಿ ಗೊಂದಲವಿದೆ. ಅದನ್ನು ನಾವಿವತ್ತು ಪರಿಹರಿಸುತ್ತೇವೆ.
ಮಕರ ಸಂಕ್ರಾಂತಿ ದಿನಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಮಕರ ಸಂಕ್ರಾಂತಿ ಸ್ಪೆಷಲ್ ಈ ಶೇಂಗಾ ಚಿಕ್ಕಿಯನ್ನು ಮನೆಯಲ್ಲಿ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು ಹೇಳಲಿದ್ದೇವೆ ನೋಡಿ.
Recipe By: Shreeraksha
Recipe Type: Chikki Recipe
Serves: 4
-
ಬೇಕಾಗುವ ಸಾಮಾಗ್ರಿಗಳು:
- ಹುರಿದು ಸಿಪ್ಪೆ ತೆಗೆದ ಶೇಂಗಾ ಬೀಜ- 1 ಕಪ್
- ಬೆಲ್ಲ- ಅರ್ಧ ಕಪ್
- ತುಪ್ಪ- 1 ಅಥವಾ 2 ದೊಡ್ಡ ಚಮಚ
-
ಮಾಡುವ ವಿಧಾನ :
- ೧ ದೊಡ್ಡ ಚಮಚ ತುಪ್ಪವನ್ನು ಒಂದು ಪಾತ್ರೆಯಲ್ಲಿ ಬಿಸಿ ಮಾಡಿ ಅದಕ್ಕೆ ಬೆಲ್ಲವನ್ನು ಹಾಕಿ.
- ೨ ದೊಡ್ಡ ಚಮಚ ನೀರನ್ನು ಹಾಕಿ ಹಾಗೂ ಬೆಲ್ಲವನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
- ಎರಡೆಳೆ ಪಾಕ ಬರುವ ತನಕ ಕುದಿಸುತ್ತಿರಿ.
- ಬೇಕಾದ ಹದಕ್ಕೆ ಬಂದ ಮೇಲೆ ಹುರಿದು ಸಿಪ್ಪೆ ತೆಗೆದು, ೨ ಭಾಗ ಮಾಡಿಟ್ಟುಕೊಂಡ ಶೇಂಗಾ ಬೀಜಗಳನ್ನು ಹಾಕಿಚೆನ್ನಾಗಿ ಕಲಸಿಕೊಳ್ಳಿ ಹಾಗೂ ಉರಿಯನ್ನು ನಿಲ್ಲಿಸಿ.
- ಒಂದು ಒಂದು ತಟ್ಟೆಗೆ ತುಪ್ಪ ಸವರಿಕೊಳ್ಳಿ.
- ಅದರ ಮೇಲೆ ಚಿಕ್ಕಿ ಮಿಶ್ರಣವನ್ನು ಹಾಕಿ ಹಾಗೂ ತಟ್ಟಿ ಅಥವಾ ಲಟ್ಟಿಸಿಕೊಳ್ಳಿ.ಒಂದೇ ಸಮನಾಗಿ ದಪ್ಪಇರುವಂತೆ ತಟ್ಟಿಕೊಳ್ಳಿ.
- ಒಂದು ಚಾಕುವಿನ ಸಹಾಯದಿಂದ ಕತ್ತರಿಸುವ ಗುರುತುಗಳನ್ನು ಅದು ತಣಿಯುವ ಮುಂಚೆ ಮಾಡಿಕೊಳ್ಳಿ.
- ಪೂರ್ತಿಯಾಗಿ ತಣಿದ ಮೇಲೆ ಅದನ್ನು ಚೌಕಾಕಾರದ ಚಿಕ್ಕಿಗಳಾಗಿ ಕತ್ತರಿಸಿಕೊಳ್ಳಿ.
- ಈಗ ನಿಮ್ಮ ಸಂಕ್ರಾಂತಿ ಸ್ಪೆಷಲ್ ಶೇಂಗಾ ಚಿಕ್ಕಿ ಸವಿಯಲು ಸಿದ್ಧ.
Instruction:
ಒಂದು ಗಾಳಿಯಾಡದ ಜಾರಿನಲ್ಲಿ ಶೇಖರ ಮಾಡಿಕೊಂಡರೆ ರುಚಿಯಾದ ಈ ಕಡಲೆಕಾಯಿ ಚಿಕ್ಕಿ ಕೆಲವು ದಿನಗಳವರೆಗೆ ಕೆಡುವುದಿಲ್ಲ.
- ಮಕರ ಸಂಕ್ರಾಂತಿ ದಿನಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಮಕರ ಸಂಕ್ರಾಂತಿ ಸ್ಪೆಷಲ್ ಈ ಶೇಂಗಾ ಚಿಕ್ಕಿಯನ್ನು ಮನೆಯಲ್ಲಿ ಹೇಗೆ ಸುಲಭವಾಗಿ ತಯಾರಿಸಬಹುದು ಎಂಬುದನ್ನು ಹೇಳಲಿದ್ದೇವೆ ನೋಡಿ.
- ಬಡಿಸುವ ಪ್ರಮಾಣ - 4 ಜನ
- ಕೊಬ್ಬು - 3.9 g
- ಪ್ರೋಟೀನ್ - 2.1ಗ್ರಾಂ
- ಕಾರ್ಬೋಹೈಡ್ರೇಟ್ - 9.7 g
- ಫೈಬರ್ - 0.7 g