For Quick Alerts
ALLOW NOTIFICATIONS  
For Daily Alerts

ಪೌಷ್ಠಿಕವಾದ ‌ಕಡಲೆ-ಎಲೆಕೋಸಿನ ಪಲ್ಯ ಹೀಗೆ ಮಾಡಿ

Posted By:
|

ತರಕಾರಿ ಹೆಚ್ಚೆಚ್ಚು ಸೇವಿಸುವುದು ಆರೋಗ್ಯದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ನಿಮ್ಮ ದೇಹಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಪಡೆಯಬೇಕೆಂದರೆ ಪ್ರತಿದಿನ ಅತ್ಯುತ್ತಮ ತರಕಾರಿಗಳನ್ನು ಸೇವಿಸಬೇಕು. ಹೆಚ್ಚು ತರಕಾರಿ ಸೇವನೆಗೆ ಅತ್ಯುತ್ತಮವಾದುದ್ದೆಂದರೆ ತರಕಾರಿ ಪಲ್ಯ ಮಾಡುವುದು. ತಿನ್ನಲು ರುಚಿ ಎನಿಸುವ ಪಲ್ಯಗಳು ಆರೋಗ್ಯಕ್ಕೆ ಲಾಭದಾಯಕವೂ ಹೌದು.

ಕಾಳುಗಳು, ತರಕಾರಿ ಸೇವನೆ ಸಾಮಾನ್ಯವಾಗಿ ಮಕ್ಕಳು ಮಾಡುವುದಿಲ್ಲ. ಆದರೆ ಸ್ವಲ್ಪ ಸಿಹಿಸಿಹಿಯಾಗಿ ಅಡುಗೆ ಮಾಡಿದರೆ ಕೆಲವು ಮಕ್ಕಳು ಹೆಚ್ಚು ಇಷ್ಟ ಪಡುತ್ತಾರೆ. ಸ್ವಲ್ಪ ಸಿಹಿಯಾಗಿ ಮಾಡಿದರೆ ರುಚಿ ಅನ್ನಿಸುವ ಸಬ್ಜಿಯೊಂದರ ರೆಸಿಪಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಟೊಮೆಟೋ ಸಾರು ಮಾಡಿದಾಗ ಈ ಪಲ್ಯ ಊಟಕ್ಕೆ ಬೆಸ್ಟ್ ಕಾಂಬಿನೇಷನ್ ಆಗಿರುತ್ತದೆ.

Chana Cabbage Sabzi Recipe

ಹೌದು ಕ್ಯಾಬೇಜ್ ಮತ್ತು ಕಾಬೂಲ್ ಚೆನ್ನಾ ಕಾಳುಗಳು ಅಥವಾ ಕಾಬೂಲ್ ಕಡಲೆಕಾಳು ಬಳಸಿ ಪಲ್ಯ ಮಾಡುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ತಿಳಿಸಿಕೊಡುತ್ತಿದ್ದೇವೆ.
Chana Cabbage Sabzi Recipe
Chana Cabbage Sabzi Recipe/ಕಡಲೆ-ಎಲೆಕೋಸಿನ ಪಲ್ಯ
Chana Cabbage Sabzi Recipe/ಕಡಲೆ-ಎಲೆಕೋಸಿನ ಪಲ್ಯ
Prep Time
14 Mins
Cook Time
15M
Total Time
29 Mins

Recipe By: Sushma

Recipe Type: Sabzi

Serves: 3

Ingredients
  • ಬೇಕಾಗುವ ಸಾಮಗ್ರಿಗಳು

    ಕೋಸು- ಅರ್ಧ ಕೆಜಿ

    ಕಾಬೂಲ್ ಚೆನ್ನಾ ಕಾಳುಗಳು- ಕಾಲು ಕೆಜಿ

    ಹಸಿಮೆಣಸು- 4 ರಿಂದ 5

    ಉಪ್ಪು- ರುಚಿಗೆ ತಕ್ಕಷ್ಟು

    ಸಾಸಿವೆ- ಅರ್ಧ ಟೀ ಸ್ಪೂನ್

    ಉದ್ದಿನ ಬೇಳೆ- ಒಂದು ಟೀ ಸ್ಪೂನ್

    ಬೆಲ್ಲ- ಎರಡು ಸ್ಪೂನ್

    ಕರಿಬೇವಿನ ಸೊಪ್ಪು- 10 ರಿಂದ 12 ಎಸಳು

    ಅರಿಶಿನ- ಚಿಟಿಕೆ

    ಅಡುಗೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ-ನಾಲ್ಕು ಸ್ಪೂನ್

    ತೆಂಗಿನ ತುರಿ- ಒಂದು ಸಣ್ಣ ಕಪ್

Red Rice Kanda Poha
How to Prepare
  • ಮಾಡುವ ವಿಧಾನ

    . ಕಾಬೂಲ್ ಚೆನ್ನಾ ಕಾಳುಗಳನ್ನು 12 ತಾಸು ನೀರಿನಲ್ಲಿ ನೆನೆಸಿಡಿ.

    . ಮೊದಲಿಗೆ ಚೆನ್ನಾ ಕಾಳುಗಳಿಗೆ ಎರಡು ಲೋಟ ನೀರು ಹಾಕಿ, ಚಿಟಿಕೆ ಉಪ್ಪು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ. ಮೂರು ವಿಷಿಲ್ ಬಂದರೆ ಒಳಿತು.

    . ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ.

    . ಕೆಂಬಣ್ಣಕ್ಕೆ ಬಂದಾಗ ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸು ಸೇರಿಸಿ.ಸ್ವಲ್ಪ ಹುರಿದ ನಂತರ ಸಣ್ಣದಾಗಿ ಹೆಚ್ಚಿದ ಕೋಸಿನ ಹೋಳುಗಳನ್ನು ಹಾಕಿ.

    . ಕೋಸನ್ನು ಹೆಚ್ಚಿದ ನಂತರ ಉಪ್ಪು ಮತ್ತು ಅರಿಶಿನ ಹಾಕಿ ತೊಳೆಯಿರಿ. ನಂತರ ಬಿಸಿನೀರಿನಲ್ಲಿ ಹಾಕಿ ತೊಳೆದುಕೊಂಡರೆ ವಾಸನೆ ಕಡಿಮೆಯಾಗುತ್ತದೆ.

    . ಕೋಸು ಸ್ವಲ್ಪ ಬೆಂದ ನಂತರ ಕುಕ್ಕರ್ ನಲ್ಲಿ ಬೇಯಿಸಿದ ಕಾಳುಗಳನ್ನು ಸೇರಿಸಿ ಮಿಕ್ಸ್ ಮಾಡಿ.

    . ನಂತರ ರುಚಿಗೆ ಅಗತ್ಯವಿರುವಷ್ಟು ಉಪ್ಪು ಹಾಕಿ,ಅರಿಶಿನ ಹಾಕಿ, ಬೆಲ್ಲ ಹಾಕಿ ನೀರು ಆರುವವರೆಗೆ ಕಾಯಿರಿ.

    . ಕೊನೆಯಲ್ಲಿ ತೆಂಗಿನ ತುರಿಯಿಂದ ಅಲಂಕರಿಸಿ ಕೈಯಾಡಿದರೆ ರುಚಿರುಚಿಯಾದ ಕ್ಯಾಬೇಜ್-ಕಾಬೂಲ್ ಚೆನ್ನಾ ಪಲ್ಯ ರೆಸಿಪಿ ಸಿದ್ದವಾಗುತ್ತದೆ.

Instructions
  • ಮಕ್ಕಳಿಗೆ ಹೆಚ್ಚು ಇಷ್ಟವಾಗುವ ರೆಸಿಪಿ ಇದು. ಸಿಹಿಯಾಗಿರುವುದರಿಂದಾಗಿ ಚಪಾತಿ, ಪೂರಿಗೂ ಮ್ಯಾಚ್ ಆಗುತ್ತದೆ. ಟೊಮೆಟೋ ಸಾರಿನ ಅನ್ನಕ್ಕೆ ಈ ಪಲ್ಯ ಸೈಡ್ ಡಿಶ್ ಇದ್ದಂತೆ. ಕ್ಯಾಬೇಜ್ ಅಸಿಡಿಟಿ ಸಮಸ್ಯೆ ಇರುವವರಿಗೆ ಬಹಳ ಒಳ್ಳೆಯದು. ಇದರಲ್ಲರುವ ನ್ಯೂಟ್ರಿಯೆಂಟ್ಸ್ ಗಳು ನಿಮ್ಮ ಆರೋಗ್ಯ ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಕಾಬೂಲ್ ಕಡಲೆ ಹೆಚ್ಚುವರಿ ಸಮಸ್ಯೆ ಮಾಡುವ ಸಾಧ್ಯತೆ ಇದೆ.
Nutritional Information
  • ಕೊಬ್ಬು- - 7 ಗ್ರಾಂ
  • ಪೊಟಾಷಿಯಂ - - 170 ಮಿಲಿಗ್ರಾಂ
  • ಕಾರ್ಬೋಹೈಡ್ರೇಟ್ – - 6 ಗ್ರಾಂ
  • ಸಕ್ಕರೆ- - 10.7 ಗ್ರಾಂ
  • ಪ್ರೋಟೀನ್ - - 1.3 ಗ್ರಾಂ
[ 5 of 5 - 104 Users]
X
Desktop Bottom Promotion