Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಸಾಲೆ ಕಚೋರಿಯ ರೆಸಿಪಿ
ಕಚೋರಿಯನ್ನು ಸಿಹಿ ಕಚೋರಿ ಮತ್ತು ಮಸಾಲೆ ಕಚೋರಿ ಎಂದು ಎರಡು ರೀತಿಯಲ್ಲಿ ತಯಾರಿಸಬಹುದು. ಸಿಹಿ ಕಚೋರಿ ಸಂಜೆ ಸ್ನ್ಯಾಕ್ಸ್ ಗೆ ತಿನ್ನಲು ರುಚಿಕರವಾದರೆ, ಮಸಾಲೆ ಕಚೋರಿ ಬ್ರೇಕ್ ಫಾಸ್ಟ್ ಅಥವಾ ಡಿನ್ನರ್ ಗೆ ಬೆಸ್ಟ್.
ಈ ಹಿಂದೆ ಸಿಹಿ ಕಚೋರಿಯ ರೆಸಿಪಿ ನೀಡಿದ್ದೆವು, ಇಲ್ಲಿ ನಾವು ಮಸಾಲೆ ಕಚೋರಿಯ ರೆಸಿಪಿ ನೀಡಿದ್ದೇವೆ ನೋಡಿ:
ಬೇಕಾಗುವ ಸಾಮಾಗ್ರಿಗಳು
ತೆಂಗಿನ ತುರಿ 1 ಕಪ್
ಹಸಿ ಮೆಣಸಿನಕಾಯಿ 3
ಸಕ್ಕರೆ ಅರ್ಧ ಚಮಚ
ಅಜ್ವೈನ್ ಅರ್ಧ ಚಮಚ(ಬಡೇ ಸೋಂಪು)
ಕೊತ್ತಂಬರಿ ಪುಡಿ 1 ಚಮಚ
ಗರಂ ಮಸಾಲ 1 ಚಮಚ
ಮೈದಾ 3 ಕಪ್
ನೀರು 1 ಕಪ್
ತುಪ್ಪ 1 ಚಮಚ
ಎಣ್ಣೆ 1 ಕಪ್
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ತೆಂಗಿನಕಾಯಿ ಜೊತೆ ಹಸಿ ಮೆಣಸಿನಕಾಯಿ ಹಾಕಿ ಗಟ್ಟಿಯಾಗಿ ರುಬ್ಬಿ ಒಂದು ಬದಿಯಲ್ಲಿಡಿ.
* ಈಗ ಒಂದು ಚಮಚ ಎಣ್ಣೆ ಬಿಸಿ ಮಾಡಿ ಅದರಲ್ಲಿ ಬಡೇ ಸೋಂಪು ಹಾಕಿ, ನಂತರ ರುಬ್ಬಿದ ತೆಂಗಿನಕಾಯಿ ಹಾಕಿ 2 ನಿಮಿಷ ಹುರಿಯಿರಿ.
* ಈಗ ಜೀರಿಗೆ, ಗರಂ ಮಸಾಲ, ಕೊತ್ತಂಬರಿ ಪುಡಿ, ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ 4-5 ನಿಮಿಷ ಹುರಿಯಿರಿ.
* ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ.
* ಈಗ ಮೈದಾವನ್ನು ನೀರು ಹಾಕಿ ಗಟ್ಟಿಯಾಗಿ ಕಲೆಸಿ, ಹೀಗೆ ಕಲೆಸುವಾಗ ತುಪ್ಪವನ್ನು ಸೇರಿಸಿ ಕಲೆಸಿ. ಈಗ ಮಸ್ಲೀನ್ ಬಟ್ಟೆಯನ್ನು ಒದ್ದಿ ಮಾಡಿ, ಹಿಟ್ಟನ್ನು ಮುಚ್ಚಿ ಅರ್ಧ ಗಂಟೆ ಇಡಿ.
* ಈಗ ಮೈದಾದಿಂದ ಉಂಡೆಗಳನ್ನು ಮಾಡಿ, ಬೆರಳಿನಿಂದ ಉಂಡೆಯನ್ನು ಗುಂಡಿ ರೀತಿಯಲ್ಲಿ ಮಾಡಿ ಅದರಲ್ಲಿ ಸ್ವಲ್ಪ ಮಸಾಲೆ ತುಂಬಿ, ನಂತರ ಪೂರಿಗೆ ತಟ್ಟುವ ರೀತಿಯಲ್ಲಿ ತಟ್ಟಿ.
* ಇದೇ ಸಮಯದಲ್ಲಿ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು, ಈಗ ಕಾದ ಎಣ್ಣೆಗೆ ತಟ್ಟಿದ ಮೈದಾ ಹಿಟ್ಟನ್ನು ಹಾಕಿ, ಅದು ಕಂದು ಬಣ್ಣ ಬರುವಾಗ ತೆಗೆದರೆ ಮಸಾಲೆ ಕೋಕನೆಟ್ ಕಚೋರಿ ರೆಡಿ.



Click it and Unblock the Notifications

