Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಹಾ ಕಾಯಿ ಉಪ್ಪಿಟ್ಟು, ಒಮ್ಮೆ ರುಚಿ ನೋಡಲೇಬೇಕು
ಬೇಗನೇ ಸಿದ್ಧವಾಗುತ್ತದೆ ಎಂಬ ಕಾರಣದಿಂದ ಕಚೇರಿಗೆ ಹೋಗುವವರಲ್ಲಿ ಹೆಚ್ಚಿನವರ ಬುತ್ತಿಯಲ್ಲಿ ಉಪ್ಪಿಟ್ಟೇ ಇರುತ್ತದೆ. ಆದರೆ ಈ ಉಪ್ಪಿಟ್ಟು ತರಾತುರಿಯಲ್ಲಿ ಮಾಡಿರುವುದರಿಂದ ರುಚಿಕರವಾಗಿರುವ ಬದಲು ಒಣಗಿದಂತೆ, ಬಲವಂತವಾಗಿ ಮಧ್ಯಾಹ್ನ ತಿನ್ನುವ ಆಹಾರವಾಗಿದೆ. ಆದರೆ ಕೆಲವೇ ನಿಮಿಷಗಳ ಹೆಚ್ಚಿಗೆ ಮತ್ತು ಕೊಂಚ ಕಾಯಿತುರಿ ಸೇರಿಸುವ ಮೂಲಕ ರುಚಿರಹಿತವಾಗಿದ್ದ ಈ ಉಪ್ಪಿಟ್ಟು ಎಲ್ಲರ ಮನಗೆಲ್ಲುವ ಉಪಾಹಾರವಾಗುತ್ತದೆ. ಕಾಯಿತುರಿ ಸುಟ್ಟುಹೋಗದಂತೆ ಕೊಂಚ ಕಾಳಜಿ ವಹಿಸಿದರೆ ಸಾಕು. ಇಲ್ಲದಿದ್ದರೆ ಉಪ್ಪಿಟ್ಟಿನ ರುಚಿಯೇ ಕೆಟ್ಟುಹೋಗುತ್ತದೆ.
ಈ ಉಪ್ಪಿಟ್ಟಿನ ವಿಶೇಷವೆಂದರೆ ಇದರಲ್ಲಿ ಕಡ್ಲೆಬೇಳೆ ಮತ್ತು ಉದ್ದಿನಬೇಳೆಗಳೆರಡನ್ನೂ ಉಪಯೋಗಿಸಿರುವುದು. ಇದು ಉಪ್ಪಿಟ್ಟು ಮೆಲ್ಲುವಾಗ ನಡುನಡುವೆ ಕೊಂಚ ಗಟ್ಟಿಯಾದ ಕಾಳುಗಳು ಸಿಗುವ ಮೂಲಕ ವಿಶಿಶ್ಟ ಅನುಭವ ನೀಡುತ್ತದೆ. ರುಚಿಕರವೂ, ಆರೋಗ್ಯಕರವೂ ಆದ ಕಾಯಿ ಉಪ್ಪಿಟ್ಟನ್ನು ತಯಾರಿಸುವ ವಿಧಾನವನ್ನು ಈಗ ನೋಡೋಣ: ಕ್ಯಾಬೇಜ್ ರವೆ ಉಪ್ಪಿಟ್ಟು
ಪ್ರಮಾಣ: ಮೂವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ರವೆ : ಒಂದು ಕಪ್
*ಸಾಸಿವೆ : ಅರ್ಧ ಟೀ ಚಮಚ
*ಉದ್ದಿನ ಬೇಳೆ : ಒಂದು ಟೀ ಚಮಚ
*ಕಡ್ಲೆ ಬೇಳೆ : ಒಂದು ಟೀ ಚಮಚ
*ಒಣಮೆಣಸು: ಎರಡು (ಕಾಶ್ಮೀರಿ ಚಿಲ್ಲಿ ಆದರೆ ಮೂರು)-ಸುಮಾರು ನಾಲ್ಕು ತುಂಡು ಮಾಡಿದ್ದು
*ಕರಿಬೇವಿನ ಎಲೆ : ಒಂದು ಎಸಳು
*ಈರುಳ್ಳಿ: ಒಂದು (ಚಿಕ್ಕದು)
ಹಸಿಮೆಣಸು: ಎರಡರಿಂದ ಮೂರು (ಉದ್ದಕ್ಕೆ ಸೀಳಿದ್ದು)
ಕಾಯಿತುರಿ: ಎರಡು ದೊಡ್ಡ ಚಮಚ
ತುಪ್ಪ: ಎರಡು ಚಿಕ್ಕ ಚಮಚ
ಎಣ್ಣೆ-ಎರಡು ಚಿಕ್ಕ ಚಮಚ
ನೀರು : ಒಂದೂವರೆ ಕಪ್
ಉಪ್ಪು: ರುಚಿಗನುಸಾರ ಉಲ್ಲಾಸದ ಮನಸ್ಸಿಗೆ ಮುದವನ್ನು ನೀಡುವ ಸೇಮಿಗೆ ಉಪ್ಪಿಟ್ಟು!
ವಿಧಾನ:
1. ಮೊದಲು ರವೆಯನ್ನು ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ಕೊಂಚ ಬಿಸಿಯಾದ ಬಳಿಕ ಒಂದು ಚಮಚ ತುಪ್ಪ ಹಾಕಿ ಎಡೆಬಿಡದೇ ತಿರುವುತ್ತಾ ಇರಿ. ಇಲ್ಲದಿದ್ದರೆ ತಳದಲ್ಲಿರುವ ರವೆ ಸುಟ್ಟು ಉಪ್ಪಿಟ್ಟಿನ ರುಚಿ ಕಹಿಯಾಗುತ್ತದೆ.
2. ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ, ಹಸಿಮೆಣಸನ್ನು ಉದ್ದಕ್ಕೆ ಸೀಳಿ ಇರಿಸಿ. ಒಂದು ಚಮಚ ಕಾಯಿತುರಿಯನ್ನು ಕೊಂಚವೇ ಮಿಕ್ಸಿಯಲ್ಲಿ ಕಡೆಯಿರಿ.
3. ಒಂದು ಬಾಣಲೆ ಅಥವಾ ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆ ಹಾಕಿ ಹುರಿಯಿರಿ. ಎರಡೂ ಬೇಳೆಗಳು ಸುಮಾರು ಕಂದು ಬಣ್ಣ ಬರುವವರೆಗೆ ಹುರಿಯಿರಿ.
4. ಈಗ ಒಣಮೆಣಸು ಮತ್ತು ಬೇವಿನ ಎಲೆಗಳನ್ನು ಹಾಕಿ ಹುರಿಯಿರಿ.
5. ಬಳಿಕ ಈರುಳ್ಳಿ, ಹಸಿಮೆಣಸು ಹಾಕಿ ನೀರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ.
6. ಈರುಳ್ಳಿ ಕೆಂಪಗಾಗುತ್ತಿರುವಾಗ ಒಂದು ಚಮಚ ಕಡೆದ ಕಾಯಿತುರಿಯನ್ನು ಕೊಂಚ ಹಿಂಡಿ ಹಾಲು ಹೊರಬರುವಂತೆ ಮಾಡಿ, ಆದರೆ ಹಾಲನ್ನು ಬೇರ್ಪಡಿಸಬೇಡಿ.
7. ಈರುಳ್ಳಿ ಕೆಂಪಗಾದ ಬಳಿಕ ಕಾಯಿತುರಿ ಮತ್ತು ನೀರು ಹಾಕಿ ಉಪ್ಪು ಸೇರಿಸಿ.
8. ಕುದಿ ಬಂದ ಬಳಿಕ ಉರಿಯನ್ನು ಚಿಕ್ಕದಾಗಿಸಿ ರವೆಯನ್ನು ಹಾಕಿ ತಕ್ಷಣ ತಿರುವಲು ಪ್ರಾರಂಭಿಸಿ.
9. ನೀರು ಇಂಗಿದ ಬಳಿಕ ಉಳಿದ ಒಂದು ಚಮಚ ತುಪ್ಪ ಹಾಕಿ ಮತ್ತೊಮ್ಮೆ ತಿರುವಿ ಪಾತ್ರೆಯ ಮುಚ್ಚಳ ಮುಚ್ಚಿ.
10. ಸುಮಾರು ಐದರಿಂದ ಆರು ನಿಮಿಷ ಹಾಗೇ ಬಿಡಿ. ಈ ಹೊತ್ತಿಗೆ ರವೆ ಚೆನ್ನಾಗಿ ಬೆಂದಿರಬೇಕು. ಬಳಿಕ ಉರಿ ನಂದಿಸಿ ಒಲೆಯಿಂದ ಇಳಿಸಿ.
11. ಬಳಿಕ ಉಳಿದ ಕಾಯಿತುರಿಯನ್ನು ಮೇಲೆ ಸಿಂಪಡಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿಬಿಸಿಯಿರುವಂತೆಯೇ ಬಡಿಸಿ.
ಸಲಹೆ:
*ಕಡ್ಲೆಬೇಳೆಯೊಂದಿಗೆ ಶೇಂಗಾಬೀಜಗಳನ್ನೂ ಸೇರಿಸಬಹುದು.
*ಕೊನೆಯದಾಗಿ ಕಾಯಿತುರಿಯೊಂದಿಗೆ ಕೊಂಚ ಕೊತ್ತಂಬರಿ ಸೊಪ್ಪನ್ನೂ ಸೇರಿಸಬಹುದು. ಇದು ಉಪ್ಪಿಟ್ಟನ್ನು ಇನ್ನಷ್ಟು ರುಚಿಕರವಾಗಿಸುತ್ತದೆ.
*ಕ್ಯಾರೆಟ್ ಒಂದನ್ನು ತೆಳುವಾದ ಕಡ್ಡಿಗಳಂತೆ ಕತ್ತರಿಸಿ ಸೇರಿಸುವ ಮೂಲಕ ಉಪ್ಪಿಟ್ಟಿಗೆ ಹೆಚ್ಚಿನ ರುಚಿಯನ್ನೂ ನೀಡುವ ಜೊತೆಗೇ ನೋಡಲೂ ಚೆನ್ನಾಗಿರುತ್ತದೆ.



Click it and Unblock the Notifications
