Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆನಿಯನ್ ಚೀಸ್ ಪರೋಟದ ರೆಸಿಪಿ
ಪರೋಟವನ್ನು ಪ್ಲೇನ್ ಆಗಿ ಮಾಡುವ ಬದಲು ಅದಕ್ಕೆ ಸ್ವಲ್ಪ ಅಧಿಕ ಸಾಮಾಗ್ರಿಗಳನ್ನು ಸೇರಿಸಿದರೆ ಸಾಕು, ಭಿನ್ನವಾದ ರುಚಿಯ ಪರೋಟ ತಯಾರಿಸಬಹುದು ಅಲ್ಲದೆ ಇದನ್ನು ತಯಾರಿಸಲು ಮಾಮೂಲಿ ಪರೋಟಕ್ಕೆ ಹಿಡಿಯುವಷ್ಟೇ ಸಮಯ ಹಿಡಿಯುವುದರಿಂದ ಇದಕ್ಕಾಗಿ ಹೆಚ್ಚಿನ ಶ್ರಮ ಕೂಡ ಪಡಬೇಕಾಗಿಲ್ಲ.
ಇವತ್ತು ನಾವು ಈರುಳ್ಳಿ ಮತ್ತು ಚೀಸ್ ಹಾಕಿ ತಯಾರಿಸುವ ಪರೋಟದ ರೆಸಿಪಿ ನೋಡೋಣ:

ಬೇಕಾಗುವ ಸಾಮಾಗ್ರಿಗಳು:
* ಗೋಧಿ ಹಿಟ್ಟು 2 ಕಪ್
* ಮೈದಾ 1 ಕಪ್
* ಈರುಳ್ಳಿ 3
* ಕರಿಮೆಣಸಿನ ಪುಡಿ 1 ಚಮಚ
* ಚೀಸ್ ಅರ್ಧ ಕಪ್
* ತುಪ್ಪ
* ರುಚಿಗೆ ತಕ್ಕ ಉಪ್ಪು
* ನೀರು ಎರಡು ಕಪ್
ತಯಾರಿಸುವ ವಿಧಾನ:
* ಈರುಳ್ಳಿಯನ್ನು ಬಾಣಲೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಬೇಕು.
* ಈಗ ಬಟ್ಟಲಿನಲ್ಲಿ ಗೋಧಿ ಹಿಟ್ಟು, ಮೈದಾ ರುಚಿಗೆ ತಕ್ಕ ಉಪ್ಪು, ಕರಿಮೆಣಸಿನ ಪುಡಿ ನಂತರ 1 ಚಮಚ ಬಿಸಿ ತುಪ್ಪ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿ ಅದಕ್ಕೆ ಚೀಸ್ ಮತ್ತು ಈರುಳ್ಳಿ ಹಾಕಿ ಹಿಟ್ಟು ತಯಾರಿಸಿ ಸ್ವಲ್ಪ ಹೊತ್ತು ಇಡಬೇಕು.
* ನಂತರ ಹಿಟ್ಟಿನಿಂದ ಪರೋಟಕ್ಕೆ ತಟ್ಟುವ ರೀತಿಯಲ್ಲಿ ತಟ್ಟಿ ತವಾವನ್ನು ಬಿಸಿ ಮಾಡಿ ತವಾಕ್ಕೆ ತುಪ್ಪ ಹಾಕಿ, ನಂತರ ತಟ್ಟಿದ ಪರೋಟ ಹಾಕಿ ಕಂದು ಬಣ್ಣ ಬರುವವರೆಗೆ ಬೇಯಿಸಿದರೆ ಆನಿಯನ್ ಚೀಸ್ ಪರೋಟ ರೆಡಿ. ಇದನ್ನು ಚಟ್ನಿ ಅಥವಾ ಗ್ರೇವಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
