Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೆಳಗ್ಗಿನ ಉಪಹಾರಕ್ಕಾಗಿ ಮಸಾಲಾ ಆಮ್ಲೇಟ್ ರೆಸಿಪಿ
ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕಾದ ಅತ್ಯುತ್ತಮ ಸಾಮಾಗ್ರಿ ಮೊಟ್ಟೆಯಾಗಿದೆ. ನಿಮ್ಮ ದಿನವನ್ನು ಮೊಟ್ಟೆ ಸೇವಿಸುವುದರೊಂದಿಗೆ ಪ್ರಾರಂಭಿಸಿದರೆ ನೀವು ದಿನಪೂರ್ತಿ ಚಟುವಟಿಕೆಯಿಂದ ಕೂಡಿರುತ್ತೀರಿ. ಮಕ್ಕಳಿಗೂ ಇದು ಇಷ್ಟವಾದ ಖಾದ್ಯವಾಗಿದೆ, ಆದ್ದರಿಂದ ತಮ್ಮ ಊಟದಲ್ಲಿ ಪ್ರತಿಯೊಬ್ಬರೂ ಸೇರಿಸಿಕೊಳ್ಳಲೇಬೇಕಾದ ಖಾದ್ಯ ಮೊಟ್ಟೆಯಾಗಿದೆ.
ಮೊಟ್ಟೆಯ ಬಿಳಿ ಮತ್ತು ಹಳದಿ ಬಣ್ಣದ ಲೋಳೆಯು ಪೋಷಕಾಂಶಗಳಿಂದ ಕೂಡಿದ್ದು, ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. ಇಲ್ಲಿ ನಾವು ನೀಡುತ್ತಿರುವ ರೆಸಿಪಿ ಪೋಷಕಾಂಶಗಳಿಂದ ಭರಿತವಾದ ನಿಮ್ಮ ಬೆಳಗ್ಗಿನ ಉಪಹಾರಕ್ಕೆ ಹೇಳಿ ಮಾಡಿಸಿದ ಮಸಾಲಾ ಆಮ್ಲೇಟ್ ಆಗಿದೆ.
ALSO READ TOP 9 BREAKFAST MISTAKES THAT NEEDS TO BE AVOIDED

ಹಾಗಿದ್ದರೆ ಇನ್ನೇಕೆ ತಡ? ಇಂದಿನ ಉಪಹಾರವನ್ನು ಈ ಮಸಾಲಾ ಆಮ್ಲೇಟ್‌ನೊಂದಿಗೆ ಸವಿಯಿರಿ.
ಪ್ರಮಾಣ: 3
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ಸಾಮಾಗ್ರಿಗಳು
. ಮೊಟ್ಟೆ - 3
. ಈರುಳ್ಳಿ - 2 (ಕತ್ತರಿಸಿದ್ದು)
. ಟೊಮೆಟೊ - 2 (ಕತ್ತರಿಸಿದ್ದು)
. ಹಸಿಮೆಣಸು - 2 (ತುಂಡರಿಸಿದ್ದು)
. ಕ್ಯಾಪ್ಸಿಕಂ - 1 (ಕತ್ತರಿಸಿದ್ದು)
. ಕರಿಬೇವಿನ ಎಲೆ - 2 ಟೇಸ್ಪೂನ್
. ಕೇಸರಿ - 1 ಎಸಳು
. ಮೆಣಸಿನ ಹುಡಿ - 1/2 ಟೇಸ್ಪೂನ್
. ಕಾಳುಮೆಣಸಿನ ಹುಡಿ - 1 ಟೇಸ್ಪೂನ್
. ಗರಂ ಮಸಾಲಾ ಹುಡಿ - 1/2 ಟೇಸ್ಪೂನ್
. ಎಣ್ಣೆ ಕರಿಯಲು
. ಉಪ್ಪು ರುಚಿಗೆ ತಕ್ಕಷ್ಟು
Reasons Why You Should Never Skip Your Breakfast.. Read On..
ಮಾಡುವ ವಿಧಾನ
1. ಮೊದಲು ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಟ್ಟುಕೊಳ್ಳಿ. ಟೊಮೆಟೊ ಮತ್ತು ಹಸಿಮೆಣಸಿನ ಕಾಯಿಯನ್ನು ತುಂಡರಿಸಿಟ್ಟುಕೊಳ್ಳಿ, ಹಾಗೂ ಕ್ಯಾಪ್ಸಿಕಂ ಮತ್ತು ಕರಿಬೇವಿನ ಎಲೆಯನ್ನು ಕತ್ತರಿಸಿಟ್ಟುಕೊಳ್ಳಿ.
2. ಸಣ್ಣ ಬಾಣಲೆಯನ್ನು ತೆಗೆದುಕೊಳ್ಳಿ, ಅದಕ್ಕೆ ಅರಶಿನ ಹುಡಿ ಹಾಕಿ, ಹಾಗೂ ಉಪ್ಪು, ಮೆಣಸಿನ ಹುಡಿ, ಮತ್ತು ಕಾಳುಮೆಣಸಿನ ಹುಡಿಯನ್ನು ಸೇರಿಸಿ. ಗರಂ ಮಸಾಲಾ ಹುಡಿಯನ್ನು ಹಾಕಿ ಎಲ್ಲಾವನ್ನೂ ಮಿಶ್ರ ಮಾಡಿಕೊಳ್ಳಿ.
3. ಈ ಮಿಶ್ರಣಕ್ಕೆ, ಸ್ವಲ್ಪ ನೀರನ್ನು ಹಾಕಿ, ನಂತರ ಮಿಶ್ರಣವನ್ನು ಪೇಸ್ಟ್ ಮಾಡಿಕೊಳ್ಳಿ.
4. ಪೇಸ್ಟ್ ಸಿದ್ಧಗೊಂಡ ನಂತರ, ಬ್ಲೆಂಡರ್ ಅನ್ನು ಬಳಸಿಕೊಂಡು ಮೊಟ್ಟೆಯನ್ನು ಒಡೆಯಿರಿ, ಈ ಮಿಶ್ರಣಗಳೊಂದಿಗೆ ಅದನ್ನು ಮಿಶ್ರ ಮಾಡಿಕೊಳ್ಳಿ.
5. ಮೊಟ್ಟೆ ಮಿಶ್ರಣ ಸ್ವಲ್ಪ ದಪ್ಪಗಾದ ನಂತರ ಇದಕ್ಕೆ ತುಂಡರಿಸಿದ ತರಕಾರಿಗಳನ್ನು ಹಾಕಿ ನಂತರ 10-15 ನಿಮಿಷಗಳಷ್ಟು ಕಾಲ ಮಿಶ್ರ ಮಾಡಿ.
6. ಸಣ್ಣ ಉರಿಯಲ್ಲಿ ತವಾ ಬಿಸಿ ಮಾಡಿಕೊಂಡು ಅದಕ್ಕೆ ಎಣ್ಣೆ ಹಾಕಿ. ಅದು ಕಾದ ನಂತರ ಈ ಆಮ್ಲೇಟ್ ಮಿಶ್ರಣವನ್ನು ಹಾಕಿ. ಈ ಮಿಶ್ರಣವನ್ನು ತವಾದ ಸುತ್ತಲೂ ಹಾಕಿ.
7. ತದನಂತರ ಮಿಶ್ರಣ ಕಂದು ಬಣ್ಣಕ್ಕೆ ಬರುವವರೆಗೆ ತವಾದಲ್ಲಿ ಅದನ್ನು ಹುರಿಯಿರಿ.
ನಿಮ್ಮ ಮಸಾಲಾ ಆಮ್ಲೇಟ್ ಸವಿಯಲು ಸಿದ್ಧವಾಗಿದೆ. ಈ ಮಸಾಲಾ ಆಮ್ಲೇಟ್ ರೆಸಿಪಿಯನ್ನು ಬ್ರೆಡ್ ಟೋಸ್ಟ್‌ನೊಂದಿಗೆ ಸವಿಯಿರಿ.



Click it and Unblock the Notifications
