Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಸಾರು ಜೊತೆ ಸವಿಯಲು ಚೆಂದ ಕಡುಬಿಟ್ಟು

ಬೇಕಾಗುವ ಸಾಮಾಗ್ರಿಗಳು
* 2 ಕಪ್ ಅಕ್ಕಿ
* ಜೀರಿಗೆ
* ರುಚಿಗೆ ತಕ್ಕ ತುಪ್ಪ
* ಸ್ವಲ್ಪ ಎಣ್ಣೆ
ತಯಾರಿಸುವ ವಿಧಾನ:
1. ಅಕ್ಕಿಯನ್ನು ತೊಳೆದು ಒಣಗಿಸಬೇಕು. ನಂತರ ಅದನ್ನು ಹುರಿದು ತರಿತರಿಯಾಗಿ ಪುಡಿ ಪುಡಿ ಮಾಡಬೇಕು.
2. ಒಂದು ಅಗಲವಿರುವ ಪಾತ್ರೆಯಲ್ಲಿ 4 ಕಪ್ ನೀರು ಸ್ವಲ್ಪ ಉಪ್ಪು ಹಾಕಿ ಕುದಿಸಬೇಕು. ನೀರು ಕುದಿಯುವಾಗ ಅಕ್ಕಿ ಹಿಟ್ಟನ್ನು ಉದುರಿಸಬೇಕು. ಹೀಗೆ ಉದುರಿಸುವಾಗ ಸೌಟ್ ನಿಂದ ಆಡಿಸುತ್ತಾ ಇರಬೇಕು, ಜೊತೆಗೆ ಜೀರಿಗೆ ಕೂಡ ಹಾಕಬೇಕು. ಅಕ್ಕಿ ಬೆಂದ ಮೇಲೆ ಉರಿಯಿಂದ ತೆಗೆದು ಸ್ವಲ್ಪ ತಣ್ಣಗಾಗಲು ಇಡಬೇಕು.
3. ನಂತರ ಒಂದು ಚಿಕ್ಕ ಬಟ್ಟಲಿನಲ್ಲಿ ಎಣ್ಣೆ ಮತ್ತು ಸ್ವಲ್ಪ ಬಿಸಿ ನೀರು ಹಾಕಿ ಅದರಿಂದ ಕೈ ಸವರಿ ಹಿಟ್ಟಿನಿಂದ ಉಂಡೆ ಕಟ್ಟಬೇಕು.
4. ನಂತರ ಇಡ್ಲಿ ಪಾತ್ರೆಯಲ್ಲಿ ಅರ್ಧದಷ್ಟು ನೀರು ಹಾಕಿ ಕುದಿಸಿ ಇಡ್ಲಿಯ ತಳ ಭಾಗದ ಪಾತ್ರೆಯನ್ನು ಇಟ್ಟು ಅದರ ಮೇಲೆ ಈ ಉಂಡೆಗಳನ್ನು ಇಟ್ಟು ಇಡ್ಲಿ ಪಾತ್ರೆಯ ಬಾಯಿ ಮುಚ್ಚಿ ಅರ್ಧ ಗಂಟೆ ಬೇಯಿಸಿದರೆ ಕಡುಬಿಟ್ಟು ರೆಡಿ.
ಇದನ್ನು ಗಟ್ಟಿಯಾದ ಸಾರಿನ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಪಂದಿ ಕರಿ ಅಥವಾ ಪೋರ್ಕ್ ಕರಿಗೆ ಕಡುಬಿಟ್ಟು ಬೆಸ್ಟ್ ಕಾಂಬಿನೇಷನ್. ಪೋರ್ಕ್ ಕರಿ ರೆಸಿಪಿ ತಿಳಿಯಲು ಮುಂದೆ ಓದಿ.



Click it and Unblock the Notifications
