Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಕೈಲ್ ಪೋದ್ ಸ್ಪೆಷೆಲ್-ಪೋರ್ಕ್ ಕರಿ

ಬೇಕಾಗುವ ಸಾಮಾಗ್ರಿಗಳು:
* ಒಂದು ಕೆಜಿ ಪೋರ್ಕ್
* ಒಂದು ಚಮಚ ಅರಿಶಿಣ ಪುಡಿ
* 2 ಚಮಚ ಕೆಂಪು ಮೆಣಸಿನ ಪುಡಿ
* 2 ಚಮಚ ಕೊತ್ತಂಬರಿ ಪುಡಿ
* 10 ಬೆಳ್ಳುಳ್ಳಿ ಎಸಳು
* ಒಂದು ಚಿಕ್ಕ ಈರುಳ್ಳಿ
* ಹಸಿ ಮೆಣಸಿನ ಕಾಯಿ
* ಅರ್ಧ ಚಮಚ ಕಾಳು ಮೆಣಸಿನ ಪುಡಿ
* 1ಚಮಚ ಜೀರಿಗೆ
* ಒಂದು ಇಂಚಿನಷ್ಟು ದೊಡ್ಡದ ಶುಂಠಿ
* ಕಾಚಮ್ ಪುಳಿ ಅಥವಾ ನಿಂಬೆ ಹಣ್ಣು
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಮೆಣಸಿನ ಪುಡಿ, ಅರಿಶಿಣ ಪುಡಿ, ಜೀರಿಗೆ ಹಾಕಿ ಚೆನ್ನಾಗಿ ಹುರಿಯಬೇಕು.
2. ನಂತರ ಈ ಮಸಾಲೆ ಪುಡಿಗೆ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಜೀರಿಗೆ ಹಾಕಿ ನುಣ್ಣನೆ ಅರೆಯಬೇಕು.
3. ಮಾಂಸವನ್ನು ತೊಳೆದು ಪೋರ್ಕ್ ನ ಚುಟ್ಟಿಯನ್ನು ಬಿಸಿ ಮಾಡಿ ಅದರಿಂದ ತುಪ್ಪ ತೆಗೆಯಬೇಕು.
4. ನಂತರ ತುಪ್ಪ ತೆಗೆದ ಚುಟ್ಟಿ ಮತ್ತು ಮಾಂಸಕ್ಕೆ ಅರೆದ ಮಸಾಲೆ ಮಿಶ್ರಣವನ್ನು ಹಾಕಿ, ಹಸಿಮೆಣಸಿ ಕಾಯಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ಕಾಲ ಇಡಬೇಕು.
5. ನಂತರ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಮಾಂಸ ಹಾಕಿ ಅರ್ಧ ಚಮಚ ಕಾಳು ಮೆಣಸಿನ ಪುಡಿ ಹಾಕಿ, ಕಾಲು ಗ್ಲಾಸ್ ನೀರು ಹಾಕಿ 25-30 ನಿಮಿಷ ಬೇಯಿಸಬೇಕು. ಹೀಗೆ ಬೇಯಿಸುವಾಗ ಆಗಾಗ ಸೌಟ್ ನಿಂದ ಆಡಿಸುತ್ತಾ ಇರಬೇಕು. (ಕುಕ್ಕರ್ ನಲ್ಲಿ ಬೇಯಿಸುವುದಕ್ಕಿಂತ ಪಾತ್ರೆಯಲ್ಲಿ ಬೇಯಿಸಿದರೆ ರುಚಿ ಹೆಚ್ಚು).
6. ನಂತರ ಕಾಲು ಚಮಚ ಕಾಚಂ ಪುಳಿ ಅಥವಾ ಒಂದು ನಿಂಬೆ ಹಣ್ಣಿನ ರಸ ಹಿಂಡಿ 2 ನಿಮಿಷ ಬಿಸಿ ಮಾಡಿದರೆ ಪೋರ್ಕ್ ಕರಿ ರೆಡಿ. ಇದನ್ನು ಕಡುಬು ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಪೋರ್ಕ್ ಕರಿಯನ್ನು ಬಿಸಿ ಮಾಡಿಟ್ಟರೆ ಒಂದು ವಾರಕ್ಕಿಂತ ಹೆಚ್ಚು ಕಾಲ ಇಡಬಹುದು.



Click it and Unblock the Notifications
