Latest Updates
-
ಮದುವೆ ಸೀಸನ್ ಶುರು: 2026ರ ಶುಭ ಮುಹೂರ್ತಗಳು ಮತ್ತು ಬಜೆಟ್ ಉಳಿತಾಯದ ಸೀಕ್ರೆಟ್ ಟಿಪ್ಸ್! -
ಈರುಳ್ಳಿ ಬೆಲೆ ಏರಿಕೆ ಚಿಂತೆಯೇ? ₹500ರ ಪ್ರೋಟೀನ್ ಬಾಸ್ಕೆಟ್ ಮತ್ತು ಈರುಳ್ಳಿ ಇಲ್ಲದ ಅಡುಗೆ ಟಿಪ್ಸ್ ಇಲ್ಲಿದೆ! -
ಕರ್ನಾಟಕದ ಚಳಿ: ಬೈಕ್-ಮೆಟ್ರೋ ಪ್ರಯಾಣದಲ್ಲಿ ಬೆಚ್ಚಗಿರಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ದಟ್ಟ ಮಂಜಿನಲ್ಲಿ ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡ್ಬೇಡಿ! -
'ಅಸಮಾನ ದಾಂಪತ್ಯ'ದ ಟ್ರೋಲ್ಗಳಿಗೆ ಆಲಿಯಾ ಭಟ್ ತಿರುಗೇಟು: ದಂಪತಿಗಳಿಗಾಗಿ ಇಲ್ಲಿದೆ ಸಮಾನತೆಯ ಸೂತ್ರಗಳು -
ಅಕ್ವಾನ್ ಚಂಡಮಾರುತದ ಭೀತಿ: ಕರಾವಳಿ ಜನರೇ ಎಚ್ಚರ, ಸುರಕ್ಷಿತವಾಗಿರಲು ಈ ಆಹಾರಗಳನ್ನು ಸಂಗ್ರಹಿಸಿಡಿ -
ವಿಶ್ವ ಶೌಚಾಲಯ ದಿನ: ನಿಮ್ಮ ಮನೆಯ ಶೌಚಾಲಯವನ್ನು ಹೋಟೆಲ್ನಂತೆ ಸ್ವಚ್ಛವಾಗಿಡಲು ಈ 5 ಸರಳ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ಮ್ಯಾರಾಥಾನ್ಗೆ ಸಜ್ಜಾಗಿದ್ದೀರಾ? ರೇಸ್ ದಿನದ ಗೊಂದಲ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ! -
ಡೇಟಿಂಗ್ ಆಪ್ಗಳಲ್ಲಿ ಹನಿಟ್ರಾಪ್ ಆತಂಕ: ಮೊದಲ ಡೇಟ್ಗೆ ಹೋಗುವ ಮುನ್ನ ಈ 5 ಎಚ್ಚರಿಕೆ ಮರೆಯದಿರಿ! -
ಭಾರತದ ಮೊದಲ ಬರ್ಡ್ ಫ್ಲೂ ಲಸಿಕೆ ಬಿಡುಗಡೆ: ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆ ಸುರಕ್ಷಿತವೇ?
ಮಕ್ಕಳಿಗೆ ಪ್ರಿಯವಾಗುವುದು ಈ ಬನಾನ ಇಡ್ಲಿ
ಇಡ್ಲಿಯ ರುಚಿ ಗೊತ್ತಿಲ್ಲದವರು ದಕ್ಷಿಣ ಭಾರತದಲ್ಲಿಯೇ ಇರುವುದಿಲ್ಲ. ಸಾದಾ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜೆಟೇಬಲ್ ಇಡ್ಲಿ ಹೀಗೆ ಇಡ್ಲಿಯನ್ನು ನಾನಾ ರುಚಿಯಲ್ಲಿ ಮಾಡಬಹುದು. ಆದರೆ ಎಂದಾದರು ಬಾಳೆ ಹಣ್ಣಿನ ಇಡ್ಲಿ ತಯಾರಿಸಿದ್ದೀರಾ?
ಸಾಮಾನ್ಯವಾಗಿ ಇಡ್ಲಿ ಸಿಹಿ ಇರುವುದಿಲ್ಲ, ಆದರೆ ಇದು ಸಿಹಿಯಾದ ಇಡ್ಲಿಯಾಗಿದ್ದು, ಚಟ್ನಿ, ಸಾಂಬಾರ್ ಜೊತೆ ಸವಿಯುವ ಇಡ್ಲಿ ಇದಲ್ಲ. ಇದನ್ನು ಏನಿದ್ದರೂ ಹಾಲು ಅಥವಾ ತೆಂಗಿನ ಹಾಲಿಗೆ ಸ್ವಲ್ಪ ಸಕ್ಕರೆ ಹಾಕಿ ಸವಿಯಬೇಕು. ಮಕ್ಕಳ ಮೆಚ್ಚಿನ ಇಡ್ಲಿ ಆಗುವುದರಲ್ಲಂತೂ ಯಾವುದೇ ಸಂಶಯವಿಲ್ಲ.
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
ರವಾ 1 ಕಪ್
ತೆಂಗಿನ ತುರಿ 1/4 ಕಪ್
ಹಣ್ಣಾದ ಬಾಳೆ ಹಣ್ಣು 3-4
ಚಿಟಿಕೆಯಷ್ಟು ಉಪ್ಪು
ಸಕ್ಕರೆ (ಸಿಹಿಗೆ ತಕ್ಕಷ್ಟು)
ಅಡುಗೆ ಸೋಡಾ ಅರ್ಧ ಚಮಚ
ತುಪ್ಪ 1 ಚಮಚ
ಹಸಿ ಬಟಾಣಿ 1/4 ಕಪ್(ಬೇಕಿದ್ದರೆ)
ತಯಾರಿಸುವ ವಿಧಾನ:
* ಮೊದಲಿಗೆ ಬಾಳೆ ಹಣ್ಣಿನ ಸಿಪ್ಪೆ ಸುಲಿದು, ನಂತರ ಬಾಳೆ ಹಣ್ಣನ್ನು ಮ್ಯಾಶರ್ ಅಥವಾ ಕೈಯಿಂದ ಪೇಸ್ಟ್ ರೀತಿಯಲ್ಲಿ ಮಾಡಿ.
* ಈಗ ಅದಕ್ಕೆ ರವೆ, ತೆಂಗಿನ ತುರಿ, ಸಕ್ಕರೆ, ಅಡುಗೆ ಸೋಡಾ, ಚಿಟಕೆಯಷ್ಟು ಉಪ್ಪು, ಬಟಾಣಿ ಹಾಕಿ ಮಿಕ್ಸ್ ಮಾಡಿ, ಇಡ್ಲಿಯ ಹದಕ್ಕೆ ತರಲು ಸ್ವಲ್ಪ ನೀರು ಸೇರಿಸಬಹುದು.
* ಈಗ ಇಡ್ಲಿ ತಟ್ಟೆಗೆ ತುಪ್ಪ ಸವರಿ ಅದಕ್ಕೆ ಇಡ್ಲಿ ಹಿಟ್ಟು ಹಾಕಿ ಆವಿಯಲ್ಲಿ 15-20 ನಿಮಿಷ ಬೇಯಿಸಿದರೆ ಬಾಳೆ ಹಣ್ಣಿನ ಇಡ್ಲಿ ರೆಡಿ.
ಈ ಬಾಳೆ ಹಣ್ಣಿನ ಇಡ್ಲಿಯನ್ನು ತೆಂಗಿನ ಹಾಲು ಅಥವಾ ಹಾಲಿನ ಜೊತೆ ತಿನ್ನಲು ತುಂಬಾ ರುಚಿಯಗಿರುತ್ತದೆ.



Click it and Unblock the Notifications
