Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮಂಡಕ್ಕಿ ಒಗ್ಗರಣೆ ಹಾಗೂ ಮೆಣಸಿನಕಾಯಿ ಬಜ್ಜಿ...
ಮಂಡಕ್ಕಿ ಒಗ್ಗರಣೆ ಜೊತೆ ಮೆಣಸಿನಕಾಯಿ ಬಜ್ಜಿಯನ್ನು ತಿಂದು ನೋಡಿ, ಒಳ್ಳೆಯ ಕಾಂಬಿನೇಷನ್ ಅಂತ ನೀವೇ ಹೇಳುತ್ತೀರಿ...
ಮಂಡಕ್ಕಿ ತಿಂಡಿಗೆ ಬೇಕಾಗುವ ಸಾಮಗ್ರಿಗಳು :
2ಲೀಟರ್ ಮಂಡಕ್ಕಿ(ಪುರಿ)
2ಈರುಳ್ಳಿ
4ಹಸಿಮೆಣಸಿನಕಾಯಿ
ಹುಣಸಿಹಣ್ಣಿನ ರಸ(ಸ್ವಲ್ಪ)
ಒಗ್ಗರಣೆಗೆ :
ಅಡುಗೆ ಎಣ್ಣೆ
ಸಾಸಿವೆ
ಕರಿಬೇವು
ಅರಿಶಿನಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಕೋತಂಬರಿ ಸೊಪ್ಪು
ಕಾಯಿತುರಿ
ಮಾಡುವ ವಿಧಾನ :
ಮಂಡಕ್ಕಿಯನ್ನು ನೀರಿನಲ್ಲಿ ಮೆತ್ತಗೆ ಆಗುವವರೆಗೆ ನೆನೆಸಿ, ನೀರನ್ನು ಹಿಂಡಿ ತೆಗೆದುಕೊಳ್ಳಿ. ಈರುಳ್ಳಿ, ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪು ಹೆಚ್ಚಿಟ್ಟುಕೊಳ್ಳಿ.
ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಾದಬಳಿಕ ಸಾಸಿವೆ, ಕಡಲೆಬೇಳೆ, ಕರಿಬೇವು, ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಫ್ರೆೃ ಮಾಡಿ. ಆಮೇಲೆ ಹುಣಸೆಹಣ್ಣಿನ ರಸ, ಅರಿಶಿನಪುಡಿ, ಉಪ್ಪು ಎಲ್ಲ ಹಾಕಿ ಮಿಕ್ಸ್ ಮಾಡಿ. ಆನಂತರ ನೆನೆಸಿಟ್ಟುಕೊಂಡ ಮಂಡಕ್ಕಿ ಹಾಕಿ ಚೆನ್ನಾಗಿ ಕಲಸಿ. ಕೊನೆಗೆ ಕಾಯಿತುರಿ ಹಾಗೂ ಕೋತಂಬರಿ ಸೊಪ್ಪು ಹಾಕಿ. ಈಗ ಮಂಡಕ್ಕಿ ತಿಂಡಿ ರೆಡಿ. ಇದರ ಜೊತೆ ಮೆಣಸಿನಕಾಯಿ ಬಜ್ಜಿ ಇದ್ದರೆ ಇನ್ನೂ ಚೆನ್ನಾಗಿರುತ್ತೆ.
ಬಜ್ಜಿಗೆ ಬೇಕಾಗುವ ಸಾಮಗ್ರಿಗಳು :
ಬಜ್ಜಿ ಮೆಣಸಿನಕಾಯಿ
ಕಡಲೆಹಿಟ್ಟು
ಖಾರದಪುಡಿ
ಸೋಡಾಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ(ಕರಿಯಲು)
ಹಿಟ್ಟು ಕಲಸಿಕೊಳ್ಳಲು ನೀರು
ಮಾಡುವ ವಿಧಾನ :
ಕಡಲೆಹಿಟ್ಟಿಗೆ ಖಾರದಪುಡಿ, ಉಪ್ಪು, ಸೋಡಾಪುಡಿ, ನೀರು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ. ಮೆಣಸಿನಕಾಯಿಯನ್ನು ಮಧ್ಯದಲ್ಲಿ ಸ್ವಲ್ಪ ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಕಾದಬಳಿಕ ಮೆಣಸಿನಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ ಬಾಣಲೆಗೆ ಹಾಕಿ. ಬಜ್ಜಿ ಬಂಗಾರ ಬಣ್ಣಕ್ಕೆ ತಿರುಗಿದ ಮೇಲೆ ಹೊರಕ್ಕೆ ತೆಗೆಯಿರಿ. ಈಗ ಬಜ್ಜಿಯನ್ನು ಮಂಡಕ್ಕಿ ಒಗ್ಗರಣೆ ಜೊತೆ ತಿಂದು ನೋಡಿ, ಒಳ್ಳೆಯ ಕಾಂಬಿನೇಷನ್ ಅಂತ ನೀವೇ ಹೇಳುತ್ತೀರಿ.



Click it and Unblock the Notifications
