Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗರಿಗರಿ ಬಟಾಣಿ ಪನೀರ್ ದೋಸೆ
ಬಟಾಣಿ ಮತ್ತು ಪನೀರ್ ದೋಸೆಯನ್ನು, ಬಿಸಿಬಿಸಿ ಸಾಂಬಾರ್ ಮತ್ತು ಚಟ್ನಿಯಾಂದಿಗೆ ಸವಿದರೆ ಅದರ ಮಜಾನೇ ಬೇರೆ. ನೀವೂ ಟ್ರೆೃ ಮಾಡಿ ನೋಡಿ...
- ಕಾವ್ಯಶ್ರೀ, ಬೆಂಗಳೂರು
ಬೇಕಾಗುವ ಸಾಮಗ್ರಿಗಳು :
- ಕುದಿಸಿದ ಬಟಾಣಿ- 500 ಗ್ರಾಂ
- ಪನೀರ್(ಸಣ್ಣಗೆ ಕತ್ತರಿಸಿದ್ದು)- 250 ಗ್ರಾಂ
- ಶುಂಠಿ- 1
- ಹಸಿಮೆಣಸಿನಕಾಯಿ- 2
- ಕೋತಂಬರಿ ಸೊಪ್ಪು-(ಸಣ್ಣಗೆ ಕತ್ತರಿಸಿದ್ದು)- ಎಂಟ್ಹತ್ತು ಕಡ್ಡಿಯುಳ್ಳ ಒಂದು ಚಿಕ್ಕ ಕಟ್ಟು
- ಕರಿಬೇವು ಸೊಪ್ಪು- 2 ಕಡ್ಡಿ
- ಎಣ್ಣೆ- 1 ಟೇಬಲ್ ಚಮಚ
- ಸಾಸಿವೆ- 1 ಟೀ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಕೆಂಪು ಮೆಣಸಿನಕಾಯಿ ಪುಡಿ- 1 ಟೀ ಚಮಚ
- ಗರಂ ಮಸಾಲಾ- 1 ಟೀ ಚಮಚ
ಮಾಡುವ ವಿಧಾನ :
ಬಾಣಲೆ(ಕಡಾಯಿ)ಯಲ್ಲಿ ಎಣ್ಣೆ ಹಾಕಿಕೊಳ್ಳಿ. ಸಾಸಿವೆ, ಕರಿಬೇವು, ಹಸಿಮೆಣಸಿನಕಾಯಿ ಮತ್ತು ಶುಂಠಿ ಹಾಕಿ. ಬಟಾಣಿ ಹಾಗೂ ಪನೀರ್ ಅದಕ್ಕೆ ಹಾಕಿಕೊಳ್ಳಿ. ಉಪ್ಪು, ಕೆಂಪುಮೆಣಸಿನಕಾಯಿ ಪುಡಿ, ಗರಂ ಮಸಾಲೆಯನ್ನು ಬೆರೆಸಿಕೊಳ್ಳಿ. ಕತ್ತರಿಸಿದ ಕೋತಂಬರಿ ಮೇಲೆ ಉದುರಿಸಿ, ಚೆನ್ನಾಗಿ ತಿರುವಾಡಿ.
ಮತ್ತೊಂದು ಕಡೆ ಹಂಚು(ತವಾ) ಕಾಯಲು ಇಡಿ. ಎಂದಿನಂತೆ ಅಕ್ಕಿ ಹಿಟ್ಟಿನ ದೋಸೆ ಹಾಕಿಕೊಳ್ಳಿ. ಹಾಂ... ದೋಸೆ ತೆಳ್ಳಗಿರಲಿ. ತುಪ್ಪ ಅಥವಾ ಬೆಣ್ಣೆ ಬಳಸಿ ದೋಸೆ ಹಾಕಿಕೊಳ್ಳಿ. ದೋಸೆಯ ಮಧ್ಯದಲ್ಲಿ ಬಟಾಣಿ ಮತ್ತು ಪನೀರ್ ಮಸಾಲಾ ಮಿಶ್ರಣವನ್ನು ಹಾಕಿ, ನಿಮಗೆ ಬೇಕಾದ ಆಕಾರದಲ್ಲಿ ದೋಸೆಯನ್ನು ಸುತ್ತಿಕೊಳ್ಳಿ. ಈಗ ರೆಡಿಯಾಗಿರುವ ದೋಸೆಯನ್ನು, ಬಿಸಿಬಿಸಿ ಸಾಂಬಾರ್ ಮತ್ತು ಚಟ್ನಿಯಾಂದಿಗೆ ಸವಿದರೆ ಅದರ ಮಜಾನೇ ಬೇರೆ. ನೀವೂ ಟ್ರೆೃ ಮಾಡಿ ನೋಡಿ...
ಸೂಚನೆ : ಎಂದಿನಂತೆ ಪ್ಲೇನ್ ದೋಸೆ ಮಾಡುವುದು. ದೋಸೆಯಾಳಗೆ ಬಟಾಣಿ ಮತ್ತು ಪನೀರ್‌ನಿಂದ ಮಾಡಿದ ಮಸಾಲೆ ಹಾಕಿಕೊಂಡು, ನಿಮಗೆ ಬೇಕಾದ ಆಕಾರದಲ್ಲಿ ಸುತ್ತಿಕೊಂಡು ಸರ್ವ್ ಮಾಡಬಹುದು. ಮೇಲೆ ಹೇಳಿದ ಪ್ರಮಾಣದಲ್ಲಿ ಪದಾರ್ಥಗಳ ಬಳಸಿದರೆ 18ರಿಂದ 20ದೋಸೆಗಳನ್ನು ತಯಾರಿಸಬಹುದು.
(ಓದುಗರೇ, ನಿಮ್ಮ ಕೈರುಚಿ ನಮಗೂ ಗೊತ್ತಾಗಲಿ... ಕೂಡಲೇ ನಿಮ್ಮ ಭಾವಚಿತ್ರದೊಂದಿಗೆ ರುಚಿರುಚಿ ಅಡುಗೆ ಮಾಡುವ ವಿಧಾನಗಳನ್ನು ಬರೆದು ಕಳುಹಿಸಿ. -ಸಂಪಾದಕ)



Click it and Unblock the Notifications
