Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮೊಳಕೆ ಬಂದ ಹೆಸರು ಬೇಳೆ ಪರೋಟ

ಹೆಸರುಕಾಳು 1 ಲೋಟ
ದೊಡ್ಡ ಈರುಳ್ಳಿ 2
ಟೊಮೇಟೊ 3
ಹಸಿಮೆಣಸಿನಕಾಯಿ 4
ಕೆಂಪು ಮೆಣಸಿನ ಪುಡಿ 2 ಚಮಚ
ಪುಡಿ ಉಪ್ಪು 2 ಚಮಚ
ಗರಂ ಮಸಾಲೆ ಪುಡಿ - 1 ಚಮಚ
ತಾಜಾ ತೆಂಗಿನಕಾಯಿ ತೂರಿ 4 ಚಮಚ
ಸಕ್ಕರೆ 2 ಚಮಚ (ಬೇಕಾದರೆ)
ಎಣ್ಣೆ 4 ಚಮಚ
ಮಾಡುವ ರೀತಿ :
ಮೊದಲು ಹೆಸರುಕಾಳನ್ನು ನೀರಿನಲ್ಲಿ ಎಂಟರಿಂದ ಹತ್ತು ಗಂಟೆಗಳ ಕಾಲ ನೆನೆಹಾಕಬೇಕು. ಶುದ್ದವಾದ ಬಿಳಿ ಮಲ್ಲಿನ ಬಟ್ಟೆಯಲ್ಲಿ ಅದನ್ನು ಸೋಸಿ ಕಟ್ಟಿಡಬೇಕು. 24 ಗಂಟೆಗಳಲ್ಲಿ ಮೊಳಕೆ ಬರುತ್ತದೆ. ಇಷ್ಟೊಂದು ಕೆಲ್ಸ ಯಾರು ಮಾಡ್ತಾರಪ್ಪಾ ಎನ್ನುವವರು ಮೊಳಕೆಬಂದ ಕಾಳನ್ನು ಹಾಪ್ ಕಾಂ ಮಳಿಗೆಯಿಂದ ತರಬಹುದು. ಮೊಳಕೆ ಕಾಳನ್ನು ಒಂದು ವಿಷಲ್ ಬರುವವರೆಗೆ ಬೇಯಿಸಿ. ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು ಬೇಯಿಸಿದ ಬೇಳೆಯನ್ನು ನೀರನ್ನು ಸೇರಿಸದೆ ರುಬ್ಬಿಕೊಳ್ಳಿರಿ.
ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿರಿ. ಅದರಲ್ಲಿ ರುಬ್ಬಿಕೊಂಡ ಬೇಳೆಯನ್ನು ಸಣ್ಣ ಉರಿಯಲ್ಲಿ ನೀರು ಇಂಗುವವರೆಗೆ ಹುರಿಯಬೇಕು. ಇದನ್ನು ಸ್ಟೌವ್ ನಿಂದ ಇಳಿಸಿದ ನಂತರ ಒಣ ಮೆಣಸಿನಪುಡಿ ಉಪ್ಪು ಮುಂತಾದ ಒಣ ಸಾಮಗ್ರಿಗಳು ಹಾಗೂ ತೆಂಗಿನಕಾಯಿ ತುರಿಯೊಂದಿಗೆ ಬೆರೆಸಿರಿ.
ಪರೋಟಾ ಮಾಡುವುದಕ್ಕೆ ಗೋಧಿ ಹಿಟ್ಟು ಅರ್ಧ ಕೆಜಿ, ಮೈದಾ 100 ಗ್ರಾಂ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಬೇಕು. ಚೂರು ಚೂರೇ ಕೈ ಎಣ್ಣೆ ಮಾಡಿಕೊಂಡು ಚಪಾತಿ ಉಂಟೆಗಳನ್ನು ಮಾಡಿಕೊಂಡು ಲಟ್ಟಿಸಿದ ನಂತರ ಅದರ ಮೇಲೆ ಸ್ವಲ್ಪ ಒಣ ಗೋಧಿ ಹಿಟ್ಟನ್ನು ಸಿಂಪಡಿಸಿರಿ. ಇದನ್ನು ಸವರಿ, ಮಧ್ಯಕ್ಕೆ ಎರಡು ಸಲ ತ್ರಿಕೋನಾಕಾರ ಬರುವಂತೆ ಮಡಚಿರಿ. ಅರ್ಧ ಲಟ್ಟಿಸಿಕೊಂಡ ನಂತರ ರುಬ್ಬಿದ ಹೆಸರುಬೇಳೆ ಚಟ್ನಿಯನ್ನು ಹಿಟ್ಟಿನ ಮೇಲೆ ಇಟ್ಟು ಚೂರು ಗೋಧಿ ಹಿಟ್ಟನ್ನು ಲಟ್ಟಣಿಗೆಗೆ ಸವರಿಕೊಂಡು ನಿಧಾನವಾಗಿ ಲಟ್ಟಿಸಬೇಕು. ಈ ತಿಂಡಿ ಶಾಲೆಗೆ ಹೋಗುವ ಮಕ್ಕಳ ಡಬ್ಬಿ ಮತ್ತು ನಿಮ್ಮ ಊಟದ ಡಬ್ಬಿಗೆ ಆಗತ್ತೆ. ಮೊಸರು ಇದ್ದರೆ ಲೇಸು.
ತವ ಬಿಸಿ ಮಾಡಿಕೊಂಡು ಎಣ್ಣೆ ಹಾಕಿ ಚಪಾತಿಯನ್ನು ಬೇಯಿಸಿರಿ. ಬಿಸಿಬಿಸಿಯಾಗಿ ತಯಾರಿಸಿದ ಪರೋಟ ಬಡಿಸಿರಿ. ಈ ಪರೋಟಗಳನ್ನು ಉದ್ದುದ್ದವಾಗಿ ಮಡಚಿ, ನಂತರ ಅದನ್ನು ಉಂಡೆ ಮಾಡಿ ಮತ್ತೆ ಲಟ್ಟಿಸಿ ದಪ್ಪ ಪರೋಟ ಮಾಡಲೂಬಹುದು.



Click it and Unblock the Notifications
