Latest Updates
-
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ!
ಕೊರೆಯುವ ಚಳಿಗೆ ಬೆಚ್ಚನೆಯ ಕರಕಲಿ

*ತೇಜಸ್ವಿನಿ ಹೆಗಡೆ, ಬೆಂಗಳೂರು
ಕೆಸುವಿನ ಬಗ್ಗೆ ಹೆಚ್ಚಿನ ಮಾಹಿತಿಯಾಸಕ್ತರು ಹಾಗೂ ಕೆಸುವಿನಿಂದ ತಯಾರಿಸಲ್ಪಡುವ ಇನ್ನಿತರ ಪದಾರ್ಥಗಳ ತಯಾರಿಕೆಯನ್ನು ತಿಳಿಯಲಿಚ್ಛಿಸುವವರು ಈ ಕೆಳಗಿನ ಲಿಂಕ್‌ಗಳಿಗೆ ಭೇಟಿಕೊಡಬಹುದು.
ಕೆಸುವಿನ ಕರಕಲಿಯನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು
* ಕೆಸುವಿನೆಲೆ - 3 (ದೊಡ್ಡ ಎಲೆ)
* ಹುಣಸೇಹಣ್ಣು - ಸಣ್ಣ ಲಿಂಬೇಹಣ್ಣಿನ ಗಾತ್ರದಷ್ಟು
* ಉಪ್ಪು - ರುಚಿಗೆ ತಕ್ಕಷ್ಟು
* ಹಸಿಮೆಣಸು - ಖಾರಕ್ಕೆ ತಕ್ಕಷ್ಟು
* ಬೆಳ್ಳುಳ್ಳಿ ಎಸಳು - 6-7
* ಸಾಸಿವೆ -1/4 ಚಮಚ
* ಓಂಕಾಳು - 1/4 ಚಮಚ
ಮಾಡುವ ವಿಧಾನ
* ಕೆಸುವಿನ ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಹೆಚ್ಚಬೇಕು.
* ಹೆಚ್ಚಿಟ್ಟ ಕೆಸುವಿನೆಲೆ ಚೂರುಗಳಿಗೆ ಮೆಣಸು, ಉಪ್ಪು, ಹುಳಿ, ಓಂಕಾಳು ಎಲ್ಲಾ ಸೇರಿಸಿ ತಕ್ಕಷ್ಟು ನೀರನ್ನು ಹಾಕಿ ಕುಕ್ಕರಿನಲ್ಲಿಟ್ಟು ಎರಡು ವ್ಹಿಸಿಲ್ ತರಸಬೇಕು.
* ಕುಕ್ಕರಿನೊಳಗಿನ ಮಿಶ್ರಣ ತಣಿದ ಮೇಲೆ ಮಿಕ್ಸಿಯಲ್ಲಿ ಹಾಕಿ ರಸವಾಗುವಷ್ಟು ರುಬ್ಬಬೇಕು.
* ನಂತರ ಒಗ್ಗರಣೆಗೆ ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಹಾಕಿ ಅವು ಕಂದುಬಣ್ಣಕ್ಕೆ ತಿರುಗುವಾಗ ಸಾಸಿವೆಯನ್ನು ಹಾಕಿ ರುಬ್ಬಿದ ಮಿಶ್ರಣಕ್ಕೆ ಒಗ್ಗರಿಸಬೇಕು.
ಕೆಸುವಿನೆಲೆಯ ಕರಕ್ಲಿ ಈಗ ಬಿಸಿಯಾದ ಅನ್ನಕ್ಕೆ ಕಲಸಿ ತಿನ್ನಲು ತಯಾರು. ಈ ಪದಾರ್ಥವನ್ನು ಕೇವಲ ಅನ್ನಕ್ಕೆ ಮಾತ್ರವಲ್ಲದೇ ಚಪಾತಿ ಹಾಗೂ ದೋಸೆಗೂ ಹಾಕಿಕೊಳ್ಳಬಹುದು.



Click it and Unblock the Notifications
