Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಮೃತಪಳಂ ಮಾಡಿ ತಿನ್ನಿ, ಆಯ್ತಾ

ಅಕ್ಕಿ ಹಿಟ್ಟು ಅರ್ಧ ಕೆಜಿ
ಎಣ್ಣೆ ಆರೇಳು ಚಮಚ
ದೊಡ್ಡ ಈರುಳ್ಳಿ ಎರಡು
ಹಸಿರು ಮೆಣಸಿನಕಾಯಿ ಎಂಟು
ತುಪ್ಪ ನಾಲಕ್ಕು ಚಮಚ
ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪು ತಲಾ ಎಂದು ಹಿಡಿ
ಹುಳಿ ಮೊಸರು ಎರಡು ಕಪ್
ಕಲ್ಲುಪ್ಪು ಒಂದು ಚಮಚ
ಒಗ್ಗರಣೆಗೆ
ಸಾಸಿವೆ ಅರ್ಧ ಚಮಚ
ಉದ್ದಿನಬೇಳೆ ಎರಡು ಚಮಚ
ಕಡಲೆಬೇಳೆ ಎರಡು ಚಮಚ
ತಯಾರಿಸುವ ವಿಧಾನ :
ಈರುಳ್ಳಿ ಸಣ್ಣಗೆ ಹೆಚ್ಚಿಟ್ಟುಕೊಂಡಿರಬೇಕು, ಆಯ್ತಾ. ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ಚಟ್ನಿ ಥರ ರುಬ್ಬಿಟ್ಟುಕೊಂಡಿರಬೇಕು, ಆಯ್ತಾ. ಮೊಸರನ್ನು ಕಡೆದು ಒಂದು ಲೋಟ ನೀರು ಉಪ್ಪು ಸೇರಿಸಿ ತೆಳ್ಳಗೆ ಮಜ್ಜಿಗೆ ಮಾಡಿಕೊಂಡು ಇದಕ್ಕೆ ತುಪ್ಪವನ್ನು ಬೆರೆಸಿಟ್ಟಿರಿ, ಆಯ್ತಾ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಹಾಕಿ ಹಸಿರು ಮೆಣಸಿನಕಾಯಿ ಚಟ್ನಿ ಮತ್ತು ಈರುಳ್ಳಿ ಸೇರಿಸಿ ಎರಡು ನಿಮಿಷ ಹುರಿಯಿರಿ, ಆಯ್ತಾ? ಗುಡ್.
ಈಗ ಮಜ್ಜಿಗೆಯನ್ನು ಬಾಣಲೆಗೆ ಹಾಕಿ ಕುದಿಯಲು ಬಿಡಿ, ಸರೀನಾ. ಉರಿ ಕಡಿಮೆ ಮಾಡಿ ಅಕ್ಕಿ ಹಿಟ್ಟನ್ನು ಮಧ್ಯದಲ್ಲಿ ನಡುಗುಡ್ಡೆಯಂತೆ ಸುರಿಯಿರಿ. ರಾಗಿ ಮುದ್ದೆ ಮಾಡಲು ಗೊತ್ತಿರುವವರಿಗೆ ಈ ವಿಧಾನ ಚೆನ್ನಾಗಿ ಅರ್ಥವಾಗತ್ತೆ, ಹೌದಾ. ಚಪ್ಪಟೆಯಾದ ಮಗಚುವ ಕೈಯನ್ನು ಹಿಟ್ಟಿನ ಮಧ್ಯೆ ಕನ್ನಡ ಬಾವುಟದ ರೀತಿ ಒತ್ತಿ ನಿಲ್ಲಿಸಿ, ಆಯ್ತಾ. ನಂತರ ಬಾಣಲೆಯನ್ನು ಸ್ಟೌವಿನಿಂದ ಕೆಳಗಿಳಿಸಿ ಸರಸರಾಂತ ಸೌಟಿನಿಂದ ಕೆದಕಿ, ಹಿಟ್ಟು ಮತ್ತು ಒಗ್ಗರಣೆ ಎಲ್ಲ ಕೂಡಿಕೊಳ್ಳುವ ಹಾಗೆ ಕಡಾಯಿಸಿ. ಆಯ್ತಾ.
ಇದನ್ನು ಪುನಃ ಸ್ಟೌವಿನ ಮೇಲಿಟ್ಟು ಉರಿ ಸಣ್ಣಗೆ ಮಾಡಿಕೊಳ್ಳಿರಿ. ಹಿಟ್ಟು ಸರಿಯಾಗಿ ಕೂಡಿಕೊಂಡಿದೆಯೋ ಅಥವಾ ಇಲ್ಲವೋ ನೋಡಿಕೊಂಡು ಮನಸ್ಸಿಗೆ ಅನ್ನಿಸಿದರೆ ಇನ್ನೆರಡು ಚಮಚ ಎಣ್ಣೆ ಹಾಕಿ ಮತ್ತೆ ಕೆದಕಿರಿ, ಆಯ್ತಾ. ಅಮೃತ ಪಳಂ ಸರಿಯಾಗಿ ಬಂತೋ ಇಲ್ಲವೋ ಎಂದು ಕನ್ ಫರ್ಮ್ ಮಾಡಿಕೊಳ್ಳಲು ಒದ್ದೆ ಬೆರಳಿನಿಂದ ಹಿಟ್ಟನ್ನು ಮುಟ್ಟಿದರೆ ಅದು ಕೈಗೆ ಅಂಟಬಾರದು, ಗೊತ್ತಾಯ್ತಾ. ಅಂಟಿದರೆ ಇನ್ನೂ ಸ್ವಲ್ಪಹೊತ್ತು ಒಲೆಮೇಲಿರಬೇಕು ಎಂಬ ಸೂಚನೆ ಸಿಕ್ಕತ್ತೆ, ಆಯ್ತಾ. ಇದು ದ್ರವದ ಆಕಾರವೂ ಅಲ್ಲ, ಗಟ್ಟಿ ಹಿಟ್ಟಿನ ಆಕಾರವೂ ಅಲ್ಲದೆ ಸೆಮಿ ಲಿಕ್ವಿಡ್ ಟೈಪ್ ಇರತ್ತೆ.
ಇದನ್ನು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿದ ತಟ್ಟೆಯ ಮೇಲೆ ಹರಡಿರಿ. ಚಾಕುವಿನಿಂದ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡ ನಂತರ ಪಳಂ ಗುಳುಂ ಮಾಡಿ. ಮನೆಯಲ್ಲೇ ಪಾರ್ಟಿ ಮಾಡಿದಾಗ ಇಂಥ ಅಪರೂಪದ ಖಾದ್ಯಗಳನ್ನು ತಯಾರಿಸಿ ಊಟದ ಅಂದವನ್ನು ಹೆಚ್ಚುಗಾಣಿಸಿರಿ. ಬೈ ಫಾರ್ ಟುಡೇ.



Click it and Unblock the Notifications
