Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತರಕಾರಿ ರವಾ ಬ್ರೆಡ್ ಟೊಸ್ಟ್

* ಕುಮುದ ಉಮಾಶಂಕರ್ ಜೆಡ್ಡಾ, ಸೌದಿಅರೇಬಿಯಾ
ಬೇಕಾಗುವ ಸಾಮಗ್ರಿಗಳು:
1 ಕಪ್ ಮೊಸರು , 2 ಟೇಬಲ್ ಚಮಚ ಚಿರೋಟಿ ರವೆ ಅಥವಾ ಮೀಡಿಯಂ ರವೆ. ಸ್ವಲ್ಪ ತುರಿದ ಎಲೆಕೋಸು*, ತುರಿದ ಕ್ಯಾರೆಟ್, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಟೊಮೇಟೊ, ರುಚಿಗೆ ಉಪ್ಪು, ತುಪ್ಪ ಅಥವಾ ಎಣ್ಣೆ, ಬೆಣ್ಣೆ. ಬ್ರೆಡ್
ತಯಾರಿಸುವ ವಿಧಾನ :
ಮೊದಲು ಪಾತ್ರೆಗೆ ಮೊಸರು, ರವೆ, ಉಪ್ಪು, ಕ್ಯಾರೆಟ್ ತುರಿ ಮತ್ತು ಎಲೆಕೋಸು ತುರಿ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ಹತ್ತು ನಿಮಿಷ ಹಾಗೆ ಮುಚ್ಚಿಡಿ. ರವೆ ಮೊಸರಿನೊಂದಿಗೆ ನೆಂದು ಚೆನ್ನಾಗಿ ಬೆರೆತರೆ ರುಚಿ ಹೆಚ್ಚು. ಅರ್ಜೆಂಟ್ ಇದ್ದಾಗ ತಕ್ಷಣವೇ ತಯಾರಿಸಬಹುದು.
ಒಲೆಯ ಮೇಲೆ ತವಾ ಇಟ್ಟು ಕಾಯುತ್ತಿದ್ದಂತೆ ಅದಕ್ಕೆ ಒಂದು ಚಮಚ ತುಪ್ಪ or ಬೆಣ್ಣೆ or ಎಣ್ಣೆ ಹಾಕಿ, ಒಂದೊಂದೆ ಬ್ರೆಡ್ ತೆಗೆದುಕೊಂಡು ಅದರ ಮೇಲೆ ರವೆ, ತರಕಾರಿ ಎಲ್ಲಾ ಹಾಕಿ ಕಲಸಿದ ಮಿಶ್ರಣವನ್ನು ಒಂದು ಅಥವಾ ಎರಡು ಚಮಚ ಹಾಕಿ ಸವರಿ ಬಿಸಿಯಾದ ತವಾ ಮೇಲೆ ಇಟ್ಟು ಬೆಣ್ಣೆ ಹಾಕಿ ಎರಡು ಬದಿ ಬೇಯಿಸಿ ಟೋಸ್ಟ್ ಮಾಡಿ.
ಇದೇ ರೀತಿ ಎಲ್ಲಾ ಬ್ರೆಡ್ ಗಳಿಗೂ ಸವರಿ ಟೋಸ್ಟ್ ತಯಾರು ಮಾಡಿಕೊಳ್ಳಿ. ಬಿಸಿಯಾಗಿ ಸವಿಯಲು ತುಂಬಾ ರುಚಿಯಾಗಿರುತ್ತದೆ, ಜೊತೆಗೆ ಕೆಚಪ್ ಅಥವಾ ಸಾಸ್ ಕೂಡಾ ಇದ್ದರೆ ಇನ್ನೂ ರುಚಿ. ಖಾಲಿ ಬ್ರೆಡ್ ತಿನ್ನುವ ಬದಲು ಇದರಲ್ಲಿ ತರಕಾರಿ ಎಲ್ಲಾ ಸೇರಿರುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಬರಿ ಜಾಮ್ ನೊಂದಿಗೆ ತಿಂದು ಬೇಸರವಾದರೆ ಮಕ್ಕಳಿಗೂ ರುಚಿ ಕೊಡುತ್ತೆ, ಅಲ್ಲದೇ ಸಂಜೆ ತಿಂಡಿ ಯಾಕೆ ರಾತ್ರಿಯ ಊಟಕ್ಕೆ ಚಪಾತಿ ತಿಂದು ಬೋರು ಆಗಿದ್ದಾಗ ಚಪಾತಿ ಬದಲು ಈ ತರಕಾರಿ ಬ್ರೆಡ್ ಟೋಸ್ಟ್ ಬೇರೆ ರೀತಿಯ ಅಡುಗೆ ಆಗುತ್ತದೆ.
ಇದರ ಜೊತೆ ನೆಂಚಿಕೊಳ್ಳಲು ಸೌತೆಕಾಯಿ, ಟೊಮೇಟೊ, ಈರುಳ್ಳಿ ಸಲಾಡ್ ಇರಬೇಕು.
* ಎಲೆಕೋಸು ಹಾಕಲೇ ಬೇಕು ಅಂತ ಏನಿಲ್ಲಾ ಬೇಕಿದ್ದರೆ ಹಾಕಬಹುದು. ಇದು ನಿಮ್ಮಷ್ಟ. ಬರೀ ಕ್ಯಾರೆಟ್ ತುರಿ ಮಾತ್ರ ಹಾಕಿಕೊಳ್ಳಲೂಬಹುದು.



Click it and Unblock the Notifications
