Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಬೆಸ್ಟ್ ಡಯಟ್ ಫುಡ್ ದಾಲಿಯಾ ಸವಿಯಿರಿ

ಬೇಕಾಗುವ ಸಾಮಾನು: 1 ಕಪ್ ಗೋಧಿ ನುಚ್ಚು (ದಾಲಿಯಾ), 1 ಈರುಳ್ಳಿ, 1 ಟೊಮೆಟೊ, 2 ಕ್ಯಾರೆಟ್, 1 ಬೀಟ್ ರೂಟ್, 1/2 ಕಟ್ಟು ಪಾಲಾಕ್, 1/2 ಕಪ್ ಬಟಾಣಿ, 6-8 ಬೀನ್ಸ್, 1 ಚಮಚ ಜೀರಿಗೆ, 1 ಚಮಚ ಮೆಣಸಿನ ಪುಡಿ, 2 ಹಸಿರು ಮೆಣಸಿನಕಾಯಿ, 1 ಪಲಾವ್ ಎಲೆ, ಎಣ್ಣೆ, ಉಪ್ಪು, ಕೊತ್ತಂಬರಿ.
ದಾಲಿಯಾ ಮಾಡುವ ವಿಧಾನ:
* ಬಾಣಲೆಯನ್ನು ಒಂದು ನಿಮಿಷ ಬಿಸಿ ಮಾಡಿ ಅದರಲ್ಲಿ ನುಚ್ಚನ್ನು ಹಾಕಿ 5 ನಿಮಿಷ ಹುರಿದುಕೊಳ್ಳಬೇಕು.
* ಕುಕ್ಕರಿನಲ್ಲಿ ಎಣ್ಣೆ ಹಾಕಿ ಕಾಯಿಸಿ, ಪಲಾವ್ ಎಲೆ, ಜೀರಿಗೆಯನ್ನು ಹುರಿದು ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿಕೊಳ್ಳಬೇಕು.
* ಈರುಳ್ಳಿ ಕೆಂಪಗಾಗುವ ತನಕ ಹುರಿದು ಟೊಮೆಟೊ ಬೆರೆಸಬೇಕು. 1 ನಿಮಿಷದ ನಂತರ ಮೆಣಸಿನಕಾಯಿ ಹಾಕಿ ಸ್ವಲ್ಪ ಉಪ್ಪು ಬೆರೆಸಬೇಕು ಆಗ ಬೇಗನೆ ಬೇಯುತ್ತದೆ.
* ಪಾಲಾಕ್ ಒಂದನ್ನು ಬಿಟ್ಟು, ಕತ್ತರಿಸಿಟ್ಟುಕೊಂಡಿದ್ದ ಎಲ್ಲ ತರಕಾರಿಗಳನ್ನು ಬೆರೆಸಿ ಚೆನ್ನಾಗಿ ತಿರುಗಿಸಿ ಕಡಿಮೆ ಉರಿಯಲ್ಲಿ 3-4 ನಿಮಿಷ ಬೇಯಿಸಬೇಕು.
* ನಂತರ ಪಾಲಾಕ್ ಮತ್ತು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹುರಿದ ನುಚ್ಚನ್ನು ಬೆರೆಸಬೇಕು.
* ಎರಡು ಕಪ್ ನೀರು ಹಾಕಿ ಕುಕ್ಕರ್ ಮುಚ್ಚಿ ಕಡಿಮೆ ಉರಿಯಲ್ಲಿ ನಾಲ್ಕು ವಿಸಲ್ ಕೂಗುವ ತನಕ ಬೇಯಿಸಬೇಕು. ಮುಚ್ಚುಳ ತೆಗೆದ ನಂತರ ಚೆನ್ನಾಗಿ ತಿರುಗಿಸಿದರೆ ದಾಲಿಯಾ ಸವಿಯಲು ಸಿದ್ಧ.
ಈ ದಾಲಿಯಾಗೆ ಅಣಬೆ, ಹೂಕೋಸು ಹಾಕಿ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಯಾದ ದಾಲಿಯಾ ರೆಡಿಯಾಗಿರುತ್ತೆ.



Click it and Unblock the Notifications
