Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ತರಾವರಿ ತರಕಾರಿ ಸಾಗು ಬೆಳಗ್ಗೆಗೇ ಚೆಂದ

ತರಕಾರಿ ಸಾಗುವಿಗೆ ಏನೇನು ಬೇಕು?
ತರಕಾರಿಗಳು: 1 ದೊಡ್ಡ ಆಲೂಗಡ್ಡೆ, 2 ಕ್ಯಾರೆಟ್, 1/4 ಕೆ.ಜಿ ಬೀನ್ಸ್, 1 ಕಪ್ ಹಸಿ ಬಟಾಣಿ, ಒಂದು ಕಟ್ಟು ಪಾಲಾಕ್ ಸೊಪ್ಪು
ಮಸಾಲೆಗೆ: 3-4 ಹಸಿರು ಮೆಣಸಿನಕಾಯಿ, 2 ಚಮಚ ಹುರಿಗಡಲೆ, 1/2 ಕಪ್ ತೆಂಗಿನ ತುರಿ, 1 ಲವಂಗ, 1 ಚೆಕ್ಕೆ, ಉಪ್ಪು, 1 ಟೊಮೆಟೊ ಅಥವಾ ಹುಣಸೇರಸ, ಕೊತ್ತಂಬರಿ ಮತ್ತು ಪುದೀನಾ
ಅಲಂಕಾರಕ್ಕೆ: ಸಾಸಿವೆ, ಎಣ್ಣೆ, ನಿಂಬೆರಸ
ತರಕಾರಿ ಸಾಗು ಮಾಡುವ ವಿಧಾನ:
1. ಮಸಾಲೆಗೆಂದು ಮೇಲೆ ತಿಳಿಸಿರುವ ಎಲ್ಲ ಸಾಮಗ್ರಿಗಳನ್ನು ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು.
2. ಕತ್ತರಿಸಿದ ತರಕಾರಿಗಳನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಬೇಕು.
3. ಬೇಯಿಸಿದ ತರಕಾರಿಗೆ ರುಬ್ಬಿದ ಮಸಾಲೆ ಬೆರೆಸಿ ಕುದಿಯುವವರೆಗು ತಿರುಗಿಸುತ್ತಿರಬೇಕು.
4. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ ಹಾಕಿ ತರಕಾರಿ ಮಿಶ್ರಣಕ್ಕೆ ಬೆರೆಸಬೇಕು. ಕೊನೆಗೆ ಇದರ ಮೇಲೆ ಕೆಲವು ಹನಿ ನಿಂಬೆರಸ ಹಾಕಬೇಕು.
ಈಗ ಟೇಸ್ಟಿ ತರಕಾರಿ ಸಾಗು ಬೇಗನೆ ಸಿದ್ಧಗೊಂಡಿರುತ್ತೆ. ಪೂರಿ, ಚಪಾತಿ, ಇಡ್ಲಿ, ದೋಸೆ ಯಾವುದಕ್ಕಾದರೂ ಸರಿ, ಇದು ಸಖತ್ ಕಾಂಬಿನೇಶನ್. ಬಿಸಿ ಅನ್ನದ ಜೊತೆಗೂ ಇದನ್ನು ಬೆರೆಸಿ ತಿಂದರೆ ರುಚಿಯಾಗಿರುತ್ತೆ.



Click it and Unblock the Notifications
