Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಡುಗೆ ಮನೆಯಲ್ಲಿ ಸೃಜನಶೀಲತೆ...
ಪಾಕ ವಿಧಾನದಲ್ಲಿ ಅದರಲ್ಲೂ ಇಡ್ಲಿ ವಿಚಾರದಲ್ಲಿ ಇದಮಿಥ್ಥಂ ಎಂದು ಹೇಳಬಾರದು. ನೀವು ಸ್ವಲ್ಪ ಕ್ರಿಯೇಟಿವ್ ಆದರೆ ಇನ್ನೂ ಒಳ್ಳೆ ತಾಯಿ-ತಂಗಿ-ಹೆಂಡತಿ ಆಗಬಹುದು!
- ಕೆ.ಆರ್. ಎಸ್. ಮೂರ್ತಿ
ನವರಸ, ನವರಂಗ್ ಇಡ್ಲಿ , ಕಾಮನ ಬಿಲ್ಲಿನ ಇಡ್ಲಿ...
ಇಡ್ಲಿಗೆ ಯಾಕೆ ಇಷ್ಟೊಂದು ರಂಗು ರಂಗಿನ ಹೆಸರುಗಳು ...ಅಂತ ಅಚ್ಚರಿಯಾ..? ಸಾಂಪ್ರದಾಯಿಕವಾಗಿ ಇಡ್ಲಿ ಎಂದರೆ ಎರಡೇ ಬಗೆಯದು. ರವೆ ಇಡ್ಲಿ ಮತ್ತು ಅಕ್ಕಿ ಇಡ್ಲಿ. ಇದರಲ್ಲೇ ರುಚಿಯಾಗಿಸಲು ಏನಾದರೂ ಕಸರತ್ತು ಮಾಡಬೇಕು; ಆಗಲೇ ಹೊಸತರ ಸೃಷ್ಟಿ - ಬಾಯಿಗೆ ರುಚಿ!
ಸಾಮಾನ್ಯವಾಗಿ ಇಡ್ಲಿಯಾಂದಿಗೆ ಕಾಯಿ ಚಟ್ನಿಯೋ, ಕಡ್ಲೆ ಚಟ್ನಿಯೋ ಅಥವಾ ಸಾಂಬಾರೋ ಮಾಡುವುದುಂಟು. ಸೋಮಾರಿ ಅಡುಗೆಯವರಾದರೆ ಇಡ್ಲಿ ತಟ್ಟೆಗೆ ಚಟ್ನಿ ಪುಡಿ ಹರವಿ, ಕೈತೊಳೆದುಕೊಳ್ಳುವುದೂ ಇದೆ. ಮತ್ತೆ ತುಂಬಾ ಅರ್ಜಂಟ್ ಇದ್ರೆ ಹಿಂದಿನ ರಾತ್ರಿ ಉಳಿದ ಯಾವುದೋ ವ್ಯಂಜನವನ್ನು ಇಡ್ಲಿ ಮೇಲೆ ಚೆಲ್ಲಿಕೊಂಡು ತಿಂದು ಮುಗಿಸುವ ಅವಸರದ ರಾಯರುಗಳೂ ಇದ್ದಾರೆ. ಫ್ರಿಜ್ ಇದೆ ಎಂದ ಮೇಲೆ ಇದೆಲ್ಲಾ ಸಾಮಾನ್ಯವೇ ಬಿಡಿ.
ಇಲ್ಲೊಂದು ಹೊಸ ವೆರೈಟಿಯ ಇಡ್ಲಿ ಮಾಡುವ ವಿಧಾನ ಇದೆ. ಇಡ್ಲಿ ವಿದ್ ಎಂಬೆಡೆಡ್ ಚಟ್ನಿ! ಚಟ್ನಿಯನ್ನು ಇಡ್ಲಿಯಲ್ಲಿ ಸೇರಿಸಿಯೇ ಬೇಯಿಸಿದರೆ, ತಿಂಡಿ ಬಾಕ್ಸ್‌ಗೆ, ಪಿಕ್‌ನಿಕ್‌ಗೆ ತೆಗೆದುಕೊಂಡು ಹೋಗಲು ಅನುಕೂಲ ಅಲ್ಲವಾ ?

ಸೊ, ಮೊದಲು ಇಡ್ಲಿ ಹಿಟ್ಟು ಬೇಕೆನಿಸಿದ ಚಟ್ನಿ ರೆಡಿ ಮಾಡಿಕೊಳ್ಳಿ. ನಂತರ ತರಾವಳಿ ಇಡ್ಲಿಗಳನ್ನು ಮಾಡುವುದು ಸುಲಭ.
1. ಇಡ್ಲಿ ಬಟ್ಟಲಿನಲ್ಲಿ ಹಿಟ್ಟು ಹಾಕಿ. ಹಿಟ್ಟಿನ ಮಧ್ಯೆ ಒಂದು ಸ್ಪೂನ್ ಚಟ್ನಿ ಹಾಕಿ. ಚಟ್ನಿಯನ್ನು ಕಡಿಮೆ ನೀರು ಬಳಸಿ ರುಬ್ಬಬೇಕು. ಬೇಕಾದ ಡಿಸೈನ್‌ನಲ್ಲಿ ಇಡ್ಲಿ ಬಟ್ಟಲಿನಲ್ಲಿನ ಹಿಟ್ಟಿನ ಮೇಲೆ ಚಟ್ನಿ ಹಾಕಿ. ಇದು ನಿಮ್ಮ ಅಡುಗೆ ಸೃಜನಶೀಲತೆಗೊಂದು ಸವಾಲು. ಉದಾಹರಣೆಗೆ ಎಕ್ಸ್ ಆಕಾರದಲ್ಲಿ ಅಥವಾ ಸುರುಳಿಯಾಗಿ...
2. ಇಡ್ಲಿ ಬಟ್ಟಲಿಗೆ ಮೊದಲು ಸ್ವಲ್ಪ ಹಿಟ್ಟು ಹಾಕಿ. ನಂತರ ಸ್ವಲ್ಪ ಗಟ್ಟಿ ಚಟ್ನಿಯನ್ನು ಚಪ್ಪಟೆಯಾಗಿ ತಟ್ಟೆಯಲ್ಲಿರುವ ಹಿಟ್ಟಿನ ಮೇಲಿಡಿ. ಮತ್ತೆ ಪುನಃ ಇಡ್ಲಿ ಬಟ್ಟಲಿನ ತುಂಬ ಹಿಟ್ಟು ಹಾಕಿ. ಇದು ಇಡ್ಲಿ ಚಟ್ನಿ ಸ್ಯಾಂಡ್‌ವಿಚ್.
3. ಇಡ್ಲಿ ಹಿಟ್ಟನ್ನು ಮತ್ತು ಚಟ್ನಿಯನ್ನು ಚೆನ್ನಾಗಿ ಮಿಶ್ರಣ ಮಾಡಿ ಬಟ್ಟಲಿನಲ್ಲಿಟ್ಟು ಬೇಯಿಸಿ.
4. ಬೇರೆ ಬೇರೆ ಚಟ್ನಿಗಳು ಇಡ್ಲಿಗೆ ಬೇರೆ ಬೇರೆ ರುಚಿ ಕೊಡುತ್ತವೆ. ಸಾಂಬಾರನ್ನು ಕೂಡ ಚಟ್ನಿಯ ಬದಲಿಗೆ ಬಳಸಬಹುದು.
5. ಬಿಸಿಬೇಳೆ ಬಾತ್‌ನ ಪೌಡರನ್ನು ಚಟ್ನಿಯ ಬದಲಾಗಿ ಉಪಯೋಗಿಸಿದರೆ, ನೀವು ತಯಾರಿಸುವುದು ಬಿಸಿಬೇಳೆ ಬಾತ್ ಇಡ್ಲಿ.
6. ಪುಳಿಯೋಗರೆ ಗೊಜ್ಜು ಉಪಯೋಗಿಸಿ ರಂಗಿನ ಇಡ್ಲಿ ತಯಾರಿಸುವ ಕೆಲಸಕ್ಕೆ ಕೈ ಹಾಕಿದರೆ, ಉಪ್ಪು ಹುಳಿಯ ಅಂದಾಜಿನ ಬಗ್ಗೆ ಗಮನವಿರಲಿ.
7. ಈರುಳ್ಳಿ ಗೊಜ್ಜು ಬಳಸುತ್ತೀರಾ... ಭಾರತೀಯ ನಮೂನೆಯ ಪಿಡ್ಜಾ ಇಡ್ಲಿ ರೆಡಿ.
8. ಸಿಹಿ ಇಡ್ಲಿ ಬೇಕೇ...? ಇಡ್ಲಿ ಬಟ್ಟಲಿನ ಹಿಟ್ಟಿನಲ್ಲಿ ಚಟ್ನಿಯ ಬದಲಿಗೆ ಕಾಯಿ ಬೆಲ್ಲ ಮಿಶ್ರ ಮಾಡಿ ಇಟ್ಟು ಬಿಡಿ.
ಹೀಗೆ, ಕ್ಯಾರೆಟ್ ತುಂಡುಗಳನ್ನು, ತರಕಾರಿ ತುರಿಗಳನ್ನು ಬಳಸಿಯೂ ಇಡ್ಲಿಯನ್ನು ಆಕರ್ಷಕವಾಗಿಸಬಹುದು.
ನಿಮ್ಮ ಅಡುಗೆ ಮನೆ ಸೃಜನಶೀಲತೆಗೆ ಇವೆಲ್ಲ ಸ್ಫೂರ್ತಿಯಷ್ಟೇ. ರುಚಿಯ ಬಗ್ಗೆ ಅಂದಾಜು, ಮಸಾಲೆ, ಉಪ್ಪು ಹುಳಿಗಳ ಬಗ್ಗೆ ಕೈಯಲ್ಲಿ ಹಿಡಿತವಿದ್ದರೆ ಸೈ... ನಿಮ್ಮ ಪ್ರಯೋಗಗಳನ್ನು ಮುಂದುವರೆಸಿ.



Click it and Unblock the Notifications

