Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೊಬ್ಬರಿಹಾಲು ದೋಸೆ

* ಪಿ.ಎಸ್. ಪಲ್ಲವಿ ಕೃಷ್ಣನ್, ಮೈಸೂರು
ಕೊಬ್ಬರಿಹಾಲು ದೋಸೆ ದಕ್ಷಿಣ ಭಾರತದ ಸಾಂಪ್ರದಾಯಕ ಅಡುಗೆಯಾಗಿದ್ದು, ಪಾರ್ಟಿ, ಡಿನ್ನರ್ ಮತ್ತು ಉಪಹಾರಕ್ಕೆ ಬಳಸಬಹುದು. ಆದರೆ ಮುಖ್ಯವಾಗಿ ಇದು ಉಪಹಾರದ ತಿನಿಸು. ಇದಕ್ಕೆ ಬೇಕಾಗುವ ಮುಖ್ಯ ಸಾಮಗ್ರಿಗಳೆಂದರೆ, ತೆಂಗಿನಕಾಯಿ, ಅಕ್ಕಿ ಮತ್ತು ಉದ್ದಿನಬೇಳೆ. ಒಂದು ಮಾತಂತೂ ನೆನಪಿನಲ್ಲಿಡಿ, ಹೊಟ್ಟೆ ಹಸಿದಾಗ ದೋಸೆಗಳ ಲೆಕ್ಕ ಸಿಗಲಿಕ್ಕಿಲ್ಲ. ಆದ್ದರಿಂದ ಪ್ರಮಾಣ ಸ್ವಲ್ಪ ಜಾಸ್ತಿಯಾಗಿಯೇ ಇರಲಿ.
ಬೇಕಾಗುವ ಸಾಮಗ್ರಿಗಳು :
1 ಕಪ್ ಅಕ್ಕಿ
1/2 ಕಪ್ ಉದ್ದಿನ ಬೇಳೆ
2 ಕಪ್ ತೆಂಗಿನಕಾಯಿ ಹಾಲು
1/2 ಟೀ ಸ್ಪೂನ್ ಮೆಂತ್ಯಕಾಳು
1/3 ಕಪ್ ಮೊಸರು
1/2 ಟೀ ಸ್ಪೂನ್ ಅಡುಗೆ ಸೋಡಾ
ಉಪ್ಪು ರುಚಿಗೆ ತಕ್ಕಷ್ಟು
ಗರಿಗರಿಯಾಗಿ ಬೇಯಿಸಲು ಎಣ್ಣೆ
ಮಾಡುವ ವಿಧಾನ :
1. ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ತೊಳೆದು ಅದರ ಜೊತೆಗೆ ಮೆಂತ್ಯಕಾಳು ಹಾಕಿ ಆರೇಳು ಗಂಟೆಗಳ ಕಾಲ ನೆನೆಯಲು ಬಿಡಿ.
2. ಕತ್ತರಿಸಿದ ತೆಂಗಿನಕಾಯಿ ತುಂಡುಗಳನ್ನು ಅಥವಾ ತುರಿದ ಕೊಬ್ಬರಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ, ಸ್ವಲ್ಪ ನೀರು ಬೆರೆಸಿಕೊಂಡು ನುಣ್ಣಗಾಗುವಂತೆ ಮತ್ತೊಮ್ಮೆ ಮಿಕ್ಸಿಗೆ ಹಾಕಿ. ನೆನೆಸಿಟ್ಟ ಅಕ್ಕಿ, ಉದ್ದಿನಬೇಳೆ ಮತ್ತು ಮೆಂತ್ಯಗಳನ್ನು ರುಬ್ಬಿಕೊಳ್ಳಿ. ಈ ಹಿಟ್ಟನ್ನು ಮತ್ತು ಕೊಬ್ಬರಿ ಹಾಲನ್ನು ಸೇರಿಸಿಡಿ. ಇದಕ್ಕೆ ಉಪ್ಪು, ಅಡುಗೆ ಸೋಡಾ ಮತ್ತು ಮೊಸರು ಹಾಕಿ ಸರಿಯಾಗಿ ಕಲಸಿಕೊಳ್ಳಿ. ರಾತ್ರಿಯಿಡೀ ಮಿಶ್ರಣವನ್ನು ಹಾಗೆಯೇ ಬಿಡಿ.
3. ಬೆಳಗಿನ ಜಾವದಲ್ಲಿ ಒಲೆಯ ಮೇಲೆ ಹೆಂಚನ್ನು ಇಟ್ಟು ಕಾಯಿಸಿ ದೋಸೆಯನ್ನು ಹಾಕಿ. ದೋಸೆಯನ್ನು ದಪ್ಪವಾಗಿ ಅಥವಾ ತೆಳ್ಳಗೆಯಾದರೂ ಹಾಕಿಕೊಳ್ಳಬಹುದು.
ಇದರೊಂದಿಗೆ ಕೊಬ್ರಿ ಚಟ್ನಿ ಇಲ್ಲವೇ ಈರುಳ್ಳಿ(ಉಳ್ಳಾಗಡ್ಡಿ)ಚಟ್ನಿ ನೆಂಜಿಕೊಂಡು, ಕೊಬ್ಬರಿಹಾಲು ದೋಸೆಯ ರುಚಿಯನ್ನು ಮನಸೋ ಇಚ್ಛೆ ಸವಿಯಿರಿ.



Click it and Unblock the Notifications
