Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹುಚ್ಚೆಳ್ ಚಟ್ನಿ ಇಲ್ಲದ ರಾಗಿರೊಟ್ಟಿ

* ಅಸೀಮಾ ನೂರ್, ಆನೇಕಲ್
ರಾಗಿರೊಟ್ಟಿಗೆ ಬೇಕಾದ ಸಾಮಗ್ರಿಗಳು
ರಾಗಿ ಹಿಟ್ಟು - 2 ಲೋಟ
ಸುಮಾರು ಗಾತ್ರದ ಈರುಳ್ಳಿ - 2
ಹಸಿರು ಮೆಣಸಿನಕಾಯಿ - 4
ಶುಂಠಿ - ಸಣ್ಣ ತುಂಡು
ಉಪ್ಪು - 1 ಚಮಚ
ಹಿಟ್ಟನ್ನು ಕಲಸಲು ಎಣ್ಣೆ - 4-5 ಚಮಚ
ಹಿಟ್ಟನ್ನು ಕಲಸಲು ಬಿಸಿನೀರು/ಮಜ್ಜಿಗೆ
ಸುಮಾರು 6-7 ರೊಟ್ಟಿಗಳನ್ನು ತಯಾರಿಸಬಹುದು. ಸೂಚನೆ : ಹಿಟ್ಟನ್ನು ಕಲಸಿದ ತಕ್ಷಣ ಉಪಯೋಗಿಸಿರಿ.
ತಯಾರಿಸುವ ವಿಧಾನ :
ಚೆನ್ನಾಗಿ ಜರಡಿಯಾಡಿದ ರಾಗಿ ಹಿಟ್ಟಿಗೆ ಉಪ್ಪು ಮತ್ತು ಚೂರುಎಣ್ಣೆ ಬೆರೆಸಿ ಕಲಸಬೇಕು. ಅದಕ್ಕೆ ಕತ್ತರಿಸಿದ ಈರುಳ್ಳಿ, ಅರೆದ ಶುಂಠಿ ಮತ್ತು ಸಣ್ಣಗೆ ಕೊಚ್ಚಿದ ಮೆಣಸಿನಕಾಯಿಯನ್ನು ಬೆರೆಸಬೇಕು. ಬಿಸಿನೀರನ್ನು ಬಳಸಿ ಹಿಟ್ಟನ್ನು ಕಲಸಿರಿ, ಯಾಕೆಂದರೆ ಒರಟಾದ ರಾಗಿ ಹಿಟ್ಟು ಮಿದುವಾಗಬೇಕು. ನೀರಿನ ಜತೆಗೆ ಸ್ವಲ್ಪ ಮಜ್ಜಿಗೆ ಹಾಕಿದರೆ ಇನ್ನೂ ಒಳ್ಳೆಯದೇ.
ಉಂಡೆ ಮಾಡಿಟ್ಟ ಹಿಟ್ಟನ್ನು ನಿಧಾನವಾಗಿ ಎಣ್ಣೆ ಸವರಿಕೊಂಡ ತವದ ಮೇಲೆ ತಟ್ಟಿರಿ. ಎಣ್ಣೆ ಸವರಿದ ಬಾಳೆಎಲೆ ಅಥವಾ ಪ್ಲಾಸ್ಟಿಕ್ ಹಾಳೆ ಮೇಲೆ ತಟ್ಟಿ ಆನಂತರ ತವದ ಮನೇಲೆ ಹಾಕಿ ನಿಧಾನವಾಗಿ ಎಲೆಯನ್ನು ಹಿಂದಕ್ಕೆ ಪಡೆಯಿರಿ. ನಂತರ ಚೆನ್ನಾಗಿ ಬೇಯಿಸಿ ಬಿಸಿಬಿಸಿಯಿರುವಾಗಲೇ ಹುಚ್ಚೆಳ್ ಚಟ್ನಿ..... ದಯಮಾಡಿ ಯಾರಾದರೂ ಹುಚ್ಚೆಳ್ ಚಟ್ನಿ ಮಾಡುವುದು ಹೇಗೆಂದು ತಿಳಿಸುವಿರಾ?



Click it and Unblock the Notifications
