Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಬಡವರ ಬಾದಾಮಿ ಬಳಸಿ ಹಾಗಲಕಾಯಿ ಕರಿ ಮಾಡಿ
ಉತ್ತರ ಭಾರತದ ಶೈಲಿಯಲ್ಲಿ ಅಡುಗೆ ಮಾಡುವಾಗ ಗೋಡಂಬಿ ಪೇಸ್ಟ್ ಗೆ ಬಹಳ ಪ್ರಾಧ್ಯಾನತೆ ಇದೆ. ಆದರೆ ಗೋಡಂಬಿ ಖರೀದಿಸುವುದು ಅಷ್ಟು ಸುಲಭದ ಮಾತೇ.ಅಬ್ಬಬ್ಬಾ ಬಾಯಿಗೇನೊ ರುಚಿ ನಿಜ ಆದರೆ ಜೇಬಿಗೆ ಅಷ್ಟೇ ಕತ್ತರಿ. ಕೆಜಿ ಗೋಡಂಬಿ ಬೆಲೆ ಸಾವಿರದ ಹತ್ತಿರಹತ್ತಿರ ಇರುತ್ತದೆ. ಹಾಗಾಗಿ ಗೋಡಂಬಿ ಪೇಸ್ಟ್ ಬದಲಿಗೆ ಏನಾದರೂ ಬಳಸಿ ಉತ್ತರ ಭಾರತದ ಶೈಲಿಯ ಅಡುಗೆ ಮಾಡುವುದಾದರೆ ಹೇಗೆ ಮಾಡಬಹುದು? ಸರಳ ಉಪಾಯವಿರುವ ಒಂದು ರೆಸಿಪಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.


ದುಬಾರಿಯೂ ಅಲ್ಲದ, ಆರೋಗ್ಯಕ್ಕೂ ಹಿತವಾದ ಅಡುಗೆಯನ್ನು ಮಾಡುವುದರಿಂದಾಗಿ ಮನೆಮಂದಿಯ ಆರೋಗ್ಯ ಜೊತೆಗೆ ಬಜೆಟ್ ಎರಡನ್ನೂ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತದೆ. ಹಾಗಾದ್ರೆ ಈ ರೆಸಿಪಿ ಮಾಡುವುದಕ್ಕೆ ಏನೆಲ್ಲಾ ಬೇಕು ನೋಡೋಣ ಬನ್ನಿ.
Recipe By: Sushma
Recipe Type: Curry
Serves: 4
-
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ - ಸಣ್ಣ ಜಾತಿಯ ಅರ್ಧ ಕೆಜಿ
ಬೆಳ್ಳುಳ್ಳಿ - 10 ರಿಂದ 12 ಎಸಳು
ನೆಲಗಡಲೆ ಬೀಜಗಳು- ಒಂದು ವರೆ ಮುಷ್ಟಿ
ಶುಂಠಿ - ಎರಡು ಬೆಳ್ಳುಳ್ಳಿ ಎಸಳಿನ ಗಾತ್ರ
ಗರಂ ಮಸಾಲೆ - ಎರಡು ಸ್ಪೂನ್
ಅರಿಶಿನದ ಪುಡಿ- ಅರ್ಧ ಸ್ಪೂನ್
ಅಚ್ಚಖಾರದ ಪುಡಿ - ಮೂರು ಸ್ಪೂನ್
ಟೊಮೆಟೋ - ಎರಡು
ಈರುಳ್ಳಿ- ಎರಡು
ಬೆಲ್ಲ - ಎರಡು ಮುಷ್ಟಿ
ಹುಣಸೆ ಹಣ್ಣು - ಎರಡು ಅಡಿಕೆ ಗಾತ್ರದಷ್ಟು( ಹಾಗಲದ ಕಹಿಯನ್ನು ಆಧರಿಸಿ ಬೆಲ್ಲ ಮತ್ತು ಹುಣಸೆ ಹೆಚ್ಚು ಬಳಸಬೇಕಾಗಬಹುದು)
ಉಪ್ಪು- ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ - ನಾಲ್ಕರಿಂದ ಐದು ಸ್ಪೂನ್
ಬೇವಿನ ಸೊಪ್ಪು - 20 ಎಸಳು
ಚಬಿಳಿ ಎಳ್ಳು - ಅರ್ಧ ಸ್ಪೂನ್
ಏಲಕ್ಕಿ - ಎರಡು
ಲವಂಗ - ಎರಡು
ಜೀರಿಗೆ- ಅರ್ಧ ಸ್ಪೂನ್
-
{recipe}ಮಾಡುವ ವಿಧಾನ:
ನೆಲಗಡಲೆ ಬೀಜಗಳನ್ನು ಅಡುಗೆ ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ. ಕೆಂಬಣ್ಣಕ್ಕೆ ಬಂದಾಗ ಅದನ್ನು ಎಣ್ಣೆಯಿಂದ ಬೇರ್ಪಡಿಸಿ ತಣಿಯಲು ಬಿಡಿ.
ನಂತರ ಅದೇ ಎಣ್ಣೆಯಲ್ಲಿ ಬೆಳ್ಳಿಳ್ಳಿಯನ್ನು ಕೆಂಬಣ್ಣಕ್ಕೆ ಹುರಿದು ತೆಗೆಯಿರಿ.
ನಂತರ ಅದೇ ಎಣ್ಣೆಗೆ ಜೀರಿಗೆ ಹಾಕಿ.
ಜೀರಿಗೆ ಪರಿಮಳ ಬರುತ್ತಿದ್ದ ಹಾಗೆ ಇಡೀ ಇಡೀ ಹಾಗಲಕಾಯಿಯನ್ನು ಮಧ್ಯ ಮಧ್ಯ ಸಿಗಿದಂತೆ ಮಾಡಿ ಎಣ್ಣೆಗೆ ಹಾಕಿ ಬಾಣಲೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
ಕೆಲ ನಿಮಿಷದ ನಂತರ ಹಾಗಲಕಾಯಿ ಬಾಡಿದಂತೆ ಕಾಣುತ್ತದೆ. ಆಗ ಅದಕ್ಕೆ ಉಪ್ಪು ಹಾಕಿ. ಈ ಸಮಯದಲ್ಲೇ ಉಪ್ಪು ಸೇರಿಸುವುದರಿಂದ ಹಾಗಲಕಾಯಿಯು ಉಪ್ಪನ್ನು ಕುಡಿಯುತ್ತದೆ ಮತ್ತು ರುಚಿ ಹೆಚ್ಚುತ್ತದೆ.
ತಣ್ಣಗಾದ ಕಡಲೆಬೀಜಕ್ಕೆ ಟೊಮೆಟೋ, ಈರುಳ್ಳಿ, ಲವಂಗ, ಏಲಕ್ಕಿ, ಹುರಿದ ಬೆಳ್ಳುಳ್ಳಿ, ಶುಂಠಿ, ಬಿಳಿ ಎಳ್ಳು,ಅಚ್ಚಖಾರದ ಪುಡಿ, ಗರಂಮಸಾಲೆ ಹಾಕಿ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಬೇಯುತ್ತಿರುವ ಹಾಗಲಕಾಯಿಗೆ ಸೇರಿಸಿ.
ಸ್ವಲ್ಪ ಸಮಯದ ನಂತರ ಹುಣಸೆರಸವನ್ನು ತಯಾರಿಸಿ ಅದಕ್ಕೆ ಸೇರಿಸಿ.
ನಂತರ ಬೆಲ್ಲವನ್ನು ಸೇರಿಸಿ. ಸಿಹಿ ಹೆಚ್ಚು ಇಷ್ಟ ಪಡುವವರು ಅಥವಾ ಹಾಗಲಕಾಯಿಯ ಕಹಿ ಹೆಚ್ಚಿದ್ದರೆ ಉಪ್ಪು,ಹುಳಿ, ಖಾರ, ಸಿಹಿ ಎಲ್ಲವೂ ಹೆಚ್ಚು ಬೇಕಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.
ರುಬ್ಬಿದ ಮಿಶ್ರಣ ಸೇರಿಸುವ ಮೊದಲೆ ಹುಣಸೆ ರಸ ಹಾಕಬೇಡಿ. ಹುಣಸೆ ರಸ ಮತ್ತು ಬೆಲ್ಲವನ್ನು ಮೊದಲೇ ಸೇರಿಸಿದರೆ ಹಾಗಲಕಾಯಿ ಬೇಯುವುದು ತಡವಾಗುತ್ತದೆ.
ನಂತರ ರುಬ್ಬಿದ ಮಿಶ್ರಣದ ಹಸಿವಾಸನೆ ಹೋಗಿ ಎಣ್ಣೆ ಮೇಲೆ ಬರುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಕೊತ್ತುಂಬರಿ ಸೊಪ್ಪು ಮತ್ತು ಕರಿಬೇವಿನ ಎಸಳು ಸೇರಿಸಿ ಒಂದೆರಡು ಕುದಿ ಬರುವವರೆಗೂ ಕಾಯಿರಿ.
ಚಪಾತಿ ಮತ್ತು ಬಿಳಿ ಅಕ್ಕಿರೊಟ್ಟಿಗೆ ಅಧ್ಬುತ ಕಾಂಬಿನೇಷನ್ ಆಗಿರುತ್ತದೆ. ಆದರೆ ಅನ್ನದ ಜೊತೆ ಸೇವಿಸುವುದಕ್ಕೆ ಅಷ್ಟೇನು ರುಚಿಯಾಗುವುದಿಲ್ಲ ಎಂಬುದು ನಿಮಗೆ ನೆನಪಿರಲಿ.
- ಹಾಗಲಕಾಯಿ ಮಧುಮೇಹಿಗಳಿಗೆ ಅತ್ಯುತ್ತಮವಾದ ಔಷಧಿ ಅಂಶವುಳ್ಳ ಆಹಾರವಾಗಿದೆ. ಇದಕ್ಕೆ ಹಡಲೆಬೀಜ ಹಾಕಿ ಮಾಡುವುದರಿಂದ ಇದರಲ್ಲಿರುವ ಕಹಿ ಅಂಶ ಕೊಂಚ ಕಡಿಮೆ ಯಾಗುತ್ತದೆ ಹಾಗೂ ಚಪಾತಿಗೆ ಹೇಳಿ ಮಾಡಿಸಿದ ಕರಿ ಇದಾಗಿದೆ.
- ಕ್ಯಾಲೋರಿ - 3
- ಕೊಲೆಸ್ಟ್ರಾಲ್ - 0 ಮಿಲಿ ಗ್ರಾಂ
- ಸೋಡಿಯಂ - 13 ಮಿಲಿ ಗ್ರಾಂ
- ಶುಗರ್ - 1 ಗ್ರಾಂ
- ಪೊಟಾಷಿಯಂ - 602 ಮಿಲಿ ಗ್ರಾಂ
- ಫೈಬರ್ - 1.9 ಗ್ರಾಂ



Click it and Unblock the Notifications