For Quick Alerts
ALLOW NOTIFICATIONS  
For Daily Alerts

ಬಾಳೆಕಾಯಿ ತವಾ ಫ್ರೈ ರೆಸಿಪಿ

Posted By:
|

ಬಾಳೆಕಾಯಿಯ ಬೋಂಡಾ, ಬಾಳೆಕಾಯಿ ಪಲ್ಯ, ಸಾಂಬಾರ್ ಇತ್ಯಾದಿ ಅಡುಗೆಗಳು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಬಾಳೆಕಾಯಿಯ ಬೋಂಡಾ ಮಾಡಲು ಹೋದರೆ ಎಷ್ಟು ಎಣ್ಣೆ ಇದ್ದರೂ ಸಾಲದು ಅನ್ನಿಸುತ್ತದೆ. ಅಡುಗೆಯಲ್ಲಿ ಅತಿಯಾಗಿ ಎಣ್ಣೆ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದೇ ಇದೆ. ಹಾಗಾಗಿ ಕಡಿಮೆ ಎಣ್ಣೆ ಖರ್ಚಿನಲ್ಲಿ ರುಚಿರುಚಿಯಾದ ಬಾಳೆಕಾಯಿ ಅಡುಗೆ ಮಾಡುವುದು ಹೇಗೆ ನಾವಿಲ್ಲಿ ತಿಳಿಸುತ್ತಿದ್ದೇವೆ.

Here is raw banana tava fry recipe

ಬಾಳೆಕಾಯಿಯ ತವಾ ಫ್ರೈ. ಬಾಯಲ್ಲಿ ಇಟ್ಟ ಕೂಡ್ಲೆ ವಾವ್ ಯಮ್ಮಿ ಯಮ್ಮಿ ಅನ್ನಬೇಕು ಅಂತದ್ದೊಂದು ಬೊಂಬಾಟ್ ರೆಸಿಪಿ. ಮಕ್ಕಳಿಗಂತೂ ಚಪ್ಪರಿಸಿಕೊಂಡು ತಿನ್ನಬೇಕು ಅನ್ನಿಸುವಂತಹ ಸೂಪರ್ ರೆಸಿಪಿ ಇದು. ಎಣ್ಣೆಯೂ ಅಧಿಕ ಬೇಡ, ಸಮಯವೂ ಹೆಚ್ಚು ಬೇಡದ ಫಟಾಫಟ್ ರೆಸಿಪಿ.ಏನಾದ್ರೂ ತಿನ್ನೊಕೆ ಕೊಡು ಅಮ್ಮಾ ಅಂತ ಪದೇ ಪದೇ ಪೀಡಿಸೋ ಮಕ್ಕಳಿಗೆ ಕೇಳಿದ ಕೂಡಲೇ ಮಾಡಿಕೊಡಬಹುದಾದ ಒಂದು ರೆಪಿಸಿ ಇದು. ಹೇಗೆ ಮಾಡೋದು ಅನ್ನೋ ಕುತೂಹಲವಿದ್ದರೆ ಮುಂದೆ ಓದಿ.
Banana Tava Fry Recipe, ಬಾಳೆಕಾಯಿ ತವಾ ಫ್ರೈ ರೆಸಿಪಿ
Banana Tava Fry Recipe, ಬಾಳೆಕಾಯಿ ತವಾ ಫ್ರೈ ರೆಸಿಪಿ
Prep Time
15 Mins
Cook Time
15M
Total Time
30 Mins

Recipe By: Sushma Chatra

Recipe Type: Side Dish

Serves: 3

Ingredients
  • ಬೇಕಾಗುವ ಸಾಮಗ್ರಿಗಳು

    ಬಾಳೆಕಾಯಿ- ನಾಲ್ಕು

    ಅರಾರೊಟ್ಟಿನ ಪುಡಿ- 5 ಚಮಚ

    ಕಡಲೆಹಿಟ್ಟು - 7 ಚಮಚ

    ಉಪ್ಪು- ರುಚಿಗೆ ತಕ್ಕಷ್ಟು

    ಜೀರಿಗೆ ಪುಡಿ- ಒಂದು ಚಮಚ

    ಪುದೀನಾ ಎಲೆಗಳು -5 ರಿಂದ 10

    ಖಾರದ ಪುಡಿ - ಎರಡು ಚಮಚ

    ಇಂಗು - ಚಿಟಿಕೆ

    ಗರಂ ಮಸಾಲ ಪುಡಿ ಅಥವಾ ಚಾಟ್ ಮಸಾಲ ಪುಡಿ - ಅರ್ಧ ಚಮಚ

    ಕೊಬ್ಬರಿ ಎಣ್ಣೆ - 20 ಸ್ಪೂನ್

Red Rice Kanda Poha
How to Prepare
  • ಮಾಡುವ ವಿಧಾನ -

    . ಬಾಳೆಕಾಯಿಯನ್ನು ತೆಳ್ಳಗೆ ಹೆಚ್ಚಿ ನೀರಿಗೆ ಹಾಕಿಕ್ಕೊಳ್ಳಿ.

    . ಒಂದು ಪಾತ್ರೆಯಲ್ಲಿ ಅರಾರೊಟ್ಟಿನ ಪುಡಿಯನ್ನು ಹಾಕಿ ಸ್ವಲ್ಪ ತಣ್ಣೀರು ಸೇರಿಸಿ ಮೊದಲು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

    . ಅದಕ್ಕೆ ಕಡಲೆ ಹಿಟ್ಟು ಸೇರಿಸಿ ನಂತರ ಉಳಿದ ಎಲ್ಲಾ ಪುಡಿಗಳು,ಉಪ್ಪು, ಖಾರಗಳನ್ನು ಹಾಕಿ ದೋಸೆ ಹಿಟ್ಟಿನ ಹದದಲ್ಲಿ ಮಿಶ್ರಣ ರೆಡಿ ಮಾಡಿಕೊಳ್ಳಿ.

    . ಇದಕ್ಕೆ ಸಣ್ಣಗೆ ಹೆಚ್ಚಿದ ಪುದೀನಾ ಎಲೆಗಳನ್ನು ಸೇರಿಸಿಕೊಳ್ಳಿ.

    . ನಂತರ ಬಾಳೆಕಾಯಿಯನ್ನು ಈ ಮಿಶ್ರಣದಲ್ಲಿ ಅದ್ದಿ ಬಿಸಿಬಿಸಿ ಖಾವಲಿಯ ಮೇಲೆ ಇಡಿ.

    . ಪ್ರತಿಯೊಂದು ಬಾಳೆಕಾಯಿ ತುಂಡಿಗೂ ಅರ್ಧ ಸ್ಪೂನ್ ಎಣ್ಣೆ ಹಾಕಿ ಒಂದೆರಡು ನಿಮಿಷ ಬೇಯಿಸಿ.

    . ನಂತರ ಬಾಳೆಕಾಯಿಯ ಇನ್ನೊಂದು ಬದಿಯನ್ನು ಮಗುಚಿ ಬೇಯಿಸಿ.

    . ರುಚಿ ರುಚಿ ಬಾಳೆಕಾಯಿಯ ತವಾ ಫ್ರೈ ಸಿದ್ಧವಾದಂತೆ. ಸಂಜೆಯ ಸ್ನ್ಯಾಕ್ಸ್ ಗೆ, ಊಟದ ಸೈಡ್ಸ್ ಆಗಿ ಬಳಸಬಹುದು.

Instructions
  • ಬಾಳೆಕಾಯಿಯನ್ನು ಹೆಚ್ಚಿ ಹೆಚ್ಚು ಸಮಯ ಹಾಗೆಯೇ ಬಿಟ್ಟರೆ ಕಪ್ಪಾಗುತ್ತದೆ. ಹಾಗಾಗಿ ಹೆಚ್ಚಿದ ಕೂಡಲೇ ಅಥವಾ ಸಿಪ್ಪೆ ತೆಗೆದ ಕೂಡಲೇ ನೀರಿಗೆ ಹಾಕಿಕೊಳ್ಳಬೇಕು. ಬಾಳೆಕಾಯಿ ಹೆಚ್ಚುವಾಗ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡರೆ ಅಥವಾ ನೀರು ಮುಟ್ಟಿಕೊಂಡು ಹೆಚ್ಚಿದರೆ ಅಂಟು ಅನ್ನಿಸುವುದಿಲ್ಲ. ಇನ್ನು ಬಾಳೆಕಾಯಿ ಬಹಳ ಬೇಗನೆ ಬೇಯುವ ತರಕಾರಿಗಳಲ್ಲಿ ಒಂದಾಗಿದೆ. ಬಾಳೆಕಾಯಿಯಲ್ಲಿ ಅನೇಕ ವಿಧಗಳಿದ್ದು ಎಲ್ಲವನ್ನೂ ಹೀಗೆ ಫ್ರೈ ಮಾಡುವುದಕ್ಕೆ ಬಳಸಿದರೆ ಅಷ್ಟು ರುಚಿ ಅನ್ನಿಸಲಾರದು.
Nutritional Information
[ 5 of 5 - 86 Users]
X
Desktop Bottom Promotion