For Quick Alerts
ALLOW NOTIFICATIONS  
For Daily Alerts

ಬಾಳು ಬಂಗಾರಗೊಳಿಸೋ ಬಾಳೆಮೂತಿ ಪಲ್ಯ

Posted By:
|

ಬಾಳೆ ಎಂದರೆ ಬಾಳು ಬಂಗಾರ ಅನ್ನೋ ಮಾತಿದೆ. ಹೌದು ಬಾಳೆದಿಂಡು, ಬಾಳೆಹಣ್ಣು, ಬಾಳೆಹೂವು ಎಲ್ಲವೂ ಕೂಡ ನಮ್ಮ ಆರೋಗ್ಯ ಹೆಚ್ಚಿಸುವ ವಸ್ತುಗಳು. ಅವುಗಳಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸುವುದಕ್ಕೆ ಸಾಧ್ಯ.

Banana Flower Sabji

ನಾವಿಲ್ಲಿ ವಿಶೇಷವಾಗಿ ಬಾಳೆಹೂವಿನಿಂದ ಪಲ್ಯ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಬಾಳೆಹೂವನ್ನು ಬಾಳೆಮೂತಿ ಎಂದು ಕೂಡ ಕರೆಯಲಾಗುತ್ತದೆ.

ಮಾರುಕಟ್ಟೆಗಳಲ್ಲೂ ಕೂಡ ಇದು ಲಭ್ಯವಿರುತ್ತದೆ. ಆದರೆ ಖಾದ್ಯ ತಯಾರಿಸುವುದಕ್ಕೆ ತಿಳಿಯದೇ ಇರುವುದರಿಂದಾಗಿ ಖರೀದಿಸುವವರ ಸಂಖ್ಯೆಯೂ ಕಡಿಮೆ ಇದೆ. ಆದರೆ ಬಾಳೆಮೂತಿ ಸೇವನೆ ಮಾಡುವುದರಿಂದ ನೀವು ಅನೇಕ ರೀತಿಯ ಆರೋಗ್ಯ ಲಾಭವನ್ನು ಪಡೆಯುವುದಕ್ಕೆ ಸಾಧ್ಯವಿದೆ. ಅವುಗಳ ಬಗ್ಗೆ ಮಾಹಿತಿಯನ್ನು ಕೂಡ ಈ ಲೇಖನ ಒಳಗೊಂಡಿದೆ.

Banana Flower Sabji/ ಬಾಳೆಮೂತಿ ಪಲ್ಯ
Banana Flower Sabji/ ಬಾಳೆಮೂತಿ ಪಲ್ಯ
Prep Time
40 Mins
Cook Time
15M
Total Time
55 Mins

Recipe By: ಸುಷ್ಮಾ

Recipe Type: VEG

Serves: 3

Ingredients
  • ಬೇಕಾಗುವ ಸಾಮಗ್ರಿಗಳು-

    ಬಾಳೆಮೂತಿ - 3

    ಜೀರಿಗೆ - ಒಂದು ಸ್ಪೂನ್

    ತೆಂಗಿನ ಕಾಯಿ - ಅರ್ಧ

    ಬ್ಯಾಡಗಿ ಮೆಣಸು - 6

    ಅರಿಶಿನ - ಚಿಟಿಕೆ

    ಸಾಸಿವೆ - ಅರ್ಧ ಸ್ಪೂನ್

    ಉದ್ದಿನಬೇಳೆ - ಅರ್ಧ ಸ್ಪೂನ್

    ಬೇವಿನ ಸೊಪ್ಪು - 10 ಎಸಳು

    ಉಪ್ಪು - ರುಚಿಗೆ ತಕ್ಕಷ್ಟು

    ಹುಣಸೆ ಹುಳಿ- 25 ಗ್ರಾಂ

    ಅಡುಗೆ ಎಣ್ಣೆ- ಎರಡರಿಂದ ಮೂರು ಸ್ಪೂನ್

    ಬೆಲ್ಲ - ಒಂದು ಅಡಿಕೆ ಗಾತ್ರ

    ಬೆಳ್ಳುಳ್ಳಿ - 10 ಎಸಳು

Red Rice Kanda Poha
How to Prepare
  • ಮಾಡುವ ವಿಧಾನ-

    .ಬಾಳೆಮೂತಿ ಹೆಚ್ಚಿಕೊಂಡು ನೀರಿಗೆ ಹಾಕಿಕೊಳ್ಳಿ( ನೀರಿಗೆ ಹಾಕಿಕೊಳ್ಳುವುದರಿಂದ ಕಪ್ಪಾಗುವುದಿಲ್ಲ ಮತ್ತು ಒಗರಿನ ಅಂಶ ಕಡಿಮೆ ಮಾಡಲು ಸಹಕಾರಿಯಾಗುತ್ತದೆ)

    . ಕುಕ್ಕರ್ ನಲ್ಲಿ ಹೆಚ್ಚಿಕೊಂಡ ಬಾಳೆಮೂತಿ,ಚಿಟಿಕೆ ಅರಿಶಿನ, ಉಪ್ಪು, ಹುಣಸೆ ಹುಳಿ, ಬೆಲ್ಲ ಸೇರಿಸಿ ಮೂರರಿಂದ ನಾಲ್ಕು ವಿಷಿಲ್ ಕೂಗಿಸಿಕೊಳ್ಳಿ.

    . ತೆಂಗಿನ ತುರಿ, ಬ್ಯಾಡಗಿ ಮೆಣಸು, ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

    . ಅಡುಗೆ ಎಣ್ಣೆಗೆ ಸಾಸಿವೆಕಾಳು, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ. ಸಾಸಿವೆಕಾಳು ಚಟಿಪಟಿ ಅಂದಾಗ ಕುಕ್ಕರ್ ನಲ್ಲಿ ಬೇಯಿಸಿದ ಮಿಶ್ರಣವನ್ನು ಸೇರಿಸಿ.

    . ನಂತರ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ. ಬೇಯಿಸಿದ ಬಾಳೆಹೂವು ಮತ್ತು ರುಬ್ಬಿದ ಮಿಶ್ರಣ ಹೊಂದಿಕೊಳ್ಳುವಂತೆ ಎರಡನ್ನೂ ಕೈಯಾಡಿಸಿ. ಎರಡು ಬಾರಿ ಕುದಿ ಬಂದ ನಂತರ ಬೇವಿನ ಎಸಳನ್ನು ಸೇರಿಸಿ.

    . ಗ್ಯಾಸ್ ಆಫ್ ಮಾಡಿದ ನಂತರ ಬೆಳ್ಳುಳ್ಳಿಯನ್ನು ಜಜ್ಜಿ ಪಲ್ಯಕ್ಕೆ ಸೇರಿಸಿ. ಬಿಸಿಬಿಸಿ ಪಲ್ಯದಲ್ಲಿ ಹಸಿಬೆಳ್ಳುಳ್ಳಿಯು ವಿಶೇಷ ಘಮವನ್ನು ನೀಡುತ್ತದೆ. ರೊಟ್ಟಿಯ ಜೊತೆ, ಚಪಾತಿಯ ಜೊತೆ ಅಥವಾ ಊಟಕ್ಕೆ ಈ ಪಲ್ಯವು ಅಧ್ಬುತವಾಗಿರುತ್ತದೆ.

Instructions
  • ಬಾಳೆಮೂತಿಯಲ್ಲಿ ವಿಟಮಿನ್ ಸಿ,ಎ,ಇ ಗಳಿರುತ್ತದೆ.ಮಿನರಲ್ ಗಳು, ಫ್ಯಾಟಿ ಆಸಿಡ್ ಕಟೆಂಟ್ ಗಳು, ಎಸೆನ್ಶಿಯಲ್ ಮತ್ತು ನಾನ್-ಎಸೆನ್ಶಿಯಲ್ ಅಮೈನೋ ಆಸಿಡ್ ಗಳು ಇದರಲ್ಲಿವೆ.ಬಾಳೆಹೂವು ಅತ್ಯುತ್ತಮವಾದ ಆಂಟಿ ಆಕ್ಸಿಡೆಂಟ್ ನ ಮೂಲವಾಗಿದೆ.ಪೊಟಾಷಿಯಂ ಅಂಶವನ್ನು ಕೂಡ ಇದು ಹೊಂದಿರುತ್ತದೆ.
Nutritional Information
  • ಕ್ಯಾಲೋರಿ - 51
  • ಪ್ರೋಟೀನ್ - 1.6 g
  • ಫ್ಯಾಟ್ - 0.6 g
  • ಕ್ಯಾಲ್ಸಿಯಂ - 56 mg
  • ಕಾರ್ಬೋಹೈಡ್ರೇಟ್ - 9.9 g
  • ವಿಟಮಿನ್ ಇ - 1.7mg
  • ಫೈಬರ್ - 5.7 fg
[ 4 of 5 - 74 Users]
X
Desktop Bottom Promotion