For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುತ್ತೆ ನವರಾತ್ರಿ ಸ್ಪೆಷಲ್ ಬಾದಾಮಿ ಲಡ್ಡು..

Posted By:
|

ಇನ್ನೇನು ಕೆಲವೇ ದಿನಗಳಲ್ಲಿ ಹಬ್ಬಗಳ ಪರ್ವ ಆರಂಭವಾಗಲಿದೆ. ನವರಾತ್ರಿ, ಅದಾದ ಬಳಿಕ ದೀಪಾವಳಿ ಹೀಗೆ ನಾನಾ ಹಬ್ಬಗಳು ನಮ್ಮ ಮುಂದಿದೆ. ಹಬ್ಬ ಅಂದ್ರೆ ನೆನಪಾಗೋದು, ಸಂಭ್ರಮ, ಉಡುಗೆ-ತೊಡುಗೆ ಜೊತೆಗೆ ಸಿಹಿತಿಂಡಿಗಳು. ಹೌದು, ಅಮ್ಮ ಮಾಡೋ ವಿವಿಧ ತರಹದ ಸ್ವೀಟ್‌ಗಳು ಎಲ್ಲರ ಫೇವರೆಟ್. ಆದ್ರೆ ಪ್ರತಿಸಲ ವಿಭಿನ್ನವಾದುದು ಮಾಡೋದಾದ್ರೂ ಏನು? ಅದೇ ರವೆ ಲಡ್ಡು, ಒಬ್ಬಟ್ಟು ಮಾಡಿ, ಬೇಜಾರಾಗಿದ್ಯಾ? ಹಾಗಾದ್ರೆ ಈ ಬಾರಿಯ ಹಬ್ಬಗಳಿಗೆ ಈ ಬಾದಾಮಿ ಲಡ್ಡು ಟ್ರೈ ಮಾಡಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ.

Badam Ladoo Recipe in Kannada | Badam Laddu | Almond Ladoo

ಬಾದಾಮಿ ಲಡ್ಡು ತಯಾರಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ಬಾಯಲ್ಲಿ ನೀರೂರಿಸುತ್ತೆ ನವರಾತ್ರಿ ಸ್ಪೆಷಲ್ ಬಾದಾಮಿ ಲಡ್ಡು..
ಬಾಯಲ್ಲಿ ನೀರೂರಿಸುತ್ತೆ ನವರಾತ್ರಿ ಸ್ಪೆಷಲ್ ಬಾದಾಮಿ ಲಡ್ಡು..
Prep Time
10 Mins
Cook Time
15M
Total Time
25 Mins

Recipe By: Shreeraksha

Recipe Type: Snacks

Serves: 2

Ingredients
  • ಬೇಕಾಗುವ ಪದಾರ್ಥಗಳು:

    1 ಕಪ್ ಬಾದಾಮಿ

    1 ಕಪ್ ತುರಿದ ಕೊಬ್ಬರಿ

    ¾ ಕಪ್ ಬೆಲ್ಲ

    ¼ ಟೀಸ್ಪೂನ್ ಏಲಕ್ಕಿ ಪುಡಿ

    2 ಚಮಚ ತುಪ್ಪ

    10 ಗೋಡಂಬಿ

    2 ಚಮಚ ಒಣದ್ರಾಕ್ಷಿ

Red Rice Kanda Poha
How to Prepare
  • ತಯಾರಿಸುವ ವಿಧಾನ:

    • ಮೊದಲಿಗೆ, ಬಾಣಲೆಯಲ್ಲಿ 1 ಕಪ್ ಬಾದಾಮಿಯನ್ನು ಹಾಕಿ, ಗೋಲ್ಡನ್ ಬ್ರೌನ್ ಆಗುವವರೆಗೂ ಹುರಿದುಕೊಳ್ಳಿ.
    • ಅದನ್ನು ತಣ್ಣಗಾಗಲು ಬಿಟ್ಟು, ನಂತರ ಮಿಕ್ಸಿಗೆ ಹಾಕಿ, ಚೆನ್ನಾಗಿ ಪುಡಿ ಮಾಡಿಕೊಳ್ಳಿ.
    • ಇದನ್ನು ದೊಡ್ಡ ಬಟ್ಟಲಿಗೆ ಹಾಕಿ, ಪಕ್ಕಕ್ಕೆ ಇಡಿ.
    • ಈಗ ಅದೇ ಬಾಣಲೆಗೆ 1 ಕಪ್ ಒಣ ತೆಂಗಿನಕಾಯಿಯನ್ನು ಹಾಕಿ, ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
    • ಹುರಿದ ತೆಂಗಿನಕಾಯಿಯನ್ನು ¾ ಕಪ್ ಬೆಲ್ಲದೊಂದಿಗೆ ಮಿಕ್ಸಿಗೆ ಹಾಕಿ, ತರಿತರಿಯಾರಿ ಪುಡಿಮಾಡಿ.
    • ಇದನ್ನು ಅದೇ ಬಾದಮ್ ಪೌಡರ್‌ ಇರುವ ಬೌಲ್‌ಗೆ ಹಾಕಿಕೊಳ್ಳಿ, ಜತೆಗೆ, ¼ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    • ಈಗ ಬಾಣಲೆಯಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ, 10 ಗೋಡಂಬಿ ಮತ್ತು 2 ಚಮಚ ಒಣದ್ರಾಕ್ಷಿ ಹುರಿದುಕೊಳ್ಳಿ.
    • ಹುರಿದ ಡ್ರೈ ಫ್ರೂಟ್ಸ್‌ಗಳನ್ನು ಲಡ್ಡುವಿನ ಮಿಶ್ರಣಕ್ಕೆ ಸುರಿಯಿರಿ, ಚೆನ್ನಾಗಿ ಮಿಶ್ರಣ ಮಾಡಿ.
    • ಕೈಗಳಿಗೆ ಸ್ವಲ್ಪ ಹಚ್ಚಿಕೊಂಡು, ಲಡ್ಡು ಕಟ್ಟಲು ಪ್ರಾರಂಭಿಸಿ, ಅಂದರೆ ಕೈಗಳಿಂದ ಉಂಡೆ ಕಟ್ಟಿ, ಲಡ್ಡು ತಯಾರಿಸಿ.
    • ಅಂತಿಮವಾಗಿ, ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿಡಿ.
    • ಇದನ್ನು 2 ವಾರಗಳವರೆಗೆ ಇಟ್ಟು ಸವಿಯಬಹುದು.

Instructions
Nutritional Information
  • People - 2
  • ಕ್ಯಾಲೋರಿ - 146ಕೆ
  • ಕೊಬ್ಬು - 13ಗ್ರಾ
  • ಪ್ರೋಟೀನ್ - 3ಗ್ರಾ
  • ಕಾರ್ಬ್ಸ್ - 3ಗ್ರಾ
[ 4.5 of 5 - 53 Users]
Story first published: Wednesday, September 29, 2021, 13:20 [IST]
X
Desktop Bottom Promotion