Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಭಾರತದಲ್ಲಿ ವಾಟರ್ ಬರ್ತ್ ಹೆಚ್ಚಾಗುತ್ತಿರೋದು ಯಾಕೆ?
ನೈಸರ್ಗಿಕ ಗರ್ಭಧಾರಣೆ, ಸಿಸೇರಿಯನ್ ಗರ್ಭಧಾರಣೆ ಬಗ್ಗೆ ನಿಮಗೆಲ್ಲಾ ಚೆನ್ನಾಗಿ ಗೊತ್ತಾಇದೆ. ಆದ್ರೆ ಇತ್ತೀಚಿಗೆ ವಾಟರ್ ಬರ್ತ್ ಅಂದ್ರೆ ನೀರಿನೊಳಗಡೆ ಮಗುವಿಗೆ ಜನ್ಮ ನೀಡುವುದು ತುಂಬಾನೇ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಮೊದ ಮೊದಲು ವಿದೇಶಗಳಲ್ಲಿ ಮಾತ್ರ ಈ ರೀತಿಯ ಗರ್ಭಧಾರಣೆ ಹೆಚ್ಚಾಗಿ ನಡೆಯುತ್ತಿತ್ತು. ಇತ್ತೀಚಿಗೆ ಭಾರತದಲ್ಲೂ ಕೂಡ ಮಹಿಳೆಯರು ನೀರಿನೊಳಗಡೆ ಮಗುವಿಗೆ ಜನ್ಮ ನೀಡೋದಕ್ಕೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ.
ತಜ್ಞ ವೈದ್ಯರೇ ಹೇಳುವಂತೆ ನೈಸರ್ಗಿಕವಾಗಿ ಮಗುವಿಗೆ ನೀರಿನೊಳಗಡೆ ಜನ್ಮ ನೀಡುವುದು ತುಂಬಾನೇ ಒಳ್ಳೆಯದಂತೆ. ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಎಲ್ಲರೂ ಕೂಡ ಸುರಕ್ಷಿತವಾಗಿ ಗರ್ಭಧಾರಣೆಯಾಗಲಿ ಎಂದು ಬಯಸುತ್ತಾರೆ. ಹೀಗಾಗಿ ನೀರಿನಲ್ಲಿ ಮಗುವಿಗೆ ಜನ್ಮ ನೀಡುವುದು ಪ್ರಾಯೋಗಿಕವಾಗಿ ಸಾಬೀತಾಗಿರುವ ಸುರಕ್ಷಿತ ತಂತ್ರವಾಗಿದೆ.

ಈ ಪ್ರಕ್ರಿಯೆಯಲ್ಲಿ ಜನಿಸಿದ ಮಗು ಸಾಂಪ್ರದಾಯಿಕ ಪ್ರಕ್ರಿಯೆಯಲ್ಲಿ ಜನಿಸಿದಂತೆಯೇ ಆರೋಗ್ಯಕರವಾಗಿರುತ್ತವೆ. ಅಷ್ಟಕ್ಕು ಇತ್ತೀಚಿನ ದಿನಗಳಲ್ಲಿ ಭಾರತೀಯರು ವಾಟರ್ ಬರ್ತ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರೋದು ಯಾಕೆ? ಇದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
1. ಗರ್ಭಿಣಿಯ ಆತಂಕ ಮತ್ತು ಒತ್ತಡ ಕಡಿಮೆಯಾಗುತ್ತದೆ
ಗರ್ಭಧಾರಣೆಯ ಸಮಯದಲ್ಲಿ ಬಳಸುವ ಹದಾ ಬೆಚ್ಚಗಿನ ನೀರು ನಮ್ಮ ಸ್ನಾಯುಗಳು ಮತ್ತು ನರಗಳನ್ನು ವಿಶ್ರಾಂತಗೊಳಿಸುತ್ತದೆ. ಹಾಗೂ ಗರ್ಭಿಣಿಯ ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಂಡಾರ್ಫಿನ್‌ಗಳನ್ನು ಉತ್ಪಾದಿಸಲು ದೇಹವನ್ನು ಉತ್ತೇಜಿಸುತ್ತದೆ.
ಇಷ್ಟೇ ಅಲ್ಲ, ನೋವಿನ ತೀವ್ರತೆಯು ಕಡಿಮೆಯಾಗುತ್ತದೆ. ಗರ್ಭಾಶಯದ ಸ್ನಾಯುಗಳು ಸುಲಭವಾಗಿ ಸಂಕೋಚನೆಗೆ ಒಳಗಾಗಲು ಸಹಾಯ ಮಾಡುತ್ತದೆ. ಇನ್ನೂ ನೈಸರ್ಗಿಕ ಗರ್ಭಧಾರಣೆಯಲ್ಲಿ ಭ್ರೂಣ ಹೊರಗಡೆ ಬರುವಾಗ ಕೆಲವೊಂದು ಸಮಸ್ಯೆ ಉಂಟಾಗುತ್ತದೆ. ಆದರೆ ವಾಟರ್ ಬರ್ತ್ ನಲ್ಲಿ ಯಾವುದೇ ರೀತಿ ತೊಂದರೆಯಾಗೋದಿಲ್ಲ.
2. ನೈಸರ್ಗಿಕ ನೋವು ನಿವಾರಕವಾಗಿದೆ
ಹೆರಿಗೆ ಸಮಯದಲ್ಲಿ ಗರ್ಭಿಣಿ ಅತಿಯಾದ ನೋವನ್ನು ಅನುಭವಿಸಬೇಕಾಗುತ್ತದೆ. ಆದರೆ ಬೆಚ್ಚಗಿನ ನೀರಿನೊಳಗಡೆ ಜನ್ಮ ನೀಡೋದು ಆಕೆಗೆ ನೈಸರ್ಗಿಕ ಹೆರಿಗೆಗಿಂತಲೂ ತುಂಬಾನೇ ಉತ್ತಮವಂತೆ. ಈ ಸಮಯದಲ್ಲಿ ಗರ್ಭಿಣಿ ನೀರಿನೊಳಗಡೆ ಮುಳುಗಿರೋದ್ರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನರಗಳು ಮತ್ತು ಸ್ನಾಯುಗಳನ್ನು ಶಾಂತಗೊಳಿಸುತ್ತದೆ.
ಅಷ್ಟೇ ಅಲ್ಲ, ಇದು ಸಂತೋಷದ ಹಾರ್ಮೋನುಗಳನ್ನು (ಎಂಡಾರ್ಫಿನ್) ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೋವಿನ ತೀವ್ರತೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಹೆಚ್ಚಿನ ಹೆಣ್ಣು ಮಕ್ಕಳಿಗೆ ಹೆರಿಗೆ ನೋವನ್ನು ತಡೆದುಕೊಳ್ಳೋ ಶಕ್ತಿ ಇರೋದಿಲ್ಲ. ಅಂತವರಿಗೆ ವಾಟರ್ ಬರ್ತ್ ತುಂಬಾನೇ ಒಳ್ಳೆಯದು.
3. ಹೆರಿಗೆ ನೋವಿನ ಅವಧಿ ಕಡಿಮೆಯಾಗುತ್ತದೆ
ಈ ರೀತಿಯ ಗರ್ಭಧಾರಣೆ ವಿಧಾನದಲ್ಲಿ ಗರ್ಭಿಣಿಯು ನೀರಿನಲ್ಲಿ ತೇಲುತ್ತಿರುತ್ತಾರೆ. ಹೀಗಾಗಿ ಇದು ಸಾಂಪ್ರದಾಯಿಕ ವಿಧಾನಕ್ಕಿಂತ ವಿಭಿನ್ನ ಜೊತೆಗೆ ಇದು ಮುಕ್ತ ಚಲನೆಯನ್ನು ಅನುಮತಿಸಲು ಇದು ಸಹಾಯ ಮಾಡುತ್ತದೆ. ತೇಲುವಿಕೆಯು ಮಗುವಿಗೆ ಜನ್ಮ ಕಾಲುವೆಯ ಹತ್ತಿರ ಚಲಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಆ ತಾಯಿಯಾಗಿವ ಹೆರಿಗೆ ನೋವಿನ ಅವಧಿ ಮತ್ತಷ್ಟು ಕಡಿಮೆ ಆಗುತ್ತದೆ.
4. ಗರ್ಭಧಾರಣೆ ಸಂದರ್ಭದಲ್ಲಿ ತೊಡಕುಗಳು ಕಡಿಮೆ ಆಗುತ್ತದೆ
ನೀರಿನೊಳಗಡೆ ಮಗುವಿಗೆ ಜನ್ಮ ನೀಡೋದ್ರಿಂದ ಪೆರಿನಿಯಂನ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ನೀರು ಸಹಾಯ ಮಾಡುತ್ತದೆ. ಹೆರಿಗೆಯ ಸಮಯದಲ್ಲಿ ಗುಪ್ತಾಂಗದ ಭಾಗದಲ್ಲಿ ನೀರು ಬರುವ ಸಾಧ್ಯತೆಗಳು ಕಡಿಮೆ. ಈ ರೀತಿಯ ಹೆರಿಗೆಯಿಂದ ಹಾನಿಯಾಗುವ ಸಾಧ್ಯತೆ ಕಡಿಮೆಯಾಗಿರುತ್ತದೆ. ಗರ್ಭಧಾರಣೆಯ ನಂತರ ಮಹಿಳೆಯರು ಬೇಗನೇ ಚೇತರಿಸಿಕೊಳ್ಳುತ್ತಾರೆ.
5. ವಾಟರ್ ಬರ್ತ್ vs ನೈಸರ್ಗಿಕ ಹೆರಿಗೆ : ಯಾವುದು ಉತ್ತಮ?
ನೀರಿನೊಳಗಡೆ ಮಗುವಿಗೆ ಜನ್ಮ ನೀಡುವುದು ಸಾಂಪ್ರದಾಯಿಕ ಹೆರಿಗೆಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಈ ಎರಡೂ ವಿಧಾನಗಳು ಸಮಾನ್ಯವಾಗಿ ಯಶಸ್ವಿಯಾಗುತ್ತವೆ. ನೀರಿನ ಹೆರಿಗೆಯಾದರೆ ತಾಯಿಯು ಹೆಚ್ಚಿನ ನೋವು ತಿನ್ನ ಬೇಕಾದ ಅವಶ್ಯಕತೆ ಇರೋದಿಲ್ಲ. ಜೊತೆಗೆ ಹೆರಿಗೆ ಅಸ್ವಸ್ಥತೆಯ ಪ್ರಮಾಣ ಕೂಡ ಕಡಿಮೆ ಇರುತ್ತದೆ. ನೀರಿನಲ್ಲಿ ಜನ್ಮ ನೀಡುವುದು ಹೆಚ್ಚು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಈ ಪ್ರತಿಯೊಂದು ಹೆರಿಗೆಯ ಕಾರ್ಯವಿಧಾನಗಳು ತನ್ನದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ.
ಸೂಚನೆ : ನೀವೇನಾದರೂ ವಾಟರ್ ಬರ್ತ್ ನೀಡೋದಕ್ಕೆ ನಿರ್ಧರಿಸಿದ್ದೀರಿ ಅಂತಾದರೆ ಮೊದಲು ವೈದ್ಯರ ಸಲಹೆಯನ್ನು ಪಡೆಯುವುದು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ತಜ್ಞರ ಸಮ್ಮುಖದಲ್ಲೇ ಈ ರೀತಿಯ ಹೇರಿಗೆ ನಡೆದರೆ ಉತ್ತಮ.



Click it and Unblock the Notifications

