Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಶಾಲಾ ಬ್ಯಾಗ್ ಹೊರೆ, ಮಕ್ಕಳ ಆರೋಗ್ಯಕ್ಕೆ ತರಲಿದೆ ಕುತ್ತು!
ಇತ್ತೀಚಿನ ಕೆಲ ವರ್ಷಗಳಿಂದ ಶಾಲಾ ಮಕ್ಕಳು ಮಣ ಬಾರದ ಶಾಲಾ ಬ್ಯಾಗ್ ಹೊತ್ತು ನಡೆಯುವುದನ್ನು ನಾವು ನೋಡಿರ್ತೀವಿ. ಅವರ ತೂಕಕ್ಕಿಂತಲೂ ಹೆಚ್ಚಾಗಿ ಶಾಲಾ ಬ್ಯಾಗ್ ನ ತೂಕ ಇರುವುದು ವಿಪರ್ಯಾಸ ಅಂತಾನೇ ಹೇಳಬಹುದು. ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಪೋಷಕರು ಆಗಾಗ್ಗೆ ಸರಕಾರದ ಮೇಲೆ ಒತ್ತಡ ಹಾಕುತ್ತಲೇ ಇದ್ದರು. ಇದರ ಮೊದಲ ಹೆಜ್ಜೆಯಂತ ಕರ್ನಾಟಕ ಸರಕಾರ ಶನಿವಾರದ ದಿನ ಮಕ್ಕಳಿಗೆ ಬ್ಯಾಗ್ ರಹಿತ ದಿನವನ್ನಾಗಿ ಘೋಷಣೆ ಕೂಡ ಮಾಡಿತ್ತು.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಶಿಕ್ಷಣ ಇಲಾಖೆಯು ಶಾಲಾ ಬ್ಯಾಗ್ ಹೊರೆಯನ್ನು ತಗ್ಗಿಸಲು ಸುತ್ತೋಲೆಯನ್ನು ಹೊರಡಿಸಿದೆ. ಅದರಂತೆ 1 ರಿಂದ 10 ನೇ ತರಗತಿಯ ಮಕ್ಕಳು ಎಷ್ಟು ಕೆ.ಜಿ ತೂಕದ ಬ್ಯಾಗ್ ತರಬೇಕೆಂದು ನಿರ್ಧಾರ ಮಾಡಿದೆ. ಶಾಲಾ ಬ್ಯಾಗ್ ಮಗುವಿನ ತೂಕದ 10 ರಿಂದ 15 ರಷ್ಟು ಇದ್ದರೆ ಸಾಕು ಅದನ್ನು ಮೀರುವಂತಿಲ್ಲ ಎಂದು ಹೇಳಿದೆ. ಇನ್ನೂ ಶಾಲಾ ಬ್ಯಾಗ್ ತೂಕದ ಅನುಷ್ಠಾನದ ಕುರಿತು ಅಧಿಕಾರಿಗಳು ಉಸ್ತುವಾರಿ ವಹಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಭಾರವಾದ ಬ್ಯಾಗ್ ಹೊರೋದ್ರಿಂದ ಮಕ್ಕಳು ಎದುರಿಸುತ್ತಿರೋ ಆರೋಗ್ಯ ಸಮಸ್ಯೆಗಳೇನು?
ಭಾರವಾದ ಶಾಲಾ ಬ್ಯಾಗ್ ಗಳನ್ನು ಹೊರುವುದು ಮಕ್ಕಳ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರಲಿದೆ. ಮಕ್ಕಳ ಎಲುಬುಗಳು ವಯಸ್ಕರಂತೆ ಬೆಳವಣಿಗೆ ಆಗಿರೋದಿಲ್ಲ, ಅಗಲವಾದ ಭುಜಗಳು, ದೃಢವಾದ ಕೀಲುಗಳು ಮತ್ತು ಬಲವಾದ ಮೂಳೆಗಳನ್ನು ಹೊಂದಿರುವುದಿಲ್ಲ. ಹೀಗಾಗಿ ಭಾರವಾದ ವಸ್ತುಗಳನ್ನು ಕೊಂಡೊಯ್ಯಲು ಅವರು ಸದೃಢರಾಗಿಲ್ಲ ಎಂದರ್ಥ. ಇದು ಮಕ್ಕಳ ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ.
ಮಕ್ಕಳಲ್ಲಿ ಸ್ನಾಯು ಸೆಳೆತ ಉಂಟಾಗುತ್ತದೆ
ಮಕ್ಕಳು ಭಾರವಾದ ಶಾಲಾ ಚೀಲವನ್ನು ಎತ್ತಿಕೊಳ್ಳೋದ್ರಿಂದ ಹಿಂಭಾಗ ಮತ್ತು ಭುಜಗಳ ಸ್ನಾಯುಗಳ ಮೇಲೆ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ. ಇದು ಮಕ್ಕಳಿಗೆ ಅತಿಯಾದ ನೋವು ಮತ್ತು ಚಲಿಸಲು ಸಮಸ್ಯೆಯುಂಟು ಮಾಡುತ್ತದೆ. ಕುತ್ತಿಗೆಯಿಂದ ಹಿಡಿದು ಬೆನ್ನಿನ ಭಾಗವೆಲ್ಲಾ ವಿಪರೀಪ ನೋವಾಗೋದಕ್ಕೆ ಶುರುವಾಗುತ್ತದೆ.
ಭುಜದ ಭಂಗಿಯ ಅಸಮಾತೋಲನ ಉಂಟಾಗುತ್ತದೆ.
ಮಗುವಿಗೆ ಭಾರವಾದ ಚೀಲವನ್ನು ಒಂದೇ ಭುಜದ ಮೇಲೆ ಇರಿಸಿದರೆ ಅದು ಅವರಿಗೆ 'ಡ್ರಾಪ್ ಶೋಲ್ಡರ್' ಭಂಗಿಯ ಅಸಮತೋಲನವನ್ನು ಉಂಟುಮಾಡಬಹುದು. ಒಂದು ಭುಜವು ಇನ್ನೊಂದಕ್ಕಿಂತ ಕೆಳಗಿರುತ್ತದೆ. ಇದು ನೋವು, ಚಲನಶೀಲತೆಯ ನಷ್ಟ ಮತ್ತು ಅಸಾಮಾನ್ಯ ನಡಿಗೆ ಸೇರಿದಂತೆ ಇತರ ಸಮಸ್ಯೆಗಳ ಸರಣಿಯನ್ನೇ ಉಂಟುಮಾಡುತ್ತದೆ.
ಒಳಗಿನಿಂದ ಒತ್ತಡ ಸೃಷ್ಟಿಯಾಗುತ್ತದೆ
ಮಕ್ಕಳು ಪ್ರತಿ ದಿನ ಹತ್ತಾರು ಬಾರಿ ತಮ್ಮ ಶಾಲಾ ಬ್ಯಾಗನ್ನು ಎತ್ತಿಕೊಂಡು ಕೆಳಗೆ ಹಾಕುತ್ತಾರೆ. ಶಾಲಾ ಚೀಲವು ತುಂಬಾ ಭಾರವಾಗಿದ್ದರೆ ಮಕ್ಕಳಲ್ಲಿ ಪುನರಾವರ್ತಿತ ಒತ್ತಡದ ಗಾಯವು ಬೆಳೆಯುವ ಅಪಾಯವಿದೆ. ಇದು ತೋಳುಗಳು, ಕೈಗಳು, ಕುತ್ತಿಗೆ, ಭುಜಗಳು ಅಥವಾ ಬೆನ್ನಿನ ಯಾವುದೇ ಸ್ನಾಯುಗಳು ಮತ್ತು ಕೀಲುಗಳ ಮೇಲೆ ಪರಿಣಾಮ ಬೀರಬಹುದು.
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಶಿಕ್ಷಣ ಇಲಾಖೆ ಉತ್ತಮ ಕ್ರಮವನ್ನೇ ಕೈಗೊಂಡಿದೆ. ಇನ್ನಾದರೂ ಮಕ್ಕಳು ಈ ಶಾಲಾ ಬ್ಯಾಗ್ ಹೊರುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.



Click it and Unblock the Notifications

