ಪೋಷಕರೇ, ಮಕ್ಕಳ ಮೇಲೆ ಅತಿಯಾಗಿ ಒತ್ತಡ ಹಾಕುತ್ತಿದ್ದೀರಾ? ಹಾಗಾದ್ರೆ ಈ ಲೇಖನ ಓದಿ

ಕೆಲ ಪೋಷಕರು ತಮ್ಮ ಮಕ್ಕಳು ಯಾವಾಗಲೂ ನಂಬರ್ 1 ಆಗಿರ್ಬೇಕು ಅಂತ ಇಷ್ಟ ಪಡ್ತಾರೆ. ಇದೇ ಕಾರಣಕ್ಕೆ ಮಕ್ಕಳ ಮೇಲೆ ಒತ್ತಡದ ಮೇಲೆ ಒತ್ತಡ ಹಾಕುತ್ತಾರೆ. ಬರೀ ಓದೋದ್ರಲ್ಲಿ ಮಾತ್ರವಲ್ಲ. ಮಕ್ಕಳು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ರೂ ಕೂಡ ಅವರೇ ಮುಂದಿರ್ಬೇಕು ಅನ್ನೋ ಹುಚ್ಚು ಆಸೆ ಪೋಷಕರಿಗೆ ಇರುತ್ತೆ.

ಹೀಗಾಗಿ ಪೋಷಕರು ತಮ್ಮ ಆಸೆಯನ್ನು ಮಕ್ಕಳ ಮೇಲೆ ಹೇರೋದಕ್ಕೆ ಶುರು ಮಾಡ್ತಾರೆ. ಆದರೆ ಪೋಷಕರು ಮಕ್ಕಳ ಮನಸ್ಥಿತಿ ಬಗ್ಗೆ ಒಂಚೂರು ಆಲೋಚನೆ ಮಾಡೋದೇ ಇಲ್ಲ. ಅಷ್ಟಕ್ಕು ಪ್ರತಿಯೊಂದು ವಿಚಾರಕ್ಕೂ ಪೋಷಕರು ಮಕ್ಕಳ ಮೇಲೆ ಸುಖಾ ಸುಮ್ಮನೆ ಒತ್ತಡ ಹಾಕಿದಾಗ ಏನಾಗುತ್ತೆ ಅನ್ನೋದನ್ನು ತಿಳಿಯೋಣ.

 What happens when you pressure your kids to perform well every time in Kannada

ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕಿದಾಗ ಏನಾಗುತ್ತೆ?
ಪುಟ್ಟ ಮಕ್ಕಳು ಶಾಲೆಗೆ ಹೋಗಿ ಸ್ನೇಹಿತರೊಂದಿಗೆ ಆಟವಾಡುತ್ತಾ ಆರಾಮಾಗಿ ಇರುತ್ತಾರೆ. ಆದರೆ ಪೋಷಕರು ಸುಖಾ ಸುಮ್ಮನೆ ಅವರ ಮೇಲೆ ಒತ್ತಡ ಹೇರಿ ಬಿಡುತ್ತಾರೆ. ನೀನು ಓದಿನಲ್ಲಿ ಎಲ್ಲರಿಗಿಂತ ಮೊದಲಿರಲೇಬೇಕು. ಒಂದು ಅಂಕ ಕಡಿಮೆ ಬಂದರೂ ಕೂಡ ಪೋಷಕರು ಮಕ್ಕಳನ್ನು ಬೈಯೋದಕ್ಕೆ ಶುರು ಮಾಡುತ್ತಾರೆ. ಇದರಿಂದ ಮಕ್ಕಳ ಮನಸಿಕ ಹಿಂಸೆ ಉಂಟಾಗಿ ಅವರು ಒತ್ತಡಕ್ಕೆ ಸಿಲುಕುತ್ತಾರೆ.

ಹಾಗಂತ ನಿಮ್ಮ ಮಕ್ಕಳಿಗೆ ಕಲಿಯೋದಕ್ಕೆ ಪ್ರೋತ್ಸಾಹ ನೀಡುವುದು ತಪ್ಪು ಅಂತ ನಾವು ಹೇಳ್ತಿಲ್ಲ. ಆದರೆ ಅವರಿಂದ ಸಾಧ್ಯವಾಗದ್ದನ್ನು ಸಾಧಿಸಲೇಬೇಕು ಅಂತ ಒತ್ತಡ ಹೇರುವುದು ಇದ್ಯಲ್ಲ ಅದು ನೀವು ಮಾಡುವ ದೊಡ್ಡ ತಪ್ಪು. ಪೋಷಕರಿಗೆ ಮಕ್ಕಳ ಮೇಲೆ ಪ್ರೀತಿ, ಕಾಳಜಿ ಇರಬೇಕು. ಆದರೆ ಅದು ಅವರನ್ನು ಉಸಿರು ಗಟ್ಟಿಸುವಂತೆ ಮಾಡಬಾರದು.

ಅಧ್ಯಯನಗಳಿಂದ ಸಾಬೀತಾಗಿರೋದು ಏನು?
ಈ ಬಗ್ಗೆ ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಸಾಬೀತಾಗಿರೋದು ಏನು ಅಂದ್ರೆ, ಯಾವ ಮನೆಯಲ್ಲಿ ಪೋಷಕರು ಮಕ್ಕಳ ಮೇಲೆ ಒತ್ತಡವನ್ನು ಹಾಕುತ್ತಾರೆಯೋ ಆ ಮಕ್ಕಳು ಶಾಲೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ. ಆದರೆ ಅಂತಹ ಮಕ್ಕಳು ಖಿನ್ನತೆ, ಆತಂಕ, ಕಡಿಮೆ ಆತ್ಮ ವಿಶ್ವಾಸ ಜೊತೆಗೆ ಕೆಲವೊಂದು ಕೊರತೆಗಳಿದ ಬಳಲುತ್ತಿದ್ದಾರಂತೆ.

ಮಕ್ಕಳಿಗೆ ಪ್ರೋತ್ಸಾಹ ನೀಡಲು ಸರಿಯಾದ ವಿಧಾನ ಯಾವುದು?
ಅಧ್ಯಯನಗಳ ಪ್ರಕಾರ ಮಕ್ಕಳು ಶಾಲೆಯಲ್ಲಿ ಉತ್ತಮ ಅಂಕ ಪಡೆದರಷ್ಟೇ ಸಾಲೋದಿಲ್ಲ. ಆದರ ಜೊತೆಗೆ ಇತರ ಚಟುವಟಿಕೆಗಳಲ್ಲೂ ಕೂಡ ಅವರ ಭಾಗವಹಿಸುವಿಕೆ ಇರಬೇಕು. ಇದಕ್ಕೆ ಪೋಷಕರು ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮಕ್ಕಳು ಸರ್ವತೋಮುಖವಾಗಿ ಬೆಳವಣಿಗೆ ಆಗೋದಕ್ಕೆ ಸಾಧ್ಯ. ಅಷ್ಟೇ ಅಲ್ಲದೇ, ಮುಂದೆ ಬೆಳೆದು ಯಶಸ್ವಿ ವ್ಯಕ್ತಿಗಳಾಗ್ತಾರೆ.

ಮಕ್ಕಳನ್ನು ಟೀಕಿಸಬೇಡಿ!
ಮಕ್ಕಳು ಸೋಲಲಿ ಅಥವಾ ಗೆಲ್ಲಲಿ ಅವರನ್ನು ಟೀಕಿಸೋದಕ್ಕೆ ಹೋಗಬೇಡಿ. ಮಕ್ಕಳ ಗೆದ್ದಾಗ ನೀಡುವ ಪ್ರೋತ್ಸಾಹವನ್ನೇ ಅವರು ಸೋತಾಗಲೂ ನೀಡಿ. ಯಾಕಂದ್ರೆ ಇದರಿಂದ ಅವರ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಒಂದು ಸೋಲಿನಿಂದ ಮಕ್ಕಳು ಅದೆಷ್ಟೋ ಪಾಠಗಳನ್ನು ಕಲಿಯುತ್ತಾರೆ. ಹೀಗಾಗಿ ಸೋತಾಗ ಟೀಕಿಸೋ ತಪ್ಪು ಕೆಲಸವನ್ನು ಮಾಡದಿರಿ.

ಟ್ರೋಫಿ ತರಬೇಕೆಂಬ ಒತ್ತಾಯ ಬೇಡ!
ಪ್ರತಿ ಸಲ ನೀನು ಗೆದ್ದು ಟ್ರೋಫಿಯೊಂದಿಗೆ ಮನೆಗೆ ಬರಬೇಕು ಎಂಬ ಒತ್ತಡ ಹಾಕಬೇಡಿ. ಒಳ್ಳೆಯ ಅಂಕ ಬಂದರೆ ಸಾಕಲ್ಲವೇ, ಟ್ರೋಫಿಯ ಆಸೆಗಾಗಿ ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡಬೇಡಿ. ಮುಖ್ಯವಾಗಿ ಅವರು ಪ್ರತಿಯೊಂದು ಹಂತದಲ್ಲಿ ಏನನ್ನಾದರೂ ಹೊಸತು ಕಲಿಯುವಂತೆ ನೋಡಿಕೊಳ್ಳಿ. ಇನ್ನೂ ಅವರಲ್ಲಿರೋ ಆ ಭಯ ಹೋಗಬೇಕು. ಮತ್ತು ಅವರ ಆತ್ಮ ವಿಶ್ವಾಸ ಹೆಚ್ಚಾಗುವಂತೆ ನೋಡಿಕೊಳ್ಳಿ.

ಜೀವನದಲ್ಲಿ ಯಶಸ್ಸು ಸಾಧಿಸೋದೊಂದೇ ಮುಖ್ಯವಲ್ಲ. ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಜೀವನ ಮೌಲ್ಯಗಳನ್ನು ಕೊಟ್ಟು ನಿಮ್ಮ ಮಕ್ಕಳನ್ನು ಬೆಳೆಸಿ.

English summary

What happens when you pressure your kids to perform well every time in Kannada

What happens when you pressure your kids to perform well every time. Read more.
Story first published: Sunday, June 25, 2023, 15:00 [IST]
X
Desktop Bottom Promotion