Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಪೋಷಕರೇ ನಿಮ್ಮ ಮಕ್ಕಳು ಒಳ್ಳೆಯ ಅಂಕ ಗಳಿಸಬೇಕೆ? ಅವರಿಗೆ ನಿಮ್ಮ ಈ ಸಹಾಯ ಅಗ್ಯತ
ಪರೀಕ್ಷೆ ಸಮಯ... ಈ ಸಮಯ ಮಕ್ಕಳಿಗೆ ಎಷ್ಟು ಓದಿದರೂ ಸಾಕಾಗಲ್ಲ, ಪ್ರಶ್ನೆ ಪತ್ರಿಕೆ ಹೇಗಿರುತ್ತದೋ ಎಂಬ ಆತಂಕದಲ್ಲಿರುತ್ತಾರೆ. ಇನ್ನು ಮಕ್ಕಳಿಗಿಂತ ತುಂಬಾನೇ ಆತಂಕ ತೆಗೆದುಕೊಳ್ಳುವವರೆಂದರೆ ಪೋಷಕರು. ಅದರಲ್ಲೂ ಮಕ್ಕಳು ಎಸ್‌ಎಸ್‌ಎಲ್‌ಸಿ , ಪಿಯುಸಿ ಇದ್ದರಂತೂ ಪೋಷಕರಿಗೆ ಆತಂಕವೊ ಆತಂಕ...

ಮಕ್ಕಳಿಗೆ ಶಾಲೆಯಲ್ಲಿ ಓದಿ.. ಓದಿ ಎಂಬ ಒತ್ತಡ , ಮನೆಗೆ ಬಂದರೆ ಒಂದಿಷ್ಟು ಟೈಮ್ ಹಾಳು ಮಾಡದೆ ಓದು ಎಂಬ ಸಲಹೆ ಜೊತೆಗೆ ಮಕ್ಕಳು ಓದುತ್ತಿದ್ದಾರೆಯೇ ಎಂದು ಪೋಷಕರು ಆಗಾಗ ಬಂದು ಪರೀಕ್ಷೆ ಮಾಡುತ್ತಿರುತ್ತಾರೆ, ಒಟ್ಟಿನಲ್ಲಿ ಪ್ರೆಷರ್ ಕುಕ್ಕರ್‌ನ ಸ್ಥಿತಿ ಮಕ್ಕಳದ್ದು.
ಪೋಷಕರೇ, ನಿಮ್ಮ ಮಕ್ಕಳು ತುಂಬಾ ಮಾರ್ಕ್ಸ್ ತೆಗೆಯಬೇಕೆಂದು ನೀವು ಬಯಸುತ್ತಿರುವುದು ಸರಿನೇ, ಆದರೆ ಈ ಕಾರಣಕ್ಕೆ ಅವರನ್ನು ತುಂಬಾ ಒತ್ತಡಕ್ಕೆ ಒಳಗಾಗುವಂತೆ ಮಾಡಬೇಡಿ. ಅತಿಯಾದ ಒತ್ತಡಕ್ಕೆ ಒಳಗಾದರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಈ ಸಮಯದಲ್ಲಿ ಮಕ್ಕಳನ್ನು ಹೀಗೆ ಹ್ಯಾಂಡಲ್ ಮಾಡಿ:
ಮಕ್ಕಳು ಓದುವಾಗ ಅವರ ಜೊತೆ ನೀವು ಕುಳಿತುಕೊಳ್ಳಿ
ಮಧ್ಯರಾತ್ರಿಯವರೆಗೆ ಅವರೊಬ್ಬರೆ ಕೂತು ಓದಲು ಹೇಳಿದರೆ ಅವರಿಗೂ ಬೋರಾಗುತ್ತೆ. ಅವರ ಸಬ್ಜೆಕ್ಟ್ ಬಗ್ಗೆ ನಿಮಗೆ ಗೊತ್ತಿದ್ದರೆ ಅವರಿಗೆ ಕಲಿಸಿ, ಇಲ್ಲದಿದ್ದರೆ ಅವರ ಸಮೀಪ ಕೂತು ಏನಾದರೂ ಪುಸ್ತಕ ಓದಿ. ಮಧ್ಯ-ಮಧ್ಯ ಒಂದು 5 ನಿಮಿಷ ತಮಾಷೆಯಾಗಿ ಮಾತನಾಡಿ.
ಆದರೆ ಒಂದು ವಿಷಯ ನೆನಪಿಡಿ, ಮಕ್ಕಳು ಓದುವ ಕಡೆ ನೀವು ಫೋನ್ ಹಿಡಿದು ಹೋಗಿ ಕೂರಬೇಡಿ. ಅಲ್ಲದೆ ಅವರನ್ನು ಓದಲು ಹೇಳಿ ನೀವು ಟಿವಿ ಸೀರಿಯಲ್ ನೋಡುವುದು, ಮ್ಯಾಚ್ ನೋಡುವುದು ಮಾಡಬೇಡಿ. ನಿಮ್ಮ ಪಾಡಿಗೆ ನೀವು ಯಾವುದಾದರೂ ಒಳ್ಳೆಯ ಪುಸ್ತಕ ಹಿಡಿದು ಕೂತು ಓದಿ.
ಇಲ್ಲದಿದ್ದರೆ ಎಲ್ಲರೂ ಎಂಜಾಯ್ ಮಾಡ್ತಾ ಇದ್ದಾರೆ, ನಾನು ಮಾತ್ರ ಓದಬೇಕು ಎಂದು ಓದುವುದನ್ನು ತುಂಬಾ ಕಷ್ಟದ ಕಾರ್ಯವೆಂಬಂತೆ ಮಕ್ಕಳು ತೆಗೆದುಕೊಂಡು ಅತಿಯಾದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಅತಿಯಾದ ಸ್ಪರ್ಧೆ ಬೇಡ
ಓದುವ ವಿಷಯದಲ್ಲಿ ಸ್ಪರ್ಧೆ ಒಳ್ಳೆಯದೆ. ನಮ್ಮ ಮಕ್ಕಳು ಅಧಿಕ ಅಂಕ ಗಳಿಸಿದಾಗ ಸಂಭ್ರಮಿಸುತ್ತೇವೆ. ಆದರೆ ಮಕ್ಕಳಿಗೆ ನೀನೇ ಫಸ್ಟ್ ಬರಬೇಕು ಎಂದೆಲ್ಲಾ ತುಂಬಾ ಒತ್ತಡ ಹಾಕಬೇಡಿ. ನನಗೆ ಒಳ್ಳೆಯ ಅಂಕ ಬೇಕೆಂಬ ಛಲ ಅವರಿಲ್ಲದ್ದಾಗ ನೀವು ಹೇಳದೇ ಹೋದರು ಅವರು ಪ್ರಯತ್ನಿಸುತ್ತಾರೆ, ಆದ್ದರಿಂದ ಮಕ್ಕಳ ಮೇಲೆ ಅತಿಯಾದ ಸ್ಪರ್ಧೆಯ ಒತ್ತಡ ಹಾಕಬೇಡಿ.
ಮಕ್ಕಳ ನಿದ್ದೆ ಹಾಗೂ ಆಹಾರಕ್ರಮದ ಕಡೆ ಗಮನಕೊಡಿ
ಪರೀಕ್ಷೆ ಸಮಯದಲ್ಲಿ ಆಹಾರ, ನಿದ್ದೆ ಕೆಟ್ಟ ಓದುವ ಮಕ್ಕಳೇ ಅಧಿಕ. ಆದರೆ ಹೀಗೆ ಓದಿ ಕೊನೆಗೆ ಪರೀಕ್ಷೆ ಸಮಯದಲ್ಲಿ ಆರೋಗ್ಯ ತಪ್ಪಿದರೆ ಅಷ್ಟು ಕಷ್ಟಪಟ್ಟು ಓದಿ ಏನು ಪ್ರಯೋಜನ. ಆದ್ದರಿಂದ ಪರೀಕ್ಷೆ ಸಮಯದಲ್ಲಿ ಮಕ್ಕಳು ಓದಿನ ಜೊತೆಗೆ ಆಹಾರಕ್ರಮ ಹಾಗೂ ನಿದ್ದೆ ಕಡೆಗೆ ಗಮನ ನೀಡಬೇಕು.
ಪೋಷಕರು ಮಕ್ಕಳಿಗೆ ಜಂಕ್ ಫುಡ್ಸ್ ನೀಡಬೇಡಿ, ಬದಲಿಗೆ ಹಣ್ಣುಗಳು ಹಾಗೂ ಲಘು ಆಹಾರ ನೀಡಿ. 8 ಗಂಟೆ ನಿದ್ದೆ ಮಾಡುವಂತೆ ಹೇಳಿ.
ಇದರಿಂದ ಪರೀಕ್ಷೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗುತ್ತೆ.
ಪ್ರಾಣಯಾಮ ಮಾಡಿಸಿ
ಬೆಳಗ್ಗೆ ಮತ್ತು ಸಂಜೆ ಪ್ರಾಣಯಾಮ ಮಾಡಿಸಿ. ಇದು ಮಾನಸಿಕ ಒತ್ತಡ ಹೊರಹಾಕಲು ಹಾಗೂ ಕಲಿತಿರುವುದು ಚೆನ್ನಾಗಿ ನೆನಪಿನಲ್ಲಿಡಲು ಸಹಕಾರಿ.
ಇಷ್ಟು ಮಾಡಿ ಪೋಷಕರೇ ನಿಮ್ಮ ಮಗ/ಮಗಳು ಪರೀಕ್ಷೆಯನ್ನು ಚೆನ್ನಾಗಿಯೇ ಬರೆದು ಬರುತ್ತಾರೆ. ನೀವು ಆತಂಕ ಪಟ್ಟರೆ ಅವರ ಮಾನಸಿಕ ಒತ್ತಡ ಮತ್ತಷ್ಟು ಅಧಿಕವಾಗುವುದು, ಅಲ್ಲದೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಎಂಬ ಭಯ ಮಕ್ಕಳಿಗೆ ಕಾಡುವುದು, ಈ ಭಯ ಬಾರದಂತೆ ಅವರ ಜೊತೆ ನಡೆದುಕೊಳ್ಳಿ.
ಮಕ್ಕಳ ಬದುಕನ್ನು ಬರೀ ಅಂಕ ಮಾತ್ರ ನಿರ್ಧರಿಸುವುದಿಲ್ಲ ಎಂಬುವುದು ಅನುಭವದಿಂದ ನಿಮಗೂ ಗೊತ್ತಿದೆ ಅಲ್ವಾ?



Click it and Unblock the Notifications
