ದಟ್ಟ ಮಂಜಿನ ಎಚ್ಚರಿಕೆ: ಬೆಳಗಿನ ವಾಕಿಂಗ್‌ಗೆ ಈ ಸಮಯವೇ ಸುರಕ್ಷಿತ, ಮಿಸ್ ಮಾಡ್ಬೇಡಿ!

ಇಂದು, ನವೆಂಬರ್ 17ರಂದು ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶದಾದ್ಯಂತ ಮತ್ತೆ ದಟ್ಟ ಮಂಜು ಕವಿದಿದೆ. ಹರಿಯಾಣ-ಚಂಡೀಗಢ-ದೆಹಲಿ ಮತ್ತು ಪಂಜಾಬ್‌ನಲ್ಲಿ ನವೆಂಬರ್ 17ರಿಂದ 20ರವರೆಗೆ ಹಾಗೂ ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ನವೆಂಬರ್ 17-18ರವರೆಗೆ ಭಾರಿ ಮಂಜು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಹೀಗಾಗಿ ಹೊರಗೆ ಹೊರಡುವ ಮುನ್ನ ನಿಮ್ಮ ಹಾದಿಯ ದೃಶ್ಯಗೋಚರತೆ (Visibility) ಮತ್ತು ಸ್ಥಳೀಯ ಹವಾಮಾನ ಮುನ್ನೆಚ್ಚರಿಕೆಯನ್ನು ಖಂಡಿತ ಪರಿಶೀಲಿಸಿ.

ಮಂಜಿನ ಪ್ರಮಾಣ ಕಡಿಮೆಯಾಗಿ ‘ತಿಳಿ ಮಂಜು’ ಕವಿದಿರುವಾಗ ಹೊರಹೋಗಲು 15 ರಿಂದ 25 ನಿಮಿಷಗಳ ಸುರಕ್ಷಿತ ಸಮಯವನ್ನು ಆಯ್ಕೆ ಮಾಡಿಕೊಳ್ಳಿ. IMD ಮಾನದಂಡಗಳ ಪ್ರಕಾರ, ತಿಳಿ ಮಂಜು ಎಂದರೆ ಸಾಗುವ ಹಾದಿಯಲ್ಲಿ 500–1,000 ಮೀಟರ್‌ವರೆಗೆ ಸ್ಪಷ್ಟವಾಗಿ ಕಾಣಿಸುತ್ತದೆ. ದಟ್ಟ ಮಂಜು ಎಂದರೆ 50–200 ಮೀಟರ್ ಹಾಗೂ ಸಾಧಾರಣ ಮಂಜು ಎಂದರೆ 200–500 ಮೀಟರ್‌ವರೆಗೆ ಮಾತ್ರ ದಾರಿ ಕಾಣಿಸುತ್ತದೆ. ನಿನ್ನೆ ದೆಹಲಿಯ ಸಫ್ದರ್‌ಜಂಗ್‌ನಲ್ಲಿ ಬೆಳಿಗ್ಗೆ 6:30 ರಿಂದ 8:00 ರವರೆಗೆ ದೃಶ್ಯಗೋಚರತೆ 400 ಮೀಟರ್ ಇತ್ತು. ಆದರೆ ಬೆಳಿಗ್ಗೆ 10:00 ಗಂಟೆಯ ವೇಳೆಗೆ ಅದು 800 ಮೀಟರ್‌ಗೆ ಸುಧಾರಿಸಿತ್ತು. ಇಂದೂ ಇದೇ ವಾತಾವರಣ ಮುಂದುವರಿದರೆ, ಬೆಳಗಿನ ಜಾವಕ್ಕಿಂತ ಕೊಂಚ ತಡವಾಗಿ ಹೊರಹೋಗುವುದು ಹೆಚ್ಚು ಸುರಕ್ಷಿತ.

Dense Fog Alert North India: Safe Morning Walking Times and Safety Tips 2026

ಇಂದು ದಟ್ಟ ಮಂಜಿನ ಅಲರ್ಟ್: ಬೆಳಗಿನ ವಾಕಿಂಗ್‌ಗೆ ಸುರಕ್ಷಿತ ಸಮಯ ಯಾವುದು?

ಇಂದು ವಾಕಿಂಗ್ ಅಥವಾ ರೈಡಿಂಗ್ ಮಾಡುವವರು ನಿಮ್ಮ ನಗರದ ವಾತಾವರಣವನ್ನು ಗಮನಿಸಿ ನಿರ್ಧಾರ ತಗೊಳ್ಳಿ. 'ರೇಡಿಯೇಟಿವ್ ಫಾಗ್' ಇರುವ ಬೆಳಗಿನ ಸಮಯದಲ್ಲಿ ಚಂಡೀಗಢಕ್ಕೆ ಹೋಲಿಸಿದರೆ ದೆಹಲಿ, ಗುರುಗ್ರಾಮ ಮತ್ತು ನೋಯ್ಡಾದಲ್ಲಿ ಮಂಜು ಬೇಗನೇ ಕರಗುತ್ತದೆ. ಆದರೆ ಗಾಳಿ ಇಲ್ಲದಿದ್ದರೆ ಲಕ್ನೋದಲ್ಲಿ ಮಂಜು ಸರೆಯಲು ಹೆಚ್ಚು ಸಮಯ ತಗಲಬಹುದು. ಮುಂಭಾಗದ ಎರಡು ಟ್ರಾಫಿಕ್ ಸಿಗ್ನಲ್‌ಗಳು ಸರಿಯಾಗಿ ಕಾಣಿಸುತ್ತಿಲ್ಲ ಎಂದರೆ, ಹೊರಹೋಗದೆ ಇನ್ನಷ್ಟು ಹೊತ್ತು ಕಾಯುವುದೇ ಒಳಿತು. ದೆಹಲಿಯ ಇಂದಿನ ಬೆಳಗಿನ ಮುನ್ಸೂಚನೆಯಲ್ಲಿ ಸಾಧಾರಣ ಮಂಜು ಇರಲಿದೆ ಎಂದು ಹೇಳಿರುವುದರಿಂದ, ದಾರಿ ಸ್ಪಷ್ಟವಾಗಿ ಕಾಣಿಸುವವರೆಗೆ ಕಾಯುವುದು ಸೂಕ್ತ.

ನಗರ ಸುರಕ್ಷಿತವೆನಿಸುವ 15–25 ನಿಮಿಷಗಳ ಸಮಯ
ದೆಹಲಿ 9:00–10:30, ಮಂಜು ಕಡಿಮೆಯಾಗಿ ದಾರಿ ಸ್ಪಷ್ಟವಾಗಿ ಕಂಡರೆ ಮಾತ್ರ ಹೊರಡಿ
ಗುರುಗ್ರಾಮ 9:00–10:30, ಮುಖ್ಯ ರಸ್ತೆಗಳ ದೃಶ್ಯಗೋಚರತೆ ತಪಾಸಣೆ ಮಾಡಿ ಹೊರಡಿ
ನೋಯ್ಡಾ 9:00–10:30, ಪಾರ್ಕ್‌ಗಳು ಮತ್ತು ಒಳಗಿನ ರಸ್ತೆಗಳಿಗೆ ಆದ್ಯತೆ ನೀಡಿ
ಚಂಡೀಗಢ 9:30–10:45, ಇಲ್ಲಿ ಮಂಜು ಕರಗುವುದು ಕೊಂಚ ತಡವಾಗಬಹುದು
ಲಕ್ನೋ 9:30–10:45, ದೂರದವರೆಗೂ ರಸ್ತೆ ಸ್ಪಷ್ಟವಾಗಿ ಕಾಣುವವರೆಗೆ ಕಾಯಿರಿ

ಮಂಜಿನ ವಾತಾವರಣದಲ್ಲಿ ಸುರಕ್ಷತೆಗೆ ನೆರವಾಗುವ ಗೇರ್‌ಗಳು ಮತ್ತು ಸಲಹೆಗಳು

ಮಂಜಿನಲ್ಲಿ ಹೊರಹೋಗುವಾಗ ರಿಫ್ಲೆಕ್ಟಿವ್ ಜಾಕೆಟ್ ಅಥವಾ ಶ್ಯಾಶ್ ಮತ್ತು ಹೆಡ್‌ಲ್ಯಾಂಪ್ ಧರಿಸಿ; ಸೈಕಲ್ ಸವಾರರು ಹಿಂಭಾಗದಲ್ಲಿ ಫ್ಲ್ಯಾಶಿಂಗ್ ಲೈಟ್ ಹಾಕುವುದು ಕಡ್ಡಾಯ. ಕಣ್ಣಿಗೆ ಎದ್ದುಕಾಣುವ ಬಣ್ಣದ ಡ್ರೆಸ್ ಮತ್ತು ಆಂಕಲ್ ಬ್ಯಾಂಡ್‌ಗಳನ್ನು ಧರಿಸುವುದರಿಂದ ವಾಹನ ಸವಾರರ ಗಮನ ಬೇಗ ಸೆಳೆಯಬಹುದು. ಕಿರಿದಾದ ರಸ್ತೆಗಳಲ್ಲಿ ಸಾಲಾಗಿ ನಡೆದು ಹೋಗಿ, ಸಾಧ್ಯವಾದಷ್ಟು ಪಾರ್ಕ್‌ಗಳಲ್ಲೇ ವಾಕಿಂಗ್ ಮಾಡಿ. ನಿಮ್ಮ ಲೈವ್ ಲೊಕೇಶನ್ ಅನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ವಾಹನಗಳ ಹಾರ್ನ್ ಶಬ್ದ ಕೇಳಿಸಲು ಇಯರ್‌ಫೋನ್ ವಾಲ್ಯೂಮ್ ಕಡಿಮೆ ಇರಲಿ.

ಮನೆಯೊಳಗೇ ಮಾಡಿ: 10 ನಿಮಿಷಗಳ ವಾರ್ಮ್‌ಅಪ್ ಮತ್ತು ಪ್ರಾಣಾಯಾಮ ಅಭ್ಯಾಸ

ಮನೆ ಒಳಗಡೆಯೇ ಕೀಲುಗಳನ್ನು ಸಡಿಲಗೊಳಿಸಿ, ಸರಳ ಉಸಿರಾಟದ ವ್ಯಾಯಾಮ ಮಾಡಿ. ಕುತ್ತಿಗೆ ತಿರುಗಿಸುವುದು, ಶೋಲ್ಡರ್ ರೋಲ್, ಕ್ಯಾಟ್-ಕೌ ಮತ್ತು ಹಿಪ್ ಸರ್ಕಲ್ ವ್ಯಾಯಾಮಗಳನ್ನು ಮಾಡಿ. ಜೊತೆಗೆ ಆಂಕಲ್ ಪಂಪ್ಸ್, ಒಂದೇ ಕಡೆ ನಿಂತು ರನ್ನಿಂಗ್ (marching in place) ಮತ್ತು 3 ಸೆಟ್ ಸಿಟ್-ಟು-ಸ್ಟ್ಯಾಂಡ್ಸ್ ಅಭ್ಯಾಸ ಮಾಡಿ. ಕೊನೆಯಲ್ಲಿ 4 ಸೆಕೆಂಡ್‌ಗಳ ಕಾಲ ಉಸಿರು ತಗೊಂಡು, ತಡೆದು, ಹೊರಬಿಟ್ಟು, ಮತ್ತೆ ತಡೆಯುವ 'ನಾಸಲ್ ಬಾಕ್ಸ್ ಬ್ರೀಥಿಂಗ್' ಮಾಡಿ. ಇದರಿಂದ ಮೊಣಕಾಲು ಅಥವಾ ಬೆನ್ನಿಗೆ ನೋವಾಗದಂತೆ, ಮಂಜಿನ ದಿನಗಳಲ್ಲೂ ನಿಮ್ಮ ಡೈಲಿ ಫಿಟ್‌ನೆಸ್ ರೊಟೀನ್ ಮುಂದುವರಿಸಬಹುದು.

ಮಕ್ಕಳು, ಹಿರಿಯರು ಮತ್ತು ಅಸ್ತಮಾ ರೋಗಿಗಳು: ಮನೆಯಲ್ಲೇ ಇರಿ, ಮಾಸ್ಕ್ ಕಡ್ಡಾಯ

ಮಕ್ಕಳು, ವೃದ್ಧರು ಮತ್ತು ಅಸ್ತಮಾ ಸಮಸ್ಯೆಯಿರುವವರು ಇಂದು ಮನೆಯಿಂದ ಹೊರಬರದಿರುವುದು ಒಳಿತು. ಅತ್ಯಗತ್ಯ ಕೆಲಸಕ್ಕೆ ಹೊರಹೋಗಲೇಬೇಕಿದ್ದರೆ, ಸರಿಯಾಗಿ ಫಿಟ್ ಆಗುವ N95 ಅಥವಾ FFP2 ಮಾಸ್ಕ್ ಧರಿಸಿ ಹಾಗೂ ಬೆಳಕು ಚೆನ್ನಾಗಿ ಬಂದ ಮೇಲಷ್ಟೇ (ಬೆಳಿಗ್ಗೆ ಕೊಂಚ ತಡವಾಗಿ) ಹೊರಡಿ. ಎನ್‌ಸಿಆರ್ (NCR) ಮತ್ತು ಲಕ್ನೋದಲ್ಲಿ ರಸ್ತೆಯಿಂದ ರಸ್ತೆಗೆ ಹವಾಮಾನ ಬದಲಾಗುವುದರಿಂದ, ಹೊರಡುವ ಮುನ್ನ IMD ಲೈವ್ ಅಪ್‌ಡೇಟ್‌ಗಳನ್ನು ಮತ್ತು ಫಾಗ್ ಪೋರ್ಟಲ್ ಒಮ್ಮೆ ಪರಿಶೀಲಿಸಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Tuesday, November 17, 2026, 7:34 [IST]
X
Desktop Bottom Promotion