Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಗುರುವು ತಾಯಿ ಬಗ್ಗೆ ಹೇಳುತ್ತಿದ್ದಾರೆ, ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು: ವೀಡಿಯೋ ವೈರಲ್
ಒಂದು ಅದ್ಭುತ ಭಾಷಣ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಶಾಲಾ ಮಕ್ಕಳನ್ನು ಕೂರಿಸಿ ಗುರುಗಳು ತಂದೆ ತಾಯಿಯ ಮಹತ್ವದ ಬಗ್ಗೆ ಹೇಳುತ್ತಿದ್ದರೆ ಅದನ್ನು ಕೇಳಿದ ಮಕ್ಕಳ ಕಣ್ಣಿನಲ್ಲಿ ಕಣ್ಣೀರಧಾರೆ. ಒಂದೆರಡು ಮಕ್ಕಳಲ್ಲ, ಅಲ್ಲಿ ಕೂತಿದ್ದ ಮಕ್ಕಳು ಅಳಲು ಆರಂಭಿಸಿದರು, ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಆ ಭಾಷಣ ಕೇಳಿದ ಮಕ್ಕಳು ಮುಂದೆ ಖಂಡಿತ ಅವರು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸಲ್ಲ, ಈ ಕ್ಷಣದಿಂದ ಅವರ ಕಣ್ಣಿಗೆ ತಾಯಿ-ತಂದೆ ದೇವರೆಂತೆ ಕಾಣಿಸಲಾರಂಭಿಸುತ್ತಾರೆ.

ಅಬ್ಬಾ ಮಕ್ಕಳಿಗೆ ಅವರ ಹುಟ್ಟು, ಅಮ್ಮ ಅದಕ್ಕೆ ಪಟ್ಟ ಕೆಲಸ ಹೇಳುತ್ತಿದ್ದಾರೆ ಅಲ್ಲಿರುವ ಮಕ್ಕಳ ಎದೆಗೆ ನಾಟುತ್ತಿತ್ತು, ಅಲ್ಲಿರುವ ಮಕ್ಕಳು ಅಯ್ಯೋ ನನ್ನ ತಾಯಿಗೆ ಹೀಗೆಲ್ಲಾ ಮಾಡಿದೆ, ಅವಳಿಗೆಷ್ಟು ಬೇಸರ ಮಾಡಿದೆ ಎಂಬ ಪಶ್ಚಾತಾಪ ಕಾಡಲಾರಂಭಿಸುತ್ತಿದ್ದಂತೆ ಅಳಲಾರಂಭಿಸುತ್ತಾರೆ. ಅಮ್ಮನ ಮಹತ್ವದ ಬಗ್ಗೆ ಆ ಗುರು ಹೇಳುತ್ತಿದ್ದರೆ ಅಯ್ಯೋ ನನ್ನ ಅಮ್ಮನಿಗೆ ನಾನು ಹೀಗೆ ನೋಯಿಸಿದೆ ಅಲ್ವಾ, ಇನ್ಮುಂದೆ ಯಾವುದೇ ಕಾರಣಕ್ಕೆ ನಾನು ನನ್ನ ತಾಯಿಯನ್ನು ನೋಯಿಸಲ್ಲ ಎಂದು ಆ ಮಕ್ಕಳು ಅಂದುಕೊಂಡಿರುತ್ತಾರೆ.
ಚಿಕ್ಕ ಪ್ರಾಯದಲ್ಲಿ ತಾಯಿ-ತಂದೆಯ ಮೌಲ್ಯವನ್ನು ಹೀಗೆ ಮನಸ್ಸಿಗೆ ನಾಟುವಂತೆ ಹೇಳುವ ಅವಶ್ಯಕತೆ ಇದೆ
ಆ ಗುರು ಮುಖ್ಯವಾಗಿ ಹೆತ್ತ ತಾಯಿಯ ಮಹತ್ವ ಹೇಳುತ್ತಿದ್ದರು. ತಾಯಿಯನ್ನು ಹೇಗೆ ನಮ್ಮ ಕೆಲಸದವರಂತೆ ನಡೆಸಿಕೊಳ್ಳುತ್ತೇವೆ, ಅದೇ ಅವಳು ನಮ್ಮನ್ನು ಈ ಭೂಮಿಗೆ ತರುವಾಗ, ತಂದ ಮೇಲೆ ಬೆಳೆಸಲು ಎಷ್ಟೊಂದು ಕಷ್ಟಪಟ್ಟಿದ್ದಾಳೆ ಎಂಬುವುದನ್ನು ಮನಸ್ಸಿಗೆ ನಾಟುವಂತೆ ಹೇಳಿದ್ದಾರೆ, ಇದನ್ನು ಕೇಳುತ್ತಿದ್ದಂತೆ ಅಮ್ಮ ನಮ್ಮ ಬದುಕಿನ ದೇವತೆ ಎಂದು ಅರಿತುಕೊಳ್ಳುತ್ತಾರೆ, ಎಲ್ಲಾ ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಅಮ್ಮನ ಮನಸ್ಸಿಗೆ ನೋವಾಗುವ ಮಾತಗಳನ್ನಾಡಿರುತ್ತಾರೆ, ಅದನ್ನು ನೆನೆದು ಬಿಕ್ಕಿ ಬಿಕ್ಕಿ ಅಳಲಾರಂಭಿಸುತ್ತಾರೆ.
ಪೋಷಕರ ಮೇಲೆ ಚಿಕ್ಕ ಪ್ರಾಯದಲ್ಲಿ ಪ್ರೀತಿ ಮೂಡಿದರೆ ನಂತರ ಅವರನ್ನು ವೃದ್ದಾಶ್ರಮಕ್ಕೆ ಬಿಡಲ್ಲ
ವರ್ಷದಿಂದ ವರ್ಷಕ್ಕೆ ವೃದ್ಧಾಶ್ರಮಗಳು ಹೆಚ್ಚಾಗುವುದನ್ನು ನೋಡುವಾಗ ಅಯ್ಯೋ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಕಾಡುವುದು, ಅಷ್ಟು ಕಷ್ಟಪಟ್ಟು ಸಾಕಿದ ಪೋಷಕರನ್ನು ವೃದ್ದಾಶ್ರಮಕ್ಕೆ ಬಿಡುತ್ತಾರಲ್ಲಾ ಎಂದು ಆ ಮಕ್ಕಳ ಮೇಲೆ ಬೇಸರ ಮೂಡುತ್ತೆ, ಆದರೆ ಆ ಮಕ್ಕಳಿಗೆ ತನ್ನ ತಂದೆ-ತಾಯಿಯ ಬೆಲೆ ಗೊತ್ತಿರಲ್ಲ, ಹೀಗಾಗಿ ವಯಸಸ್ಸು ಕಾಲದಲ್ಲಿ ಅವರಿಗೆ ಆಸರೆಯಾಗಲ್ಲ.
ಇಂಥ ಪ್ರೇರಣಾತ್ಮಕ ಮಾತುಗಳನ್ನು ಕೇಳಿ ಬೆಳೆಯಬೇಕು ಮಕ್ಕಳು
ಈ ಭಾಷಣ ಕೇಳಿ ಅತ್ತ ಅಷ್ಟೂ ಮಕ್ಕಳು ಮುಂದೆ ತನ್ನ ತಾಯಿಗೆ ನೋವುಂಟು ಮಾಡುವ ಕಾರ್ಯ ಮಾಡಲ್ಲ, ಏಕೆಂದರೆ ಗುರುಗಳು ತಮ್ಮ ಮಾತುಗಳ ಮೂಲಕ ಮಕ್ಕಳ ಮನಸ್ಸಿನಲ್ಲಿ ತಾಯಿಗ ಭದ್ರ ಸ್ಥಾನ ಕೊಡಿಸಿದ್ದಾರೆ.
ಈಗೀನ ಮಕ್ಕಳು ಬಿದ್ಧಿವಂತರು, ಆದರೆ ಅವರಿಗೆ ಇಂಥ ಬದುಕಿನ ಪಾಠಗಳನ್ನೂ ಹೇಳಿಕೊಡಬೇಕು.



Click it and Unblock the Notifications
