Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಇದ್ದೊಬ್ಬ ಮಗನ ಸಾವು..! ಪುತ್ರನಿಗೆ ಪುನರ್ಜನ್ಮ ನೀಡಲು ಐವಿಎಫ್ ಗರ್ಭಧರಿಸಿದ ಮಹಾತಾಯಿ
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಸಾವಿಗೀಡಾಗಿದ್ದು ನಿಮಗೆಲ್ಲಾ ಗೊತ್ತೆ ಇದೆ. ಕಾರಿನಲ್ಲಿ ತೆರಳುವಾಗ ಗ್ಯಾಂಗ್ ವೊಂದು ಬರ್ಬರವಾಗಿ ಅವರನ್ನು ಕೊಂದಿತ್ತು. ಅತೀ ಚಿಕ್ಕ ವಯಸ್ಸಿನಲ್ಲಿ ಆತ ಫೇಮಸ್ ಆಗಿದ್ದ. ಹತ್ತಾರು ಹಾಡುಗಳು ವಿವಾದಕ್ಕೂ ಒಳಗಾಗಿದ್ದವು. ಇದರ ಜೊತೆ ಒಂದಿಷ್ಟು ವಿವಾದ ತನ್ನ ಮೇಲೂ ಆತ ಎಳೆದುಕೊಂಡಿದ್ದ.
ಆದ್ರೆ ಆತನ ತಾಯಿ ಮಗನ ಸಾಧನೆ ಕಂಡು ಹೆಮ್ಮೆ ಪಡುತ್ತಿದ್ದರು. ತಾಯಿ ಮಗನ ಶ್ರೇಯಸ್ಸು ಬಿಟ್ಟು ಬೇರೆನು ಆಶಿಸಿಸುತ್ತಾಳೆ.? ಆದರೆ ಇದ್ದೊಬ್ಬ ಮಗನ ಕಳೆದುಕೊಂಡಿದ್ದ ತಾಯಿ ಈಗ ಎಲ್ಲರು ಹುಬ್ಬೇರುವಂತಹ ನಿರ್ಧಾರಕ್ಕೆ ಕೈ ಹಾಕಿದ್ದಾಳೆ. ಅದೇ ಐವಿಎಫ್ ಮೂಲಕ ಮತ್ತೊಂದು ಮಗು ಪಡೆಯುವ ಕಾರ್ಯ.

ಹೌದು 58 ವರ್ಷದ ತಾಯಿ ಚರಣ್ ಸಿಂಗ್ ಕೌರ್ ಐವಿಎಫ್ ಅಂದರೆ ಇನ್‌ವಿಟ್ರೊ ಫರ್ಟಿಲೈಸೇಶನ್ ಮೂಲಕ ಮಗು ಪಡೆಯಲು ಮುಂದಾಗಿದ್ದಾರೆ. 58 ವರ್ಷ ವಯಸ್ಸಿನ ಚರಣ್ ಕೌರ್ ಮತ್ತೆ ತಾಯ್ತನವನ್ನು ಸ್ವೀಕರಿಸುವ ನಿರ್ಧಾರವು ಅನೇಕರ ಗಮನವನ್ನು ಸೆಳೆದಿದೆ. ಪಂಜಾಬಿ ಸಂಗೀತ ಉದ್ಯಮದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದ ಸಿಧು ಮೂಸೆವಾಲಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಆಕೆಯ ಏಕೈಕ ಪುತ್ರ ಶುಭದೀಪ್ ಸಿಂಗ್ ಸಿಧು ಮರಣದ ನಂತರ ಆಕೆ ನಡೆ ಭಾರೀ ಶ್ಲಾಘನೆಗೂ ಕಾರಣವಾಗಿದೆ.
ಇನ್ ವಿಟ್ರೊ ಫಲೀಕರಣ (IVF) ಎಂದರೇನು?
ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಎಂಬುದು ಗರ್ಭ ಧರಿಸಲು ಸಹಾಯ ಮಾಡಲು, ಆನುವಂಶಿಕ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಮಗುವಿನ ಪರಿಕಲ್ಪನೆಯಲ್ಲಿ ಸಹಾಯ ಮಾಡಲು ಬಳಸುವ ಒಂದು ಸಂಕೀರ್ಣ ಕಾರ್ಯವಿಧಾನವಾಗಿದೆ. IVF ಚಿಕಿತ್ಸೆಯ ಪ್ರಕ್ರಿಯೆಯು ಜನನ ನಿಯಂತ್ರಣ ಮಾತ್ರೆಗಳು ಅಥವಾ ಈಸ್ಟ್ರೊಜೆನ್ ಅನ್ನು ಬಳಸಿಕೊಂಡು ಋತುಚಕ್ರವನ್ನು ನಿಯಂತ್ರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಈ ಆರಂಭಿಕ ಹಂತವು ಅಂಡಾಶಯದ ಚೀಲಗಳ ಬೆಳವಣಿಗೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ನಂತರದ ಹಂತಗಳಿಗೆ ಅಡಿಪಾಯವನ್ನು ಹೊಂದಿಸುತ್ತದೆ.
ಇದರಲ್ಲಿ ಚುಚ್ಚುಮದ್ದಿನ ಹಾರ್ಮೋನ್ ಔಷಧಿಗಳು ಅನೇಕ ಮೊಟ್ಟೆಗಳನ್ನು ಉತ್ಪಾದಿಸಲು ಅಂಡಾಶಯವನ್ನು ಉತ್ತೇಜಿಸುತ್ತದೆ. ಅತ್ಯುತ್ತಮ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಅಲ್ಟ್ರಾಸೌಂಡ್‌ಗಳು ಮತ್ತು ರಕ್ತದ ಹಾರ್ಮೋನ್ ಮಟ್ಟಗಳ ಮೂಲಕ ಪ್ರಗತಿಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
ಗರ್ಭದಲ್ಲಿ ರೂಪುಗೊಂಡ ಅಂಡಾಶಯಕ್ಕೆ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ಮೂಲಕ ಫಲೀಕರಣವನ್ನು ಸಾಧಿಸಲಾಗುತ್ತದೆ, ಅಲ್ಲಿ ವೀರ್ಯವನ್ನು ಪ್ರತಿ ಪ್ರೌಢ ಮೊಟ್ಟೆಗೆ ನೇರವಾಗಿ ಚುಚ್ಚಲಾಗುತ್ತದೆ. ಮುಂದಿನ ಐದರಿಂದ ಆರು ದಿನಗಳಲ್ಲಿ ಭ್ರೂಣಗಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
ಮಗನ ಪಡೆಯಲು ತಾಯಿ ಹೋರಾಟ
ಒಬ್ಬನೇ ಮಗನ ಕಳೆದುಕೊಂಡಿದ್ದ ತಾಯಿ 55 ವರ್ಷದಲ್ಲು ಮಗನ ಪಡೆಯಲು ಹೋರಾಟ ಮಾಡುತ್ತಿದ್ದಾರೆ. 55 ವರ್ಷದಲ್ಲಿ ನೈಸರ್ಗಿಕವಾಗಿ ಗರ್ಭ ಧರಿಸುವುದು ಸಾಮಾನ್ಯವಾಗಿ ಸಾಧ್ಯವಿಲ್ಲ. ಹೀಗಾಗಿ ವೈದ್ಯಕೀಯ ಪರೀಕ್ಷೆಗಳು, ಹಲವು ಚಿಕಿತ್ಸೆಗೂ ಒಳಗಾಗಬೇಕಾಗುತ್ತದೆ. ಮಗನನ್ನು ಮರೆಯಲಾಗದ ಆಕೆ ಈ ನಿರ್ಧಾರ ಮಾಡಿರುವುದು ತಾಯಿಯ ಗಟ್ಟಿತನಕ್ಕೆ ನಿದರ್ಶನವಾಗಿದೆ.
ಮಾರ್ಚ್‌ನಲ್ಲಿ ಮಗು ಪಡೆಯುವ ನಿರೀಕ್ಷೆಯಲ್ಲಿ ಪೋಷಕರು
ಮೂಲಗಳ ಪ್ರಕಾರ ಕಳೆದ ವರ್ಷ ಅವರು ಐವಿಎಫ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಆದರೆ ಇದೇ ಮಾರ್ಚ್‌ನಲ್ಲಿ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ. ಮಕ್ಕಳನ್ನು ದುರಂತದಲ್ಲೋ, ಕಾಯಿಲೆಯಿಂದಲೂ ಕಳೆದುಕೊಂಡು ಅವರ ನೆನಪಲ್ಲೇ ದಿನ ಕಳೆಯುವ ಪೋಷಕರಿಗೆ ಸಿಧು ತಾಯಿ ಪ್ರೇರಣೆಯಾಗಿದ್ದು, ಅವರಂತೆ ಮತ್ತೆ ಮಗನಿಗೆ ಜನ್ಮ ನೀಡಲು ಮುಂದಾಗಿರುವುದು ನಿಜವಾಗಿಯೂ ಮೆಚ್ಚುವಂತದ್ದು. ಹಾಗಾಗಿಯೇ ಹಿರಿಯವರು ಹೇಳಿರುವು ತಾಯಿಗೆ ತಾಯಿಯೊಬ್ಬಳೇ ಸಾಟಿ ಎಂದು..



Click it and Unblock the Notifications
