Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ನೈಸರ್ಗಿಕವಾಗಿಯೇ ಫಲವತ್ತತೆ ಹೆಚ್ಚಿಸಿಕೊಳ್ಳಲು ಅದ್ಭುತ ಗಿಡಮೂಲಿಕೆ ಶತಾವರಿ
ಸಾಮಾನ್ಯವಾಗಿ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ಈಗ ನಾವು ಪರಿಹಾರ ಹುಡುಕುವುದು ಹೆಚ್ಚಾಗಿ ಆಯುರ್ವೇದದ ಔಷಧಗಳಲ್ಲಿ, ಇದು ಅಲೋಪತಿಗಿಂತ ಹೆಚ್ಚು ಉತ್ತಮ ಮತ್ತು ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ ಎಂಬ ನಂಬಿಕೆಯಿಂದಾಗಿ ಇತ್ತೀಚಿಗೆ ಜನರು ಹೆಚ್ಚಾಗಿ ಆಯುರ್ವೇದದ ಮೊರೆ ಹೋಗುತ್ತಿದ್ದಾರೆ.

ಈ ಆಯುರ್ವೇದದಲ್ಲಿ ಸಾಮಾನ್ಯವಾಗಿ ಎಲ್ಲಾ ಖಾಯಿಲೆಗಳಿಗೂ ಒಂದಿಲ್ಲೊಂದು ಪರಿಹಾರ ಇದ್ದೇ ಇರುತ್ತದೆ, ಅದರಲ್ಲೂ ಸಂಪೂರ್ಣ ಗಿಡಮೂಲಿಕೆಗಳಿಂದ ಕೂಡಿರುವ ಆಯುರ್ವೇದದ ಔಷಧಗಳು ಇಂದು ಹೆಚ್ಚು ಪ್ರಚಲಿತ! ಅದರಲ್ಲೂ ಶತಾವರಿಯಂತ ಮೂಲಿಕೆಗಳು ಸರ್ವ ಖಾಯಿಲೆಗಳಿಗೆ ರಾಮ ಬಾಣ ಎಂದೇ ಹೇಳಲಾಗುತ್ತದೆ.
ಶತಾವರಿ, ಒಂದು ಆಯುರ್ವೇದ ಮೂಲಿಕೆಯಾಗಿದ್ದು, ಇದು ಅನೇಕ ಔಷಧೀಯ ಸೂತ್ರೀಕರಣಗಳಲ್ಲಿ ಕಂಡುಬರುತ್ತದೆ, ಶತಾವರಿ, ಇದು ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಹಲವಾರು ದಂಪತಿಗಳು ಇಂದು ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದು, ಅದು ಸಾಧ್ಯವಾದದೇ ಇದ್ದಾಗ, ಇದಕ್ಕೆ ಪೂರಕವಾಗಿ ಆಯುರ್ವೇದದ ಔಷಧಿಯನ್ನೇ ನೆಚ್ಚಿದ್ದಾರೆ.
ಶತಾವರಿ - ಹೆಸರೇ ಸೂಚಿಸುವಂತೆ ಶತಾವರಿ ಎಂದರೆ ನೂರು ರೋಗಗಳ ನಿವಾರಕ. ಗರ್ಭಧಾರಣೆ ಎನ್ನುವ ಒಂದು ಭಾವನಾತ್ಮಕ ಸವಾಲನ್ನು ಎದುರಿಸಲು ಹಾಗೂ ಅದರಲ್ಲಿ ಯಶಸ್ಸನ್ನು ಗಳಿಸಲು ಶತಾವರಿ ಮೂಲಿಕೆಗಳು ನಿಮಗೆ ಸಹಾಯಕವಾಗಲಿದೆ.
ಈ ಮೂಲಿಕೆ, ನಮ್ಮ ದೇಹದ ವ್ಯವಸ್ಥೆಯನ್ನು ಪೋಷಿಸುತ್ತದೆ ಮತ್ತು ಸಂತಾನೋತ್ಪತ್ತಿ ಅಂಗಗಳನ್ನು ಪುನಶ್ಚೇತನಗೊಳಿಸುತ್ತದೆ, ಇದರಿಂದಾಗಿ ಫಲವತ್ತತೆ ಸಾಮರ್ಥ್ಯ ಸುಧಾರಿಸುತ್ತದೆ. ಇದು ಒಟ್ಟಾರೆ ಸ್ತ್ರೀ ಹಾರ್ಮೋನ್ ವ್ಯವಸ್ಥೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸ್ತ್ರೀ ಚೈತನ್ಯವನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಈ ಮಾಹಿತಿಗಳು ಎಷ್ಟು ನಿಜ? ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ!

ಶತಾವರಿ ಎಂದರೇನು?
ಶತಾವರಿ ಎಂಬುದು ತೆಳುವಾದ ಸೂಜಿಯಂತಹ ಎಲೆಗಳು, ಆಕರ್ಷಕವಾದ ಕಾಂಡಗಳು, ಕೊಂಬೆಗಳು ಮತ್ತು ಸೂಕ್ಷ್ಮವಾದ ಹೂವುಗಳನ್ನು ಹೊಂದಿರುವ ಒಂದು ಸಸ್ಯವಾಗಿದೆ. ಇದರ ಗಿಡಮೂಲಿಕೆ ಶಕ್ತಿಯು ಅದರ ಕೆನೆ ಬಣ್ಣದ ದಪ್ಪ, ಕೊಳವೆಯಾಕಾರದ ಬೇರುಗಳಲ್ಲಿದೆ. ನೆಲದ ಅಡಿಯಲ್ಲಿ ನೂರು ಬೇರುಗಳನ್ನು ಹೊಂದಿರುವ ಸಸ್ಯ ಎಂದೂ ಇದನ್ನು ಕರೆಯುತ್ತಾರೆ. ‘ಶತಾವರಿ' ಯ ಸಸ್ಯಶಾಸ್ತ್ರೀಯ ಹೆಸರು ‘ಎಸ್ ಪಾರಗಸ್ ರೇಸ್ಮೋಸಸ್' (Asparagus Racemosus).
ಶತಾವರಿಯು ದೇಹಕ್ಕೆ ಶಕ್ತಿ, ಚೈತನ್ಯ, ಹುರುಪು ಮತ್ತು ಜೀವನದಲ್ಲಿ ಒಟ್ಟಾರೆ ಸಾರವನ್ನು ನೀಡುವ ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಗರ್ಭವನ್ನು ಪೋಷಿಸುವ ಮೂಲಕ ಮತ್ತು ಸ್ತ್ರೀ ಅಂಗಗಳನ್ನು ಗರ್ಭಧಾರಣೆಗೆ ಸಿದ್ಧಪಡಿಸುವ ಮೂಲಕ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ.
ಶತಾವರಿ ಮೂಲಿಕೆಗಳು ಗರ್ಭಪಾತದ ತೊಂದರೆಯನ್ನುತಡೆಯುತ್ತವೆ. ಸಂತಾನೋತ್ಪತ್ತಿ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ, ನರಗಳ ಕಾಯಿಲೆಗಳು, ಗಂಟಲಿನ ಸೋಂಕುಗಳು, ಕ್ಷಯ, ಕೆಮ್ಮು ಅಥವಾ ಬ್ರಾಂಕೈಟಿಸ್ಗೆ ಚಿಕಿತ್ಸೆ ನೀಡಲು ಶತಾವರಿ ಸಹಾಯ ಮಾಡುತ್ತದ್. ಶತಾವರಿ ಹೆಸರಿಗೆ ತಕ್ಕ ಹಾಗೆ ನಿಜಕ್ಕೂ ನೂರು ಕಾಯಿಲೆಗಳಿಗೆ ಪರಿಹಾರಕ.

ಶತಾವರಿ ಫಲವತ್ತತೆಗೆ ಉತ್ತಮವಾಗಿದೆಯೇ?
ಶುದ್ಧ ಗಿಡಮೂಲಿಕೆಗಳ ಸಾರವಾದ ಶತಾವರಿ ಕಾಮೋತ್ತೇಜಕ ಎಂದು ತಿಳಿದುಬಂದಿದೆ, ಇದು ಗರ್ಭಧಾರಣೆಯ ಸಾಧ್ಯತೆಗಳನ್ನು ಸುಧಾರಿಸುತ್ತದೆ ಜೊತೆಗೆ ಅಂಡೋತ್ಪತ್ತಿಗೆ ಸಹಾಯ ಮಾಡುತ್ತದೆ ಮತ್ತು ಯಾವುದೇ ಹಾರ್ಮೋನುಗಳ ಅಸಮತೋಲನವನ್ನು ಪುನಃಸ್ಥಾಪಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ನಿಯಂತ್ರಿಸುತ್ತದೆ ಮತ್ತು ಪೋಷಿಸುತ್ತದೆ.
ಶತಾವರಿ, ಹಾಲುಣಿಸುವಿಕೆಗೆ ಸಹಾಯ ಮಾಡುವ ಕಾರಣ ಹೆರಿಗೆಯ ನಂತರ ಮಹಿಳೆಯರಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಬಾಳಂತಿಯರು ಇದನ್ನು ಸೇವಿಸುವುದು ಒಳ್ಳೆಯದು. ಒಟ್ಟಾರೆಯಾಗಿ ಹೇಳುವುದಾದರೆ, ಇದು ಸ್ತ್ರೀಯರ ಆರೋಗ್ಯಕ್ಕೆ ಪ್ರಾಥಮಿಕ ಸಸ್ಯವೆಂದು ಪರಿಗಣಿಸಲಾಗಿದೆ.

ಫಲವತ್ತತೆ ವರ್ಧನೆಗೆ ಶತಾವರಿಯ ಪ್ರಯೋಜನಗಳು
ಶತಾವರಿ, ಸ್ತ್ರೀ ಫಲವತ್ತತೆಯನ್ನು ಸುಧಾರಿಸುತ್ತದೆ ಎಂದು ತಿಳಿದೇ ಇದೆ. ಆದರೆ ಇದು ಪುರುಷರಲ್ಲಿ ಫಲವತ್ತತೆಯನ್ನು ಸುಧಾರಿಸುತ್ತದೆ ಎಂಬುದು ಗೊತ್ತೇ? ಹೌದು, ಶತಾವರಿ ಇತರ ಆರೋಗ್ಯ ಸಮಸ್ಯೆಗಳನ್ನೂ ಗುಣಪಡಿಸುವ ಅದ್ಭುತ ಗುಣಗಳನ್ನು ಹೊಂದಿರುವ ಮೂಲಿಕೆ. ಇದರಲ್ಲಿರುವ ಬಹು ಖನಿಜಗಳು, ಖಿನ್ನತೆ, ಸಂಧಿವಾತ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ (ಕೊಬ್ಬು) ನಿವಾರಕವಾಗಿ ಕೆಲಸ ಮಾಡುತ್ತವೆ. ಈ ಗಿಡಮೂಲಿಕೆಯ ಕೆಲವು ಪ್ರಮುಖ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:

1. ಒತ್ತಡವನ್ನು ಕಡಿಮೆ ಮಾಡುತ್ತದೆ
ಹಾರ್ಮೋನುಗಳನ್ನು ನಿಯಂತ್ರಿಸುವ ಮೆದುಳಿನ ಕೇಂದ್ರವು ಒತ್ತಡದಿಂದ ಪ್ರಭಾವಿತವಾಗಿರುತ್ತದೆ. ಈ ಒತ್ತಡದಿಂದಾಗಿ ಹಾರ್ಮೋನುಗಳ ಅಸಮತೋಲನ ಮತ್ತು ಅಂಡೋತ್ಪತ್ತಿ ಸಮಸ್ಯೆಗಳು ಉಂಟಾಗಿ ಗರ್ಭಿಣಿಯಾಗಲು ಮಹಿಳೆಯರಿಗೆ ಕಷ್ಟವಾಗುತ್ತದೆ. ಅತಿಯಾದ ಒತ್ತಡವು ಕೆಲವೊಮ್ಮೆ ಅಂಡಾಶಯದ ಚೀಲಗಳು ಮತ್ತು ಎಂಡೊಮೆಟ್ರಿಯೊಸಿಸ್ ಗೆ ಕಾರಣವಾಗುತ್ತದೆ.
ಶತಾವರಿ, ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುವ ಮೂಲಕ ನರಮಂಡಲವನ್ನು ಶಾಂತಗೊಳಿಸುತ್ತದೆ. ಇದು ಒತ್ತಡದ ಋಣಾತ್ಮಕ ಪರಿಣಾಮಗಳನ್ನು ಪ್ರತಿರೋಧಿಸುತ್ತದೆ. ಅಲ್ಲದೆ, ಶತಾವರಿ ಅಡಾಪ್ಟೋಜೆನಿಕ್ (ನೈಸರ್ಗಿಕ ವಸ್ತು) ಮೂಲಿಕೆಯಾಗಿದ್ದು, ಇದು ದೈಹಿಕ ಮತ್ತು ಭಾವನಾತ್ಮಕ ಒತ್ತಡವನ್ನು ನಿಭಾಯಿಸಲು ದೇಹಕ್ಕೆ ಸಹಾಯ ಮಾಡುತ್ತದೆ.

2. ಉತ್ತಮ ಅಂಡೋತ್ಪತ್ತಿಗೆ ಸಹಾಯ ಮಾಡುತ್ತದೆ
ಶತಾವರಿ ಮೂಲಿಕೆ, ಫೈಟೊಕೆಮಿಕಲ್ (ಸಸ್ಯ ರಾಸಾಯನಿಕ) ವಾಗಿದ್ದು ಈಸ್ಟ್ರೊಜೆನ್, ಅಂಡೋತ್ಪತ್ತಿ ಮತ್ತು ಆರೋಗ್ಯಕರ ಮುಟ್ಟಿನ ಚಕ್ರದ ಉತ್ಪಾದನೆಗೆ ಕಾರಣವಾಗಿದೆ. ಇದು ಹಾರ್ಮೋನಿನ ಉತ್ತಮ ಉತ್ಪಾದನೆಗೆ ಸಹಾಯ ಮಾಡುತ್ತದೆ, ಮಹಿಳೆಯರಲ್ಲಿ ಅಂಡೋತ್ಪತ್ತಿ ಸುಧಾರಿಸಲು ಶತಾವರಿ ಸಾಕಷ್ಟು ಪ್ರಯೋಜನಕಾರಿ.

3. ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ
ದುರ್ಬಲ ರೋಗನಿರೋಧಕ ಶಕ್ತಿಯು, ಮಹಿಳೆಯನ್ನು ಬಂಜೆತನ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗಿಸುತ್ತದೆ. ಸಂತಾನೋತ್ಪತ್ತಿ ವ್ಯವಸ್ಥೆಯು ರೋಗಗಳಿಂದ ಸುಲಭವಾಗಿ ಆಕ್ರಮಣಗೊಳ್ಳುವುದರಿಂದ ಮಹಿಳೆಗೆ ಗರ್ಭಧರಿಸಲು ಕಷ್ಟವಾಗಬಹುದು. ಉತ್ತಮ ರೋಗನಿರೋಧಕ ಶಕ್ತಿಯಿಂದ ಅನೇಕ ರೋಗಗಳನ್ನು ತಡೆಯಬಹುದು. ಶತಾವರಿ ಮೂಲಿಕೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

4. ಲೋಳೆಯ ಪೊರೆಗಳನ್ನು ಹೆಚ್ಚಿಸುತ್ತದೆ
ಶತಾವರಿಯಲ್ಲಿ ಮ್ಯೂಕಿಲೇಜ್ (ದ್ರವ ರೂಪ) ನ್ನು ಒಳಗೊಂಡಿದ್ದು, ಇದು ಗರ್ಭಕಂಠದ ಲೋಳೆಯ ಪೊರೆಯ ಚೈತನ್ಯಕಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ರಕ್ಷಿಸುತ್ತದೆ. ಉತ್ತಮ ಸಂರಕ್ಷಿತ ಗರ್ಭಕಂಠವು, ಗರ್ಭಕಂಠದ ಲೋಳೆಯನ್ನು ಸ್ರವಿಸುತ್ತದೆ, ಇದು ಆರೋಗ್ಯಕರ ಅಂಡೋತ್ಪತ್ತಿ ಚಕ್ರದಲ್ಲಿ ಫಲವತ್ತತೆಗೆ ಕಾರಣವಾಗಿದೆ. ಶತಾವರಿ ಗಿಡಮೂಲಿಕೆ ವೀರ್ಯವನ್ನು ಆರೋಗ್ಯಕರವಾಗಿಸುವ ಮೂಲಕ ಪುರುಷರಲ್ಲಿಯೂ ಕೂಡ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಸಂಭೋಗಕ್ಕೆ ಅಡ್ಡಿಯಾಗಬಹುದಾದಂಥ, ಹಾಗೂ ಅದರಿಂದ ಗರ್ಭಧಾರಣೆಯನ್ನು ವಿಳಂಬಗೊಳಿಸುವಂಥ ಯೋನಿ ಶುಷ್ಕತೆಯ ಸಮಸ್ಯೆಯನ್ನು ಗುಣಪಡಿಸಲು ಶತಾವರಿ ಅತ್ಯಂತ ಸಹಾಯಕ.

5. ಲಿವರ್ ಮತ್ತು ಕಿಡ್ನಿ ಉತ್ತೇಜಕ
ಸ್ತ್ರೀ ಫಲವತ್ತತೆಯು ಯಕೃತ್ತು ಮತ್ತು ಮೂತ್ರಪಿಂಡಗಳಿಂದ ಸಾಕಷ್ಟು ಪ್ರಮಾಣದಲ್ಲಿ ಪರಿಣಾಮಕ್ಕೊಳಗಾಗುತ್ತದೆ. ಬಂಜೆತನದಿಂದ ಉಂಟಾಗುವ ಹೆಚ್ಚುವರಿ ದ್ರವದ ಸಂಗ್ರಹವು ಅನಾರೋಗ್ಯಕರ ಮುಟ್ಟಿಗೆ ಕಾರಣವಾಗುತ್ತದೆ. ಆದರೆ ಅದ್ಭುತ ಮೂಲಿಕೆಯಾಗಿರುವ ಶತಾವರಿ, ಯಕೃತ್ತು ಮತ್ತು ಮೂತ್ರಪಿಂಡದಲ್ಲಿ ಇರುವ ಹೆಚ್ಚುವರಿ ದ್ರವವನ್ನು ತೆಗೆದುಹಾಕಿ ಆರೋಗ್ಯಕರ ಮುಟ್ಟಿಗೆ ಸಹಾಯ ಮಾಡುತ್ತದೆ.

6. ಹಾರ್ಮೋನುಗಳ ಅಸಮತೋಲನವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ
ಹಾರ್ಮೋನುಗಳ ಸ್ರವಿಸುವಿಕೆಯನ್ನು ಸಹಜಗೊಳಿಸಲು ಶತಾವರಿ ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಪಾಲಿಸಿಸ್ಟಿಕ್ ಓವರಿನ್ ಸಿಂಡ್ರೋಮ್ (ಪಿಸಿಓಡಿ) ನಿಂದ ಬಳಲುತ್ತಿದ್ದಾರೆ, ಇದು ಅಂಡೋತ್ಪತ್ತಿ ಚಕ್ರವನ್ನು ತೊಂದರೆಗೊಳಿಸುವುದರ ಜೊತೆಗೆ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ.
ಈ ಎಲ್ಲ ರೋಗಲಕ್ಷಣಗಳನ್ನು ತೊಡೆದುಹಾಕಿ, ಹಾರ್ಮೋನುಗಳ ಸಮತೋಲನವನ್ನು ಪುನಃಸ್ಥಾಪಿಸುವ ಮೂಲಕ ಶತಾವರಿ ಗರ್ಭಧಾರಣೆಯ ಸಾಧ್ಯತೆಗಳನ್ನು ಸುಧಾರಿಸುತ್ತದೆ. ಈ ಮೂಲಿಕೆಯು ಋತುಚಕ್ರದಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ ಜೊತೆಗೆ ಕೋಶಕ ಪರಿಪಕ್ವತೆಯನ್ನು ಸುಧಾರಿಸುವುದರಿಂದ ಗರ್ಭಧಾರಣೆಯ ಸಾಧ್ಯತೆಗಳು ಅನೇಕ ಪಟ್ಟು ಹೆಚ್ಚಾಗುತ್ತವೆ.

7. ವಿಷಕಾರಿ ರಚನೆಯನ್ನು ಕಡಿಮೆ ಮಾಡುತ್ತದೆ
ಶತಾವರಿ ಮೂಲಿಕೆಯು ದೇಹದಲ್ಲಿನ ವಿಷಕಾರಿ ರಚನೆಯನ್ನು ನಿವಾರಿಸುವ ಒಂದು ಏಕೈಕ ಸಾಧನ. ವೀರ್ಯ ಮತ್ತು ಮೊಟ್ಟೆಯನ್ನು ಒಂದುಗೂಡಿಸಲು ಅನುವು ಮಾಡಿಕೊಡುವ ಮೂಲಕ ಗರ್ಭಧಾರಣೆಯು ಅಭಿವೃದ್ಧಿ ಹೊಂದಲು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಇದು ಸಹಾಯ ಮಾಡುತ್ತದೆ.
ಹಾಗಾದರೆ ಶತಾವರಿಯ ಪ್ರಯೋಜನಗಳನ್ನು ನೀವು ಈಗ ತಿಳಿದಿರಲ್ಲವೇ? ಆದರೆ ತಜ್ಞರು ಸೂಚಿಸಿದ ನಂತರವೇ ಶತಾವರಿಯನ್ನು ಸೇವಿಸುವುದು ಹೆಚ್ಚು ಸೂಕ್ತ. ಸ್ವಯಂ-ಔಷಧಿ ಮಾಡದಿರುವುದು ಉತ್ತಮ. ತಜ್ಞರು ನಿಮ್ಮನ್ನು ಪರೀಕ್ಷಿಸಿ ಸಮಸ್ಯೆಯನ್ನು ಪತ್ತೆಹಚ್ಚುತ್ತಾರೆ ಮತ್ತು ಅದಕ್ಕೆ ತಕ್ಕಂತೆ ಪರಿಹಾರಗಳನ್ನು ಮತ್ತು ಪ್ರಮಾಣವನ್ನು ನೀಡುತ್ತಾರೆ. ಶತಾವರಿ ಗಿಡಮೂಲಿಕೆಗಳನ್ನು ತೆಗೆದುಕೊಳ್ಳುವ ವಿಧಾನಗಳನ್ನು ತಿಳಿಯಲು ಮುಂದೆ ಓದಿ.

ಫಲವತ್ತತೆಗಾಗಿ ಶತಾವರಿಯನ್ನು ಹೇಗೆ ತೆಗೆದುಕೊಳ್ಳುವುದು?
ಶತಾವರಿ ಗಿಡಮೂಲಿಕೆ ಸಾಮಾನ್ಯವಾಗಿ ಮಾತ್ರೆಗಳು, ದ್ರವ ಅಥವಾ ಪುಡಿ- ಈ ಮೂರು ರೂಪಗಳಲ್ಲಿ ಲಭ್ಯವಿದೆ. ಆದರೆ ಆಯುರ್ವೇದ ತಜ್ಞ ವೈದ್ಯರನ್ನು ಸಂಪರ್ಕಿಸದೆ ಈ ಅದ್ಭುತ ಔಷಧಿಯನ್ನು ತೆಗೆದುಕೊಳ್ಳಲೇಬಾರದು. ಹೆಚ್ಚಾಗಿ, ಹಾಲಿನೊಂದಿಗೆ ಶತಾವರಿಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಈ ಮೂಲಿಕೆಯ ಶುದ್ಧತೆ, ಗುಣಮಟ್ಟ ಮತ್ತು ಬಲವು ಪೂರಕದಿಂದ ಪೂರಕಕ್ಕೆ (ಔಷಧಿಯಿಂದ ಔಷಧಿಗೆ) ಬದಲಾಗುತ್ತದೆ. ಆದಾಗ್ಯೂ, ತಜ್ಞರು ಸೂಚಿಸಿದ ನಂತರ ನೀವು ಅದನ್ನು ಉತ್ತಮ ಬ್ರಾಂಡ್ ಹೊಂದಿರುವ ಅಂಗಡಿಯಿಂದಲೇ ಖರೀದಿಸುವುದು ಉತ್ತಮ.
ನೀವು ಇಲ್ಲಿಯವರೆಗೆ ಈ ಲೇಖನವನ್ನು ಓದಿದ್ದರೆ, ನೀವು ಬಹುಶಃ ಶತಾವರಿ ತೆಗೆದುಕೊಳ್ಳುವುದನ್ನು ಪರಿಗಣಿಸಿದ್ದೀರಿ. ಆದರೆ ಅದಕ್ಕೂ ಮೊದಲು, ಈ ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಆಗುವ ಅಪಾಯಗಳನ್ನು ಕೂಡ ನೀವು ತಿಳಿದಿರಬೇಕು ಏಕೆಂದರೆ ಇದೂ ಸಹ ಕೆಲವು ಅಡ್ಡಪರಿಣಾಮಗಳನ್ನು ಹೊಂದಿರಬಹುದು.

ಶತಾವರಿಯ ಅಡ್ಡಪರಿಣಾಮಗಳು
ಶತಾವರಿ ಗಿಡಮೂಲಿಕೆಯನ್ನು ಆದಷ್ಟು ವೈದ್ಯರ ಸಲಹೆಯ ಮೇರೆಗಷ್ಟೇ ಸೇವಿಸಿ. ಯಾಕೆಂದರೆ ಕೆಲವೊಮ್ಮೆ ಈ ಔಷಧಿ ಕಲುಷಿತವಾಗಿರಬಹುದು ಮತ್ತು ನಿಮ್ಮ ಫಲವತ್ತತೆಗೆ ಪ್ರತಿಕೂಲ ಪರಿಣಾಮ ಬೀರುವ ಬೀರಬಹುದು. ಶತಾವರಿಯು ಈ ಕೆಳಗಿನ ಅಡ್ಡಪರಿಣಾಮಗಳನ್ನು ಸಹ ಉಂಟುಮಾಡಬಹುದು.
- ಶತಾವರಿ ದದ್ದು ಮತ್ತು ಚರ್ಮದ ತುರಿಕೆ ಸಮಸ್ಯೆಗೆ ಕಾರಣವಾಗಬಹುದು.
- ಶತಾವರಿ ಮೂಲಿಕೆ ಕಣ್ಣುಗಳಿಗೆ ತುರಿಕೆ ಉಂಟುಮಾಡಬಹುದು.
- ಶತಾವರಿ, ತಲೆತಿರುಗುವಿಕೆಗೆ ಕಾರಣವಾಗಬಹುದು.
- ಈ ಮೂಲಿಕೆ ಹೃದಯ ಬಡಿತವನ್ನು ಹೆಚ್ಚಿಸಬಹುದು.
- ಇದು ಉಸಿರಾಟದ ತೊಂದರೆ ಉಂಟುಮಾಡಬಹುದು.
- ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಇದು ಸಡಿಲವಾದ ಮಲವನ್ನು ಉಂಟುಮಾಡಬಹುದು.

ಫಲವತ್ತತೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಶಿಫಾರಸು ಮಾಡಲಾಗುವ ಪ್ರಾಥಮಿಕ ಗಿಡಮೂಲಿಕೆ ಎಂದು ಶತಾವರಿಯನ್ನು ಪರಿಗಣಿಸಬಹುದು, ಆದರೆ ಅದರ
ಫಲಿತಾಂಶವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ಹಾಗಾಗಿ, ಈ ನೈಸರ್ಗಿಕ ಮೂಲಿಕೆಯು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ ಸಹ ಅದನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಫಲವತ್ತತೆಯನ್ನು ಸುಧಾರಿಸಲು ಶತಾವರಿಯನ್ನು ತೆಗೆದುಕೊಳ್ಳಬೇಕೆಂದು ನಿಮಗೆ ಅನ್ನಿಸಿದರೆ, ಮೊದಲು ನಿಮ್ಮ ವೈದ್ಯಕೀಯ / ಫಲವತ್ತತೆ ತಜ್ಞರೊಂದಿಗೆ ಮಾತನಾಡಿ ಅವರ ಸಲಹೆಯ ಮೇರೆಗೆ ಶತಾವರಿಯನ್ನು ಸೇವಿಸಿ.



Click it and Unblock the Notifications











