Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮಕ್ಕಳು ಬೇಕು, ಬೇಡ ಎನ್ನುವವರು ಅಂಡೋತ್ಪತಿ ದಿನದ ಬಗ್ಗೆ ತಿಳಿದಿರಲೇಬೇಕು
ಬಂಜೆತನಕ್ಕೆ ಮುಖ್ಯ ಕಾರಣ ಅಂಡೋತ್ಪತ್ತಿಯಾಗದೇ ಇರುವುದು ಅಥವಾ ಆಗಬೇಕಾದ ಸಮಯದಲ್ಲಿ ಆಗದೇ ತಡವಾಗುವುದು. ಸಾಮಾನ್ಯವಾಗಿ ಈ ತೊಂದರೆ ಇರುವ ಮಹಿಳೆಯರಲ್ಲಿ ಮಾಸಿಕ ದಿನಗಳ ಬಳಿಕ ಎಷ್ಟೋ ದಿನಗಳವರೆಗೆ ಅಂಡಾಣು ಬಿಡುಗಡೆಯಾಗದೇ ಒಂದು ದಿನ ಥಟ್ಟನೇ ಬಿಡುಗಡೆಯಾಗಿಬಿಡುತ್ತದೆ ಹಾಗೂ ಗರ್ಭಧಾರಣೆಗೊಳ್ಳಲು ಅತ್ಯಲ್ಪ ಸಮಯವನ್ನು ಮಾತ್ರವೇ ನೀಡುತ್ತದೆ.

ಹಾಗಾಗಿ ಈ ಅಲ್ಪ ಸಮಯವನ್ನು ಕಾರಣಾಂತರಗಳಿಂದ ತಪ್ಪಿಸಿಕೊಂಡರೆ ಫಲಿತಗೊಳ್ಳುವ ಸಾಧ್ಯತೆ ಮುಂದಿನ ತಿಂಗಳಿಗೆ ಮುಂದೂಡಲ್ಪಡುತ್ತದೆ. ಈ ಬಗ್ಗೆ ಇಂದಿನ ಲೇಖನದಲ್ಲಿ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗಿದೆ;

ತಡವಾಗಿ ಸಂಭವಿಸುವ ಅಂಡೋತ್ಪತ್ತಿ (late ovulation) ಎಂದರೇನು?
ಹೆಸರೇ ಸೂಚಿಸುವಂತೆ ಮಾಸಿಕ ದಿನಗಳ ಬಳಿಕ ಸಹಜ ದಿನದಂದು ಬಿಡುಗಡೆಯಾಗಬೇಕಾಗಿದ್ದ ಅಂಡಾಣು ಬಿಡುಗಡೆಯಾಗದೇ ತಡವಾಗಿ ಬಿಡುಗಡೆಯಾಗುತ್ತದೆ.
ಸಾಮಾನ್ಯವಾಗಿ ಇದು ಋತುಚಕ್ರದ ದಿನದಿಂದ ಮೂರನೆಯ ವಾರದಂದು ಬಿಡುಗಡೆಯಾಗುವ ಸಂಭವ ಹೆಚ್ಚು. ಮಹಿಳೆಯ ಆರೋಗ್ಯ ಮತ್ತು ರಸದೂತಗಳ ಪ್ರಭಾವವನ್ನು ಅನುಸರಿಸಿ ಇದು ಕೊಂಚ ಆಚೀಚೆ ಆಗಲೂ ಬಹುದು.
ಮಾಸಿಕ ಚಕ್ರದಲ್ಲಿ ಮಹಿಳೆಯರ ದೇಹದಲ್ಲಿ ಬಿಡುಗಡೆಯಾಗುವ ರಸದೂತಗಳಲ್ಲಿ ಕೆಲವು ಈ ಕ್ರಿಯೆಯನ್ನು ಪ್ರಮುಖವಾಗಿ ನಿರ್ವಹಿಸುತ್ತವೆ. ಇವುಗಳೆಂದರೆ:
- ಈಸ್ಟ್ರೊಜೆನ್
- ಪ್ರೊಜೆಸ್ಟರಾನ್
- ಲ್ಯುಟೈನೈಜಿಂಗ್ ರಸದೂತ -(luteinizing hormone)
- ಕೋಶಕಗಳನ್ನು-ಉತ್ತೇಜಿಸುವ ರಸದೂತ (follicle-stimulating hormone)
- ಕೋಶಕ ಹಂತ (follicular phase) - ಇದರಲ್ಲಿ ಗರ್ಭಕೋಶದ ಕೋಶಕಗಳು ಅಂಡಾಣುವೊಂದನ್ನು ಬೆಳವಣಿಗೆಗೆ ಒಳಪಡಿಸುತ್ತವೆ ಹಾಗೂ ಬಿಡುಗಡೆಯ ದಿನದವರೆಗೂ ಪೂರ್ಣ ಬೆಳವಣಿಗೆಯಾಗದೇ ಬಿಡುಗಡೆಯಾಗದಂತೆ ಕಾಪಾಡುತ್ತವೆ.
- ಅಂಡೋತ್ಪತ್ತಿ ಹಂತ (ovulation)-ಸೂಕ್ತ ಸಮಯದಲ್ಲಿ ಪೂರ್ಣ ಬೆಳವಣಿಗೆ ಪಡೆದ ಅಂಡಾಣು ಬಿಡುಗಡೆಗೊಂಡು ವೀರ್ಯಾಣುವಿಗೆ ಕಾಯುವಂತೆ ಮಾಡುವುದು. ಸಾಮಾನ್ಯವಾಗಿ ಈ ಕ್ರಿಯೆಗೆ ಕೆಲವು ಘಂಟೆಗಳ ಅವಧಿ ಬೇಕಾಗುತ್ತದೆ.
- ಲ್ಯೂಟಲ್ ಹಂತ (luteal phase) : ಈ ಹಂತದಲ್ಲಿ ಅಂಡಾಶಯದ ಕೋಶಕ ಮುಚ್ಚಿಹೋಗುತ್ತದೆ ಹಾಗೂ ಗರ್ಭಾಶಯದ ಒಳಗೋಡೆಗಳ ಪದರ ನಿವಾರಣೆಯಾಗಿ ಹೊಸ ಫಲಿತ ಅಂಡಾಣುವನ್ನು ಸ್ವಾಗತಿಸಲು ಮೆತ್ತೆಯನ್ನು ತಯಾರಿಸಲು ರಸದೂತಗಳು ಬಿಡುಗಡೆಯಾಗುತ್ತದೆ. ಈ ಹಂತ ಮುಂದಿನ ಋತುಚಕ್ರದ ದಿನದವರೆಗೂ ಮುಂದುವರೆಯುತ್ತದೆ.
- ಒಂದು ವೇಳೆ ಈ ವೇಳೆಯಲ್ಲಿ ಅಂಡಾಣು ಫಲಿತಗೊಂಡರೆ, ಅಂದರೆ ವೀರ್ಯಾಣುವಿನೊಂದಿಗೆ ಮಿಲನಗೊಂಡರೆ ಗರ್ಭಾವಸ್ಥೆಯ ದಿನಗಳು ಪ್ರಾರಂಭವಾಗುತ್ತವೆ. ಆಗದೇ ಇದ್ದರೆ ಈ ಅಂಡಾಣು ಋತುಚಕ್ರದ ದಿನ ಪೂರ್ಣವಾದ ಬಳಿಕ ರಕ್ತಸ್ರಾವದ ಮೂಲಕ ದೇಹದಿಂದ ವಿಸರ್ಜಿಸಲ್ಪಡುತ್ತದೆ.
- ಸ್ಟೆರಾಯ್ಡ್ ಅಲ್ಲದ ಉರಿಯೂತ ನಿವಾರಕ ಔಷಧಿಗಳ ದೀರ್ಘಕಾಲೀನ ಬಳಕೆ (ಉದಾಹರಣೆಗೆ Advil ಅಥವಾ Motrin)
- ಕೆಲವು ಮಾನಸಿಕ ಉದ್ವೇಗ ನಿವಾರಕ ಔಷಧಿಗಳು
- ಗಾಂಜಾ
- ಕೊಕೇನ್
- ನಿರ್ಮಾತೃರು ನೀಡಿರುವ ಸೂಚನೆಗಳನ್ನು ಸರಿಯಾಗಿ ಪಾಲಿಸಿ
- ಮೂತ್ರ ಅತಿ ಹೆಚ್ಚು ಸಾಂದ್ರತೆ ಇದ್ದಾಗಲೇ ಪರೀಕ್ಷೆಗೆ ಬಳಸಿ. ಬೆಳಿಗ್ಗೆದ್ದ ಬಳಿಕ ಮೊದಲ ಮೂತ್ರವಿಸರ್ಜನೆ ಅತ್ಯಂತ ಸೂಕ್ತ.
- ಅಕಾಲಿಕ ಅಂಡಾಶಯದ ವೈಫಲ್ಯ
- ಹೈಪರ್ಪ್ರೊಲ್ಯಾಕ್ಟಿನೆಮಿಯಾ (hyperprolactinemia), ಬಾಣಂತನದ ಅವಧಿಯಲ್ಲಿ ದೇಹವು ಹೆಚ್ಚು ಪ್ರೊಲ್ಯಾಕ್ಟಿನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಅಂಡೋತ್ಪತ್ತಿಯನ್ನು ತಡೆಯುತ್ತದೆ
- ನಿಮ್ಮ ಪಿಟ್ಯುಟರಿ ಗ್ರಂಥಿಯ ಮೇಲೆ ಬೆಳೆದಿರುವ ಸಾಮಾನ್ಯವಾದ ಕ್ಯಾನ್ಸರ್ ರಹಿತ ಗೆಡ್ಡೆ
- ಹೈಪೋಥೈರಾಯ್ಡಿಸಮ್
- ಪಿಕೋಸ್ ಕಾಯಿಲ
- ನಿಮ್ಮ ಮಾಸಿಕ ಋತುಚಕ್ರದ ಅವಧಿ 21 ದಿನಗಳಿಗಿಂತ ಕಡಿಮೆ ಅಥವಾ 35 ದಿನಗಳಿಗಿಂತ ಹೆಚ್ಚು ಅಂತರದಲ್ಲಿದ್ದರೆ.
- ನಿಮ್ಮ ಮಾಸಿಕ ಋತುಚಕ್ರದ ಅವಧಿ 90 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಇಲ್ಲದೇ ಇದ್ದರೆ.
- ನಿಮ್ಮ ಮಾಸಿಕ ಋತುಚಕ್ರದ ಅವಧಿ ಇದ್ದಕ್ಕಿದ್ದಂತೆ ಹೆಚ್ಚು ಕಡಿಮೆಯಾಗಿದ್ದರೆ.
- ನಿಮಗೆ ಭಾರೀ ರಕ್ತಸ್ರಾವ ಎದುರಾದರೆ (ನೀವು ಪ್ರತಿ ಗಂಟೆಗೊಮ್ಮೆ ಅಥವಾ ಕೊಂಚ ಹೆಚ್ಚಿನ ಅವಧಿಯಲ್ಲಿ ಹಲವಾರು ಬಾರಿ ಟ್ಯಾಂಪೂನ್ ಅಥವಾ ಮೆತ್ತೆ (ಪ್ಯಾಡ್) ಬದಲಿಸುತ್ತಿದ್ದರೆ.
- ನಿಮ್ಮ ಮಾಸಿಕ ಋತುಚಕ್ರದ ಅವಧಿಯಲ್ಲಿ ನಿಮಗೆ ತೀವ್ರ ಅಥವಾ ಅಸಹಜ ನೋವು ಇದ್ದರೆ
- ನಿಮ್ಮ ಮಾಸಿಕ ಋತುಚಕ್ರದ ಅವಧಿಯ ಬಗ್ಗೆ ಅಥವಾ ಗರ್ಭಧರಿಸಲು ನಿಮ್ಮ ಅಸಮರ್ಥತೆ ಇರುವ ಬಗ್ಗೆ ಕಾಳಜಿ ಇದ್ದರೆ.
- clomiphene (Clomid)
- letrozole (Femara)
- human chorionic gonadotropins (Pregnyl, Novarel)
- ನಿಮ್ಮ ವ್ಯಾಯಾಮವನ್ನು ಅತಿ ಎನಿಸುವಷ್ಟು ಮಾಡದಿರಿ. ಅತಿಯಾದ ವ್ಯಾಯಾಮಗಳು ಅಂಡೋತ್ಪತ್ತಿಯ ಮೇಲೆ ಪ್ರಭಾವ ಬೀರುತ್ತವೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಆದರೆ ಒಂದು ವೇಳೆ ನೀವು ಸ್ಥೂಲಕಾಯ ಹೊಂದಿದ್ದರೆ ನಿಮ್ಮ ದೇಹದ ತೂಕಕ್ಕೆ ಮತ್ತು ಆರೋಗ್ಯಕ್ಕೆ ಸಮರ್ಪಕವಾದಷ್ಟು ವ್ಯಾಯಮವನ್ನು ಮಾತ್ರ ನೀವು ಮಾಡಲೇಬೇಕು.
- ಧೂಮಪಾನ ಅಥವ ಪರೋಕ್ಷ ಧೂಮಪಾನದಿಂದ ದೂರವಿರಿ. ಸಿಗರೇಟಿನ ಧೂಮದಲ್ಲಿರುವ ವಿಷಕಾರಿ ವಸ್ತುಗಳು ನಿಮ್ಮ ಅಂಡಾಣುವಿನ ಗುಣಮಟ್ಟವನ್ನು ಕಡಿಮೆಗೊಳಿಸುತ್ತದೆ.
- ಭೌತಿಕವಾಗಲೀ, ಭಾವನಾತ್ಮಕವಾಗಲೀ, ಕೆಲಸದ ಕಾರಣಗಳಾಗಲಿ, ಮಾನಸಿಕ ಒತ್ತಡಕ್ಕೆ ಒಳಗಾಗದಿರಿ.
- ತಡೆಯೊಡ್ಡುವ ಸುಲಭ ಗರ್ಭನಿರೋಧಕಳನ್ನೇ, ಉದಾಹರಣೆಗೆ ಕಾಂಡಮ್ಮುಗಳನ್ನೇ ಉಪಯೋಗಿಸಿ. ಇದರಿಂದ ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು. ಈ ಕಾಯಿಲೆಗಳು ಸಹಾ ಫಲತವತ್ತತೆಯ ಮೇಲೆ ಪ್ರಭಾವ ಬೀರಬಹುದು. ಗರ್ಭನಿರೋಧಕ ಗುಳಿಗೆಗಳು ಸರ್ವಥಾ ಬೇಡ.
ಋತುಚಕ್ರ ಎಲ್ಲಾ ಮಹಿಳೆಯರಲ್ಲಿ ಏಕಪ್ರಕಾರವಾಗಿರುವುದಿಲ್ಲ. ಆರೋಗ್ಯಕರ ಋತುಚಕ್ರ ಇಪ್ಪತ್ತೆಂಟು ದಿನಗಳ ಅವಧಿಯದ್ದಾಗಿರುತ್ತದೆ ಹಾಗೂ ಅಂಡೋತ್ಪತ್ತಿ ಸಾಮಾನ್ಯವಾಗಿ ಹದಿನಾಲ್ಕನೆಯ ದಿನ ಸಂಭವಿಸುತ್ತದೆ.
ಆದರೆ ಎಲ್ಲ ಮಹಿಳೆಯರಲ್ಲಿ ಹೀಗೇ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಇನ್ನೂ ಹೆಚ್ಚಿನ ದಿನ ತೆಗೆದುಕೊಳ್ಳಬಹುದು ಹಾಗೂ ಅಂಡೋತ್ಪತ್ತಿಯ ದಿನವೂ ಕೆಲ ದಿನ ತಡವಾಗಿಯೂ ಆಗಬಹುದು.
ಹದಿನಾಲ್ಕನೆಯ ದಿನಕ್ಕೂ ಮೊದಲು ಬಿಡುಗಡೆಯಾಗುವ ಸಂಭವ ಅತಿ ಕಡಿಮೆ. ತಡವಾಗಿ ಆಗುವ ಅಂಡೋತ್ಪತ್ತಿಯಿಂದ ಗರ್ಭಧಾರಣೆಯ ಸಾಧ್ಯತೆ ಸಾಮಾನ್ಯ ದಿನಕ್ಕೆ ಬಿಡುಗಡೆಯಾದ ಅಂಡಾಣುವಿಗಿಂತಲೂ ಕಡಿಮೆ ಇರುತ್ತದೆಯೇ ಹೊರತು ಆಗುವುದೇ ಇಲ್ಲ ಎನ್ನಲು ಸಾಧ್ಯವಿಲ್ಲ.
ಸರಿಯಾದ ಸಮಯದ ಪಾಲನೆ ಮತ್ತು ಸೂಕ್ತ ಕ್ರಮಗಳಿಂದ ಈ ಮಹಿಳೆಯರಿಗೂ ಗರ್ಭ ಧರಿಸಲು ಸಾಧ್ಯ. ಈ ತೊಂದರೆಯ ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಅರಿಯೋಣ:

ತಡವಾಗಿ ಆಗುವ ಅಂಡೋತ್ಪತ್ತಿ ಗೆ ಕಾರಣಗಳೇನು
ಇದನ್ನು ಉತ್ತರಿಸಲು ಕೆಲವು ಮಾಹಿತಿಗಳನ್ನು ಅರಿತಿರುವುದು ಅಗತ್ಯ. ಮೊದಲಿಗೆ ಮಾಸಿಕ ಋತುಚಕ್ರ. ಮಹಿಳೆಯ ಮಾಸಿಕ ಋತುಚಕ್ರವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಇವುಗಳೆಂದರೆ:

ಮೂರನೆಯ ಹಂತವೇ ಮುಖ್ಯ
ಗರ್ಭಧಾರಣೆಗೆ ಮೂರನೆಯ ಹಂತವೇ ಅತ್ಯಂತ ಮುಖ್ಯವಾಗಿದೆ. ಅಂಡಾಣು ಬಿಡುಗಡೆಯಾದ ಬಳಿಕ ಈ ಹಂತ ಮುಂದಿನ ಸುಮಾರು ಹದಿನಾಲ್ಕು ದಿನಗಳ ವರೆಗೆ ಇರುತ್ತದೆ. ಮಹಿಳೆಯ ಆರೋಗ್ಯವನ್ನು ಅನುಸರಿಸಿ ಇದು ಹತ್ತರಿಂದ ಹದಿನಾರು ದಿನಗಳವರೆಗೂ ಇರಬಹುದು. ಒಂದು ವೇಳೆ ಮೊದಲ ಹಂತವೇ ಹೆಚ್ಚು ದಿನ ತೆಗೆದುಕೊಂಡರೆ ಸ್ವಾಭಾವಿಕವಾಗಿ ಮೂರನೆಯ ಹಂತದ ದಿನಗಳು ಕಡಿಮೆಯಾಗುತ್ತವೆ. ಎಷ್ಟು ತಡವಾಯಿತೋ ಅಷ್ಟೋ ಈ ಅವಧಿ ಕಡಿಮೆಯಾಗಿ ಕೆಲವು ಸಂದರ್ಭಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟಿರುತ್ತದೆ. ಇದನ್ನೇ ತಡವಾದ ಅಂಡೋತ್ಪತ್ತಿ ಎಂದು ಕರೆಯುತ್ತಾರೆ.
ಈ ಸ್ಥಿತಿಗೆ ರಸದೂತಗಳ ಅಸಮತೋಲನ ಪ್ರಮುಖ ಕಾರಣವಾಗಿದೆ. ಕೆಲವೊಮ್ಮೆ ಈ ಪರಿಣಾಮ ತಾತ್ಕಾಲಿಕವಾಗಿದ್ದರೆ ಕೆಲವು ಸಂದರ್ಭಗಳಲ್ಲಿ ಇವು ಕಾರಣವನ್ನು ಅನುಸರಿಸಿ ದೀರ್ಘಾವಧಿಯದ್ದಾಗಿರುತ್ತವೆ.

ರಸದೂತಗಳ ಅಸಮತೋಲನ ಪ್ರಮುಖ ಕಾರಣ
ಮಾನಸಿಕ ಒತ್ತಡ
ಅತಿಯಾದ ಮಾನಸಿಕ ಒತ್ತಡ, ದೈಹಿಕ ಕಾರಣಗಳಿಂದಾಗಲಿ ಅಥವಾ ಭಾವನಾತ್ಮಕ ಕಾರಣಗಳಿಂದಾಗಲಿ, ಹಲವಾರು ಬಗೆಯಲ್ಲಿ ದೇಹದ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ. ಒಂದು ಅಧ್ಯಯನದಲ್ಲಿ ಸಂಶೋಧಕರಿಗೆ ಚೀನಾ ದೇಶದ ಮಹಿಳೆಯರ ಬಗ್ಗೆ ಅಚ್ಚರಿಯ ಮಾಹಿತಿ ದೊರಕಿದೆ. ಅಲ್ಲಿ ಸಂಭವಿಸಿದ 8.0 ರಿಕ್ಟರ್ ಮಾಪನದ ಭೂಕಂಪ ಸಂಭವಿಸಿದ ಬಳಿಕ ಎದುರಾದ ಭೀತಿ ಹೆಚ್ಚಿನ ಮಹಿಳೆಯರ ಋತುಚಕ್ರವನ್ನು ಏರುಪೇರುಗೊಳಿಸಿದೆ.

ಥೈರಾಯ್ಡ್ ಕಾಯಿಲೆ
ಥೈರಾಯ್ಡ್ ಗ್ರಂಥಿ ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥದ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಈ ಪಿಟ್ಯುಟರಿ ಗ್ರಂಥಿ ಮೆದುಳಿನಲ್ಲಿರುವ ಪುಟ್ಟ ಅಂಗವಾಗಿದ್ದು ಮಹಿಳೆಯ ದೇಹದಲ್ಲಿ ಅಂಡೋತ್ಪತ್ತಿಗೆ ಅಗತ್ಯವಾದ ರಸದೂತಗಳನ್ನು ಬಿಡುಗಡೆ ಮಾಡುತ್ತದೆ. ಇದಕ್ಕೆ ಪ್ರಚೋದನೆ ನೀಡಲು ಥೈರಾಯ್ಡ್ ಗ್ರಂಥಿಯ ಸ್ರವಿಕೆ ಅಗತ್ಯ. ಒಂದು ವೇಳೆ ಥೈರಾಯ್ಡ್ ಗ್ರಂಥಿ ಕಡಿಮೆ ಸ್ರವಿಕೆ ನೀಡಿದರೆ (ಹೈಪೋಥೈರಾಯ್ಡಿಸಂ) ಅಥವಾ ಅಗತ್ಯಕ್ಕೂ ಹೆಚ್ಚು ಸ್ರವಿಕೆ ನೀಡಿದರೆ (ಹೈಪರ್ ಥೈರಾಯ್ಡಿಸಂ) ಇದು ಪಿಟ್ಯುಟರಿ ಗ್ರಂಥಿಯ ಮೇಲೆ ಪ್ರಭಾವ ಬೀರುತ್ತದೆ ಹಾಗೂ ತನ್ಮೂಲಕ ಅಂಡೋತ್ಪತ್ತಿಯ ಮೇಲೂ ಪ್ರಭಾವ ಬೀರುತ್ತದೆ.

ಪಿಕೋಸ್ ಕಾಯಿಲೆ (Polycystic ovary syndrome (PCOS)
ಯಾವಾಗ ಟೆಸ್ಟಾಸ್ಟೆರೋನ್ ಎಂಬ ರಸದೂತ ಅಗತ್ಯಕ್ಕೂ ಹೆಚ್ಚು ಉತ್ಪತ್ತಿಯಾಯಿತೋ ಆಗ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಅತಿ ಹೆಚ್ಚಿನ ರಸದೂತ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗದಂತೆ ತಡೆಯುತ್ತದೆ ಹಾಗೂ ಋತುಚಕ್ರವನ್ನೂ ಬಾಧಿಸಿ ದಿನಗಳನ್ನು ಏರುಪೇರುಗೊಳಿಸುತ್ತದೆ. ಪಿಕೋಸ್ ಕಾಯಿಲೆಯ ಇದು ಪ್ರಮುಖ ಲಕ್ಷಣವಾಗಿದೆ.

ಹಾಲೂಡಿಸುವಿಕೆ
ತಾಯಿಯಲ್ಲಿ ಹಾಲಿನ ಉತ್ಪಾದನೆಗೆ ಪ್ರೊಲಾಕ್ಟಿನ್ ಎಂಬ ರಸದೂತ ಅಗತ್ಯವಾಗಿದೆ. ಈ ರಸದೂತದ ಪ್ರಭಾವವಿದ್ದಾಗ ತಾಯಿಯ ದೇಹದಲ್ಲಿ ಹಾಲಿನ ಉತ್ಪಾದನೆಗೆ ಹೆಚ್ಚಿನ ಕಾಳಜಿ ಇರುತ್ತದೆ ಹಾಗೂ ಅಂಡೋತ್ಪತ್ತಿ ಮತ್ತು ಋತುಚಕ್ರಗಳಿಗೆ ಕಡಿಮೆ ಪ್ರಾಶಸ್ತ್ಯವನ್ನು ದೇಹ ನೀಡುತ್ತದೆ. ಇದೇ ಕಾರಣಕ್ಕೆ ಹಾಲೂಡಿಸುವ ತಾಯಂದಿರಲ್ಲಿ ಋತುಚಕ್ರ ದೀರ್ಘವಾಗಿರುತ್ತದೆ. ಒಂದು ವೇಳೆ ತಾಯಿ ಅತಿ ಎನಿಸುವಷ್ಟು ಹಾಲನ್ನು ಮಗುವಿಗೆ ಕುಡಿಸುತ್ತಿದ್ದರೆ ವೈದ್ಯರು ಈ ಪ್ರಮಾಣವನ್ನು ತಗ್ಗಿಸಲು ಸಲಹೆ ಮಾಡುತ್ತಾರೆ.
ಆದರೆ, ಹಾಲೂಡಿಸುವಿಕೆಯನ್ನು ಗರ್ಭ ನಿರೋಧಕ ಕ್ರಮವನ್ನಾಗಿ ಪರಿಗಣಿಸಬಾರದು. ಸಾಮಾನ್ಯವಾಗಿ ಬಾಣಂತನದ ಅವಧಿಯಲ್ಲಿ ಮುಂದಿನ ತಿಂಗಳ ಋತುಚಕ್ರ ತಡವಾಗಿ ಆದರೂ ಸರಿ, ಅಲ್ಲಿಂದ ಎರಡು ವಾರಗಳ ಬಳಿಕ ಹೊಸ ಅಂಡೋತ್ಪತ್ತಿ ಕಾಣಿಸಿಕೊಳ್ಳಬೇಕು.

ಔಷಧಿಗಳು
ಕೆಲವು ಔಷಧಿಗಳೂ ಅಂಡೋತ್ಪತ್ತಿಯ ಸಮಯದ ಮೇಲೆ ನೇರವಾದ ಪ್ರಭಾವವನ್ನು ಉಂಟುಮಾಡುತ್ತವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:
ಒಂದು ಅಧ್ಯಯನದಲ್ಲಿ ಸಂಧಿವಾತದ ಚಿಕಿತ್ಸೆಯಾಗಿ meloxicam ಎಂಬ ಔಷಧಿಯನ್ನು ಸೇವಿಸುವ ಮಹಿಳೆಯರ ಆರೋಗ್ಯವನ್ನು ಅಭ್ಯಸಿಸಿದ ಸಂಶೋಧಕರಿಗೆ ಅಂಡಾಣು ಬಿಡುಗಡೆಯಾಗುವುದು ಸಾಮಾನ್ಯ ದಿನಕ್ಕಿಂತಲೂ ಐದು ದಿನ ತಡವಾಗಿ ಆಗಿದ್ದುದು ಕಂಡುಬಂದಿದೆ.

ಅಂಡೋತ್ಪತ್ತಿಯ ಲಕ್ಷಣಗಳೇನು?
ಅಂಡೋತ್ಪತ್ತಿಯ ದಿನವನ್ನು ಸಾಮಾನ್ಯವಾಗಿ ಋತುಚಕ್ರದ ನಟ್ಟ ನಡುವಿನ ದಿನವನ್ನಾಗಿ ಪರಿಗಣಿಸಬಹುದು. ಉದಾಹರಣೆಗೆ ಮಹಿಳೆಯೋರ್ವರ ಋತುಚಕ್ರ ಇಪ್ಪತ್ತೆಂಟು ದಿನಗಳು ಎಂದರೆ ಅಂಡೋತ್ಪತ್ತಿ ಹದಿನಾಲ್ಕನೆಯ ದಿನ ಸಂಭವಿಸುತ್ತದೆ. ಮೂವತ್ತು ಇದ್ದರೆ ಹದಿನೈದನೆಯ ದಿನ ಎಂದು ಪರಿಗಣಿಸಬಹುದು.
ಆದರೆ ಈ ಪರಿಗಣನೆಯನ್ನು ಆರೋಗ್ಯಕರ ಋತುಚಕ್ರಗಳಿಗೆ ಮಾತ್ರವೇ ಅನ್ವಯಿಸಬಹುದು. ಹಲವಾರು ಕಾರಣಗಳಿಂದ ಈ ದಿನಗಳು ತಡವಾಗಲೂಬಹುದು. ಆದ್ದರಿಂದ ಕ್ಯಾಲೆಂಡರ್ ನೋಡಿ ಈ ದಿನವನ್ನು ಖಚಿತಪಡಿಸುವುದು ಸರಿಯಾದ ಕ್ರಮವಲ್ಲ.

ವೈದ್ಯರು ಅಂಡೋತ್ಪತ್ತಿಯ ದಿನವನ್ನು ಪರಿಗಣಿಸುವ ಲಕ್ಷಣಗಳು
* ಗರ್ಭಕಂಠದ ಬಳಿ ಇರುವ ಸ್ನಿಗ್ಧ ದ್ರವದಲ್ಲಿ (cervical mucus) ಹೆಚ್ಚಳ. ಈ ಪರೀಕ್ಷೆಯನ್ನು ಮಹಿಳೆ ಸ್ವತಃ ಮಾಡಿಕೊಳ್ಳಬಹುದು. ಈ ಲೋಳೆಯನ್ನು ಬೆರಳಿನಿಂದ ಪರೀಕ್ಷಿಸಿದಾಗ ಮೊಟ್ಟೆಯ ಬಿಳಿಭಾಗದಷ್ಟು ಸ್ನಿಗ್ಧ, ಪಾರದರ್ಶಕ ಮತ್ತು ಎರಡು ಬೆರಳುಗಳನ್ನು ಮುಟ್ಟಿ ದೂರವಾಗಿಸಿದಾಗ ನಡುವೆ ದಾರದಂತೆ ಹೆಚ್ಚು ಹೊತ್ತು ಉಳಿದರೆ ಇದು ಅಂಡೋತ್ಪತ್ತಿಯ ಸಂಕೇತ ಎಂದು ಪರಿಗಣಿಸಬಹುದು. ಅಂಡೋತ್ಪತ್ತಿಯ ಸಮಯದಲ್ಲಿ ವೀರ್ಯಾಣು ಅಂಡಾಣುವಿನತ್ತ ಸಾಗಲು ನಿಸರ್ಗ ನಿರ್ಮಿಸಿರುವ ಹೆದ್ದಾರಿಯಾಗಿದ್ದು ಈ ದ್ರವದ ಮೂಲಕ ಈಜುತ್ತಾ ವೀರ್ಯಾಣುಗಳು ಮುಂದೆ ಸಾಗುತ್ತವೆ.

ದೇಹದ ವಿಶ್ರಾಂತ ತಾಪಮಾನದಲ್ಲಿ ಏರಿಕೆ
ಏನೂ ಮಾಡದೇ ಸುಮಾರು ಇರುವಾಗ ಪರಿಗಣಿಸುವ ದೇಹದ ತಾಪಮಾನವೇ ವಿಶ್ರಾಂತ ತಾಪಮಾನ. ಈ ತಾಪಮಾನವನ್ನು ನಿತ್ಯವೂ ಒಂದೇ ಸಮಯದಲ್ಲಿ ದಾಖಲಿಸುತ್ತಾ ಬಂದರೆ ಯಾವುದೋ ಒಂದು ದಿನದಲ್ಲಿ ಇದು ಕೊಂಚ ಏರಿಕೆಯಾಗುವುದನ್ನು ಕಾಣಬಹುದು. ಏರಿಕೆಯಾದ ತಾಪಮಾನ ಮುಂದಿನ ದಿನಗಳಲ್ಲಿ ಅಷ್ಟೇ ಇದ್ದರೆ ಇದು ಅಂಡೋತ್ಪತ್ತಿಯಾಗಿದೆ ಎಂದು ಪರಿಗಣಿಸಬಹುದಾದ ಲಕ್ಷಣವಾಗಿದೆ. ಈ ತಾಪಮಾನವನ್ನು ನಿತ್ಯವೂ ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆ ಎದ್ದ ತಕ್ಷಣ ತೆಗೆದುಕೊಳ್ಳಬೇಕು. ಹೆಚ್ಚಳ ಎಂದರೆ ಒಂದು ಅಥವಾ ಎರಡು ಡಿಗ್ರಿ ಫ್ಯಾರನ್ ಹೀಟ್ ಅಷ್ಟೇ, ತೀರಾ ಎನಿಸುವಷ್ಟಿರುವುದಿಲ್ಲ. ಹಾಗಾಗಿ ಈ ಬದಲಾವಣೆ ಅತಿ ಸೂಕ್ಷ್ಮವಾಗಿದ್ದು ಇತರ ಕಾರಣದಿಂದ ದೇಹದ ತಾಪಮಾನ ಏರಿದ್ದರೆ ಇದನ್ನು ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ.

ಕೆಳಹೊಟ್ಟೆ ಅಥವಾ ಪಕ್ಕದ ಭಾಗದಲ್ಲಿ ನೋವು
ಕೆಳಹೊಟ್ಟೆಯ ನಡುವಿನಲ್ಲಿ ಅಥವಾ ಪಕ್ಕದ ಭಾಗದಲ್ಲಿ ಕೊಂಚ ನೋವು ಕಾಣಿಸಿಕೊಳ್ಳುವುದು
ಈ ಸ್ಥಿತಿಗೆ mittelschmerz ಎಂದೂ ಕರೆಯುತ್ತಾರೆ. ಆಗಾಗ ಕೆಳಹೊಟ್ಟೆಯಲ್ಲಿ ಅಥವಾ ಅಕ್ಕ ಪಕ್ಕದ ಭಾಗದಲ್ಲಿ ನೋವಾಗುತ್ತದೆ ಹಾಗೂ ಅಲ್ಪ ಪ್ರಮಾಣದ ರಕ್ತಸ್ರಾವವೂ ಕಂಡುಬರಬಹುದು. ಇದು ಸಹಾ ಅಂಡೋತ್ಪತ್ತಿಯ ಲಕ್ಷಣವಾಗಿದೆ.

ಅಂಡೋತ್ಪತ್ತಿ ಖಚಿತಪಡಿಸುವ ಕಿಟ್‌ಗಳು:
ಮಾರುಕಟ್ಟೆಯಲ್ಲಿ ಈ ಉಪಕರಣ ಲಭ್ಯವಿದ್ದು ಅಂಡೋತ್ಪತ್ತಿಯ ಬಗ್ಗೆ ಇನ್ನೂ ಖಚಿತ ಮಾಹಿತಿ ನೀಡುತ್ತದೆ. ಇದರಲ್ಲಿ ಕೆಲವು ಪಟ್ಟಿಗಳಿದ್ದು ಇವುಗಳನ್ನು ಮೂತ್ರದಲ್ಲಿ ಮುಳುಗಿಸಿ ನೋಡಿದಾಗ ಬದಲಾಗುವ ಬಣ್ಣವನ್ನು ಹೋಲಿಸಿ ನೋಡಲು ಮಾಹಿತಿ ಪುಸ್ತಕವನ್ನು ನೀಡಲಾಗಿರುತ್ತದೆ.
ಇದರಿಂದಲೂ ಹೆಚ್ಚಿನ ಮಾಹಿತಿ ಪಡೆಯಬಹುದು. ಆದರೆ ಸಾಮಾನ್ಯವಾಗಿ ಈ ಉಪಕರಣ ಕೊಂಚ ದುಬಾರಿಯಾಗಿದ್ದು ಎಲ್ಲರ ಕೈಗೆಟುಕಲು ಸಾಧ್ಯವಿಲ್ಲ. ಅಲ್ಲದೇ ಋತುಚಕ್ರ ಅಸಮರ್ಪಕವಾಗಿರುವ ಅಥವಾ ತಡವಾಗಿ ಆಗುವಂತಹದ್ದಿದ್ದರೆ ಹಲವಾರು ಕಿಟ್ ಗಳನ್ನು ಕೊಳ್ಳಬೇಕಾಗಿ ಬರಬಹುದು.
ಇದು ವೈದ್ಯಕೀಯ ವೆಚ್ಚವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಉದಾಹರಣೆಗೆ, ನಿಮ್ಮ ಚಕ್ರವು ಸಾಮಾನ್ಯವಾಗಿ 27 ರಿಂದ 35 ದಿನಗಳವರೆಗೆ ಇದ್ದರೆ, ನೀವು 12 ಅಥವಾ 13 ನೇ ದಿನದಂದು ಪರೀಕ್ಷೆಯನ್ನು ಪ್ರಾರಂಭಿಸಬೇಕು ಮತ್ತು ಅಂಡೋತ್ಪತ್ತಿ ಪತ್ತೆಯಾಗುವವರೆಗೆ ಪರೀಕ್ಷೆಯನ್ನು ಮುಂದುವರಿಸಬೇಕು, ಅದು 21 ನೇ ದಿನದವರೆಗೂ ಆಗದಿರಬಹುದು.
ಐದು ದಿನಗಳ ಪರೀಕ್ಷೆಯಲ್ಲಿ 80 ಶೇಖಡಾ ಖಚಿತತೆಯ ಸಾದ್ಯತೆ ಇದ್ದರೆ 10 ದಿನಗಳ ಪರೀಕ್ಷೆಯಲ್ಲಿ 95 ಶೇಖಡಾ ಖಚಿತತೆ ದೊರಕಬಹುದು.
ಈ ನಿಖರತೆಯನ್ನು ಹೆಚ್ಚಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕು:

ತಡವಾದ ಅಂಡೋತ್ಪತ್ತಿ ಫಲವತ್ತತೆ ಮತ್ತು ಗರ್ಭಧಾರಣೆಯನ್ನು ಹೇಗೆ ಬಾಧಿಸುತ್ತದೆ?
ಗರ್ಭಧಾರಣೆಯ ಅತ್ಯಂತ ಹೆಚ್ಚಿನ ಸಫಲತೆ ಇರುವುದು ಅಂಡೋತ್ಪತ್ತಿಯಾದ ಮುಂದಿನ ಹನ್ನೆರಡರಿಂದ ಇಪ್ಪತ್ತ ನಾಲ್ಕು ಘಂಟೆಗಳ ಒಳಗಾಗಿ ವೀರ್ಯಾಣುವಿನೊಂದಿಗೆ ಮಿಲನವಾದಾಗ. ಹಾಗಾಗಿ, ಅಂಡೋತ್ಪತ್ತಿ ಅನಿಯಮಿತ ಅಥವಾ ತಡವಾಗಿ ಆಗುತ್ತಿದ್ದರೆ ಈ ದಿನವನ್ನು ಖಚಿತವಾಗಿ ಹೇಳುವುದು ತುಂಬಾ ಕಷ್ಟವಾಗುತ್ತದೆ.
ಆದರೆ ಇದರ ಅರ್ಥ ಈ ತೊಂದರೆ ಇರುವ ಮಹಿಳೆಯರು ಗರ್ಭ ಧರಿಸಲು ಸಾಧ್ಯವಿಲ್ಲವೆಂದಲ್ಲ, ಫಲವತ್ತತೆಯ ದಿನವನ್ನು ಖಚಿತಪಡಿಸುವುದು ಕೊಂಚ ಕಷ್ಟವಾಗಬಹುದು.

ತಡವಾದ ಅಂಡೋತ್ಪತ್ತಿ ಫಲವತ್ತತೆ ಮತ್ತು ಗರ್ಭಧಾರಣೆಯನ್ನು ಹೇಗೆ ಬಾಧಿಸುತ್ತದೆ?
ಹಾಗಾಗಿ, ಈ ತೊಂದರೆ ಇರುವ ಮಹಿಳೆಯರು ತಾವಾಗಿಯೇ ಈ ದಿನವನ್ನು ಖಚಿತ ಪಡಿಸಿಕೊಳ್ಳುವ ಬದಲು ತಜ್ಞ ವೈದ್ಯರ ನೆರವನ್ನು ಪಡೆದುಕೊಳ್ಳಬೇಕು. ವೈದ್ಯರು ನಿಮ್ಮ ಆರೋಗ್ಯದ ಇತರ ಮಾಹಿತಿಗಳನ್ನೂ ಪಡೆದುಕೊಂಡು ನಿಮಗೆ ಅಗತ್ಯ ಸೂಚನೆಗಳನ್ನು ನೀಡುತ್ತಾರೆ. ಮಾಸಿಕ ಋತುಚಕ್ರವನ್ನು ಬಾಧಿಸುವ ಇತರ ವೈದ್ಯಕೀಯ ಕಾರಣಗಳು ಎಂದರೆ:
ಒಂದು ವೇಳೆ ನಿಮಗೆ ತಡವಾಗಿ ಆಗುವ ಅಂಡೋತ್ಪತ್ತಿಯ ತೊಂದರೆ ಇದ್ದರೆ ನಿಮ್ಮ ವೈದ್ಯರಲ್ಲಿ ಸಕಲ ಮಾಹಿತಿಗಳನ್ನು ನೀಡಬೇಕು ಹಾಗೂ ನೀವು ಅಂಡೋತ್ಪತ್ತಿಯನ್ನು ಪ್ರಚೋದಿಸುವ clomiphene ಮತ್ತು letrozole ಔಷಧಿಗಳನ್ನು ಸೇವಿಸುತ್ತಿದ್ದರೆ ಈ ಮಾಹಿತಿಗಳನ್ನೂ ಒದಗಿಸಬೇಕು.
ಒಂದು ವೇಳೆ ಇತರ ಕಾಯಿಲೆಯ ಪ್ರಭಾವದಿಂದ ಅಂಡೋತ್ಪತ್ತಿ ತಡವಾಗುತ್ತಿದ್ದರೆ ಅಥವಾ ಕೆಲವು ಔಷಧಿಗಳ ಅಡ್ಡಪರಿಣಾಮದಿಂದ ಆಗಿದ್ದರೆ ಈ ಕಾರಣಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕವೂ ಫಲವತ್ತತೆ ಸ್ವಾಭಾವಿಕವಾಗಿಯೇ ಮರಳಿ ದೊರಕಬಹುದು.

ತಡವಾಗಿ ಆಗುವ ಅಂಡೋತ್ಪತ್ತಿ ಮಾಸಿಕ ಚಕ್ರದ ಮೇಲೆ ಪ್ರಭಾವ ಬೀರುತ್ತದೆಯೇ?
ಒಂದು ವೇಳೆ ನಿಮಗೆ ತಡವಾಗಿ ಆಗುವ ಅಂಡೋತ್ಪತ್ತಿಯ ತೊಂದರೆ ಇದ್ದರೆ ನಿಮಗೆ ಮಾಸಿಕ ದಿನಗಳಲ್ಲಿ ಅತಿ ಎನಿಸುವಷ್ಟು ರಕ್ತಸ್ರಾವ ಕಂಡುಬರಬಹುದು. ಋತುಚಕ್ರದ ಮೊದಲ ಅರ್ಧದಲ್ಲಿ ಈಸ್ಟ್ರೋಜೆನ್ ಸ್ರವಿಕೆ ಗರಿಷ್ಟವಾಗಿರುತ್ತದೆ.
ಈ ಹಂತದಲ್ಲಿ ಗರ್ಭಾಶಯದ ಒಳಗೋಡೆಗಳು ಅತಿಯಾಗಿ ದಪ್ಪನಾಗುತ್ತವೆ ಹಾಗೂ ರಕ್ತವನ್ನು ಹೀರಿಕೊಂಡಿರುತ್ತವೆ. ಅಂಡೋತ್ಪತ್ತಿಯಾಗುವಾಗ ಪ್ರೊಜೆಸ್ಟರಾನ್ ಎಂಬ ರಸದೂತ ಬಿಡುಗಡೆಯಾಗುತ್ತದೆ ಹಾಗೂ ಇವು ಗರ್ಭಾಶಯದ ಒಳಗೋಡೆಗಳಿಗೆ ಪ್ರಚೋದನೆ ನೀಡಿ ಫಲಿತಗೊಂಡ ಅಂಡಾಣುವನ್ನು ಸ್ವಾಗತಿಸಲು ಸಕಲ ತಯಾರಿ ಮಾಡುವಂತೆ ಸೂಚನೆ ನೀಡುತ್ತದೆ.
ಈಗ ಅಂಡೋತ್ಪತ್ತಿ ತಡವಾದರೆ ಅಥವಾ ಆಗದೇ ಇದ್ದರೆ, ಈಸ್ಟ್ರೋಜೆನ್ ಸ್ರವಿಕೆ ಮುಂದುವರೆಯುತ್ತದೆ ಹಾಗೂ ಇದು ಮುಂದುವರೆದಷ್ಟೂ ಗರ್ಭಾಶಯದ ಒಳಭಾಗದ ಪದರವೂ ರಕ್ತವನ್ನು ಹೀರುತ್ತಾ ಹೀರುತ್ತಾ ಇನ್ನಷ್ಟು ಬೆಳೆಯುತ್ತದೆ.
ಒಂದು ಹಂತದಲ್ಲಿ ಇದು ಇನ್ನಷ್ಟು ಬೆಳೆಯಲಾಗದಷ್ಟು ಬೆಳವಣಿಗೆ ಪಡೆದು ಒತ್ತಡ ತಾಳಲಾರದೇ ಕಳಚಿ ಬೀಳುತ್ತದೆ. ಅತಿ ಎನಿಸುವಷ್ಟು ರಕ್ತಸ್ರಾವಕ್ಕೆ ಇದೇ ಕಾರಣ. ಹಾಗೂ ಈ ಪದರದ ತುಣುಕುಗಳೂ ದಪ್ಪ ತುಂಡುಗಳ ರೂಪದಲ್ಲಿ ದೇಹದಿಂದ ಹೊರಬೀಳುತ್ತವೆ.

ನೀವು ಯಾವಾಗ ವೈದ್ಯಕೀಯ ನೆರವನ್ನು ಪಡೆಯಬೇಕು?
ಈ ಕೆಳಗಿನ ಯಾವುದೇ ಲಕ್ಷಣ ಕಂಡುಬಂದರೂ ನೀವು ವೈದ್ಯರನ್ನು ಕಾಣುವುದು ಅವಶ್ಯವಾಗುತ್ತದೆ:

ತಡವಾಗಿ ಆಗುವ ಅಂಡೋತ್ಪತ್ತಿಗೆ ಯಾವ ಚಿಕಿತ್ಸೆಗಳು ಲಭ್ಯವಿವೆ?
ಒಂದು ವೇಳೆ ನಿಮಗೆ ಪಿಕೋಸ್, ಹೈಪೋ ಥೈರಾಯ್ಡಿಸಂ ಅಥವಾ ಬೇರಾವುದೋ ತೊಂದರೆ ಇದ್ದು ಇದರ ಬಗ್ಗೆ ನಿಮಗೆ ಅರಿವೇ ಇಲ್ಲದಿದ್ದರೆ ಇವು ನಿಮ್ಮ ಗರ್ಭಧಾರಣೆಯನ್ನು ಅಸಾಧ್ಯವಾಗಿಸುತ್ತಿದ್ದಿರಬಹುದು.
ಹಾಗಾಗಿ ಈ ತೊಂದರೆಗಳಿಗೆ ಚಿಕಿತ್ಸೆ ಪಡೆಯುವುದು ಮೊದಲ ಅಗತ್ಯವಾಗಿರುತ್ತದೆ. ಒಂದು ವೇಳೆ ವೈದ್ಯರಿಗೆ ಇವು ಅಥವಾ ಬೇರಾವುದೇ ಕಾರಣಗಳು ಕಂಡುಬರದೇ ಇದ್ದಲ್ಲಿ ಅಂಡೋತ್ಪತ್ತಿಯನ್ನು ಕೃತಕವಾಗಿ ಪ್ರಚೋದಿಸುವ ಔಷಧಿಗಳನ್ನು ನೀಡಬಹುದು. ಇವುಗಳಲ್ಲಿ ಪ್ರಮುಖವಾದ ಔಷಧಿಗಳೆಂದರೆ:

ಮಾಸಿಕ ಋತುಚಕ್ರ ಮತ್ತು ಸಂತಾನೋತ್ಪತ್ತಿಯ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಕೆಲವು ಸಲಹೆಗಳು:

ತಜ್ಞರ ಸಲಹೆ ಅತ್ಯಗತ್ಯ
ತಡವಾಗಿ ಆಗುವ ಅಂಡೋತ್ಪತ್ತಿಯ ಸ್ಥಿತಿ ಯಾವುದೇ ಮಹಿಳೆಗೆ ರಜೋನಿವೃತ್ತಿ ಎದುರಾಗುವವರೆಗೂ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ಹಲವು ಸಂದರ್ಭಗಳಲ್ಲಿ ಇದು ತಾತ್ಕಾಲಿಕವಾಗಿ ಕಾಣಿಸಿಕೊಳ್ಳಬಹುದು ಅಥವಾ ಬೇರಾವುದೋ ಕಾಯಿಲೆಯ ಪ್ರಭಾವದಿಂದಲೂ ಎದುರಾಗಬಹುದು.
ಈ ತೊಂದರೆಯ ಇದ್ದರೆ ಬಗ್ಗೆ ನೀವಾಗಿಯೇ ಯಾವುದೇ ಕ್ರಮ ಕೈಗೊಳ್ಳದೇ ತಜ್ಞರ ಸಲಹೆ ಪಡೆಯಿರಿ.
ಒಂದು ವೇಳೆ ಮಾಸಿಕ ದಿನಗಳು ಅನಿಯಮಿತವಾಗಿದ್ದರೆ, ಅತಿಯಾದ ರಕ್ತಸ್ರಾವ ಇದ್ದರೆ ಅಥವಾ ಯಾವುದೇ ತೊಂದರೆ ಇರುವ ಲಕ್ಷಣಗಳು ಇಲ್ಲದೇ ಇದ್ದರೂ ಗರ್ಭಧಾರಣೆ ಸಾಧ್ಯವಾಗದೇ ಇದ್ದಾಗಲೂ ವೈದ್ಯರ ನೆರವನ್ನು ಪಡೆಯಬೇಕು. ಇಂದು ಅಂಡೋತ್ಪತ್ತಿಯ ಸಾಧ್ಯತೆಯನ್ನು ಹೆಚ್ಚಿಸುವ ಔಷಧಿಗಳು ಸುಲಭವಾಗಿ ಲಭ್ಯವಿವೆ ಹಾಗೂ ನಿಮ್ಮ ಗರ್ಭಧಾರಣೆಯ ಗುರಿಯನ್ನು ಸಾಧಿಸಲು ನೆರವಾಗುತ್ತವೆ.



Click it and Unblock the Notifications











