ಹೆರಿಗೆ ವೇಳೆ ಕಾಡುವ ಯೋನಿ ಹರಿಯುವಿಕೆ ಸಮಸ್ಯೆ.. ಇದಕ್ಕೆ ಆರೈಕೆ ಹೀಗಿರಲಿ

By Hemanth

ಭೂಮಿ ಮೇಲೆ ಮತ್ತೊಂದು ಜೀವಕ್ಕೆ ಜೀವ ನೀಡುವಂತಹ ಸಾಮರ್ಥ್ಯವಿರುವುದು ಅದು ಹೆಣ್ಣಿಗೆ ಮಾತ್ರ. ಪ್ರಕೃತಿ ರೂಪಿಸಿರುವ ಹೆಣ್ಣು ಜೀವವು ಈ ಭೂಮಿ ಮೇಲೆ ಜೀವಸಂಕುಲಗಳ ಬೆಳವಣಿಗೆಗೆ ಕಾರಣವಾಗಿದೆ. ಇದಕ್ಕೆ ಮನುಷ್ಯ ಕೂಡ ಹೊರತಾಗಿಲ್ಲ. ಮಹಿಳೆಯು ಒಂದು ಮಗುವಿಗೆ ಜನ್ಮ ನೀಡಬೇಕಾದರೆ ಆಕೆ ಸಹಿಸುವ ನೋವು ಅಪರಿಮಿತ. ಗರ್ಭಧಾರಣೆ, ಅದೇ ರೀತಿ ಹೆರಿಗೆ ವೇಳೆ ಮಹಿಳೆಯು ಹಲವಾರು ರೀತಿಯ ದೈಹಿಕ ಬದಲಾವಣೆಗಳಿಗೆ ಕಾರಣಳಾಗುವಳು. ಆದರೂ ತನ್ನ ಮಗುವಿನ ಮುಖವನ್ನು ನೋಡಿ ಎಲ್ಲಾ ನೋವು, ಸಂಕಷ್ಟವನ್ನು ಮರೆಯುವಳು.

ಅದರಲ್ಲೂ ಇತ್ತೀಚೆಗೆ ಸಾಮಾನ್ಯ ಹೆರಿಗೆಗಿಂತ ಹೆಚ್ಚಾಗಿ ಸಿಸೇರಿಯನ್ ಆಗುತ್ತಲಿದೆ. ಈ ಎರಡು ವಿಧದ ಹೆರಿಗೆಯಲ್ಲಿ ನೋವು ಮಾತ್ರ ಸಮಾನವೆನ್ನಬಹುದು. ಸಿಸೇರಿಯನ್ ನಲ್ಲಿ ಹೊಟ್ಟೆ ಭಾಗದ ಗಾಯ ಮತ್ತು ಹೊಲಿಕೆಗಳಿಂದ ಚೇತರಿಸಿಕೊಳ್ಳಲು ಮಹಿಳೆಗೆ ತುಂಬಾ ಸಮಯ ಬೇಕಾಗುವುದು. ಅದೇ ಸಾಮಾನ್ಯ ಹೆರಿಗೆಯಲ್ಲಿ ಮಹಿಳೆಯ ಜನನೇಂದ್ರಿಯದ ಗಾಯಗಳು ಒಣಗಿದರೆ ಸಾಕು. ಹೆರಿಗೆ ವೇಳೆ ಗರ್ಭಕಂಠ ಮತ್ತು ಯೋನಿಯು ತುಂಬಾ ಹಿಗ್ಗಿ ಮಗು ಹೊರಬರಲು ನೆರವಾಗುವುದು. ಆದರೂ ಕೆಲವೊಂದು ಮಹಿಳೆಯರಲ್ಲಿ ಹಿಗ್ಗುವಿಕೆ ವೇಳೆ ಗಾಯ ಮತ್ತು ಯೋನಿ ಹರಿದುಹೋಗುವುದು. ಮೊದಲ ಸಲ ಮಗುವಿಗೆ ಜನ್ಮ ನೀಡುತ್ತಲಿದ್ದರೆ ಆಗ ಯೋನಿ ಹರಿಯುವುದು ಸಾಮಾನ್ಯ. ಆದರೆ ಮುಂದಿನ ಹೆರಿಗೆಗಳಲ್ಲಿ ಇಷ್ಟು ತೀವ್ರವಾಗಿರದು.

things to know about vaginal tearing

ಮಗುವಿಗೆ ಜನ್ಮ ನೀಡಿದ ವೇಳೆ ಯೋನಿ ಹರಿಯುವ ಬಗ್ಗೆ ಯಾವುದೇ ರೀತಿಯ ಚರ್ಚೆಯು ನಡೆಯುವುದಿಲ್ಲ. ಆದರೆ ತಾಯಂದಿರು ಇದನ್ನು ಅರ್ಥಮಾಡಿಕೊಂಡು, ಹೆರಿಗೆ ವೇಳೆ ಆಗುವ ಹಾನಿ ತಡೆಯಲು ಸರಿಯಾದ ಕ್ರಮ ಮತ್ತು ಪರಿಣಾಮಕಾರಿಯಾಗಿ ಅದನ್ನು ಶಮನಗೊಳಿಸುವುದನ್ನು ತಿಳಿಯಬೇಕು. ಈ ಲೇಖನದಲ್ಲಿ ನಾವಿಂದು ಯೋನಿ ಹರಿಯುವ ವಿಚಾರ ಬಗ್ಗೆ ತಿಳಿಸಿಕೊಡಲಿದ್ದೇವೆ ಮತ್ತು ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

ನಿಜವಾಗಿಯೂ ಯೋನಿ ಹರಿಯುವುದು ಎಂದರೇನು?

ನಿಜವಾಗಿಯೂ ಯೋನಿ ಹರಿಯುವುದು ಎಂದರೇನು?

ವೈದ್ಯರಲ್ಲದೆ ನೈಸರ್ಗಿಕವಾಗಿ ಯೋನಿಯ ಅಂಗಾಂಗಗಳಿಗೆ ಆಗುವಂತಹ ಗಾಯವನ್ನು ಯೋನಿ ಹರಿತ ಎಂದು ಕರೆಯಲಾಗುವುದು. ಇದು ಸಾಮಾನ್ಯವಾಗಿ ಗುದನಾಳ ಅಥವಾ ಗುದನಾಳ ಮತ್ತು ಯೋನಿಯ ನಡುವೆ ಇರುವ ಜಾಗದಲ್ಲಿ ನಡೆಯುವುದು. ಮಗುವಿನ ತಲೆಯು ಕಲ್ಲಂಗಡಿಯಷ್ಟು ಗಾತ್ರದ್ದಾಗಿರುವುದು ಮತ್ತು ಇದು ಹೊರಬರುವಷ್ಟು ಯೋನಿಯು ಹಿಗ್ಗಬೇಕು. ಯೋನಿ ಹರಿಯದಂತೆ ವೈದ್ಯರು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುವರು. ಆದರೆ ಯೋನಿ ಹರಿಯುವ ಸಾಧ್ಯತೆಯು ಇರುವುದು.

ಯೋನಿ ಹರಿಯುವುದು ಸಾಮಾನ್ಯವೇ?

ಯೋನಿ ಹರಿಯುವುದು ಸಾಮಾನ್ಯವೇ?

ಮೊದಲ ಸಲ ಹೆರಿಗೆಯಾಗುವಂತೆ ಮಹಿಳೆಯರಲ್ಲಿ ಯೋನಿ ಹರಿಯುವುದು ಒಂದಲ್ಲಾ ಒಂದು ಕಾರಣಕ್ಕೆ ಕಂಡುಬರುವುದು. ಹೆಚ್ಚು ಹೆರಿಗೆಯಾದ ಮಹಿಳೆಯರಿಗೆ ಹೋಲಿಸಿದರೆ ಮೊದಲ ಸಲ ಹೆರಿಗೆಯಾಗುವ ಮಹಿಳೆಯ ಅಂಗಾಂಶಗಳು ಕಡಿಮೆ ಸ್ಥಿತಿಸ್ಥಾಪಕತ್ವ ಹೊಂದಿರುವುದು.

ಯೋನಿ ಹರಿಯುವುದು ಅಥವಾ ಸೀಳುವ ಕೆಲವು ಸಂದರ್ಭಗಳು

*ತಾಯಿಯು ಅತಿಯಾದ ತೂಕ ಹೊಂದಿದ್ದರೆ

*ಸಾಮಾನ್ಯಕ್ಕಿಂತ ವೇಗವಾಗಿ ಹೆರಿಗೆ ನಡೆದರೆ...ಈ ವೇಳೆ ಯೋನಿಯ ಅಂಗಾಂಗಗಳಿಗೆ ಮಗುವಿನ ತಲೆಗೆ ಹೊಂದಿಕೊಳ್ಳಲು ಹೆಚ್ಚು ಸಮಯ ಸಿಗಲ್ಲ.

*ಮಗು ತುಂಬಾ ಕ್ಲಿಷ್ಟಕರ ಸ್ಥಿತಿಯಲ್ಲಿದ್ದರೆ, ಸಾಮಾನ್ಯ ಸ್ಥಿತಿ ದಾಟಿದ್ದರೆ ಅಥವಾ ಹೆರಿಗೆಗೆ ಕಷ್ಟವಾಗುವ ಸ್ಥಿತಿಯಲ್ಲಿದ್ದರೆ, ಆಗ ಯೋನಿಯು ಹೆಚ್ಚು ಒತ್ತಡಕ್ಕೆ ಒಳಗಾಗಬೇಕಾಗುತ್ತದೆ ಮತ್ತು ಇದರಿಂದ ಯೋನಿ ಹರಿದುಹೋಗಬಹುದು.

* ಹೆರಿಗೆಗೆ ಫೋರ್ಸ್ಪ್ಸ್ ಅಥವಾ ವ್ಯಾಕ್ಯುಮ್ ನ ನೆರವು ಪಡೆದರೆ, ಫೋರ್ಸ್ಪ್ಸ್ ಮತ್ತು ವ್ಯಾಕ್ಯುಮ್ ನ್ನು ಯೋನಿ ಭಾಗದಲ್ಲಿ ಇಡುವುದು ತುಂಬಾ ಕಠಿಣ ಮತ್ತು ಇದರಿಂದ ಯೋನಿಗೆ ಹಾನಿಯಾಗಬಹುದು.

*ಹೆರಿಗೆಗೆ ತುಂಬಾ ದೀರ್ಘ ಸಮಯ ತೆಗೆದುಕೊಂಡಿದ್ದರೆ ಆಗ ಯೋನಿಯ ಅಂಗಾಂಗಗಳು ಊದಿಕೊಳ್ಳಬಹುದು. ಊದಿಕೊಂಡ ಅಂಗಾಂಗಗಳು ಮಗು ಹೊರಬರುವಾಗ ಹೆಚ್ಚು ಸೀಳುವುದು.

ಯೋನಿ ಹರಿಯುವ ಭಿನ್ನ ವಿಧಗಳು ಯಾವುದು?

ಮಗುವಿನ ಜನನದ ವೇಳೆ ನಾಲ್ಕು ರೀತಿಯಲ್ಲಿ ಯೋನಿ ಹರಿದುಹೋಗಬಹುದು. ಇವುಗಳನ್ನು ತೀವ್ರತೆ ಮತ್ತು ಹರಿತಕ್ಕೊಳಗಾಗಿರುವ ಅಂಗಾಂಗಗಳ ಒಳಗೊಳ್ಳುವಿಕೆ ಮೇಲೆ ಅವಲಂಬಿತವಾಗಿದೆ. ಇವೆಲ್ಲವೂ ತುಂಬಾ ನೋವುಂಟು ಮಾಡುವುದು ಮತ್ತು ಇದು ಶಮನವಾಗಲು ಸಮಯ ಬೇಕಾಗುವುದು. ಕೆಲವೊಂದು ಸಲ ಇದಕ್ಕೆ ಹೊಲಿಗೆ ಕೂಡ ಹಾಕಬೇಕಾಗಿ ಬರಬಹುದು. ಆದರೆ ಹರಿತವು ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿರುವುದು.

ಮೊದಲ ದರ್ಜೆ ಸೀಳುವಿಕೆ

ಮೊದಲ ದರ್ಜೆ ಸೀಳುವಿಕೆ

ಈ ಹರಿತವು ಯೋನಿಯ ಒಳಪದರದಲ್ಲಿ ಮಾತ್ರ ನಡೆಯುವುದು. ಇಲ್ಲಿ ಸ್ನಾಯುಗಳು ಹರಿಯುವುದಿಲ್ಲ. ಆದರೂ ಹೊಲಿಗೆ ಬೇಕಾಗಬಹುದು.

ಎರಡನೇ ದರ್ಜೆ ಹರಿತ

ಮೊದಲ ಸಲ ಹೆರಿಗೆಯಾಗುವ ಮಹಿಳೆಯರಲ್ಲಿ ಹೆಚ್ಚಾಗಿ ಎರಡನೇ ದರ್ಜೆ ಹರಿತವು ಕಂಡುಬರುವುದು. ಯೋನಿಯ ಒಳಪದರ ಮತ್ತು ಅಂಗಾಂಗಗಳು ಹರಿತಕ್ಕೆ ಒಳಗಾಗುವುದು. ಇದಕ್ಕೆ ಹೊಲಿಗೆ ಬೇಕಾಗುವುದು.

ಮೂರನೇ ದರ್ಜೆ ಸೀಳುವಿಕೆ

ಈ ಹರಿತವು ಗುದದ ಸ್ನಾಯುಗಳಲ್ಲಿ ಉಂಟಾಗುವುದು. ಇದಕ್ಕೆ ತುಂಬಾ ಎಚ್ಚರಿಕೆಯಿಂದ ಹೊಲಿಗೆ ಹಾಕಬೇಕು ಮತ್ತು ಸ್ಪ್ರೀಂಚರ್ ಗೆ ಬಲ ನೀಡುವಂತಹ ಸ್ನಾಯುವಿಗೆ ಹೆಚ್ಚಿನ ಗಮನ ಅಗತ್ಯ.

ನಾಲ್ಕನೇ ದರ್ಜೆ ಹರಿತ

ಮೇಲಿನ ಮೂರು ದರ್ಜೆಯಲ್ಲಿ ಹೇಳಿರುವಂತಹ ಎಲ್ಲಾ ಅಂಗಾಂಶಗಳು ಇಲ್ಲಿ ಹರಿತಕ್ಕೆ ಒಳಗಾಗುವುದು. ಗುದನಾಳದ ಒಳಭಾಗಕ್ಕೂ ಇದು ಹೋಗಬಹುದು. ಇಂತಹ ಹರಿತಕ್ಕೆ ಹೊಲಿಗೆ ಹಾಕುವುದು ತುಂಬಾ ಕಠಿಣ ಮತ್ತು ಹಲವಾರು ಪದರಗಳನ್ನು ಇಲ್ಲಿ ಮುಚ್ಚಬೇಕಾಗುತ್ತದೆ. ಇದು ತುಂಬಾ ಅಪರೂಪದ್ದು. ಸಾಮಾನ್ಯವಾಗಿ ಮಗು ಸರಿಯಾಗಿ ಹೊರಗೆ ಬರದೆ ಇರುವಾಗ ವ್ಯಾಕ್ಯುಮ್ ಬಳಸಿದಾಗ ಹೀಗೆ ಆಗುವುದು.

ಗಾಯಗಳ ಒಣಗುವಿಕೆ

ಗಾಯಗಳ ಒಣಗುವಿಕೆ

ಮೊದಲ ಮತ್ತು ಎರಡನೇ ದರ್ಜೆಯ ಹರಿತವು ತುಂಬಾ ಸುಲಭವಾಗಿ ಒಣಗುವುದು. ಆದರೂ ಇಲ್ಲಿ ತಾಯಂದಿರಿಗೆ ನೋವು ಅಥವಾ ಕಿರಿಕಿರಿಯಾಗುವುದು. ಹೊಟ್ಟೆಯಲ್ಲಿನ ಚಲನೆ, ಕೆಮ್ಮು ಅಥವಾ ಶೀನಿದಾಗ ನೋವು ಕಂಡುಬರುವುದು. ಈ ಗಾಯಗಳು ಮಾಗಲು ಆರು ವಾರಗಳು ಬೇಕಾಗುವುದು. ಆರು ವಾರಗಳ ಬಳಿಕವೂ ಲೈಂಗಿಕ ಕ್ರಿಯೆಯು ತುಂಬಾ ಅಹಿತಕರವಾಗಿರುವುದು. ಮೂರನೇ ಹಾಗೂ ನಾಲ್ಕನೇ ದರ್ಜೆಯ ಹರಿತದ ಗಾಯಗಳು ಒಣಗಲು ಕಠಿಣವಾಗಿರುವುದು. ಮೊದಲ ತಿಂಗಳಲ್ಲಿ ಹೊಟ್ಟೆಯಲ್ಲಿನ ಚಲನೆಯು ನೋವು ಉಂಟು ಮಾಡುವುದು. ನಾರಿನಾಂಶ ಹೆಚ್ಚಾಗಿರುವ ಮತ್ತು ಮಲ ಮೃಧುಗೊಳಿಸುವ ಆಹಾರ ಸೇವಿಸಬೇಕು. ಸ್ನಾನ ಮತ್ತು ತಂಪು ನೀಡುವುದರಿಂದ ಅಹಿತಕರ ಪರಿಸ್ಥಿತಿ ತಪ್ಪಿಸಬಹುದು. ಕೆಲವು ತಿಂಗಳ ಕಾಲ ಲೈಂಗಿಕ ಕ್ರಿಯೆ ಎನ್ನುವುದು ದೂರದ ಮಾತನಾಗಿರುವುದು. ನಿಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಮಾತನಾಡಿ. ಇದು ಗರ್ಭಕೋಶ ಅಥವಾ ಶ್ರೋಣಿಯ ಪದರ ಅಥವಾ ಮೂತ್ರನಾಳದ ಸಮಸ್ಯೆಯಾಗಿರಬಹುದು.

ಎಪಿಸೊಟೊಮಿ ಒಳ್ಳೆಯದೇ?

ಯೋನಿಯನ್ನು ಹಿಗ್ಗಿಸಲು ವೈದ್ಯರು ಪಡೆಯುವಂತಹ ನೆರವು ಎಪಿಸೊಟೊಮಿ. ನಿಯಂತ್ರಿತ ಮತ್ತು ಉದ್ದೇಶಪೂರ್ವಕವಾಗಿ ಎಪಿಸೊಟೊಮಿಯಿಂದ ಆಗುವಂತಹ ಗಾಯವನ್ನು ಸರಿಪಡಿಸುವುದು ಸುಲಭ ಎಂದು ಭಾವಿಸಲಾಗಿದೆ. ಇದು ಹೆಚ್ಚಾಗಿ ಬಳಸಲಾಗುವುದಿಲ್ಲ ಮತ್ತು ಅತೀ ಅಗತ್ಯವಿದ್ದರೆ ಮಾತ್ರ ಇದನ್ನು ವೈದ್ಯರು ಬಳಸುವರು. ಈ ವಿಧಾನದಿಂದ ಆಗಿರುವಂತಹ ಗಾಯವು ಮಾಗಲು ತುಂಬಾ ದೀರ್ಘ ಸಮಯ ತೆಗೆದುಕೊಳ್ಳುತ್ತದೆ ಎಂದು ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಹೇಳಿದೆ.

ಐಸ್ ಪ್ಯಾಕ್ ಬಳಕೆ

ನಿಮ್ಮ ಜನನೇಂದ್ರೀಯವನ್ನು ತಂಪಾಗಿಡಲು ಪ್ರತೀ ಎರಡು ಗಂಟೆಗೊಮ್ಮೆ ಐಸ್ ಪ್ಯಾಕ್ ಇಡಿ. ಒಂದು ಸಲ ಇದನ್ನು 20 ನಿಮಿಷಕ್ಕಿಂತ ಹೆಚ್ಚು ಸಮಯ ಇಡಬೇಡಿ. ಇದರಿಂದ ನರಗಳಿಗೆ ಹಾನಿಯಾಗಬಹುದು. ಮೊದಲ 25 ಗಂಟೆಯೊಳಗಡೆ ನೀವು ಐಸ್ ಪ್ಯಾಕ್ ನ್ನು ಬಳಸಬೇಕು. ಇದರಿಂದ ಊತ ಕಡಿಮೆಯಾಗುವುದು ಮತ್ತು ನೋವು ನಿವಾರಣೆಯಾಗುವುದು.

ಮಲ ಸರಾಗವಾಗಲು

ಮಲ ಸರಾಗವಾಗಲು

ಹೆರಿಗೆ ಬಳಿಕ ಕೆಲವು ದಿನಗಳ ಕಾಲ ಮಲವಿಸರ್ಜನೆ ಮಾಡುವುದು ತುಂಬಾ ಕಠಿಣವಾಗಿರುವುದು. ಹೆರಿಗೆ ಬಳಿಕ ಕೆಲವು ಮಹಿಳೆಯರಲ್ಲಿ ಮಲಬದ್ಧತೆ ಕಂಡುಬರಬಹುದು. ಮಲವಿಸರ್ಜನೆ ಮಾಡಲು ನೀವು ಹೆಚ್ಚು ಒತ್ತಡ ಹಾಕಿದರೆ ಆಗ ಹೊಲಿಗೆ ದುರ್ಬಲವಾಗಿ ಗಾಯವು ಮತ್ತಷ್ಟು ಹೆಚ್ಚಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ನೀರು, ನಾರಿನಾಂಶವಿರುವ ಆಹಾರ ಮತ್ತು ಮಲ ಸರಾಗವಾಗಲು ಔಷಧಿ ಪಡೆಯಬಹುದು.

ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ

ನಿಮ್ಮ ಜನನೇಂದ್ರಿಯಗಳು ಊತಕ್ಕೊಳಗಾಗಿ ರಕ್ತಸ್ರಾವವಾಗುತ್ತಿರಬಹುದು. ಆದರೂ ನೀವು ಈ ಜಾಗವನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಒಣಗಿರುವಂತೆ ನೋಡಿಕೊಳ್ಳಬೇಕು. ಪ್ರತೀ ಸಲ ನೀವು ಶೌಚಾಲಯಕ್ಕೆ ಹೋದಾಗ ಆ ಜಾಗವನ್ನು ಸರಿಯಾಗಿ ಶುಚಿಗೊಳಿಸಿ ಮತ್ತು ಒಣಗಿಸಿ. ವೈದ್ಯರು ಸೂಚಿಸಿರುವಂತಹ ಗಾಯ ಒಣಗುವಂತಹ ಕ್ರೀಮ್ ಹಚ್ಚಿ. ಸ್ಯಾನಿಟರಿ ನ್ಯಾಪ್ಕಿನ್ ನ್ನು ನಿಯಮಿತವಾಗಿ ಬದಲಾಯಿಸಿಕೊಳ್ಳಿ. ಸೋಂಕು ಬರದಂತೆ ತಡೆಯಲು ದಿನದಲ್ಲಿ ಎರಡು ಅಥವಾ ಮೂರು ಸಲ ಬಿಸಿ ನೀರು ಹಾಕಿ ತೊಳೆಯಿರಿ.

ವಿಶ್ರಾಂತಿ ಮಾಡಿ

ಮಗುವಿರುವಾಗ ನಿದ್ರೆ ಮಾಡುವುದು ತುಂಬಾ ಕಠಿಣವಾಗಿರುವುದು. ಆದರೆ ಗಾಯವು ಬೇಗನೆ ಒಣಗಬೇಕೆಂದರೆ ನೀವು ಆದಷ್ಟು ಮಟ್ಟಿಗೆ ವಿಶ್ರಾಂತಿ ಪಡೆಯಬೇಕು. ಹೆರಿಗೆಯ ಆರು ವಾರಗಳ ಕಾಲ ನೀವು ಯಾವುದೇ ದೈಹಿಕ ಚಟುವಟಿಕೆಯಲ್ಲಿ ಒಳಗೊಳ್ಳಬಾರದು. ವೈದ್ಯರು ಸೂಚಿಸುವ ತನಕ ವ್ಯಾಯಾಮ ಮತ್ತು ಲೈಂಗಿಕ ಕ್ರಿಯೆಯಿಂದ ದೂರವಿರಬೇಕು.

ಉಪ್ಪುನೀರಿನ ಸ್ನಾನ

ಉಪ್ಪು ನೀರಿನಿಂದ ಸ್ನಾನ ಮಾಡಿಕೊಂಡರೆ ಆಗ ಗಾಯವು ಬೇಗನೆ ಒಣಗಲು ನೆರವಾಗುವುದು. ಗಾಯದಲ್ಲಿ ಯಾವುದೇ ರೀತಿಯ ಸೋಂಕು ಹರಡದಂತೆ ತಡೆಯಲು ಉಪ್ಪು ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ಈ ಭಾಗಗಳಿಗೆ ಉಪ್ಪು ನೀರನ್ನು ಚಿಮುಕಿಸಿದರೂ ಅದರಿಂದ ಗಾಯವು ಬೇಗನೆ ಒಣಗುವುದು. ಒಂದು ಕಪ್ ಉಪ್ಪು ಹಾಕಿಕೊಂಡು ಬಿಸಿ ನೀರಿನ ಟಬ್ ನಲ್ಲಿ ಕುಳಿತುಕೊಳ್ಳಿ. ಉಪ್ಪು ಒಳ್ಳೆಯ ಗುಣಮಟ್ಟದ್ದಾಗಿರಲಿ.

ವಿಚ್ ಹ್ಯಾಝೆಲ್

ವಿಚ್ ಹ್ಯಾಝೆಲ್ ಎನ್ನುವ ಗಿಡಮೂಲಿಕೆಯಲ್ಲಿ ಶಮನಕಾರಿ ಗುಣಗಳು ಇವೆ. ಇದನ್ನು ಮಾರುಕಟ್ಟೆಯಿಂದ ತಂದು ಈ ಭಾಗಕ್ಕೆ ಹಚ್ಚಿದರೆ ಆಗ ಸಂಕೋಚನವಾಗುವುದು. ಇದು ಗಾಯವನ್ನು ಶುಚಿಗೊಳಿಸುವುದು ಮತ್ತು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದ ಗಾಯದಿಂದ ರಕ್ತ ಸ್ರಾವ ಕಡಿಮೆಯಾವುದು ಮತ್ತು ಗಾಯವು ಶೀಘ್ರ ಹಾಗೂ ವೇಗವಾಗಿ ಒಣಗುವುದು.

English summary

things to know about vaginal tears

Giving birth to a new life, a baby who is your flesh and blood, is one of the things that makes womanhood special. The process is surely not easy. The pregnancy and its culmination in labor and child birth are perhaps the most terrifying and exhilarating period in a woman’s life. A pregnant woman knows that she will have to deal with a lot of pain and prepares herself for it, as she nears the end of the pregnancy. The pregnancy may end with a C-section or a natural birth. The healing process is quite different for each method of child birth.
X
Desktop Bottom Promotion