Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಧಾರಣೆಯಲ್ಲಿ ಕಲ್ಲಂಗಡ ಹಣ್ಣು ಸೇವಿಸುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಧಿಕವಾಗಿರುತ್ತೆ. ಹಾಗಾಗಿ ತಾಯಿಯಾಗುವ ಸಂದರ್ಬದಲ್ಲಿ ನೀವಿದ್ದರೆ ಖಂಡಿತವಾಗ್ಲೂ ಈ ಹಣ್ಣನ್ನು ಸೇವಿಸಲೇ ಬೇಕು. ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಎ ಅಂಶ ಕಲ್ಲಂಗಡಿಯಲ್ಲಿರುತ್ತೆ. ಪೊಟಾಷಿಯಂ ಮತ್ತು ಮೆಗ್ನೇಷಿಯಂ ಅಂಶಗಳೂ ಇರುವುದರಿಂದ ಇದು ಹೃದಯ ಮತ್ತು ಹೊಟ್ಟೆಗೆ ಬಹಳ ಒಳ್ಳೆಯದು. ಆರೋಗ್ಯದ ಹಿತದೃಷ್ಟಿಯಿಂದ ಹಲವು ಲಾಭಗಳು ಕಲ್ಲಂಗಡಿ ಸೇವನೆಯಿಂದ ಪ್ರಗ್ನೆನ್ಸಿಯಲ್ಲಿ ಆಗಲಿದೆ.
ಆರೋಗ್ಯಯುತವಾದ ಆಹಾರ ಸೇವನೆ ಗರ್ಭದರಿಸಿದ ಮಹಿಳೆಗೆ ಬಹಳ ಮುಖ್ಯ.ಸರಿಯಾದ ಆಹಾರ ಸೇವನೆ ಮಾಡದೇ ಇದ್ದರೆ, ಕೇವಲ ನಿಮಗೆ ಮಾತ್ರವಲ್ಲ ನಿಮ್ಮ ಹೊಟ್ಟೆಯಲ್ಲಿರುವ ಪುಟ್ಟ ಕಂದಮ್ಮನ ಮೇಲೂ ಹಲವು ರೀತಿಯಲ್ಲಿ ಋಣಾತ್ಮಕ ಪರಿಣಾಮಗಳಾಗಬಹುದು. 9 ತಿಂಗಳು ಕಳೆಯುವುದೆಂದರೆ ಅದು ಸಾಮಾನ್ಯದ ವಿಷಯವಲ್ಲ.

ಈ ಸಂದರ್ಭದಲ್ಲಿ ಹಲವು ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಮನಸ್ಸು ಬದಲಾಗುತ್ತಿರುವುದು, ಆಹಾರದಲ್ಲಿ ಅದೂ ಇದೂ ತಿನ್ನಬೇಕೆಂದು ಚಪಲವಾಗುವುದು ಇತ್ಯಾದಿ. ಆದರೆ ಪ್ರತಿಯೊಬ್ಬರಿಂದಲೂ ಕೇಳಿಬರುವ ಸಾಮಾನ್ಯ ಸಲಹೆಯೆಂದರೆ ಹಣ್ಣುಗಳನ್ನು ಹೆಚ್ಚಾಗಿ ಮತ್ತು ಪ್ರತಿನಿತ್ಯ ಸೇವಿಸಿ ಎಂಬುದು.
ಆದರೆ ಪ್ರಗ್ನೆನ್ಸಿಯಲ್ಲಿ ಕೆಲವು ರುಚಿಯಾದ ಹಣ್ಣುಗಳೂ ಕೂಡ ನಿಮಗೆ ಟೇಸ್ಟ್ ಲೆಸ್ ಎಂದು ಅನ್ನಿಸಬಹುದು. ಅಥವಾ ತಿನ್ನುವುದಕ್ಕೆ ಇಷ್ಟವಾಗದೇ ಇರಬಹುದು. ಪ್ರಗ್ನೆನ್ಸಿಗೂ ಮುನ್ನ ನಿಮಗೆ ಇಷ್ಟವಾಗದ ಹಣ್ಣು ಪ್ರಗ್ನೆನ್ಸಿಯಲ್ಲಿ ಹೆಚ್ಚು ಪ್ರಿಯವಾದ ಹಣ್ಣು ಎಂದು ಅನ್ನಿಸುತ್ತಿರಬಹುದು.ಕೆಲವು ಹಣ್ಣುಗಳನ್ನು ಪ್ರಗ್ನೆನ್ಸಿಯಲ್ಲಿ ತಿನ್ನಬೇಡಿ ಎಂದು ವೈದ್ಯರೇ ಸಲಹೆ ನೀಡುತ್ತಾರೆ. ಏನು ತಿನ್ನಬೇಕು, ಏನು ತಿನ್ನಬಾರದು ಎಂಬ ಬಗ್ಗೆ ನೀವು ಯಾವಾಗಲೂ ತಿಳಿದುಕೊಳ್ಳುತ್ತಿರುವುದು ಬಹಳ ಉತ್ತಮ.
ಒಂದು ವೇಳೆ ನಿಮಗೆ ಗೊಂದಲವಿದ್ದರೆ, ನಿಮ್ಮ ಹೆಲ್ತ್ ಕೇರ್ ಸಲಹೆಗಾರರ ಬಳಿ ಸರಿಯಾದ ಮಾಹಿತಿ ಪಡೆದು ನಂತರ ಆಹಾರ ಸೇವಿಸಿ ಆರೋಗ್ಯವಾಗಿರಿ. ಆದರೆ ಒಂದು ಹಣ್ಣಿದೆ. ಅದು ಎಲ್ಲಾ ರೀತಿಯಲ್ಲೂ ನಿಮ್ಮ ಆರೋಗ್ಯಕ್ಕೆ ಗರ್ಭಧಾರಣೆಯಲ್ಲಿ ಸಹಕಾರಿಯಾಗಿದೆ. ಅದುವೇ ಕಲ್ಲಂಗಡಿ ಹಣ್ಣು
ನಿಮ್ಮ 9 ತಿಂಗಳ ಗರ್ಭಧಾರಣೆಯ ಸಮಯದಲ್ಲಿ ಯಾವಾಗ ಬೇಕಾದರೂ ಕಲ್ಲಂಗಡಿ ಹಣ್ಣನ್ನ ಸೇವಿಸಬಹುದಾಗಿದ್ದು, ಅದು ನಿಮ್ಮ ಆರೋಗ್ಯಕ್ಕೆ ಉತ್ತಮವಾದುದ್ದಾಗಿದೆ. ಪ್ರಗ್ನೆನ್ಸಿಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ, ಹಲವು ಲಾಭಗಳನ್ನು ಮಾಡಲಿದೆ.ಬೇಸಿಗೆಯಲ್ಲಿ ಹೆಚ್ಚಾಗಿ ಸಿಗುವ ಈ ಹಣ್ಣನ್ನು ಸೇವಿಸುವುದರಿಂದ, ನೀವು ದಿನ ಪೂರ್ತಿ ಹೈಡ್ರೇಟ್ ಆಗಿರಲು ನೆರವಾಗುತ್ತೆ ಮತ್ತು ನಿಮ್ಮ ಬಾಯಾರಿಕೆಯನ್ನು ತಣಿಸುವ ಶಕ್ತಿ ಇದಕ್ಕಿದೆ.ಕಲ್ಲಂಗಡಿ ಹಣ್ಣಿನಲ್ಲಿ 92 ಶೇಕಡಾ ನೀರಿನಂಶವಿದೆ.
ಹೆಚ್ಚು ನ್ಯೂಟ್ರೀಷಿಯಸ್ ಆಗಿರುವ ಈ ಹಣ್ಣಿನಲ್ಲಿ ವಿಟಮಿನ್ ಎ,ಸಿ, ಬಿ6, ಪೊಟಾಷಿಯಂ ಮತ್ತು ಮೆಗ್ನೇಷಿಯಂ ಇದೆ. ಅಷ್ಟೇ ಅಲ್ಲ, ಫೈಬರ್ ಕಂಟೆಂಟ್ ಕೂಡ ಇದರಲ್ಲಿ ಅಧಿಕವಾಗಿದೆ ಮತ್ತು ಇದು ನಿಮ್ಮ ಹೊಟ್ಟೆ ತುಂಬಿಸುವ ಹಣ್ಣಾಗಿದೆ. ಪ್ರಗ್ನೆನ್ಸಿಯಲ್ಲಿ ಪದೇ ಪದೇ ಹಸಿವಾಗುವ ಸಂದರ್ಬದಲ್ಲಿ ಈ ಹಣ್ಣು ಸೇವನೆ ಬಹಳ ಪ್ರಯೋಜನಕಾರಿಯಾಗಿದೆ.
ಗರ್ಭಧಾರಣೆಯಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದರ ಪ್ರಯೋಜನಗಳು
ಹಲವು ಆರೋಗ್ಯ ಲಾಭಗಳಿದ್ದು, ನಿಮ್ಮ ಪ್ರಗ್ನೆನ್ಸಿಯಲ್ಲಿ ಯಾವುದೇ ಕಾರಣಕ್ಕೂ ತಪ್ಪಿಸದೆ ತಿನ್ನಲೇಬೇಕಾದ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಪ್ರಮುಖವಾದದ್ದು. ಪ್ರಗ್ನೆನ್ಸಿಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳಿಗೆ ಕಲ್ಲಂಗಡಿ ಹೇಗೆ ಪರಿಹಾರ ನೀಡುತ್ತೆ, ಏನೆಲ್ಲ ಲಾಭಗಳನ್ನು ಇದನ್ನು ತಿನ್ನುವುದರಿಂದ ಪಡೆಯಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ..
ಎದೆಯುರಿಯನ್ನು ಕಡಿಮೆಗೊಳಿಸುತ್ತೆ
ಗರ್ಭಧರಿಸಿದಾಗ ಹಲವು ರೀತಿಯ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತೆ. ಅದು ಕೆಲವೊಮ್ಮೆ ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತೆ. ಕಲ್ಲಂಗಡಿ ಹಣ್ಣನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ಆಹಾರದ ಕೊಳವೆಯು ಆರಾಮದಾಯಕವಾಗಿರುತ್ತೆ ಮತ್ತು ಹೊಟ್ಟೆಯ ಸಮಸ್ಯೆ ಇರುವುದಿಲ್ಲ. ತಂಪು ನೀಡುವ ವೈಶಿಷ್ಟ್ಯವನ್ನು ಕಲ್ಲಂಗಡಿ ಹೊಂದಿರುವುದರಿಂದ ಕೂಡಲೇ ಎದೆಯುರಿಯನ್ನು ಕಡಿಮೆಗೊಳಿಸುವ ತಾಕತ್ತು ಇದಕ್ಕಿದೆ.
ಕೈ ಮತ್ತು ಕಾಲುಗಳು ಊದಿಕೊಳ್ಳುವುದು, ನೋವು ಕಾಣಿಸಿಕೊಳ್ಳುವುದನ್ನು ಇದು ತಡೆಯುತ್ತೆ
ಕೈಕಾಲುಗಳು ಊದಿಕೊಳ್ಳುವುದು ಮತ್ತು ನೋವು ಕಾಣಿಸಿಕೊಳ್ಳವ ಸಮಸ್ಯೆಯನ್ನು 90 ಶೇಕಡಾ ಗರ್ಭಧರಿಸಿದ ಮಹಿಳೆಯರು ಎದುರಿಸುತ್ತಾರೆ. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರಿನಂಶವಿರುತ್ತೆ. ಹಾಗಾಗಿ ಇದು ಮಾಂಸಖಂಡಗಳಲ್ಲಿ ಬ್ಲಾಕ್ ಆಗುವುದು, ರಕ್ತಸಂಚಾರದಲ್ಲಿ ತೊಡಕಾಗುವುದನ್ನು ನಿವಾರಿಸಿ ಈ ಸಮಸ್ಯೆಯ ಎದುರಾಗದಂತೆ ನೋಡಿಕೊಳ್ಳುತ್ತೆ.
ಬೆಳಿಗ್ಗೆ ಎದ್ದ ಕೂಡಲೇ ಆಗುವ ಎಲ್ಲಾ ಸಮಸ್ಯೆಗೂ ಪರಿಹಾರ
ಮಾರ್ನಿಂಗ್ ಸಿಕ್ ನೆಸ್ ಸಮಸ್ಯೆ ಪ್ರಗ್ನೆನ್ಸಿ ಮಹಿಳೆಯರಲ್ಲಿರುವ ಸಾಮಾನ್ಯ ಸಮಸ್ಯೆ. ಇಂತಹ ಸಂದರ್ಬದಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಬೆಳಗಿನ ಹೊತ್ತು ಫ್ರೆಶ್ ಆಗಿರಲು ನೆರವಾಗುತ್ತೆ ಮತ್ತು ಬೆಳಿಗ್ಗಿನ ಆರಂಭ ಸುಂದರವಾಗಿರುತ್ತೆ.ಇದರಲ್ಲಿ ಶಕ್ತಿವರ್ಧಕ ಮತ್ತು ನ್ಯೂಟ್ರೀಷಿಯಸ್ ಗುಣಗಳು ಬೆಳಿಗ್ಗಿನ ಸಿಕ್ ನೆಸ್ ಸಮಸ್ಯೆಯನ್ನು ನಿವಾರಿಸುತ್ತೆ.ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಕಲ್ಲಂಗಡಿ ಜ್ಯೂಸ್ ಸೇವಿಸುವುದು ಪ್ರತಿಯೊಬ್ಬ ಪ್ರಗ್ನೆನ್ಸಿ ಮಹಿಳೆಗೂ ಉತ್ತಮ ಆಯ್ಕೆಯಾಗಿರುತ್ತದೆ.
ನಿರ್ಜಲೀಕರಣ ಸಮಸ್ಯೆ ನಿವಾರಣೆ
ಪ್ರಗ್ನೆನ್ಸಿಯಲ್ಲಿ ದೇಹಕ್ಕೆ ಅಗತ್ಯ ನೀರಿನ ಪೂರೈಕೆ ಆಗಲೇಬೇಕು. ನೀರಿನ ಕಡಿಮೆ ಸೇವನೆಯಿಂದ ಮಗು ಬೇಗ ಹುಟ್ಟುವುದು, ಯುಟ್ರಸ್ ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕವಾಗಿರುತ್ತೆ. ನೀರಿನ ಪೂರೈಕೆಗಾಗಿ ಕಲ್ಲಂಗಡಿ ಉತ್ತಮ ಹಣ್ಣು. ಸರಿಯಾದ ಪ್ಲೂಯಿಡ್ಸ್ ಮತ್ತು ವಿಟಮಿನ್ಸ್ ಕಲ್ಲಂಗಡಿ ಸೇವನೆಯಿಂದ ಸಿಗಲಿದೆ.
ಮಾಂಸಖಂಡಗಳು ಹಿಡಿದುಕೊಂಡಂತಾಗುವುದನ್ನು ತಡೆಯುತ್ತೆ
ಹಾರ್ಮೋನುಗಳ ವ್ಯತ್ಯಾಸ ಮತ್ತು ಅತಿಯಾದ ತೂಕ ಹೆಚ್ಚಳದಿಂದಾಗ ಮಾಂಸಖಂಡಗಳು ನೀವು ಹೇಳಿದಂತೆ ಕೇಳುವುದಿಲ್ಲ. ಆಗಾಗ ಅವುಗಳು ಹಿಡಿದುಕೊಂಡಂತಾಗಿ ನಿಮ್ಮನ್ನು ಹೈರಾಣು ಮಾಡಿ ಬಿಡುತ್ತವೆ. ಮಸಲ್ ಕ್ಯಾಚ್ ಆದರೆ ಪ್ರಾಣ ಹೋಗುವಷ್ಟು ಹಿಂಸೆ ಅನ್ನಿಸುತ್ತೆ. ಆದರೆ ಈ ಸಮಸ್ಯೆ ಕಾಣಿಸಿಕೊಳ್ಳಬಾರದು ಅಂದ್ರೆ ನೀವು ಕಲ್ಲಂಗಡಿ ಹಣ್ಣು ಸೇವಿಸಬೇಕು.
ಮೂತ್ರ ವಿಸರ್ಜನೆಯಲ್ಲಿ ಸೋಂಕುಗಳಾಗುವುದನ್ನು ತಪ್ಪಿಸಿ ಮೂತ್ರವಿಸರ್ಜನೆ ಸರಾಗಗೊಳಿಸುತ್ತೆ
ಮೊದಲ ಹಂತಹ ಪ್ರಗ್ನೆನ್ಸಿ ಸಮಯದಲ್ಲಿ ಮೂತ್ರದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತೆ. ಆದ್ರೆ ಯಾವುದೇ ರೀತಿಯ ಇತರೆ ಮೆಡಿಸಿನ್ ಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಪ್ರಗ್ನೆನ್ಸಿಯಲ್ಲಿ ಕಡಿಮೆ. ಅದು ಹೊಟ್ಟೆಯೊಳಗಿನ ಮಗುವಿಗೂ ಸಮಸ್ಯೆ ಉಂಟುಮಾಡುವ ಸಂಭವವಿರುವುದರಿಂದ ವೈದ್ಯರೂ ಕೂಡ ಇಂತಹ ಸಮಸ್ಯೆಗಳಿಗೆ ಯಾವುದೇ ಮೆಡಿಸಿನ್ ನೀಡುವುದಿಲ್ಲ. ಹಾಗಾಗಿ ಇಂತಹ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಸೋಂಕು ತರುವ ಬ್ಯಾಕ್ಟೀರಿಯಾಗಳು ಮೂತ್ರ ವಿಸರ್ಜನೆಯಲ್ಲಿ ಸರಾಗವಾಗಿ ಹೋಗುತ್ತೆ ಮತ್ತು ಸಮಸ್ಯೆ ನಿವಾರಣೆಯಾಗುತ್ತೆ.
ಮಲಬದ್ಧತೆಯನ್ನು ನಿವಾರಿಸುತ್ತೆ
ಕ್ಯಾಲ್ಸಿಯಂ ಮತ್ತು ವಿಟಮಿನ್ ಮಾತ್ರೆಗಳನ್ನು ಸೇವಿಸುವ ಕಾರಣದಿಂದಾಗಿ ಗರ್ಭಧಾರಣೆ ಸಂದರ್ಬದಲ್ಲಿ ಮಲಬದ್ಧತೆ ಸಮಸ್ಯೆ ಪ್ರತಿ ಮಹಿಳೆಯನ್ನೂ ಕಾಡುತ್ತೆ. ಅದಕ್ಕೆ ಸರಿಯಾದ ಪ್ರಮಾಣದ ನೀರಿನ ಸೇವನೆಯಿಂದ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಒಂದು ವೇಳೆ ಮಲಬದ್ಧತೆ ಅಧಿಕವಾದರೆ ಬೆನ್ನುನೋವು ಕಾಣಿಸಿಕೊಂಡು ಯಮಯಾತನೆ ನೀಡಲಿದೆ. ಹಾಗಾಗಿ ಆಗಾಗ ಕಲ್ಲಂಗಡಿ ಹಣ್ಣು ಸೇವಿಸಿ ಗರ್ಭ ಧರಿಸಿದಾಗ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಿರಿ. ಕಲ್ಲಂಗಡಿಯಲ್ಲಿರುವ ಫೈಬರ್ ಅಂಶವು ನಿಮಗೆ ಇದಕ್ಕೆ ಸಹಾಯ ಮಾಡಲಿದೆ.
ಚರ್ಮದ ತುರಿಕೆ ನಿವಾರಣೆಗೆ ಸಹಕಾರಿ
ದೇಹದ ಅಧಿಕ ಉಷ್ಣತೆಯಿಂದ ಉಂಟಾಗುವ ತುರಿಕೆ ಮತ್ತು ನೆವೆಯನ್ನು ತಡೆಯಲು ಕಲ್ಲಂಗಡಿ ಹಣ್ಣು ಸಹಕಾರಿ. ಕೊನೆಯ ಹಂತದ ಪ್ರಗ್ನೆನ್ಸಿಯಲ್ಲಿ ಸ್ಟ್ರೆಚ್ ಮಾರ್ಕ್ ಗಳಾಗಿದ್ದರೆ ಅದರ ತುರಿಕೆಯನ್ನು ಕಂಟ್ರೋಲ್ ಮಾಡುವ ಶಕ್ತಿ ಕಲ್ಲಂಗಡಿ ಹಣ್ಣಿಗಿರುವುದರಿಂದಾಗಿ ಬಸುರಿ ಹೆಂಗಸರು ಕಲ್ಲಂಗಡಿ ಹಣ್ಣು ಸೇವಿಸುವುದು ಒಳಿತು. ಚರ್ಮವು ಶುಷ್ಕವಾಗಿ ನಿಮ್ಮ ತ್ವಚೆಯಲ್ಲಿ ನಂವೆಯಾಗುವುದನ್ನು ತಪ್ಪಿಸಲು ಕಲ್ಲಂಗಡಿ ಮಹತ್ವದ ಪಾತ್ರ ವಹಿಸಲಿದೆ.
ಮುಖದ ಕಾಂತಿ ಬದಲಾಗುವುದು
ಮುಖದ ಪಿಗ್ಮೆಂಟೇಷನ್ ಅಂದರೆ ವರ್ಣದ್ರವ್ಯಗಳ ಸ್ರವಿಕೆಯಿಂದ ಮುಖದ ಕಾಂತಿ ಬದಲಾಗುತ್ತೆ. ದೇಹದಲ್ಲಾಗುವ ಹಲವು ಹಾರ್ವೋನುಗಳ ವ್ಯತ್ಯಾಸದಿಂದಾಗಿ ಮುಖದ ಕಾಂತಿ ಹಾಳಾಗುತ್ತೆ. ಗರ್ಭ ಧರಿಸಿದಾಗ ಕಲ್ಲಂಗಡಿ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಟಾಕ್ಸಿನ್ಸ್ ಅಂಶವನ್ನು ಹೊರಗಡೆ ಹಾಕುವ ಸಾಮರ್ಥ್ಯ ಇದಕ್ಕಿದೆ. ಹಾಗಾಗಿ ಚರ್ಮ ಕಪ್ಪಾಗುವುದು, ಇಲ್ಲವೇ ಕೆಂಪಗಾಗುವುದು ಇಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ಪ್ರತಿ ದಿನ ಪ್ರಗ್ನೆನ್ಸಿಯಲ್ಲಿ ಕಲ್ಲಂಗಡಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಅಧಿಕವಾಗಲಿದೆ.ಇದು ಗರ್ಭಧರಿಸಿದಾಗ ಬಹಳ ಮುಖ್ಯವಾದ ಅಂಶವಾಗಿದೆ. ರೋಗನಿರೋಧಕ ಶಕ್ತಿ ಅಧಿಕವಾಗಿದ್ದರೆ ಸಣ್ಣಪುಟ್ಟ ಕಾಯಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಕಲ್ಲಂಗಡಿಯಲ್ಲಿ ಲಿಕೋಪಿನ್ ಅಂಶವಿದ್ದು ಇದು ಶೇಕಡಾ 50 ರಷ್ಟು ಪ್ರೀ-ಎಕ್ನಾಂಪ್ಸಿಯವನ್ನು ತಡೆಯುತ್ತೆ. ನಂತರ ನಿಮ್ಮ ರೋಗನಿರೋಧಕ ಶಕ್ತಿ ಅಧಿಕವಾಗುತ್ತೆ.
ಮಗುವಿನ ಮೂಳೆಗಳ ಬೆಳವಣಿಗೆಗೆ ನೆರವಾಗುತ್ತೆ
ಕ್ಯಾಲ್ಸಿಯಂ ಮತ್ತು ಪೋಟಾಶಿಯಂ ಅಧಿಕವಾಗಿರುವುದರಿಂದಾಗಿ , ಸರಿಯಾದ ರೀತಿಯಲ್ಲಿ ಮಗುವಿನ ಮೂಳೆಗಳು ಬೆಳವಣಿಗೆ ಹೊಂದಲು ಇದು ನೆರವಾಗುತ್ತೆ.
ಕಣ್ಣಿನ ಆರೋಗ್ಯಕ್ಕೆ ಸಹಕಾರಿ
ಬೀಟಾ ಕ್ಯಾರೋಟಿನ್ ಅಂಶವು ಇದರಲ್ಲಿ ಅಧಿಕವಾಗಿರುವುದರಿಂದಾಗಿ,ಈ ಆಂಟಿ ಆಕ್ಸಿಡೆಂಟ್ ವಿಟಮಿನ್ ಎ ಗಳಾಗಿ ಬದಲಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತೆ. ಇದು ಕಣ್ಣಿನ ಹೊರ ಪದರದ ಆರೋಗ್ಯಕ್ಕೆ ಬಹಳ ಸಹಕಾರಿ.
ಇಷ್ಟೆಲ್ಲ ಪ್ರಯೋಜನವಿರುವ ಈ ಕಲ್ಲಂಗಡಿ ಹಣ್ಣನ್ನು ಖಂಡಿತವಾಗ್ಲೂ ನೀವು ನಿಮ್ಮ ಪ್ರಗ್ನೆನ್ಸಿಯಲ್ಲಿ ತಿನ್ನುವುದನ್ನು ಮರೆಯುವುದಿಲ್ಲ ಎಂದು ಭಾವಿಸುತ್ತೇವೆ. ಗರ್ಭಧಾರಣೆಯಲ್ಲಿನ ಹಲವು ಸಮಸ್ಯೆಗಳಿಗೆ ರಾಮಬಾಣದಂತೆ ವರ್ತಿಸುವ ಕಲ್ಲಂಗಡಿ ಹಣ್ಣನ್ನು ಮರೆಯದೇ ಸೇವಿಸಿ ಮತ್ತು ಆರೋಗ್ಯವಾಗಿರಿ..



Click it and Unblock the Notifications


