Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆ ಸಮಯದಲ್ಲಿ ಖುಷಿಯ ಜೊತೆ ಕಾಡುವ ವಾಂತಿಯ ಸಮಸ್ಯೆ!!
ತಾಯಿಯಾಗುವುದು ಪ್ರತಿ ಹೆಣ್ಣಿನ ಒಂದು ಕನಸು. ಆದರೆ ಗರ್ಭ ಧರಿಸಿದ ಬಳಿಕ ಎದುರಾಗುವ ಬದಲಾವಣೆಗಳಿಗೆ ದೇಹ ಮತ್ತು ಮನಸ್ಸು ತಕ್ಷಣವೇ ಸ್ಪಂದಿಸದ ಕಾರಣ ಕೆಲವರು ಹೆಚ್ಚೇ ಬಳಲುತ್ತಾರೆ. ಇದರಲ್ಲಿ ಪ್ರಮುಖವಾದುದು ವಾಕರಿಕೆ ಮತ್ತು ವಾಂತಿ. ಪ್ರತಿ ಹತ್ತು ಗರ್ಭಿಣಿಯರಲ್ಲಿ ಕನಿಷ್ಠ ಎಂಟು ಗರ್ಭಿಣಿಯರಾದರೂ ಈ ತೊಂದರೆಗಳಿಂದ ಬಳಲಿಯೇ ಇರುತ್ತಾರೆ. ಇದು ಆರು ವಾರಗಳಿಂದ ಪ್ರಾರಂಭವಾಗಿ ಎಂಟನೆಯ ಮತ್ತು ಒಂಬತ್ತನೆಯ ವಾರದಲ್ಲಿ ಗರಿಷ್ಠ ಮಟ್ಟ ತಲುಪುತ್ತದೆ. ಬಳಿಕ ಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ. ಇದನ್ನು ಇಲ್ಲವಾಗಿಸಲು ಯಾವುದೇ ಮದ್ದು ಇಲ್ಲ ಮತ್ತು ಇಲ್ಲವಾಗಿಸಲೂ ಬಾರದು.
ಆದರೆ ಇದರ ಪ್ರಭಾವ ಅತಿ ಹೆಚ್ಚಾಗದಂತೆ ನೋಡಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಇದಕ್ಕಾಗಿ ಹಲವು ಪ್ರಬಲ ಮದ್ದುಗಳಿದ್ದರೂ ಇದಕ್ಕಿಂತಲೂ ಮನೆಮದ್ದುಗಳೇ ಹೆಚ್ಚು ಉತ್ತಮ ಮತ್ತು ನಿರಾಪಾಯಕಾರಿಯಾಗಿವೆ. ಅಂದು ಬ್ರಿಟನ್ನಿನ ರಾಜಮನೆತನದ ಸೊಸೆ ಕೇಟ್ ಮಿಡ್ಲ್ ಟನ್ ರವರು ಗರ್ಭಿಣಿಯಾಗಿದ್ದಾಗ ಅವರಿಗೂ ಈ ತೊಂದರೆ ಅತೀವವಾಗಿ ಕಾಡಿತ್ತು. ಇವರ ಸೇವೆಗೆ ವೈದ್ಯರ ತಂಡವೇ ಟೊಂಕ ಕಟ್ಟಿ ನಿಂತಿದ್ದರೂ ಇವರು ಒಲವು ತೋರಿದ್ದು ಮಾತ್ರ ಮನೆಮದ್ದಿಗೆ. ಇಂತಹ ಹಲವು ಫಲಪ್ರದ ಮನೆಮದ್ದುಗಳ ಬಗ್ಗೆ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಇವೆಲ್ಲವೂ ಶತಮಾನಗಳಿಂದ ಭಾರತೀಯ ಮಹಿಳೆಯರ ತೊಂದರೆಯನ್ನು ನಿವಾರಿಸುತ್ತಾ ಬಂದಿವೆ. ಇವುಗಳಲ್ಲಿ ಸೂಕ್ತ ಎನ್ನಿಸಿದ್ದನ್ನು ಆರಿಸಿಕೊಳ್ಳಿ. ಒಂದು ವೇಳೆ ಈ ಮದ್ದುಗಳು ಸಮರ್ಪಕ ಶಮನ ನೀಡದೇ ಇದ್ದಲ್ಲಿ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಅಗತ್ಯ.

ಇದಕ್ಕೆ ಶುಂಠಿ ಹೇಳಿ ಮಾಡಿಸಿದ ಮನೆಮದ್ದು
ಗರ್ಭಾವಸ್ಥೆಯಲ್ಲಿ ಸೇವಿಸಲು ಹಸಿಶುಂಠಿ ಅತ್ಯುತ್ತಮವಾದ ಆಯ್ಕೆಯಾಗಿದೆ. ಇದು ವಾಕರಿಕೆಯನ್ನು ನಿವಾರಿಸುವುದು ಮಾತ್ರವಲ್ಲ ಹೊಟ್ಟೆಯ ತೊಂದರೆಗಳನ್ನೂ ನಿವಾರಿಸುತ್ತದೆ. ಆದ್ದರಿಂದ ದಿನದಲ್ಲಿ ಕೆಲವು ಬಾರಿಯಾದರೂ ಶುಂಠಿ ಸೇರಿಸಿದ ಬಿಸಿನೀರು ಅಥವಾ ಟೀ ಕುಡಿಯುತ್ತಾ ಇರಿ.
ಶುಂಠಿ ಚಹಾ ತಯಾರಿಸುವ ವಿಧಾನ
ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ. ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ. ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಕುಡಿಯಿರಿ. ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.

ಅರಿಶಿನ ಸೇರಿಸಿದ ಹಾಲು ಸೇವಿಸಿ
ಅರಿಶಿನ ಸೇರಿಸಿದ ಹಾಲು ಮಹಿಳೆಯರ ಹಲವು ತೊಂದರೆಗಳಿಗೆ ಉತ್ತರವಾಗಿದೆ. ಅಲ್ಲದೇ ಗರ್ಭಾವಸ್ಥೆಯಲ್ಲಿ ಅರಿಶಿನದ ಹಾಲು ಕುಡಿಯುತ್ತಾ ಇರುವ ಮೂಲಕ ಹುಟ್ಟುವ ಮಗುವಿನ ಬಣ್ಣ ಪ್ರಖರವಾಗುತ್ತದೆ ಎಂದು ನಂಬಲಾಗಿದೆ. ವಾಕರಿಕೆಗೂ ಈ ಪೇಯ ಉತ್ತಮವಾದ ಪರಿಹಾರ ನೀಡುತ್ತದೆ.
ಅರಿಶಿನದ ಹಾಲು ತಯಾರಿಸುವ ಬಗೆ
ಸುಲಭ ವಿಧಾನ: ಒಂದು ಲೋಟ ಹಸುವಿನ ಹಾಲಿಗೆ ಸುಮಾರು ಅರ್ಧ ಚಮಚದಿಂದ ಒಂದು ಚಮಚದಷ್ಟು ಅರಿಶಿನ ಪುಡಿ ಹಾಕಿ ಕುದಿಯಲು ಪ್ರಾರಂಭವಾದ ಬಳಿಕ ಇಳಿಸಿ ತಣಿಯಲು ಬಿಡಿ. ರುಚಿಗಾಗಿ ಕೊಂಚ ಜೇನನ್ನೂ ಸೇರಿಸಬಹುದು. ಸಾಂಪ್ರಾದಾಯಿಕ ವಿಧಾನ: ಹಸಿಯಾಗಿರುವ ಅರಿಶಿನದ ಕೊಂಬಿನ ಸುಮಾರು ಒಂದು ಇಂಚಿನಷ್ಟು ತುಂಡನ್ನು ಜಜ್ಜಿ ಕುದಿಯುತ್ತಿರುವ ಹಾಲಿನಲ್ಲಿ ಸೇರಿಸಿ. ಈಗ ಉರಿಯನ್ನು ಅತಿಚಿಕ್ಕದಾಗಿ ಮಾಡಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ. ಬಳಿಕ ಅರಿಶಿನದ ತುಂಡನ್ನು ಸೋಸಿ ತೆಗೆಯಿರಿ. ಈ ಹಾಲನ್ನು ತಣಿದ ಬಳಿಕವೇ ಕುಡಿಯಿರಿ. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು.

ಲಿಂಬೆಹಣ್ಣು
ಲಿಂಬೆಹಣ್ಣು ಸಹ ಗರ್ಭಿಣಿಯರಿಗೆ ಕಾಣಿಸಿಕೊಳ್ಳುವ ವಾಂತಿ ಮತ್ತು ನಾಸಿಯಾವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಆಹ್ಲಾದಕರವಾದ ವಾಸನೆಯು ದೇಹದ ಮೇಲೆ ಸ್ವಾಭಾವಿಕವಾಗಿ ಪರಿಣಾಮ ಬೀರಿ, ವಾಂತಿಯಾಗುವ ಅನುಭವವನ್ನು ಶಾಂತಗೊಳಿಸುತ್ತದೆ. ಜೊತೆಗೆ ಲಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿಯು ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಒಂದು ಲೋಟ ನೀರಿಗೆ ತಾಜಾ ಲಿಂಬೆ ರಸವನ್ನು ಹಿಂಡಿಕೊಳ್ಳಿ ಹಾಗು ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ. ಇದನ್ನು ದಿನಾ ಬೆಳಗ್ಗೆ ಎದ್ದ ಕೂಡಲೆ ಸೇವಿಸಿ. ಮಾರ್ನಿಂಗ್ ಸಿಕ್‍ನೆಸ್‍ನಿಂದ ಮುಕ್ತರಾಗಿ ಇದಲ್ಲದೆ ಲಿಂಬೆ ಹಣ್ಣಿನ ಸಿಪ್ಪೆಯನ್ನು ಮೂಸಿ ನೋಡುವುದರಿಂದ ಸಹ ನಾಸಿಯಾ ಮತ್ತು ವಾಂತಿಯಾಗುವ ಅನುಭವವನ್ನು ತಡೆಯಬಹುದು. ಇದರ ಜೊತೆಗೆ ಲೆಮನ್ ಎಸೆನ್ಷಿಯಲ್ ಆಯಿಲ್ ಅನ್ನು ನಿಮ್ಮ ಕರವಸ್ತ್ರಕ್ಕೆ ಹಾಕಿಕೊಂಡು, ಅಗತ್ಯವಾದಾಗ ಅಥವಾ ನಾಸಿಯಾ ಬರುವಾಗ ಮೂಸಿ ನೋಡಬಹುದು. ಜೊತೆಗೆ ಲಿಂಬೆಯ ಕ್ಯಾಂಡಿಯನ್ನು ಸಹ ಇರಿಸಿಕೊಂಡರೆ ಸಹ ಒಳ್ಳೆಯದು.

ಜೀರಿಗೆ
ಜೀರಿಗೆಯು ವಾಂತಿ ಮತ್ತು ನಾಸಿಯಾಗೆ ಒಂದು ಅದ್ಭುತವಾದ ಮನೆ ಔಷಧಿಯಾಗಿರುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯೂಹಕ್ಕೆ ಅಗತ್ಯ ವಿಶ್ರಾಂತಿಯನ್ನು ನೀಡುತ್ತದೆ. ಹೀಗೆ ಇದು ನಾಸಿಯಾ ಮತ್ತು ವಾಂತಿಯಾಗುವ ಅನುಭವವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಜೀರಿಗೆಯ ಸುವಾಸನೆಯು ಜಠರವನ್ನು ಶಾಂತಗೊಳಿಸುತ್ತದೆ. ಅದಕ್ಕಾಗಿ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಯಾವಾಗಲು ಸ್ವಲ್ಪ ಜೀರಿಗೆಯನ್ನು ಇರಿಸಿಕೊಳ್ಳಿ. ಯಾವಾಗ ನಿಮಗೆ ಹೊಟ್ಟೆ ತೊಳೆಸಿದ ಅನುಭವವಾಗುತ್ತದೆಯೋ, ಆಗ ಜೀರಿಗೆಯನ್ನು ಬಾಯಿಗೆ ಹಾಕಿಕೊಂಡು ತಿನ್ನಿ. ನಿಮಗೆ ಬೇಕಾದಲ್ಲಿ ಒಂದು ಟೀ.ಚಮಚ ಜೀರಿಗೆ ಕಾಳುಗಳನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ, ಅದನ್ನು 10 ನಿಮಿಷಗಳ ಕಾಲ ಮುಚ್ಚಿ. ಆನಂತರ ಇದನ್ನು ಶೋಧಿಸಿ, ಅದಕ್ಕೆ ಸ್ವಲ್ಪ ಲಿಂಬೆರಸ ಮತ್ತು ಜೇನು ತುಪ್ಪವನ್ನು ಹಾಕಿಕೊಂಡು ಸೇವಿಸಬಹುದು. ಮುಂಜಾನೆ ನೀವು ಹಾಸಿಗೆಯಿಂದ ಎದ್ದ ಮೇಲೆ ಇದನ್ನು ನಿಧಾನವಾಗಿ ಗುಟುಕು ಗುಟುಕಾಗಿ ಸೇವಿಸಿ.

ಸಾಧ್ಯವಾದಷ್ಟು ನೀರು ಕುಡಿಯಿರಿ
ನೀರು ಕುಡಿಯುವುದು ನಾಸಿಯಾ ಮತ್ತು ವಾಂತಿಗೆ ಒಂದು ಒಳ್ಳೆಯ ಮದ್ದಾಗಿದೆ. ವಿಶೇಷವಾಗಿ ಗರ್ಭಿಣಿಯರು ಆಗಾಗ ಗಂಟೆಗೊಮ್ಮೆ ಒಂದು ಲೋಟ ನೀರನ್ನು ಸೇವಿಸುವುದರಿಂದ ಮಾರ್ನಿಂಗ್ ಸಿಕ್‍ನೆಸ್‍ನಿಂದ ಮುಕ್ತರಾಗಬಹುದು.

ಯಾವುದೇ ಹೊತ್ತಿನ ಊಟ ಬಿಡಬೇಡಿ
ದಿನಕ್ಕೆ ಕನಿಷ್ಠ ಮೂರು ಹೊತ್ತಿನ ಊಟವನ್ನು ಮಾಡಲೇಬೇಕು. ಅಲ್ಲದೇ ಚಿಕ್ಕ ಪ್ರಮಾಣದಲ್ಲಿ ಇತರ ಹೊತ್ತಿನಲ್ಲಿಯೂ ಸೇವಿಸುತ್ತಿರಿ. ಒಟ್ಟಾರೆ ನಿಮಗೆ ಹಸಿವು ಬಾಧಿಸಬಾರದು. ದಿನವಿಡೀ ಸಾಕಷ್ಟು ನೀರು ಕುಡಿಯಿರಿ ಹಾಗೂ ನಡುನಡುವೆ ಕಪ್ಪು ಟೀ ಸೇವಿಸುತ್ತಿರಿ.

ಹಸಿ ತರಕಾರಿ ಸೇವಿಸಿ
ಹಸಿ ತರಕಾರಿಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳು ಮತ್ತು ಉತ್ತಮ ಪ್ರಮಾಣದ ನಾರು ಇದೆ. ನಿಮ್ಮ ವೈದ್ಯರ ಸಲಹೆ ಪಡೆದು ನಿಮ್ಮ ಆರೋಗ್ಯಕ್ಕೆ ಸೂಕ್ತವಾದ ಹಸಿ ತರಕಾರಿಗಳು ಯಾವುವು ಎಂಬುದನ್ನು ತಿಳಿದುಕೊಂಡು ನಿಮ್ಮ ನಿತ್ಯದ ಆಹಾರದ ಜೊತೆ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.

ಕ್ಯಾರೆಟ್ ರಸದ ಜೊತೆಗೆ ಶುಂಠಿ
ಶುಂಠಿಯನ್ನು ಕ್ಯಾರೆಟ್ ರಸದ ಜೊತೆಗೆ ಸಹ ಸೇವಿಸಬಹುದು. ಇದು ಮುಂಜಾನೆ ಮಂಕುತನವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ಸೂಪ್ ಜೊತೆಗೆ ಸ್ವಲ್ಪ ಶುಂಠಿ ಪುಡಿಯನ್ನು ಬೆರೆಸಿಕೊಳ್ಳಿ. ಇದನ್ನು ಪ್ರತಿದಿನ ಮುಂಜಾನೆ ಸೇವಿಸಿ ಮುಂಜಾನೆ ಮಂಕುತನದಿಂದ ನಿವಾರಣೆ ಪಡೆಯಿರಿ. ಮುಂಜಾನೆ ಮಂಕುತನದಿಂದ ಮುಕ್ತರಾಗಲು ಈ ಪರಿಹಾರಗಳನ್ನು ಪಾಲಿಸಿ.

ನೆನಪಿಡಿ ಚೆನ್ನಾಗಿ ನೀರು ಕುಡಿಯಲು ಮರೆಯದಿರಿ
ಸಾಮಾನ್ಯವಾಗಿ ವಾಂತಿಯಾಗುತ್ತದೆ ಎಂಬ ಕಾರಣಕ್ಕೇ ವಾಕರಿಕೆಯಿಂದ ಬಳಲುತ್ತಿರುವ ಗರ್ಭಿಣಿಯರು ಏನನ್ನೂ ಸೇವಿಸುವುದಿಲ್ಲ. ಕೆಲವರಂತೂ ನೀರನ್ನೂ ಕುಡಿಯುವುದಿಲ್ಲ. ಆದರೆ ಇದೇ ಇವರು ಮಾಡುವ ದೊಡ್ಡ ತಪ್ಪು.ನೀರು ಕುಡಿಯದೇ ಇರುವ ಕಾರಣ ಎದುರಾಗುವ ನಿರ್ಜಲೀಕರಣದ ಪರಿಣಾಮವಾಗಿ ವಾಕರಿಕೆ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಸಾಧ್ಯವಾದಷ್ಟು ತಣ್ಣನೆಯ ನೀರು, ಹಣ್ಣಿನ ರಸಗಳನ್ನು ಕುಡಿಯುತ್ತಾ ಇರಬೇಕು. ಅದರಲ್ಲೂ ವಿಟಮಿನ್ ಸಿ ಹೆಚ್ಚಿರುವ ಪಾನೀಯಗಳು ಉತ್ತಮ ಆಯ್ಕೆಯಾಗಿವೆ.

ಕಿತ್ತಳೆಹಣ್ಣನ್ನು ತಿನ್ನಿ ಮತ್ತು ಕುಡಿಯಿರಿ, ಸಿಪ್ಪೆಯನ್ನು ಆಘ್ರಾಣಿಸಿ
ವಾಕರಿಕೆಯಿಂದ ಬಳಲುತ್ತಿರುವವರಿಗೆ ಕಿತ್ತಳೆ ಹಣ್ಣು ಒಂದು ವರದಾನವಾಗಿದೆ. ಸಾಧ್ಯವಾದಷ್ಟು ಹೆಚ್ಚು ಕಿತ್ತಳೆ ರಸವನ್ನು ಕುಡಿಯಿರಿ, ಹಣ್ಣಿನ ತಿರುಳನ್ನು ತಿನ್ನಿ ಹಾಗೂ ಸಿಪ್ಪೆಯ ವಾಸನೆಯನ್ನು ಆಘ್ರಾಣಿಸಿ. ಎಲ್ಲವೂ ಸೇರಿ ವಾಕರಿಕೆಯನ್ನು ತುಂಬಾ ದೂರ ಇರಿಸುತ್ತವೆ.



Click it and Unblock the Notifications
