Latest Updates
-
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ
ಬಾದಾಮಿ ಇರುವಾಗ ಗರ್ಭಿಣಿಯರಿಗೆ ನಿರಾತಂಕ
ಒಣ ಹಣ್ಣುಗಳ ಸೇವನೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಕೆಲವರು ಈ ಒಣ ಹಣ್ಣುಗಳ ಸೇವನೆಯನ್ನು ಹಬ್ಬಹರಿದಿನಗಳು ಮತ್ತು ಕೆಲ ಸಮಾರಂಭಗಳಿಗೆ ಮಾತ್ರ ಮೀಸಲಿಟ್ಟಿರುತ್ತಾರೆ. ಇವುಗಳಲ್ಲಿ ಬಾದಾಮಿಯು ಪ್ರಮುಖವಾದದ್ದು. ಬಾದಾಮಿಯ ಪ್ರಯೋಜನದ ಬಗ್ಗೆ ತಿಳಿಸಲು ಒಂದು ಪುಟ ಸಾಲದು. ಬಾದಾಮಿ ನಿಜಕ್ಕೂ ಅತೀ ಉಪಯುಕ್ತವಾದ ಆಹಾರ. ವಿಶೇಷವಾಗಿ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಾದಾಮಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ.

ನೀವು ಗರ್ಭಿಣಿಯಾಗಿದ್ದರೆ ಈ ಬಾದಾಮಿ ಪರಂಪರೆಯನ್ನು ಅನುಸರಿಸಿದರೆ ನಿಮಗೆ ಹಾಗೂ ನಿಮ್ಮ ಮಗುವಿಗೆ ಹೆಚ್ಚು ಅನುಕೂಲಕರ. ಐದು ಅಥವಾ ಆರು ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ನಂತರ ಅದರ ಸಿಪ್ಪೆಯನ್ನು ತೆಗೆದು ಬೆಳಗಿನ ಜಾವ ಸೇವಿಸಿ. ಆಶ್ಚರ್ಯಪಡಬೇಡಿ, ವಿಶೇಷವಾಗಿ ಗರ್ಭಿಣಿಯರಿಗೆ ಈ ವಿಧಾನದಿಂದ ಹಲವಾರು ಆರೋಗ್ಯಕರ ಉಪಯೋಗಗಳಿವೆ.
ತಜ್ಞರು ಅಧ್ಯಯನ ಕೈಗೊಂಡ ಪ್ರಕಾರ ಈ ಬಾದಾಮಿ ಬೀಜಗಳನ್ನು ಸೇವಿಸಿದ ಗರ್ಭಿಣಿಯರ ಶಿಶುಗಳಲ್ಲಿ ಆಸ್ತಮಾ ಮತ್ತು ಉಸಿರಾಟದ ತೊಂದರೆಯ ಪ್ರಮಾಣವು ಕಡಿಮೆಯಿರುವುದು ಕಂಡುಬಂದಿದೆ. ಅಲ್ಲದೇ ಬಾದಾಮಿ ಸೇವಿಸಿದ ತಾಯಂದಿರ ಶಿಶುವಿನಲ್ಲಿ ಒಟ್ಟಾರೆಯಾಗಿ ಅಲರ್ಜಿ ತೊಂದರೆಗಳು ಬರದಂತೆ ನೋಡಿಕೊಳ್ಳುತ್ತದೆ.
ಪ್ರಿಕ್ಲಾಂಪ್ಸಿಯ ಅಪಾಯವನ್ನು ತಡೆಗಟ್ಟುತ್ತದೆ
ಒಣ ಹಣ್ಣುಗಳಲ್ಲೇ ಬಾದಾಮಿಯು ಪ್ರಮುಖವಾದದ್ದು. ಬಾದಾಮಿಯಲ್ಲಿ ಕ್ಯಾಲ್ಷಿಯಮ್ ಸತ್ವವು ಹೇರಳಾವಾಗಿದ್ದು, ಹೆರಿಗೆ ಸಮಯದಲ್ಲಿ ಉಂಟಾಗುವ ಪ್ರಿ-ಪ್ರಿಕ್ಲಾಂಪ್ಸಿಯ ಸಮಸ್ಯೆಯು ಬರದಂತೆ ತಡೆಯುತ್ತದೆ. ಅಲ್ಲದೇ ಶಿಶುವಿನ ಮೂಳೆಗಳು, ಹಲ್ಲುಗಳು ಮತ್ತು ನರಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಹೃದಯ ಸಮಸ್ಯೆಗೆ ಕಾರಣವಾಗುವ ಎಲ್ ಡಿ ಎಲ್ ಎಂಬ ಬೊಜ್ಜನ್ನು ಕಡಿಮೆ ಮಾಡಲು ಹೆಚ್ಚು ಉಪಯುಕ್ತ.
ಮಲಬದ್ಧತೆಯನ್ನು ನಿವಾರಿಸುತ್ತದೆ
ಬಾದಾಮಿಯಲ್ಲಿ ನಾರಿನ ಅಂಶವು ಹೇರಳವಾಗಿದೆ. ಗರ್ಭಾವಸ್ಥೆಯಲ್ಲಿ ಮಲಬದ್ಧತೆಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ.
ವಿಟಮಿನ್ E
ಬಾದಾಮಿ ಬೀಜಗಳು ವಿಟಮಿನ್ E ಯನ್ನು ಸಮೃದ್ಧವಾಗಿ ಒಳಗೊ೦ಡಿರುವುದರಿ೦ದ, ಅವು ಶರೀರದ ಅನಾರೋಗ್ಯಕರ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತವೆ. ಇದರ ನೇರ ಪರಿಣಾಮವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೇಲೆ ಧನಾತ್ಮಕವಾಗಿ ಆಗುತ್ತದೆ. ನೀರಿನಲ್ಲಿ ನೆನೆಸಿಟ್ಟಿರುವ ಬಾದಾಮಿ ಬೀಜಗಳ ಬಳಕೆಯ ಮತ್ತೊ೦ದು ಪ್ರಯೋಜನವೆ೦ದರೆ, ಈ ಕಾಳುಗಳು ನಾವು ವಿಪರೀತವಾಗಿ ಹೊಟ್ಟೆಬಾಕರ೦ತೆ ಆಹಾರವನ್ನು ಸೇವಿಸದ೦ತೆ ಅವು ನಮ್ಮನ್ನು ತಡೆಹಿಡಿಯುತ್ತವೆ. ಇದು ಹೇಗೆ ಸಾಧ್ಯವಾಗುತ್ತದೆ ಎ೦ದರೆ, ಬಾದಾಮಿ ಬೀಜಗಳಲ್ಲಿರುವ ಏಕಪರ್ಯಾಪ್ತಗಳು ನಮ್ಮ ಹಸಿವನ್ನು ಇ೦ಗಿಸಿಬಿಡುತ್ತವೆ ಹಾಗೂ ತನ್ಮೂಲಕ ತೂಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತವೆ.
ರಕ್ಷಾಕವಚದ೦ತೆ ಕಾರ್ಯನಿರ್ವಹಿಸುತ್ತದೆ
ಬಾದಾಮಿ ಕಾಳುಗಳಲ್ಲಿರುವ ಫೋಲಿಕ್ ಆಮ್ಲವು ನವಜಾತ ಶಿಶುಗಳಲ್ಲಿ ಸ೦ಭಾವ್ಯ ಜನನ ದೋಷಗಳ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ. ಹೀಗಾಗಿ, ಗರ್ಭಿಣಿ ಸ್ತ್ರೀಯು ನೀರಿನಲ್ಲಿ ನೆನೆಸಿಟ್ಟಿರಬಹುದಾದ ಬಾದಾಮಿ ಕಾಳುಗಳನ್ನು ಸೇವಿಸುವ೦ತೆ ಸಲಹೆ ಮಾಡಲಾಗುತ್ತದೆ.



Click it and Unblock the Notifications












