Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರೇ, ಆಹಾರದ ವಿಷಯದಲ್ಲಿ ಉದಾಸೀನ ಮಾಡಬೇಡಿ....
ಗರ್ಭಿಣಿ ಮಹಿಳೆಯರು ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಆಹಾರವನ್ನು ತಿನ್ನಬೇಕು. ಸುಮಾರು ಹತ್ತು ಕೆಜಿಯಷ್ಟು ಭಾರ ಹೆಚ್ಚಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.
ಗರ್ಭ ಧರಿಸಿರುವಂತಹ ಮಹಿಳೆಯರು ಮತ್ತೊಂದು ಜೀವವು ದೇಹದೊಳಗೆ ಬೆಳೆಯುತ್ತಾ ಇರುತ್ತದೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ಆ ಜೀವಕ್ಕೆ ನೀವು ತಿನ್ನುವಂತಹ ಆಹಾರ, ನಿಮ್ಮ ಮನಸ್ಥಿತಿ ಎಲ್ಲವೂ ತುಂಬಾ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.
ಗರ್ಭಿಣಿ ಮಹಿಳೆಯರು ಸಾಮಾನ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಆಹಾರವನ್ನು ತಿನ್ನಬೇಕು. ಸುಮಾರು ಹತ್ತು ಕೆಜಿಯಷ್ಟು ಭಾರ ಹೆಚ್ಚಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಮನೆಯಲ್ಲಿಯೇ ಇರುವಂತಹ ಮಹಿಳೆಯರು ಏನಾದರೂ ತಿನ್ನುತ್ತಾ ಇರಬಹುದು. ಆದರೆ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಇದು ಸಾಧ್ಯವಾಗುವುದಿಲ್ಲ. ಮೂರನೆಯ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೀಗಿರಲಿ...

ಯಾಕೆಂದರೆ ಕಚೇರಿ ಅಥವಾ ಕೆಲಸದ ಕಡೆ ಆಗಾಗ ತಿನ್ನಲು ಅವಕಾಶ ಇರುವುದು ತುಂಬಾ ಕಡಿಮೆ. ಆದರೆ ಗರ್ಭದರಲ್ಲಿರುವ ಮಗುವಿನ ಬಗ್ಗೆ ಕಾಳಜಿ ತುಂಬಾ ಮುಖ್ಯ. ಗರ್ಭಿಣಿಯಾಗಿರುವಾಗ ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗದೆ ಇದ್ದರೆ ಅದರಿಂದ ಹಲವಾರು ಸಮಸ್ಯೆಗಳು ಎದುರಾಗಬಹುದು. ಗರ್ಭಿಣಿ ಮಹಿಳೆಯರು ಸರಿಯಾದ ಆಹಾರ ಕ್ರಮ ಪಾಲಿಸದೆ ಇದ್ದರೆ ಏನಾಗಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ನರಸಂಬಂಧಿ ಕಾಯಿಲೆ
ಗರ್ಭಿಣಿ ಮಹಿಳೆಯರು ಸರಿಯಾಗಿ ತಿನ್ನದೆ ಇದ್ದರೆ ಪೋಷಕಾಂಶಗಳ ಕೊರತೆಯಿಂದಾಗಿ ನರಸಂಬಂಧಿ ಕಾಯಿಲೆಗಳು ಬರಬಹುದು. ಮಗುವಿನ ಮೆದುಳಿನ ನರಗಳು ಹಾಗೂ ಬೆನ್ನೆಲುಬಿನ ಬೆಳವಣಿಗೆ ಸರಿಯಾಗಿ ಆಗದೆ ಇರಬಹುದು. ಕೆಲವೊಂದು ಸಂದರ್ಭಗಳಲ್ಲಿ ಎಲ್ಲವೂ ಸರಿಯಾಗಿ ಇದೆ ಎಂದು ನಿಮಗೆ ಅನಿಸಬಹುದು. ಆದರೆ ಮಗುವಿನ ಕಲಿಕೆಯಲ್ಲಿ ಸಮಸ್ಯೆಯಾಗಬಹುದು.
ಗರ್ಭಪಾತ ಅಥವಾ ಮಗುವಿನ ಸಾವು
ಸರಿಯಾದ ಪೋಷಕಾಂಶಗಳು ಸಿಗದೆ ಇರುವಂತಹ ಗರ್ಭಿಣಿ ಮಹಿಳೆಯರಿಗೆ ಗರ್ಭಪಾತವಾಗಬಹುದು ಅಥವಾ ಜನನದ ಬಳಿಕ ಮಗು ಸಾವನ್ನಪ್ಪಬಹುದು. ಆದರೆ ಇಂತಹ ಪರಿಸ್ಥಿತಿ ಇಂದಿನ ದಿನಗಳಲ್ಲಿ ತುಂಬಾ ವಿರಳ. ಆದರೂ ಗರ್ಭಿಣಿ ಮಹಿಳೆಯರು ತಮ್ಮ ಆಹಾರ ಕ್ರಮದ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕು.
ಮಗುವಿನ ತೂಕ ಕಡಿಮೆ
ಗರ್ಭಿಣಿಯಾಗಿದ್ದಾಗ ಸರಿಯಾದ ಆಹಾರ ಕ್ರಮವನ್ನು ಅನುಸರಿಸದೆ ಪೋಷಕಾಂಶಗಳ ಕೊರತೆ ಎದುರಿಸಿದ್ದರೆ ಮುಂದೆ ಜನಿಸಲಿರುವ ಮಗುವು ಕಡಿಮೆ ತೂಕವನ್ನು ಹೊಂದುವುದರಲ್ಲಿ ಸಂಶಯವೇ ಇಲ್ಲ. ಜನನದ ವೇಳೆ ತೂಕ ಕಡಿಮೆ ಇರುವ ಮಕ್ಕಳು ತೀವ್ರವಾದ ಸಮಸ್ಯೆಯನ್ನು ಎದುರಿಸಬಹುದು. ಬಾಲ್ಯದ ಕೆಲವೇ ವರ್ಷಗಳಲ್ಲಿ ಇಂತಹ ಮಕ್ಕಳ ಸಾವು ಸಂಭವಿಸಬಹುದು. ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ
ಕುಂಠಿತ ಬೆಳವಣಿಗೆ
ಗರ್ಭಿಣಿಯಾಗಿರುವಾಗ ನೀವು ಸರಿಯಾದ ರೀತಿಯಲ್ಲಿ ಆಹಾರ ಕ್ರಮವನ್ನು ಅನುಸರಿಸದೆ ಇದ್ದರೆ ಮತ್ತು ವಿಟಮಿನ್ ಹಾಗೂ ಇತರ ಕೆಲವೊಂದು ಪೋಷಕಾಂಶಗಳು ಮಗುವಿಗೆ ಸಿಗದಿದ್ದರೆ ಅದರಿಂದ ಮುಂದೆ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗಬಹುದು. ಗರ್ಭದಲ್ಲಿರುವಾಗ ಮಗುವಿಗೆ ಸರಿಯಾದ ಪೋಷಕಾಂಶಗಳು ಸಿಗದೇ ಇರುವುದೇ ಇದಕ್ಕೆ ಕಾರಣವಾಗಿದೆ.



Click it and Unblock the Notifications




