Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಗರ್ಭಿಣಿಯರಿಗೆ ಕಾಡುವ ನಿದ್ರಾಹೀನತೆ ಸಮಸ್ಯೆಗೆ ಒಂದಿಷ್ಟು ಟಿಪ್ಸ್
ಗರ್ಭಾವಸ್ಥೆಯಲ್ಲಿ ಸ್ತ್ರೀಯು ಹೆಚ್ಚಿನ ಸಮಸ್ಯೆಗಳಿಗೆ ಒಳಗಾಗುತ್ತಲೇ ಇರುತ್ತಾಳೆ. ವಾಂತಿ, ಸುಸ್ತು, ಬಳಲಿಕೆಯೊಂದಿಗೆ ತಲೆನೋವು, ಹಾರ್ಮೋನು ಸಮಸ್ಯೆಗಳು ಸೇರಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಕೆಯನ್ನು ಬಳಲಿಸಿಬಿಡುತ್ತದೆ. ಇದರ ಜೊತೆಗೆ ಪ್ರಮುಖವಾಗಿ ಅಂದರೆ ಹೆಚ್ಚಿನ ಗರ್ಭಿಣಿಯರನ್ನು ಕಾಡಿಸುವ ಕಾಯಿಲೆಯಾಗಿದೆ ನಿದ್ರಾಹೀನತೆ. ರಾತ್ರಿ ವೇಳೆಯಲ್ಲಿ ಚೆನ್ನಾಗಿ ನಿದ್ದೆ ಆಗಿಲ್ಲವೆಂದಾದಲ್ಲಿ ಮರುದಿನ ಇದು ಅವರನ್ನು ಬಳಲಿಸಿ ಬೆಂಡಾಗಿಸುತ್ತದೆ. ಈ ಹೂಗಳಲ್ಲಿದೆ ನಿದ್ರಾಹೀನತೆ ಸಮಸ್ಯೆಗೆ ಮದ್ದು
ತಮ್ಮೊಂದಿಗೆ ಗರ್ಭದಲ್ಲಿ ಇನ್ನೊಂದು ಜೀವವಿದ್ದಾಗ ಅತಿಯಾದ ಸುಸ್ತು ದೇಹಾಲಾಸ್ಯತೆ ಉಂಟಾಗುವುದು ಸಹಜ. ಒಂದು ರೀತಿಯ ಗಾಬರಿ ಆತಂಕ ಗರ್ಭಿಣಿಯರಲ್ಲಿ ಮನೆಮಾಡಿರುವುದರಿಂದ ನಿದ್ದೆಯ ಕೊರೆತ ಉಂಟಾಗುತ್ತದೆ. ನಿದ್ರಾಹೀನತೆಯಿಂದ ತಲೆನೋವು, ಬಳಲಿಕೆ ಕಾಡಿ ಅತಿಯಾದ ಕೋಪ ಅಸಹನೆ ಆ ಜಾಗದಲ್ಲಿ ಮನೆಮಾಡುತ್ತದೆ. ನಿದ್ರಾಹೀನತೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದು
ತಜ್ಞರು ಹೇಳುವ ಪ್ರಕಾರ ಗರ್ಭಾವಸ್ಥೆಯಲ್ಲಿ ಸಾಕಷ್ಟು ನಿದ್ದೆಮಾಡುವುದು ಗರ್ಭಿಣಿಯರ ಜೊತೆಗೆ ಅವರ ಹೊಟ್ಟೆಯಲ್ಲಿರುವ ಕಂದಮ್ಮನಿಗೂ ಅತ್ಯುಪಯುಕ್ತವಾಗಿರುತ್ತದೆ. ಏನೂ ಮಾಡಿದರೂ ನಿದ್ದೆ ಮಾತ್ರ ಬರುತ್ತಿಲ್ಲ ಎಂಬುದು ಸಮಸ್ಯೆಯಾಗಿದ್ದರೆ ಆ ಸಮಸ್ಯೆಗೆ ನಮ್ಮ ಇಂದಿನ ಲೇಖನದಲ್ಲಿ ನಾವು ಅಗತ್ಯ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳನ್ನು ಗರ್ಭಿಣಿಯರು ಪಾಲಿಸಿದಲ್ಲಿ ಸುಖವಾದ ನಿದ್ದೆ ಅವರಿಗೆ ದೊರೆಯುವುದು ಖಂಡಿತ....

ಆಗಾಗ್ಗೆ ನಿದ್ದೆಮಾಡಬೇಡಿ
ರಾತ್ರಿ ಸಯಮದಲ್ಲಿ ಭರ್ಜರಿ ನಿದ್ದೆ ನಿಮಗೆ ಬರಬೇಕು ಎಂದಾದಲ್ಲಿ ಆಗಾಗ್ಗೆ ನಿದ್ದೆ ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ. ದಿನದಲ್ಲಿ ಸಣ್ಣದಾಗಿ ನಿದ್ದೆ ಮಾಡುವುದು ರಾತ್ರಿಯ ನಿದ್ದೆಗೆ ಮಾರಕವಾಗುವುದು ಖಂಡಿತ.

ಮೃದುವಾದ ದಿಂಬುಗಳನ್ನು ಬಳಸಿ
ಗರ್ಭಿಣಿಯಾಗಿದ್ದಾಗ, ಯಾವ ಭಂಗಿಯಲ್ಲೂ ಮಲಗಿದರೂ ಆರಾಮದಾಯಕ ಎಂದೆನಿಸುವುದಿಲ್ಲ. ನಿಮ್ಮನ್ನು ಅನುಕೂಲಕರವಾಗಿರಿಸಲು ಆದಷ್ಟು ಮೃದುವಾದ ದಿಂಬುಗಳ ಬಳಕೆಯನ್ನು ಮಾಡಿ ಇದು ನಿಮ್ಮ ಸುಖಕರ ನಿದ್ದೆಗೆ ಸಹಕಾರಿಯಾಗಿರುತ್ತದೆ.

ಲ್ಯಾವೆಂಡರ್ ಬಳಕೆ
ನಿಮ್ಮ ಕೋಣೆಯಲ್ಲಿ ಸುಗಂಧಿತ ಸುವಾಸನೆ ಬರುವುದೂ ಕೂಡ ನಿಮ್ಮ ಸುಖಕರ ನಿದ್ದೆಗೆ ಪೂರಕವಾಗಿರುತ್ತದೆ. ಲ್ಯಾವೆಂಡರ್ ಮೇಣದ ಬತ್ತಿಗಳನ್ನು ಉರಿಸಿ ನಿಮ್ಮ ಕೋಣೆಯನ್ನು ಸುಗಂಧಿತವಾಗಿಸಿ. ಇದರಿಂದ ಉತ್ತಮ ನಿದ್ದೆ ನಿಮಗೆ ಬರುತ್ತದೆ.

ಅಗತ್ಯವಿದ್ದಲ್ಲಿ ಮಾತ್ರ ದ್ರವಾಹಾರ ಸೇವಿಸಿ
ಗರ್ಭಾವಸ್ಥೆಯಲ್ಲಿ ಬಚ್ಚಲು ಮನೆಯೇ ಜಗತ್ತಿನ ಉತ್ತಮ ಸ್ಥಳ ಎಂದೆನಿಸಿಬಿಡುತ್ತದೆ. ಏಕೆಂದರೆ ಭ್ರೂಣದ ಒತ್ತಡವು ಗಾಳಿಗುಳ್ಳೆಯ ಮೇಲೆ ಬೀಳುವುದರಿಂದ ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಸಲ ರೆಸ್ಟ್ ರೂಮ್ಗೆ ಹೋಗಬೇಕು ಎಂದೆನಿಸುತ್ತದೆ. ರಾತ್ರಿ ಸಮಯದಲ್ಲಿ ಈ ಹೋಗುವಿಕೆಯನ್ನು ಕಡಿಮೆ ಮಾಡಲು ಆದಷ್ಟು ದ್ರವಾಹಾರಗಳನ್ನು ಅಗತ್ಯ ಸಮಯದಲ್ಲಿ ಮಾತ್ರ ಸ್ವೀಕರಿಸಿ.

ವೇಳಾಪಟ್ಟಿಯನ್ನು ಅನುಸರಿಸಿ
ನಿದ್ದೆಯ ಸಮಯವನ್ನು ಪಾಲಿಸಿ. ಆ ಸಮಯವನ್ನು ನೀವು ತ್ಯಜಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿ. ಆ ಸಮಯಕ್ಕೆ ನೀವು ಹೊಂದಿಕೆಯಾದಿರಿ ಎಂದಾದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಆ ಸಮಯಕ್ಕೆ ನಿಮಗೆ ನಿದ್ದೆ ಬರುತ್ತದೆ.

ಕರಿದ ತಿಂಡಿಗಳ ಸೇವನೆ ಬೇಡ
ರಾತ್ರಿ ಸಮಯ ಆದಷ್ಟು ಕಡಿಮೆ ಆಹಾರ ಸೇವಿಸಿ. ನೀವು ರಾತ್ರಿ ಭರ್ಜರಿಯಾಗಿ ಸೇವಿಸಿದಿರಿ ಎಂದಾದಲ್ಲಿ, ನೀವು ಸ್ವಯಂಚಾಲಿತವಾಗಿ ಅಜೀರ್ಣ ಸಮಸ್ಯೆಗಳಿಂದ ನೀವು ಬಳಲುತ್ತೀರಿ ಮತ್ತು ಅಸಿಡಿಟಿಯು ನಿಮ್ಮ ನಿದ್ದೆಗೆ ಭಂಗವನ್ನುಂಟು ಮಾಡುವುದು ಖಾತ್ರಿ.

ದೇಹವನ್ನು ಫಿಟ್ ಆಗಿರಿಸುವುದು
ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಿ. ಕೆಲವೊಂದು ವ್ಯಾಯಾಮಗಳನ್ನು ಮಾಡುವುದರಿಂದ ಸರಳ ಮತ್ತು ಸುರಕ್ಷಿತವಾದ ಹೆರಿಗೆಗೆ ಅನುಕೂಲವಾಗಿರುತ್ತದೆ. ಅಂತೆಯೇ ನಿಮ್ಮ ಮನಸ್ಸನ್ನು ಇದು ಆರಾಮವಾಗಿರಿಸುತ್ತದೆ. ಧ್ಯಾನವನ್ನು ಒಳಗೊಂಡಿರುವ ವ್ಯಾಯಾಮವನ್ನು ಮಾಡುವುದು ಉತ್ತಮವಾಗಿರುತ್ತದೆ.

ಮಲಗುವ ಕೋಣೆಯಲ್ಲಿ ಗ್ಯಾಜೆಟ್ ಬೇಡ
ರಾತ್ರಿ ವೇಳೆಯಲ್ಲಿ ಆದಷ್ಟು ಗ್ಯಾಜೆಟ್ಗಳ ಬಳಕೆ ಬೇಡವೇ ಬೇಡ. ನಿಮ್ಮ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುವ ಈ ಉಪಕರಣಗಳು ನಿಮ್ಮ ನಿದ್ರೆಗೂ ಭಂಗವನ್ನುಂಟು ಮಾಡುತ್ತದೆ. ನೀವು ನಿದ್ದೆ ಮಾಡುವುದಕ್ಕೂ ಒಂದು ಗಂಟೆಯ ಮೊದಲು ಅವುಗಳ ಬಳಕೆಯನ್ನು ಮಾಡಿ ನಂತರ ನಿದ್ದೆ ಹೋಗಿ.

ಹೀಟಿಂಗ್ ಪ್ಯಾಡ್ ಬಳಸಿ
ರಾತ್ರಿ ವೇಳೆ ನಿಮಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ, ನಿಮ್ಮ ದಿಂಬಿನ ಕೆಳಗೆ ಬಿಸಿ ನೀರಿನ ಬಾಟಲನ್ನು ಇರಿಸಿಕೊಳ್ಳಿ. ಬಾಟಲಿಯಿಂದ ಉಂಟಾಗುವ ಉಷ್ಣತೆಯು ನರಗಳನ್ನು ಶಾಂತವಾಗಿಸಿ, ನಿಮ್ಮ ಉತ್ತಮ ನಿದ್ದೆಗೆ ಸಹಕಾರಿಯಾಗಿರುತ್ತದೆ.



Click it and Unblock the Notifications