ಗರ್ಭಿಣಿಯರೇ, ನಿಮಗೆ ಈ ಮಾಹಿತಿ ತಿಳಿದಿದೆಯೇ?

By Deepu

ಗರ್ಭಧಾರಣೆ ಎನ್ನುವುದು ಎಷ್ಟು ಆಪ್ಯಾಯಕರವಾಗಿರುತ್ತದೆಯೋ, ಕೆಲವೊಮ್ಮೆ ಅಷ್ಟೇ ಭಾರವೂ ಸಹ ಆಗಿರುತ್ತದೆ. ಬೇಕಾದಾಗ ಗರ್ಭಧರಿಸಿದರೆ ಸಂತೋಷ, ಅದೇ ಬೇಡದ ಸಂದರ್ಭದಲ್ಲಿ ಗರ್ಭಧರಿಸಿದರೆ ಅದರಿಂದ ವಿಪರೀತ ಕಷ್ಟ ಕಿರಿಕಿರಿಗಳನ್ನು ಅನುಭವಿಸಬೇಕಾಗುತ್ತದೆ. ಬಾಣಂತಿಯು ಮಗುವಿಗೆ ಹಾಲು ಕುಡಿಸುತ್ತಿದ್ದರು ಸಹ ತಾಯಿಯಾಗಬಹುದಾ? ಮಗುವಿಗೆ ಜನ್ಮ ನೀಡಿದ 10 ದಿನಗಳ ನಂತರ ಗರ್ಭಧರಿಸಬಹುದಾ? ಋತು ಚಕ್ರದ ಸಂದರ್ಭದಲ್ಲಿ ಸಹ ಆಕೆ ಗರ್ಭಧರಿಸುವ ಸಾಮರ್ಥ್ಯ ಪಡೆದಿರುತ್ತಾಳಾ? ಕೇಳಲು ವಿಚಿತ್ರ ಎನಿಸುತ್ತಿದೆಯಲ್ಲವೇ?

Tricky Ways Women Prevent Pregnancy

ಗರ್ಭಿಣಿ ಹೇಗೆ ಆಗಬಹುದು ಎಂಬುದು ನಮ್ಮ ವಿಷಯವಲ್ಲ, ಬಿಡಿ. ಗರ್ಭಧರಿಸುವುದನ್ನು ಹೇಗೆ ತಡೆಯುವುದು ಎಂಬುದು ನಮ್ಮ ವಿಷಯ. ಗರ್ಭ ಧರಿಸುವುದನ್ನು ತಡೆಯುವುದು ಗಂಡಸರ ಕೆಲಸ ಎಂದು ನೀವು ಭಾವಿಸಬೇಡಿ. ಇದರಲ್ಲಿ ಮಹಿಳೆಯರ ಪಾತ್ರವೇ ದೊಡ್ಡದಿರುತ್ತದೆ ಎಂಬುದನ್ನು ಮರೆಯಬೇಡಿ. ಬನ್ನಿ ಇದಕ್ಕಾಗಿ ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಗರ್ಭಧರಿಸುವುದನ್ನು ತಡೆಯಲು ಇರುವ ಅತ್ಯುತ್ತಮ ಮಾರ್ಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಗರ್ಭಿಣಿಯರೇ ಈ ಅಂಶಗಳು ತಿಳಿದಿರಲಿ

ವೀರ್ಯವನ್ನು ಹೊರ ಚೆಲ್ಲುವ ಪ್ರಕ್ರಿಯೆಯನ್ನು ಕಲಿಯುವುದರ ಜೊತೆಗೆ, ಸ್ತ್ರೀಯರ ಕಾಂಡೋಮ್ ಮತ್ತು ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುವವರೆಗೆ ಗರ್ಭವನ್ನು ತಡೆಯಲು ಹಲವಾರು ಮಾರ್ಗಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ ಕೆಲವೊಂದು ನೂರಕ್ಕೆ ನೂರು ಸುರಕ್ಷಿತವಾಗಿದ್ದರೆ, ಇನ್ನೂ ಕೆಲವು ಸ್ತ್ರೀಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ.

ಕೆಲವೊಂದು ಗರ್ಭ ನಿರೋಧಕ ಮಾರ್ಗಗಳು ಮಹಿಳೆಯರಲ್ಲಿ ಗರ್ಭಪಾತಕ್ಕೆ ಕಾರಣವಾಗುತವೆ. ಜೊತೆಗೆ ಭವಿಷ್ಯದಲ್ಲಿ ಅವರಿಗೆ ಗರ್ಭ ಧರಿಸುವ ಸಾಮರ್ಥ್ಯವನ್ನು ಸಹ ಹಾಳು ಮಾಡುತ್ತವೆ. ಆದ್ದರಿಂದ ತಜ್ಞರು ಗರ್ಭ ನಿರೋಧಕ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಸಹ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಬನ್ನಿ ಈ ಮಾರ್ಗಗಳ ಕುರಿತು ಒಮ್ಮೆ ನಾವು ಸಹ ತಿಳಿದುಕೋಳ್ಳೋಣ.

ವೀರ್ಯವನ್ನು ಹೊರಚೆಲ್ಲುವ ವಿಧಾನ
ಒಂದು ಹೊಸ ಅಧ್ಯಯನದ ಪ್ರಕಾರ 3,276 ಅಮೆರಿಕಾದ ಮಹಿಳೆಯರು ತಮಗೆ ಬೇಡದ ಗರ್ಭವನ್ನು ವೀರ್ಯ ಹೊರಚೆಲ್ಲುವ ವಿಧಾನದಿಂದ ತಡೆಯುತ್ತಾರಂತೆ. ವೀರ್ಯ ಸ್ಖಲನವಾಗುವ ಸಂದರ್ಭದಲ್ಲಿ ಅದನ್ನು ಹೊರಗೆ ಚೆಲ್ಲುವ ಮೂಲಕ ಇದನ್ನು ಇವರು ಸಾಧಿಸುತ್ತಾರೆ. ಇದು ಸ್ವಲ್ಪ ಅಪಾಯಕಾರಿಯಾದರು, ಸುರಕ್ಷಿತವಾದ ವಿಧಾನ, ಇದರ ಒಂದೇ ಒಂದು ಅಡ್ಡಪರಿಣಾಮ ಅಪ್ಪಿ-ತಪ್ಪಿದರೆ ಗರ್ಭಧರಿಸಬಹುದು ಅಷ್ಟೇ!

ಸ್ತ್ರೀಯರ ಕಾಂಡೋಮ್‌ಗಳು
ಹಲವರಿಗೆ ಸ್ತ್ರೀಯರ ಕಾಂಡೋಮ್ ಇದೆ ಎಂಬುದೇ ತಿಳಿದಿಲ್ಲ. ಗಂಡಸರು ಮಿಲನದಲ್ಲಿ ಪಾಲ್ಗೊಂಡಾಗ ಇದನ್ನು ಧರಿಸಿದರೆ, ಹೆಂಗಸರು ಇದನ್ನು ಮಿಲನಕ್ಕೆ ಮೊದಲೆ ಎಂಟುಗಂಟೆಗಳ ಮೊದಲೆ ಬೇಕಾದರೂ ಧರಿಸಬಹುದು. ಇದು ಔಷಧಿ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಇದು ಹೆಂಗಸರಿಗೆ ಹೇಳಿ ಮಾಡಿಸಿದ ಕಾಂಡೋಮ್ ಆಗಿರುತ್ತದೆ.

ಗರ್ಭನಿರೋಧಕ ಮಾತ್ರೆಗಳು


ಗರ್ಭನಿರೋಧಕ ಮಾತ್ರೆಗಳು ಹೆಂಗಸರಿಗೆ ಗರ್ಭವನ್ನು ತಡೆಯಲು ಇರುವ ಮಾರ್ಗಗಳಲ್ಲಿ ಒಂದಾಗಿದೆ. ಕೆಲವೊಂದು ಮಾತ್ರೆಗಳು, ಸ್ತ್ರೀಯರು ಅಪ್ಪಿ-ತಪ್ಪಿ ಮಿಲನದಲ್ಲಿ ಪಾಲ್ಗೊಂಡ ನಂತರ ಸಹ ಸೇವಿಸಬಹುದು. ಆದರೆ ಇದು ಅವರ ಆರೋಗ್ಯಕ್ಕೆ ಪೂರಕವಲ್ಲ. ಅವರಿಗೆ ಇದನ್ನು ಸೇವಿಸುವುದರಿಂದ ತಲೆನೋವು, ಋತು ಚಕ್ರದ ಏರು-ಪೇರು, ನಾಸಿಯಾ, ಸ್ತನ ಊದಿಕೊಳ್ಳುವಿಕೆ, ಅಧಿಕ ತೂಕ, ಮೂಡ್ ಬದಲಾವಣೆ, ಕಾಮಾಸಕ್ತಿಯ ಕೊರತೆ, ಯೋನಿ ಸ್ರಾವ ಇತ್ಯಾದಿ ಕಾಣಿಸಿಕೊಳ್ಳುತ್ತದೆ.

ಲ್ಯೂಬ್ರಿಕೆಂಟ್ ಸಹ ಗರ್ಭಧಾರಣೆಯನ್ನು ತಡೆಯುತ್ತವೆ
ಒಂದು ವೇಳೆ ನೀವು ವಾಟರ್-ಬೇಸ್‌ಡ್ ಲೂಬ್ರಿಕೆಂಟ್ ಬಳಸುತ್ತಿದ್ದಲ್ಲಿ, ಅದರಿಂದ ಸಹ ಗರ್ಭಧಾರಣೆಯನ್ನು ತಡೆಯಬಹುದು. ಇವುಗಳಲ್ಲಿರುವ ರಾಸಾಯನಿಕಗಳು ವೀರ್ಯವನ್ನು ತತ್‌ಕ್ಷಣದಲ್ಲಿ ಕೊಲ್ಲುತ್ತವೆ. ಇದನ್ನು ಸಹ ಮಹಿಳೆಯರು ಗರ್ಭನಿರೋಧಕ ಮಾರ್ಗವಾಗಿ ಬಳಸಬಹುದು.

ಸುರಕ್ಷಿತ ಅವಧಿ
ಸಾಮಾನ್ಯವಾಗಿ ಆರೋಗ್ಯಕರವಾಗಿರುವ ಮತ್ತು ಸರಿಯಾದ ಋತುಚಕ್ರದ ಅವಧಿಯನ್ನು ಹೊಂದಿರುವ ಮಹಿಳೆಯರು ಒಂದು ತಿಂಗಳಿನಲ್ಲಿ ಆರು ದಿನಗಳ ಸುರಕ್ಷಿತವಾದ ಅವಧಿಯನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ಮಿಲನ ಮಾಡುವುದರಿಂದ ಅಥವಾ ಆ ಅವಧಿಯಲ್ಲಿ ಗರ್ಭ ನಿರೋಧಕಗಳನ್ನು ಬಳಸದೆ ಮಿಲನ ಮಾಡುವುದರಿಂದ, ಗರ್ಭಧರಿಸುವ ಅಪಾಯ ಇರುವುದಿಲ್ಲ. ಆದರೂ ಇದು ಅಷ್ಟೊಂದು ಸುರಕ್ಷಿತವಲ್ಲ ಎಂಬುದು ಹಲವರ ಅಭಿಪ್ರಾಯ.

ಐಯುಡಿ
ಅಸುರಕ್ಷಿತ ಮಿಲನ ನಡೆಸಿದ ಐದು ದಿನಗಳ ಒಳಗೆ ಐಯುಡಿಯನ್ನು ಅಳವಡಿಸಿಕೊಳ್ಳುವುದರಿಂದ ಗರ್ಭಧಾರಣೆಯನ್ನು ತಡೆಯಬಹುದು. ಈ ಐಯುಡಿಯು ಐದರಿಂದ ಹತ್ತು ದಿನಗಳವರೆಗೆ ಇರುತ್ತದೆ. ಈ ವಿಧಾನವು ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರವಾಗಿರುವುದರಿಂದಾಗಿ, ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

X
Desktop Bottom Promotion