ಗರ್ಭಾವಸ್ಥೆಯಲ್ಲಿ ಕಾಡುವ ವಿಚಿತ್ರ ಲಕ್ಷಣಗಳು, ನಿರ್ಲಕ್ಷಿಸಬೇಡಿ

By Deepu

ಗರ್ಭಾವಧಿಯು ಎಷ್ಟು ಸುಂದರವಾದ ಅವಧಿಯಾಗಿರುತ್ತದೆ ಎಂದರೆ, ಪ್ರತಿಯೊಂದು ಹೆಣ್ಣು ತಾಯಿಯಾಗುವುದನ್ನು ಎದುರು ನೋಡುವ ಮುನ್ನ ಈ ಅವಧಿಯ ಕನಸು ಕಂಡಿರುತ್ತಾಳೆ. ತಾನು ಗರ್ಭದಲ್ಲಿ ಒಂದು ಮಗುವಿಗೆ ಜೀವ ನೀಡಬೇಕು ಎಂದು ಆಕೆ ಕನಸು ಕಂಡಿರುತ್ತಾಳೆ. ಆದರೆ ಕನಸಿನಷ್ಟು ಈ ಅವಧಿಯು ಸುಖಮಯವಾಗಿರುವುದಿಲ್ಲ. ಈ ಅವಧಿಯು ಹೂವಿನ ಹಾಸಿಗೆಯಂತೆ ಇರುವುದಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಗರ್ಭಿಣಿಯರ ಆರೋಗ್ಯಕ್ಕೆ ಗಿಡಮೂಲಿಕೆಯ ಉಪಚಾರ

ಈ ಅವಧಿಯಲ್ಲಿ ಹೆಣ್ಣಿಗೆ ಹಲವಾರು ಸಮಸ್ಯೆಗಳು ಒಂದರ ಹಿಂದೆ ಒಂದು ಕಾಣಿಸಿಕೊಳ್ಳುತ್ತಾ ಇರುತ್ತದೆ. ಕೆಲವೊಂದು ಸಮಸ್ಯೆಗಳು ಕ್ಷಣ ಮಾತ್ರದಲ್ಲಿ ಕಾಣಿಸಿಕೊಂಡು ಹೋಗಿ ಬಿಡುತ್ತವೆ. ಇನ್ನೂ ಕೆಲವೊಂದು ಅಪಾಯಕಾರಿಯಾಗಿ, ಗರ್ಭಿಣಿಯರಿಗೆ ದುಸ್ವಪ್ನವಾಗಿ ಕಾಡುತ್ತದೆ. ಹೀಗೆ ಗರ್ಭಾವಧಿಯು ಹಲವಾರು ಏರು ಪೇರುಗಳನ್ನು ಹೊಂದಿರುತ್ತದೆ. ಹೀಗೆ ಗರ್ಭಿಣಿಯರಿಗೆ ಹಲವಾರು ವಿಚಿತ್ರವಾದ ಲಕ್ಷಣಗಳು ಕಾಣಿಸಿಕೊಳ್ಳುತ್ತಾ ಇರುತ್ತವೆ. ಈ ವಿಚಿತ್ರ ಸಂಗತಿಗಳು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಅದಲ್ಲದೆ ಹೆರಿಗೆಯ ನಂತರ ಮೊದಲ ತಿಂಗಳಲ್ಲಿ ಬಾಣಂತಿಯರಿಗೆ ನಿರ್ಜಲೀಕರಣದ ಸಮಸ್ಯೆ ಕೂಡ ಕಾಡುತ್ತದೆ, ಹೀಗೆ ಹತ್ತು ಹಲವಾರು ಸಮಸ್ಯೆಗಳು ಗರ್ಭಾವಧಿಯಲ್ಲಿ ಕಂಡು ಬರುವುದು ಸಹಜ... ಗರ್ಭಿಣಿಯರ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಯ ಹಂಗೇಕೆ?

ಇತ್ತೀಚಿನ ಅಧ್ಯಯನಗಳ ಪ್ರಕಾರ ಗರ್ಭಿಣಿಯರಲ್ಲಿ ನೀರಿನ ಧಾರಣ ಶಕ್ತಿಯ ಕೊರತೆಯಿಂದಾಗಿ ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಕೆಲವೊಂದು ಸಂದರ್ಭಗಳಲ್ಲಿ, ಗರ್ಭಿಣಿಯರಿಗೆ ಅಧಿಕ ತೂಕ ಸಹ ಉಂಟಾಗುತ್ತದೆ. ಇದು ಸಹ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಲ್ಲಿ ಒಂದಾಗಿದೆ. ಇಂದು ಬೋಲ್ಡ್‌ಸ್ಕೈ ನಿಮಗಾಗಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ವಿಚಿತ್ರ ಸಮಸ್ಯೆಗಳ ಕುರಿತು ತಿಳಿಸಿಕೊಡುತ್ತಿದೆ. ಪ್ರತಿ 5 ಜನ ಮಹಿಳೆಯರಲ್ಲಿ ಇಬ್ಬರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ನೀವು ಸಹ ಇಂತಹ ವಿಚಿತ್ರ ಸಮಸ್ಯೆಗಳಿಂದ ನರಳುತ್ತಿರುವ ಗರ್ಭಿಣಿಯಾಗಿದ್ದಲ್ಲಿ, ಹೆದರಬೇಡಿ. ಪ್ರತಿ ಸಮಸ್ಯೆಗೆ ಒಂದು ಪರಿಹಾರ ಇರುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಬನ್ನಿ ಆ ಸಮಸ್ಯೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ....

ಊದಿಕೊಂಡ ದವಡೆಗಳು

ಊದಿಕೊಂಡ ದವಡೆಗಳು

ಗರ್ಭಿಣಿಯಾಗಿರುವಾಗ ಕಂಡು ಬರುವ ಸಮಸ್ಯೆಗಳಲ್ಲಿ ಊದಿಕೊಂಡ ದವಡೆಗಳ ಸಮಸ್ಯೆ ಸಹ ಒಂದು. ದವಡೆಗಳಲ್ಲಿ ರಕ್ತ ಮತ್ತು ಇನ್ನಿತರ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಗರ್ಭಿಣಿಯರಲ್ಲಿ ಅಧಿಕ ರಕ್ತ ಪಸರಣೆಯಿರುವುದರಿಂದಾಗಿ ಅವರಲ್ಲಿ ಪ್ರೊಜೆಸ್ಟೆರೋನ್ ಮತ್ತು ಈಸ್ಟ್ರೊಜೆನ್ ಪ್ರಮಾಣದಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಇದರಿಂದಾಗಿ ದಂತ ಸಮಸ್ಯೆಗಳು ಕಂಡು ಬರುತ್ತವೆ.

ಮೂಗು ಊತ

ಮೂಗು ಊತ

ನೀವು ಗರ್ಭಿಣಿಯಾಗಿರುವಾಗ ನಿಮಗೆ ಮೂಗು ಸಹ ಊದಿಕೊಂಡ ಅನುಭವವುಂಟಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮೂಗಿನಲ್ಲಿ ಚರ್ಮವು ಕೆಂಪು ಬಣ್ಣಕ್ಕೆ ಬದಲಾಗುತ್ತದೆ. ಜೊತೆಗೆ ಮೂಗಿನಲ್ಲಿ ರಕ್ತ ಸ್ರಾವ ಸಹ ಉಂಟಾಗುತ್ತದೆ. ಇದನ್ನು ನಿವಾರಿಸಿಕೊಳ್ಳಲು ಸಲೈನ್ ಹನಿಗಳನ್ನು ಬಳಸಿಕೊಳ್ಳಬಹುದು

ಬೆಳೆಯುವ ಪಾದಗಳು

ಬೆಳೆಯುವ ಪಾದಗಳು

ನೀವು ಗರ್ಭಿಣಿಯಾಗಿರುವಾಗ ನಿಮ್ಮ ಪಾದಗಳು ಸಹ ಬೆಳೆಯಲು ಆರಂಭಿಸುತ್ತವೆ. ಶಾಕ್ ಆದಿರಾ? ಇತ್ತೀಚಿನ ಅಧ್ಯಯನಗಳ ಪ್ರಕಾರ ಗರ್ಭಿಣಿಯರಲ್ಲಿ ಪಾದಗಳು ತಾತ್ಕಾಲಿಕವಾಗಿ ಬೆಳೆಯುತ್ತವೆಯಂತೆ. ಇದಕ್ಕೆ ಗರ್ಭಿಣಿಯರ ದೇಹದಲ್ಲಿ ಉತ್ಪತ್ತಿಯಾಗುವ ರಿಲ್ಯಾಕ್ಸಿನ್ ಎಂಬ ಹಾರ್ಮೋನ್ ಕಾರಣವಾಗಿರುತ್ತದೆ.

ಬೆಳೆಯುವ ಪಾದಗಳು

ಬೆಳೆಯುವ ಪಾದಗಳು

ಈ ಹಾರ್ಮೋನ್ ಮಗುವು ಹೊರಗೆ ಬರಲು ಗರ್ಭಾಶಯದಲ್ಲಿರುವ ಕಟ್ಟುಗಳನ್ನು ಸಡಿಲ ಮಾಡುತ್ತದೆ. ಆದರೆ ಇದರಿಂದಾಗಿ ಪಾದಗಳು ಮತ್ತು ಕೀಲುಗಳ ಮೇಲೆ ಪರಿಣಾಮವುಂಟಾಗುತ್ತದೆ. ಆಗ ಪಾದಗಳು ಅಗಲ/ಉದ್ದವಾಗುತ್ತವೆ. ಒಮ್ಮೊಮ್ಮೆ ಚಪ್ಪಟೆ ಸಹ ಆಗುತ್ತದೆ.

 ತ್ವಚೆಯ ಸಮಸ್ಯೆ

ತ್ವಚೆಯ ಸಮಸ್ಯೆ

ತ್ವಚೆಯಲ್ಲಿ ಕಲೆಗಳು, ಮೊಡವೆಗಳು, ಕಪ್ಪು ಕಲೆಗಳು ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುತ್ತಲೆ ಇರುತ್ತವೆ. ಇದಕ್ಕೆ ದೇಹದಲ್ಲಿರುವ ಹಾರ್ಮೋನುಗಳೇ ಕಾರಣ. ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಈ ಸಂದರ್ಭದಲ್ಲಿ ಮನೆ ಮದ್ದುಗಳನ್ನು ಬಳಸಿ. ಇವು ಗರ್ಭಿಣಿಯರಿಗೆ ಸುರಕ್ಷಿತ, ಮಾರುಕಟ್ಟೆಯಲ್ಲಿ ದೊರೆಯುವಂತಹ ಉತ್ಪನ್ನಗಳು ನಿಮ್ಮ ಮಗುವಿನ ಮೇಲೆ ಮತ್ತು ನಿಮ್ಮ ಮೇಲೆ ದುಷ್ಪರಿಣಾಮವನ್ನು ಬೀರಬಹುದು.

Story first published: Tuesday, January 5, 2016, 23:17 [IST]
X
Desktop Bottom Promotion