Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಗರ್ಭಾವಸ್ಥೆಯಲ್ಲಿ ಕಾಡುವ ಹಲ್ಲು ನೋವಿಗೆ ಕಂಗಾಲಾಗದಿರಿ
ಸ್ತ್ರೀ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಗೆ ಕಾಯಿಲೆಗಳು ಬೆನ್ನಿಗೆ ಅಂಟಿಕೊಂಡೇ ಇರುತ್ತವೆ. ವಾಂತಿ, ತಲೆನೋವು, ಸುಸ್ತು, ಬಳಲಿಕೆ ಒಂದೆಡೆಯಾದರೆ ಸೊಂಟದ ಭಾಗದಲ್ಲಿ ಸೆಳೆತ, ಕಾಲುಗಳಲ್ಲಿನ ಸೆಳೆತ, ಬೆನ್ನು ನೋವು ಹೀಗೆ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಂಡು ಆಕೆಯನ್ನು ಹೈರಾಣಾಗಿಸುತ್ತದೆ. ಇನ್ನೊಂದು ಜೀವವನ್ನು ತನ್ನೊಂದಿಗೆ ಹೊರುವ ಆಕೆಯಲ್ಲಿ ಈ ನೋವುಗಳು ಕಾಣಿಸಿಕೊಂಡು ಆಕೆಯನ್ನು ಕಾಡಿಸಿದರೂ ತಾಯಿಗೆ ಈ ಬೇನೆಗಳು ಒಂದು ರೀತಿಯ ಶಕ್ತಿಯನ್ನು ನೀಡುತ್ತವೆ. ಹೆರಿಗೆಯ ಸಂದರ್ಭದಲ್ಲಿ ನೋವನ್ನು ಅನುಭವಿಸುವ ಶಕ್ತಿ ಬರುವುದು ಆಕೆ ಗರ್ಭಾವಸ್ಥೆಯಲ್ಲಿ ಈ ನೋವಿನ ಮಜಲುಗಳನ್ನು ದಾಟಿದಾಗಲೇ.
ಇನ್ನು ಬಾಯಿಯ ಸಮಸ್ಯೆಗಳೂ ಗರ್ಭಾವಸ್ಥೆಯಲ್ಲಿ ಸ್ತ್ರೀಯನ್ನು ಕಾಡುತ್ತದೆ. ಹಲ್ಲಿನ ಮತ್ತು ವಸಡಿನ ಸಮಸ್ಯೆಗಳು ಹಾರ್ಮೋನುಗಳ ಬದಲಾವಣೆಯಿಂದ ಆಕೆಯಲ್ಲಿ ಉಂಟಾಗುತ್ತದೆ. ಈ ಬದಲಾವಣೆಗಳು ಆಕೆಯ ಹಲ್ಲುಗಳನ್ನು ಹೆಚ್ಚು ಸೂಕ್ಷ್ಮಗೊಳಿಸಿ ಸೋಂಕುಗಳಿಗೆ ಈಡಾಗುವಂತೆ ಮಾಡುತ್ತದೆ. ತಾಯಿಯು ಹಲ್ಲು ಮತ್ತು ದವಡೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮಗುವಿನ ಪ್ರಸವ ಪೂರ್ವ ಅಪಾಯ ಕೂಡ ಇರುತ್ತದೆ. ಈ ಸಮಸ್ಯೆಗೆ ಕಾರಣವಾಗುವ ಇತರೆ ಅಂಶಗಳೆಂದರೆ ಪ್ರೊಜೆಸ್ಟರನ್ ಹೆಚ್ಚಳ, ಸಿಹಿ ಆಹಾರ ಮತ್ತು ಕ್ಯಾಲ್ಸಿಯಮ್ ಕೊರತೆ ಕೂಡ ಆಗಿದೆ. ನಿದ್ದೆ ಕೆಡಿಸುವ ಹಲ್ಲು ನೋವಿಗೆ ಮನೆಮದ್ದಿನ ಚಿಕಿತ್ಸೆ
ಈ ಸಮಸ್ಯೆಯನ್ನು ದೂರಮಾಡಲು ಆಕೆ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಹಣ್ಣುಗಳು ಮತ್ತು ತಾಜಾ ತರಕಾರಿಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸಬೇಕಾಗುತ್ತದೆ. ಮನೆಯಲ್ಲಿ ಕೂಡ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರ ಮೂಲಕ ಹಲ್ಲು ಮತ್ತು ದವಡೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಬೋಲ್ಡ್ ಸ್ಕೈ ಇಂತಹುದೇ ಕೆಲವೊಂದು ನೈಸರ್ಗಿಕ ವಿಧಾನಗಳನ್ನು ನಿಮ್ಮ ಮುಂದೆ ಇಡುತ್ತಿದ್ದು ಇದು ಹಲ್ಲು ಮತ್ತು ದವಡೆಯ ಸಮಸ್ಯೆಗಳನ್ನು ಪರಿಹರಿಸಲಿದೆ.

ಗ್ರೀನ್ ಟೀ
ಗ್ರೀನ್ ಟೀಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ದವಡೆಗಳಲ್ಲಿ ಉಂಟಾಗುವ ಊತವನ್ನು ಕಡಿಮೆ ಮಾಡುತ್ತದೆ ಅಂತೆಯೇ ಹಲ್ಲುಗಳಲ್ಲಿ ಜಮಾವಣೆಯಾಗುವ ಪ್ಲೇಕ್ ಅನ್ನು ಇಳಿಮುಖವಾಗಿಸುತ್ತದೆ. ಪಾಲಿಫೆನೊಲ್ಗಳು ಹಲ್ಲುಗಳಲ್ಲಿರುವ ಕುಳಿಗಳಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.

ಆಲೀವ್ ಆಯಿಲ್
ಹಲ್ಲಿನ ಸಮಸ್ಯೆಗಳನ್ನು ಉಪಚರಿಸಲು ಆಲೀವ್ ಆಯಿಲ್ ಅನ್ನು ಬಳಸಬಹುದಾಗಿದೆ. ನಿಮ್ಮ ಆಹಾರದಲ್ಲಿ ಇದನ್ನು ಬಳಸುವುದರಿಂದ ಹಲ್ಲು ದೃಢಗೊಳ್ಳುತ್ತದೆ ಮತ್ತು ಪ್ಲೇಕ್ ರಚನೆಯನ್ನು ಸೀಮಿತಗೊಳಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಈ ಎಣ್ಣೆ ಹೊಂದಿರುವುದರಿಂದ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ವಸಡಿನ ಸಮಸ್ಯೆಗಳು ದೂರಾಗುತ್ತದೆ.

ಜೇನು
ಗರ್ಭಾವಸ್ಥೆಯಲ್ಲಿ ಕಂಡು ಬರುವ ವಸಡಿನ ಸಮಸ್ಯೆಗಳನ್ನು ದೂರಮಾಡುವಲ್ಲಿ ಜೇನು ಸಹಕಾರಿಯಾಗಿದೆ. ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಜೇನು ಹೊಂದಿರುವುದರಿಂದ ಅಗತ್ಯ ವಿಟಮಿನ್‌ಗಳು, ಮಿನರಲ್‌ಗಳು ಮತ್ತು ನ್ಯೂಟ್ರೀನ್‌ಗಳನ್ನು ಇದು ಒದಗಿಸುತ್ತದೆ. ಹಾಗೂ ಹಲ್ಲಿನ ವಸಡಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಅಲೊವೇರಾ
ಶಿಲೀಂಧ್ರ ವಿರೋಧಿಯಾಗಿರುವ ಅಲೊವೇರಾ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶುದ್ಧೀಕರಣ ಗುಣಗಳನ್ನು ಹೊಂದಿದೆ ಹಾಗೆಯೇ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ. ದಂತಕುಳಿಗಳ ವಿರುದ್ಧ ಇದು ಹೋರಾಡಿ ಅದರ ಅಪಾಯಗಳನ್ನು ಕಡಿಮೆ ಮಾಡುತ್ತದೆ ಅಂತೆಯೇ ವಸಡುಗಳಲ್ಲಿ ರಕ್ತ ಒಸರುವುದು, ಊತವನ್ನು ಕಡಿಮೆ ಮಾಡುತ್ತದೆ. ಈ ರೀತಿಯಲ್ಲಿ ಹಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬೇಕಿಂಗ್ ಸೋಡಾ
ವಸಡಿನ ರೋಗವನ್ನು ಉಂಟುಮಾಡುವ ಆಸಿಡ್ ಅನ್ನು ಅನ್ನು ತಟಸ್ಥಗೊಳಿಸಲು ಬೇಕಿಂಗ್ ಸೋಡಾ ಸಹಕಾರಿಯಾಗಿದೆ. ಪ್ರತೀ ದಿನ ರಾತ್ರಿ ನಿಮ್ಮ ಹಲ್ಲುಗಳನ್ನು ಬೇಕಿಂಗ್ ಸೋಡಾದಿಂದ ಉಜ್ಜಿಕೊಳ್ಳಿ ಇದು ಹಲ್ಲಿನ ಮತ್ತು ವಸಡಿನ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ.

ಲವಂಗದೆಣ್ಣೆ
ಹಲ್ಲಿನ ಮತ್ತು ವಸಡಿನ ಸಮಸ್ಯೆಗಳನ್ನು ದೂರಮಾಡಲು ಲವಂಗದೆಣ್ಣೆಯನ್ನು ಬಳಸಲಾಗುತ್ತದೆ. ಇದು ಆಂಟಿಸೆಪ್ಟಿಕ್‌ನಂತೆ ಕಾರ್ಯನಿರ್ವಹಿಸಿ ಗರ್ಭಾವಸ್ಥೆಯಲ್ಲಿ ಕಂಡುಬರುವ ವಸಡು ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ. ಬ್ಯಾಕ್ಟೀರಿಯಾ ಸೋಂಕುಗಳನ್ನು ತೊಡೆದು ಹಾಕಲು ಸಹಕಾರಿಯಾಗಿದೆ.



Click it and Unblock the Notifications











