Latest Updates
-
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು!
ಗರ್ಭಿಣಿಯರ ಆಹಾರಕ್ರಮ, ಮಿತವಾಗಿ ಸೇವಿಸಿದಷ್ಟು ಒಳ್ಳೆಯದು
ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸೇವಿಸುವ ಆಹಾರ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅತಿ ಮುಖ್ಯವಾಗಿದೆ. ಆದರೆ ಗರ್ಭಾವಸ್ಥೆಯಲ್ಲಿ ಕಾಡುವ ವಾಕರಿಕೆ, ಸುಸ್ತು ಮೊದಲಾದ ತೊಂದರೆಗಳಿಂದ ಹಲವು ಗರ್ಭಿಣಿಯರು ಸರಿಯಾಗಿ ಊಟ ಮಾಡಲು ಬೇಸರ ವ್ಯಕ್ತಪಡಿಸುತ್ತಾರೆ. ಇದರಿಂದ ಗರ್ಭಿಣಿಯ ದೇಹ ಪೋಷಕಾಂಶಗಳ ಕೊರತೆಯಿಂದ ಬಳಲುತ್ತದೆ. ವ್ಯತಿರಿಕ್ತವಾಗಿ ಕೆಲವರು ಅಗತ್ಯಕ್ಕಿಂತಲೂ ಹೆಚ್ಚು ತಿನ್ನುತ್ತಾರೆ.
ಪರಿಣಾಮವಾಗಿ ತೂಕ ಅತೀವವಾಗಿ ಹೆಚ್ಚಿ ಗರ್ಭಾವಸ್ಥೆಯ ಮಧುಮೇಹ ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಹೆರಿಗೆಯೂ ಕಷ್ಟಕರವಾಗುವ ಕಾರಣ ಅನಿವಾರ್ಯವಾಗಿ ಸಿಸೇರಿಯನ್ ಮತ್ತು preeclampsia ಎಂಬ ಅತಿ ಹೆಚ್ಚಿನ ರಕ್ತದೊತ್ತಡದ ತೊಂದರೆ ಮೊದಲಾದವು ಎದುರಾಗಬಹುದು. ಆದ್ದರಿಂದ ಗರ್ಭಿಣಿಯರು ತಿನ್ನುವ ಆಹಾರದ ಗುಣಮಟ್ಟ ಮತ್ತು ಪ್ರಮಾಣ ಎರಡೂ ಅತಿ ಮುಖ್ಯವಾಗಿದೆ.

ಹೆಚ್ಚೂ ತಿನ್ನಬಾರದು, ಕಡಿಮೆಯೂ ತಿನ್ನಬಾರದು ಸರಿ, ಹಾಗಾದರೆ ಸಮಪ್ರಮಾಣ ಎಂದರೆ ಎಷ್ಟು? ಇದು ಪ್ರತಿ ಗರ್ಭಿಣಿ ಕೇಳುವ ಪ್ರಶ್ನೆ. ಇದಕ್ಕೆ ತಜ್ಞರು ಒಟ್ಟು ಒಂಭತ್ತು ತಿಂಗಳಲ್ಲಿ ಆಹಾರದ ಪ್ರಮಾಣ ಕೊಂಚಕೊಂಚವಾಗಿ ಹೆಚ್ಚಿಸುತ್ತಾ ಹೋಗಬೇಕು ಎಂದು ತಿಳಿಸುತ್ತಾರೆ. ಇದರಲ್ಲಿ ಹೆಚ್ಚು ಹಣ್ಣು ಮತ್ತು ತರಕಾರಿಗಳಿರಬೇಕು. ಹೊಟ್ಟೆಯ ಬೆಳವಣಿಗೆಯ ಗತಿ ನಿಧಾನವಾಗಿದ್ದರೂ ಗರ್ಭದ ಮಗುವಿನ ಪೋಷಕಾಂಶಗಳ ಅಗತ್ಯ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಹೋಗುವುದರಿಂದ ಈ ಕ್ರಮ ಉತ್ತಮವಾಗಿದೆ.
ದಿನವಿಡೀ ಚಿಕ್ಕ ಪ್ರಮಾಣದಲ್ಲಿ ನಿಯಮಿತವಾದ ಅಂತರದಲ್ಲಿ ಉತ್ತಮ ಪೋಷಕಾಂಶದ ಆಹಾರವನ್ನು ಸೇವಿಸುತ್ತಾ ಬಂದರೆ ಈ ಮೂಲಕ ಲಭ್ಯವಾಗುವ ಪೋಷಕಾಂಶಗಳು ತಾಯಿಯ ರಕ್ತದ ಮೂಲಕ ಮಗುವಿಗೆ ಸತತವಾಗಿ ಲಭಿಸುತ್ತಾ ಹೋಗುತ್ತದೆ. ಇದು ಮಗುವಿನ ಸಮರ್ಪಕ ಬೆಳವಣಿಗೆಗೆ ಪೂರಕವಾಗಿದೆ.
ಅಂದರೆ ಪ್ರತಿ ಎರಡು ಅಥವಾ ಮೂರು ಗಂಟೆಗಳಿಗೊಮ್ಮೆ ಚಿಕ್ಕ ಪ್ರಮಾಣದಲ್ಲಿ ಆಹಾರ ಸೇವಿಸುವುದು ಉತ್ತಮ. ಇದರಿಂದ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವೂ ನಿಧಾನವಾಗಿ ಮತ್ತು ಸತತವಾಗಿ ದೇಹಕ್ಕೆ ಲಭ್ಯವಾಗುವ ಕಾರಣ ಸುಸ್ತು ಮತ್ತು ವಾಕರಿಕೆಗಳೂ ಕಡಿಮೆಯಾಗುತ್ತವೆ. ಬನ್ನಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ:
* ದಿನದ ಅವಧಿಯಲ್ಲಿ ದೊಡ್ಡ ಪ್ರಮಾಣದ ಊಟ ಮಾಡುವುದು ನಿಮಗೆ ಅಪಾಯಕರ. ಇದು ಜೀರ್ಣಕ್ರಿಯೆಯ ತೊಂದರೆಗಳಿಗೂ ಆಹ್ವಾನ ನೀಡಬಹುದು.
* ಮುಂಜಾನೆಯ ಉಪಾಹಾರ ಕೊಂಚ ಹೆಚ್ಚಿರಲಿ, ಆದರೆ ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ ಸರಳ ಮತ್ತು ಕಡಿಮೆ ಪ್ರಮಾಣದಲ್ಲಿರಲಿ. ಈ ಊಟಗಳಲ್ಲಿ ಸಾಕಷ್ಟು ಹಣ್ಣು ತರಕಾರಿ, ನಾರು ಇರುವಂತೆ ನೋಡಿಕೊಳ್ಳಿ. ಇದೇ ಅಹಾರದ ಕೊಂಚ ಪ್ರಮಾಣವನ್ನು ಎರಡು ಊಟಗಳ ನಡುವೆ ಒಂದು ಅಥವಾ ಎರಡು ಬಾರಿ ಸೇವಿಸಿ. ದಿನವಿಡೀ ಚಿಕ್ಕ ಪ್ರಮಾಣದಲ್ಲಿ ನೀರನ್ನು ಮಾತ್ರ ಸತತವಾಗಿ ಸೇವಿಸುತ್ತಲೇ ಇರಬೇಕು. ಅಲ್ಲದೆ ಪ್ರತಿದಿನವೂ ಹತ್ತರಿಂದ ಹನ್ನೆರಡು ಲೋಟ ನೀರು ಮತ್ತು ಇತರ ದ್ರವಾಹಾರವನ್ನು ಕುಡಿಯಬೇಕು.
* ಸಾಮಾನ್ಯ ಆರೋಗ್ಯವಂತರಿಗೆ ದಿನಕ್ಕೆ 2000 ಕ್ಯಾಲೋರಿಗಳಷ್ಟು ಶಕ್ತಿಯ ಅಗತ್ಯವಿದೆ. ಗರ್ಭಾವಸ್ಥೆಯಲ್ಲಿ ಈ ಅಗತ್ಯತೆ 2200 - 2300ಕ್ಯಾಲೋರಿಗಳಿಗೆ ಏರುತ್ತದೆ. ಆದ್ದರಿಂದ ಈ ಕ್ಯಾಲೋರಿಗಳನ್ನು ನಿಮ್ಮ ಇಡಿಯ ದಿನ ಸೇವಿಸುವ ಪ್ರಮಾಣದಲ್ಲಿ ಸಮನಾಗಿ ವಿಂಗಡಣೆಯಾಗುವಂತೆ ನೋಡಿಕೊಳ್ಳಿ. ಗರ್ಭಿಣಿಯರಿಗೆ ಕೆಲವೊಂದು ಮುನ್ನೆಚ್ಚರಿಕೆಯ ಸಲಹೆಗಳು
* ಪ್ರಥಮ ತಿಂಗಳುಗಳಲ್ಲಿ ಎದುರಾಗುವ ವಾಂತಿ ಮತ್ತು ವಾಕರಿಕೆಯ ಕಾರಣ ಹೆಚ್ಚಿನ ಗರ್ಭಿಣಿಯರು ಆಹಾರ ಸೇವಿಸುವುದನ್ನೇ ಕಡಿಮೆ ಮಾಡುತ್ತಾರೆ. ಪರಿಣಾಮವಾಗಿ ಎರಡನೆಯ ತ್ರೈಮಾಸಿಕ ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಹಸಿವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ವಾಕರಿಕೆ ವಾಂತಿ ಕಡಿಮೆಯಾಗಿರುವುದರಿಂದ ಹೆಚ್ಚು ತಿನ್ನಲು ಬಯಕೆಯಾಗುತ್ತದೆ. ಆಗ ಕಂಡಿದ್ದೆಲ್ಲಾ ತಿನ್ನಬೇಕೆನಿಸುತ್ತದೆ.
ಪರಿಣಾಮವಾಗಿ ಅನಾರೋಗ್ಯಕರ ಆಹಾರ ಸೇವಿಸಿ ತೂಕ ಹೆಚ್ಚಾಗುವುದು ಮತ್ತು ಆರೋಗ್ಯದಲ್ಲಿ ಏರುಪೇರಾಗುವ ತೊಂದರೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಮಾರುಕಟ್ಟೆಯಲ್ಲಿ ಸುಂದರವಾಗಿ ಕಾಣುವ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿ ಜೀವಕೋಶಗಳು ಬಳಲುತ್ತವೆ, ಕೊಬ್ಬು ಹೆಚ್ಚಾಗುತ್ತದೆ ಮತ್ತು ಪರಿಣಾಮವಾಗಿ ಸ್ಥೂಲಕಾಯ ಮತ್ತು ಇತರ ಸಂಬಂಧಿತ ರೋಗಗಳು ಆವರಿಸುತ್ತವೆ.



Click it and Unblock the Notifications
