Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಗರ್ಭಿಣಿಯರಿಗೂ ಬೆನ್ನೇರಿ ಕಾಡುವ ಒತ್ತಡದ ಸಮಸ್ಯೆ....
ಗರ್ಭಾವಸ್ಥೆ ಒಂದು ಸುಂದರ ಅನುಭವವೂ ಹೌದು ಹಲವು ಒತ್ತಡಗಳಿಗೆ ಕಾರಣವೂ ಹೌದು. ಈ ಒತ್ತಡಗಳಿಗೆ ಹಲವು ಪರಿಸ್ಥಿತಿ ಮತ್ತು ಸನ್ನಿವೇಶಗಳು ಕಾರಣವಾಗುತ್ತವೆ. ಗರ್ಭಿಣಿಯ ದೇಹದಲ್ಲಿ ಆಗುವ ಹಾರ್ಮೋನುಗಳ ಏರುಪೇರು, ಭವಿಷ್ಯದ ಬಗ್ಗೆ ಚಿಂತನೆ, ಗಂಡುಮಗುವೇ ಬೇಕು ಎಂದು ಹಿರಿಯರು ಹಿಡಿಯುವ ಹಠ, ಹಿಂದಿನ ದಿನಗಳಿಂದಲೇ ಇದ್ದ ಮಾನಸಿಕ ತೊಂದರೆ, ದೈಹಿಕ ಅಸೌಖ್ಯತೆ ಮೊದಲಾದವೆಲ್ಲಾ ಒತ್ತಡಕ್ಕೆ ಕಾರಣವಾಗಬಹುದು. ಕೆಲಸದ ಒತ್ತಡ ಗರ್ಭಧಾರಣೆ ಮೇಲೆ ಪರಿಣಾಮಬೀರುವುದೇ?
ತಡವಾದ ವಯಸ್ಸಿನಲ್ಲಿ ಗರ್ಭ ಧರಿಸಿದವರಿಗೆ ಮುಂದಿನ ದಿನಗಳ ಬಗ್ಗೆ ಆತಂಕವೂ ಒತ್ತಡ ನೀಡಬಹುದು. ಈ ಒತ್ತಡದ ಪರಿಣಾಮವಾಗಿ ನಿದ್ರಾಹೀನತೆ, ತಲೆನೋವು, ಹಸಿವಿಲ್ಲದಿರುವುದು, ಹೃದಯದ ಬಡಿತ ಹೆಚ್ಚುವುದು ಮತ್ತು ಒಂದೇ ವಿಷಯದ ಬಗ್ಗೆ ಸತತವಾಗಿ ಚಿಂತಿಸುತ್ತಿರುವುದು ಮೊದಲಾದ ತೊಂದರೆಗಳು ಕಂಡುಬರಬಹುದು. ಇದರಲ್ಲಿ ನಿದ್ರಾಹೀನತೆ ಅತ್ಯಂತ ಅಪಾಯಕರವಾಗಿದ್ದು ಮುಂದಿನ ದಿನಗಳಲ್ಲಿ ಹಲವು ರೀತಿಯ ತೊಂದರೆಗಳನ್ನು ಎದುರಾಗಿಸಬಹುದು.
ಒಂದು ವೇಳೆ ಒತ್ತಡ ಅತಿ ಹೆಚ್ಚಾಗಿದ್ದರೆ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯೂ ಹೆಚ್ಚುತ್ತದೆ. ಇದರಲ್ಲಿ ಅಧಿಕ ರಕ್ತದೊತ್ತಡ ಮತ್ತು ಇದರ ಮೂಲಕ ಬರುವ ಸುಸ್ತು ಇತ್ಯಾದಿಗಳು ತಾಯಿಯ ಆರೋಗ್ಯಕ್ಕಿಂತ ಹೆಚ್ಚಾಗಿ ಮಗುವಿನ ಆರೋಗ್ಯವನ್ನೇ ಬಾಧಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಗಳಿಂದ ಕಂಡುಬಂದಿದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಒತ್ತಡದಿಂದ ಮುಕ್ತರಾಗಿರುವುದು ಅವಶ್ಯಕವಾಗಿದ್ದು ಇದನ್ನು ಹೇಗೆ ಸಾಧಿಸಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ನೆರವಾಗಲಿವೆ...

ಒತ್ತಡದ ಕಾರಣಗಳನ್ನು ಕಂಡುಕೊಳ್ಳಿ
ನಿಮ್ಮ ಒತ್ತಡಕ್ಕೆ ಏನು ಕಾರಣವಾಗಿರಬಹುದು ಎಂದು ಕಂಡುಕೊಳ್ಳಲು ಪ್ರಯತ್ನಿಸಿ. ಸಾಮಾನ್ಯವಾಗಿ ನಾವೆಲ್ಲರೂ ನೇರವಾಗಿಯೇ ಯೋಚಿಸುತ್ತೇವೆ. ಇನ್ನೊಬ್ಬರ ದೃಷ್ಟಿಯಿಂದ ನೋಡಲು ಅಥವಾ ಭಿನ್ನ ದೃಷ್ಟಿಕೋನದಿಂದ ನೋಡಿ. ಆಗ ನಮ್ಮ ಚರ್ಯೆಯಲ್ಲಿ ಇರುವ ತೊಂದರೆ ಅಥವಾ ಕಾರಣಗಳು ಕಂಡುಬರುತ್ತವೆ. ಸದಾ ಧನಾತ್ಮಕವಾಗಿ ಯೋಚಿಸಿ. ಒತ್ತಡಕ್ಕೆ ಕಾರಣ ಗೊತ್ತಾಯಿತೋ, ಇದಕ್ಕೆ ಪರಿಹಾರವೂ ಸುಲಭ

ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ.
ಗರ್ಭಾವಸ್ಥೆಯಲ್ಲಿ ಸಾಕಷ್ಟು ವಿಶ್ರಾಂತಿ ಅಗತ್ಯ. ದಿನದ ಚಟುವಟಿಕೆಯಲ್ಲಿ ವಿಶ್ರಾಂತಿ ಇಲ್ಲದಿರುವುದು ಮತ್ತು ಅನವರತ ನಿದ್ದೆಯ ಕಾರಣ ಚಡಪಡಿಕೆ, ಮನದಲ್ಲಿ ಋಣಾತ್ಮಕ ಚಿಂತನೆ ಮೊದಲಾದವು ಮೂಡುತ್ತವೆ. ಇವು ಒತ್ತಡಕ್ಕೆ ಕಾರಣವಾಗುತ್ತವೆ. ಆದ್ದರಿಂದ ದಿನಕ್ಕೆ ಸಾಕಷ್ಟು ಕಾಲ ತಡೆಯಿಲ್ಲದ ನಿದ್ದೆ ಮಾಡಿ.

ಆರೋಗ್ಯಕರ ಆಹಾರ ಸೇವಿಸಿ
ಗರ್ಭಾವಸ್ಥೆಯಲ್ಲಿ ಸಂತುಲಿತ ಆಹಾರದ ಸೇವನೆ ಅತಿ ಮುಖ್ಯ.ಇದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರಕುವುದರ ಜೊತೆಗೇ ಮಾನಸಿಕ ದುಗುಡವೂ ಕಡಿಮೆಯಾಗುತ್ತದೆ. ಗರ್ಭದ ಮಗುವಿನ ಬೆಳವಣಿಗೆಯೂ ಸಮರ್ಪಕವಾಗಿ ಮುಂದುವರೆಯುತ್ತದೆ.

ಅರ್ಧ ಗಂಟೆಯ ವ್ಯಾಯಮ
ಗರ್ಭಾವಸ್ಥೆಯಲ್ಲಿ ದಿನಕ್ಕೆ ಅರ್ಧಘಂಟೆಯಾದರೂ ಸರಳ ವ್ಯಾಯಮಗಳನ್ನು ಮಾಡುವುದು ಅಗತ್ಯ. ನಿಯಮಿತವಾಗಿ, ದಿನಕ್ಕೆ ಒಂದು ಸೂಕ್ತ ವೇಳೆಯನ್ನು ನಿಗದಿಪಡಿಸಿ ಆ ವೇಳೆಯನ್ನು ವ್ಯಾಯಾಮಕ್ಕೆ ಮುಡಿಪಾಗಿಡಿ. ಇದರಿಂದ ದೇಹದ ಜೊತೆಗೇ ಮನಸ್ಸಿಗೂ ಮುದ ನೀಡಿದಂತಾಗುತ್ತದೆ. ನಿಯಮಿತ ವ್ಯಾಯಾಮದಿಂದ ದೇಹದಲ್ಲಿ ಒತ್ತಡ ಮತ್ತು ದುಗುಡಕ್ಕೆ ಕಾರಣವಾಗಿರುವ ಕಾರ್ಟಿಸೋಲ್ ಎಂಬ ರಸದೂತದ ಮಟ್ಟ ಕಡಿಮೆಯಾಗುವಂತೆ ಮಾಡಿ ಒತ್ತಡದಿಂದ ಮುಕ್ತರಾಗಬಹುದು.

ಧ್ಯಾನ
ಮನಸ್ಸನ್ನು ನಿರಾಳವಾಗಿಸಲು ಧ್ಯಾನಕ್ಕಿಂತ ಪರಿಣಾಮಕಾರಿಯಾದ ವಿಧಾನ ಇನ್ನೊಂದಿಲ್ಲ. ಗರ್ಭಾವಸ್ಥೆಯಲ್ಲಿ ಇದರ ಮಹತ್ವ ಇನ್ನೂ ಹೆಚ್ಚು. ಇದರಿಂದ ಮನಸ್ಸನ್ನು ನಿರಾಳವಾಗಿಸಲು ಮತ್ತು ಒತ್ತಡಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಈ ದಿನಗಳಲ್ಲಿ ಅನುಸರಿಸಬಹುದಾದ ಕೆಲವು ಯೋಗಾಸನಗಳೂ ಒತ್ತಡ ನಿವಾರಿಸಲು ಮತ್ತು ಮಾನಸಿಕವಾಗಿ ಶಾಂತವಾಗಿರಲು ನೆರವಾಗುತ್ತದೆ. ಇದರ ಜೊತೆಗೇ ಮನಸ್ಸಿಗೆ ಮುದ ನೀಡುವ ಸಂಗೀತ ಕೇಳುವುದರಿಂದಲೂ ಒತ್ತಡಕ್ಕೆ ಕಾರಣವಾಗುವ ಚಿಂತನೆಗಳಿಂದ ದೂರವಿದ್ದು ನಿರಾಳತೆ ಅನುಭವಿಸಬಹುದು.

ಸಮೀಕ್ಷೆಯ ಪ್ರಕಾರ
ಒಂದು ಸಮೀಕ್ಷೆಯ ಪ್ರಕಾರ ಶೇ 60ರಷ್ಟು ಭಾರತೀಯ ಗರ್ಭಿಣಿಯರು ಅನುಭವಿಸುವ ಒತ್ತಡಕ್ಕೆ ಕಾರಣ ಹಿರಿಯರ ಗಂಡು ಮಗುವೇ ಬೇಕು ಎಂಬ ಹಂಬಲ. ಭಾರತೀಯ ಕಾನೂನಿನಲ್ಲಿ ಲಿಂಗಪತ್ತೆಗೆ ಅವಕಾಶವಿಲ್ಲದ ಕಾರಣ ಗರ್ಭಿಣಿಗೂ ಈ ಬಗ್ಗೆ ತಿಳಿಯದೇ ಇರುವುದು ಮತ್ತು ಹೆರಿಗೆಯ ದಿನದವರೆಗೂ ಈ ಬಗ್ಗೆ ಚಿಂತಿಸುತ್ತಾ, ದೇವರಲ್ಲಿ ಪ್ರಾರ್ಥಿಸುತ್ತಾ ಇರುವುದೇ ಒತ್ತಡಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಹೊರಬರಲು ಗರ್ಭಿಣಿ ಒಂದು ಬಾರಿಯಾದರೂ ದಿಟ್ಟತನ ತೋರುವ ಅವಶ್ಯಕತೆ ಇದೆ.

ಸಮೀಕ್ಷೆಯ ಪ್ರಕಾರ
ಮಗುವಿನ ಲಿಂಗವನ್ನು ತಂದೆಯ ಅಂಶ ನಿರ್ಧರಿಸುತ್ತದೆಯೇ ಹೊರತು ತಾಯಿಯ ಅಂಶವಲ್ಲ ಎಂದು ಇಂದು ವಿಜ್ಞಾನ ಸ್ಪಷ್ಟವಾಗಿ ನಿರೂಪಿಸಿದೆ. ಈ ವಿಷಯವನ್ನು ದಿಟ್ಟತನದಿಂದ, ಇದು ಸಾಧ್ಯವಾಗದಿದ್ದರೆ ನಿಮ್ಮ ಕುಟುಂಬ ವೈದ್ಯರ ಸಹಾಯದಿಂದ, ಆಪ್ತರ ನೆರವಿನಿಂದ ಹಿರಿಯರಿಗೆ ಮನದಟ್ಟು ಮಾಡಿಸುವುದು ಅಗತ್ಯವಾಗಿದೆ. ಇದನ್ನು ಅರ್ಥಮಾಡಿಕೊಂಡ ಬಳಿಕ ಹಿರಿಯರ ನಡವಳಿಕೆ ಬದಲಾದರೆ ಗರ್ಭಿಣಿಯ ಒತ್ತಡ ಶೇಖಡಾ ತೊಂಭತ್ತೊಂಭತ್ತು ಭಾಗ ಕರಗಿ ಹೋಗುತ್ತದೆ.



Click it and Unblock the Notifications