Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಾವಸ್ಥೆಯಲ್ಲಿ ಜೀವನ ಶೈಲಿ, ಲವಲವಿಕೆಯಿಂದ ಕೂಡಿರಲಿ
ಗರ್ಭಧಾರಣೆ ಎನ್ನುವುದು ಹೆಣ್ಣಿನ ಜೀವನದ ಅತ್ಯಂತ ಮಹತ್ತರವಾದ ಸಂದರ್ಭ. ಆದರೆ ಇದನ್ನು ಸುಸೂತ್ರವಾಗಿ ನಿರ್ವಹಿಸಬೇಕು ಎಂದಲ್ಲಿ ಮೊದಲು ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳಬೇಕು. ಮಗುವು ನಿಮ್ಮ ಗರ್ಭದಲ್ಲಿ ಬೆಳೆಯಲು ಬೇಕಾದ ವಾತಾವರಣವನ್ನು ನೀವು ನಿಮ್ಮ ದೇಹದಲ್ಲಿ ನಿರ್ಮಿಸಿ ಕೊಳ್ಳಬೇಕಾಗಿರುತ್ತದೆ. ಇಂತಹ ಸಲಹೆಗಳನ್ನು ನೀವು ಎದುರು ನೋಡುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ಬನ್ನಿ ಅದಕ್ಕಾಗಿ ನಾವು ಇಂದು ನಿಮಗಾಗಿ ಗರ್ಭಧಾರಣೆಗೆ ಮೊದಲು ನೀವು ನಿಮ್ಮ ದೇಹವನ್ನು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ಬರೋಣ:

* ಟಾಕ್ಸಿನ್‌ಗಳಿಂದ ದೂರವಿರಿ
ನಿಮ್ಮ ಹೊಟ್ಟೆಯಲ್ಲಿ ಬೆಳೆಯುವ ಮಗುವು ಸಹ ನಿಮ್ಮ ದೇಹದ ಸಂಪರ್ಕಕ್ಕೆ ಬರುವ ಟಾಕ್ಸಿನ್‌ಗಳ ಪರಿಣಾಮಕ್ಕೆ ಒಳಗಾಗುತ್ತದೆ. ಒಂದೊಮ್ಮೆ ನೀವು ಟಾಕ್ಸಿನ್‌ಗಳ ಪ್ರಭಾವಕ್ಕೆ ಸಿಲುಕಿದರೆ ನಿಮ್ಮ ಮಗುವು ರಕ್ತ ಮತ್ತು ಇನ್ನಿತರ ನ್ಯೂನತೆಗಳೊಂದಿಗೆ ಜನ್ಮ ತಾಳಬಹುದು. ಹಾಗಾಗಿ ಆಹಾರ ಸೇರಿದಂತೆ, ಹಲವಾರು ರೀತಿಯ ಟಾಕ್ಸಿನ್‌ಗಳಿಂದ ಖಡಾಖಂಡಿತವಾಗಿ ದೂರವಿರಿ. ಸಾವಯವ ಆಹಾರವನ್ನು ಸೇವಿಸಿ. ಕೀಟನಾಶಕಗಳಿಂದ ಮತ್ತು ಸಿಂಥೆಟಿಕ್ ಗೊಬ್ಬರಗಳಿಂದ ಮುಕ್ತವಾದ ಆಹಾರ ಒಳ್ಳೆಯದು. ಬಿಪಿಎ ರಾಸಾಯನಿಕವನ್ನು ಹೊಂದಿರುವ ಆಹಾರ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸಬೇಡಿ. ಇವುಗಳು ನಿಮ್ಮ ಗರ್ಭದ ಮೇಲೆ ಪರಿಣಾಮವನ್ನು ಬೀರುತ್ತವೆ.
* ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿ
ನಿಮ್ಮ ಜೀರ್ಣಾಂಗ ವ್ಯೂಹವನ್ನು ಸುಧಾರಿಸಿ, ಇದು ನಿಮಗೆ ಮತ್ತು ನಿಮ್ಮ ಮಗುವಿಗೆ ಅಗತ್ಯವಾದ ಆರೋಗ್ಯಕರ ವಾತಾವರಣವನ್ನು ನೀಡುತ್ತದೆ. ಗರ್ಭಧರಿಸುವ ಮೊದಲು ನೀವು ಕೆಲವು ತಿಂಗಳು ಪ್ರೊಬಯೋಟಿಕ್ಸ್ ಸೇವಿಸುವುದು ಒಳ್ಳೆಯದು. ಇವುಗಳು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ದೇಹದಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ.
*ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ
ಒತ್ತಡವು ನಿಮ್ಮ ದೇಹವನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಇವು ನಿಮ್ಮ ದೇಹದಲ್ಲಿ ಕಾರ್ಟಿಸೊಲ್ ಮಟ್ಟವನ್ನು ಹೆಚ್ಚಿಸಿ, ಅಂಡಾಣುಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ದೇಹವನ್ನು ಬಿಗಿ ಮಾಡಿ, ರಕ್ತ ಸಂಚಾರವನ್ನು ಕಡಿಮೆ ಮಾಡುತ್ತದೆ. ಅನುಲೋಮ ವಿಲೋಮ ಮತ್ತು ಭ್ರಮರಿ ಪ್ರಾಣಾಯಾಮಗಳು ನಿಮಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.
* ಪ್ರತಿದಿನ ವ್ಯಾಯಮ ಮಾಡಿ
ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹದ ಚೈತನ್ಯ ಹೆಚ್ಚಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ಮಧುಮೇಹ ಹಾಗು ರಕ್ತದೊತ್ತಡದ ಅಪಾಯ ಕಡಿಮೆಯಾಗುತ್ತದೆ. ಜೊತೆಗೆ ವ್ಯಾಯಾಮವು ನಿಮಗೆ ಹೆರಿಗೆ ನೋವು ಬಂದಾಗ ದೇಹಕ್ಕೆ ಆಯಾಸವಾಗದಂತೆ ತಡೆಯುತ್ತದೆ. ಆದ್ದರಿಂದ ನೀವು ಗರ್ಭಿಣಿಯಾಗುವ ಮುನ್ನ, ಕೆಲವು ತಿಂಗಳುಗಳಿಗೆ ಮೊದಲೆ ವ್ಯಾಯಾಮವನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
*ಸಂಪೂರ್ಣ ದೇಹ ಪರೀಕ್ಷೆ ಮಾಡಿಕೊಳ್ಳಿ
ನೀವು ಗರ್ಭಿಣಿಯಾಗುವ ಮೊದಲು, ಸಂಪೂರ್ಣ ದೇಹದ ಪರೀಕ್ಷೆ ಮಾಡಿಕೊಳ್ಳಿ. ಇದರಿಂದ ನಿಮ್ಮ ದೇಹದಲ್ಲಿ ಗರ್ಭಧರಿಸಲು ಇರುವ ಅಡೆತಡೆಗಳ ಕುರಿತು ನಿಮಗೆ ತಿಳಿಯುತ್ತದೆ. ಜೊತೆಗೆ ನಿಮ್ಮ ದೇಹದಲ್ಲಿ ಇರುವ ನ್ಯೂನತೆಗಳು ಸಹ ಇದರಿಂದ ಪತ್ತೆಯಾಗುತ್ತವೆ. ಸ್ತನವನ್ನು ಸಹ ಪರೀಕ್ಷಿಸಿಕೊಂಡು, ನೀವು ಸಂಪೂರ್ಣ ಫಿಟ್ ಆಗಿದ್ದೀರಿ ಎಂದಾಗ ಗರ್ಭಧರಿಸುವ ಕುರಿತು ಯೋಚನೆ ಮಾಡಿ.



Click it and Unblock the Notifications

