Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರ ಆರೋಗ್ಯ ವೃದ್ಧಿಸುತ್ತದೆ, ಈ ಪುಟ್ಟ ಬೆಳ್ಳುಳ್ಳಿ
ಪ್ರತಿ ಹೆಣ್ಣಿನ ಕನಸಾಗಿರುವ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪೌಷ್ಟಿಕ ಆಹಾರ ಮತ್ತು ಆರೈಕೆ ಅಗತ್ಯ. ಅಂತೆಯೇ ಗರ್ಭಿಣಿ ಸೇವಿಸುವ ಆಹಾರ ಯಾವುದಿರಬೇಕು, ಎಷ್ಟಿರಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂಬ ಬಗ್ಗೆ ಸೂಕ್ತ ಮಾಹಿತಿ ಇರುವುದು ಅವಶ್ಯಕ. ಇವರಿಗೆ ಎಲ್ಲಾ ಆಹಾರಗಳು ಸಲ್ಲವು, ಎಷ್ಟೇ ಇಷ್ಟವಾಗಿದ್ದರೂ ಕೆಲವು ಆಹಾರಗಳು ಗರ್ಭಾವಸ್ಥೆಯಲ್ಲಿ ಖಂಡಿತಾ ಸಲ್ಲವು. ನಿಮ್ಮ ವೈದ್ಯರು ನಿಮಗೆ ಯಾವ ಆಹಾರ ಸೂಕ್ತ ಮತ್ತು ಸೂಕ್ತವಲ್ಲ ಎಂಬ ಮಾಹಿತಿಯನ್ನು ನೀಡಬಲ್ಲರು.

ಅಂತೆಯೇ ಗರ್ಭಿಣಿ ಮತ್ತು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯ ಬಲಪಡಿಸುವ ಕೆಲವು ಆಹಾರಗಳಿದ್ದು ಈ ಪಟ್ಟಿಯಲ್ಲಿ ಬೆಳ್ಳುಳ್ಳಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಗರ್ಭಾವಸ್ಥೆಯ ಎಲ್ಲಾ ತಿಂಗಳುಗಳಲ್ಲಿ ಸೇವಿಸಲು ಬೆಳ್ಳುಳ್ಳಿ ಯೋಗ್ಯವಾಗಿದ್ದು ಇದರ ಆರೋಗ್ಯಕರ ಗುಣಗಳು ಹಲವು ರೀತಿಯಲ್ಲಿ ಗರ್ಭಿಣಿಯ ಆರೋಗ್ಯವನ್ನು ವೃದ್ಧಿಸುತ್ತದೆ. ನಿಯಮಿತ ಪ್ರಮಾಣದಲ್ಲಿ ಹಾಗೂ ನಿತ್ಯವೂ ಸೇವಿಸುವ ಮೂಲಕ ಮಗುವಿನ ಬೆಳವಣಿಗೆ ಉತ್ತಮವಾಗಿದ್ದು ಹೆರಿಗೆಯೂ ಸುಲಭವಾಗುತ್ತದೆ. ಬೆಳ್ಳುಳ್ಳಿಯ ಉತ್ತಮ ಗುಣಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಹಲವು ಅಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಿದ್ದು, ಅವು ಯಾವುದು ಎಂಬುದನ್ನು ಮುಂದೆ ಓದಿ...
ಕೂದಲು ಉದುರುವುದನ್ನು ನಿಲ್ಲಿಸುತ್ತದೆ
ಬೆಳ್ಳುಳ್ಳಿಯಲ್ಲಿ ಉತ್ತಮ ಪ್ರಮಾಣದಲಿರುವ ಆಲಿಸಿನ್ ಎಂಬ ಪೋಷಕಾಂಶ ಗರ್ಭಾವಸ್ಥೆಯಲ್ಲಿ ಕೂದಲು ಉದುರುವ ತೊಂದರೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಹೊಸಕೂದಲು ಬೆಳೆಯಲು ನೆರವಾಗುತ್ತದೆ. ಇದೇ ಆಲಿಸಿನ್ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಗರ್ಭಿಣಿಯ ರಕ್ತದೊತ್ತಡ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ, ತನ್ಮೂಲಕ ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ. ಅಲ್ಲದೇ ದೇಹದ ತೂಕ ಅಗತ್ಯಮಟ್ಟದಲ್ಲಿರುವಂತೆಯೂ ನೋಡಿಕೊಳ್ಳುತ್ತದೆ. ಆದ್ದರಿಂದ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ನಿಮ್ಮ ವೈದ್ಯರ ಸಲಹೆ ಪಡೆದುಕೊಂಡು ಆ ಪ್ರಕಾರ ಸೇವಿಸುವುದು ಉತ್ತಮ.
ಕ್ಯಾನ್ಸರ್ ನಿಂದ ತಡೆಗಟ್ಟುತ್ತದೆ
ನಿತ್ಯವೂ ಬೆಳ್ಳುಳ್ಳಿಯನ್ನು ಸೇವಿಸುವ ಮೂಲಕ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ವಿಶೇಷವಾಗಿ ಕರುಳಿನ ಕ್ಯಾನ್ಸರ್ ತಡೆಗಟ್ಟುವಲ್ಲಿ ಬೆಳ್ಳುಳ್ಳಿ ಸಿದ್ಧಹಸ್ತವಾಗಿದೆ. ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮತ್ತು ಕರುಳಿನ ಮತ್ತು ಇತರ ಅಂಗಗಳ ಕ್ಯಾನ್ಸರ್ ಬರದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ.
ಶೀತ ಜ್ವರ ಕೆಮ್ಮುಗಳಿಂದ ರಕ್ಷಿಸುತ್ತದೆ
ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಶೀತ, ಜ್ವರ, ಫ್ಲೂ, ಕೆಮ್ಮು ಮೊದಲಾದವು ಸುಲಭವಾಗಿ ಗರ್ಭಿಣಿಗೆ ಆವರಿಸುತ್ತವೆ. ಇದಕ್ಕೆ ಕುಂಠಿತಗೊಂಡ ರೋಗ ನಿರೋಧಕ ಶಕ್ತಿ ಕಾರಣ. ಆದರೆ ಬೆಳ್ಳುಳ್ಳಿಯ ಸೇವನೆ ಈ ಶಕ್ತಿ ಕುಂಠಿತಗೊಳ್ಳದಂತೆ ತಡೆಯುತ್ತದೆ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡಿ ಶೀತ, ಪ್ಲೂ ಜ್ವರ, ಕೆಮ್ಮು ನೆಗಡಿ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ.
ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ
ಬೆಳ್ಳುಳ್ಳಿಯಲ್ಲಿ ಪಾಲಿ ಸಲ್ಫೈಡ್ ಎಂಬ ಪೋಷಕಾಂಶವಿದೆ. ನಮ್ಮ ರಕ್ತದ ಕೆಂಪು ರಕ್ತಕಣಗಳು ಈ ಪೋಷಕಾಂಶಗಳನ್ನು ಹೈಡ್ರೋಜನ್ ಸಲ್ಫೈಡ್ ಆಗಿ ಪರಿವರ್ತಿಸುತ್ತವೆ. ಇದು ನರಗಳು ಪೆಡಸಾಗಿದ್ದರೆ ಸಡಿಲಗೊಳಿಸಲು ನೆರವಾಗುತ್ತವೆ. ಪರಿಣಾಮವಾಗಿ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಿಕೊಟ್ಟರೆ ಸಾಕಾಗುತ್ತದೆ. ಇದು ಅಧಿಕ ರಕ್ತದ ಒತ್ತಡದ ಸಮಸ್ಯೆ ಇರುವ ಗರ್ಭಿಣಿಯರಿಗೆ ಒಂದು ವರದಾನವಾಗಿದೆ.



Click it and Unblock the Notifications


