ಗರ್ಭಿಣಿಯರೇ, ಆಹಾರದ ವಿಷಯದಲ್ಲಿ ಉದಾಸೀನ ಮಾಡಬೇಡಿ

By Manu

ಗರ್ಭಿಣಿಯರಿಗೆ ಸಲಹೆ ಕೊಡುವವರೇ ಹೆಚ್ಚು. ಮೂರು ಹೆತ್ತವಳು, ಆರು ಹೆತ್ತವಳಿಗೆ ಹೇಳಿದಂತೆ ಈ ಬಗ್ಗೆ ಅನುಭವವಿಲ್ಲದವರೂ ತಾವು ಕೇಳಿದ ವಿಷಯಗಳನ್ನು ಅನ್ವಯಿಸಲು ಪ್ರಯತ್ನಿಸುತ್ತಾರೆ. ಊಟ ಹೀಗೆ ಮಾಡು, ನಿದ್ದೆ ಹೀಗೆ ಮಾಡು, ನಡೆಯಬೇಡ ಎಂಬೆಲ್ಲಾ ವಿಷಯಗಳಿಗೆ ಹಲವಾರು ಸಲಹೆಗಳು ಪುಕ್ಕಟೆಯಾಗಿ ದೊರಕುತ್ತವೆ. ಆದರೆ ಗರ್ಭಿಣೆಯರ ಆಹಾರ ಕ್ರಮದ ವಿಷಯಕ್ಕೆ ಬಂದಾಗ ಎಲ್ಲರ ಬತ್ತಳಿಕೆ ಖಾಲಿ..!

ಹೌದು, ಗರ್ಭಾವಸ್ಥೆಯಲ್ಲಿ ಎಷ್ಟೇ ಕಾಳಜಿ ವಯಿಸಿದರೂ, ಎಷ್ಟೇ ಹಿರಿಯರ ಅಥವಾ ವೈದ್ಯರ ಸಲಹೆಯನ್ನು ಅನುಸರಿಸಿದರೂ ಕೂಡ ಕಡಿಮೆಯೇ, ಅದರಲ್ಲೂ ಈ ಸಮಯದಲ್ಲಿ ಸೇವಿಸುವ ಆಹಾರಗಳ ಬಗ್ಗೆ, ದೈಹಿಕ ಚಟುವಟಿಕೆಯ ಬಗ್ಗೆ ಅತೀವ ಕಾಳಜಿ ವಹಿಸಬೇಕು. ಏಕೆಂದರೆ ಇವುಗಳಲ್ಲಿ ಕೊಂಚ ಏರುಪೇರಾದರೂ ಗರ್ಭಪಾತದ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೆ ಈ ಅವಧಿಯಲ್ಲಿ ಸೇವಿಸುವ ಪ್ರತಿ ಆಹಾರವೂ ತಾಯಿಯಾಗುವವಳ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮೂರನೆಯ ತಿಂಗಳಲ್ಲಿ ದೇಹ ಹಲವು ಪ್ರಮುಖ ಬದಲಾವಣೆಗಳಿಗೆ ಒಳಪಡುತ್ತದೆ.

ಇದುವರೆಗೆ ಅನುಭವಕ್ಕೆ ಬರದೇ ಇದ್ದ ಮಗುವಿನ ಇರುವಿಕೆ ಈಗ ನಿಧಾನವಾಗಿ ಗಮನಕ್ಕೆ ಬರತೊಡಗುತ್ತದೆ. ಈ ಸಮಯದಲ್ಲಿಯೇ ಮಗುವಿನ ಹೃದಯ, ಮೂತ್ರಪಿಂಡ, ಕಣ್ಣುಗಳು, ಜನನಾಂಗಗಳು, ಧ್ವನಿಪೆಟ್ಟಿಗೆ ಮೊದಲಾದವುಗಳ ಮೊದಲ ಜೀವಕೋಶಗಳು ರೂಪುಗೊಳ್ಳತೊಡಗುತ್ತವೆ. ಆದ್ದರಿಂದ ಈ ಅವಧಿಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುವುದು ತಾಯಿಗೆ ಅಗತ್ಯವಾಗಿದೆ. ಪ್ರಥಮವಾಗಿ ಪ್ರತಿ ಗರ್ಭಿಣಿಗೂ ನೀಡುವ ಎಚ್ಚರಿಕೆ ಏನೆಂದರೆ ಯಾವುದೇ ಸಮಯದಲ್ಲಿ ಪಪ್ಪಾಯಿಯನ್ನು ಸೇವಿಸಕೂಡದು. ಏಕೆಂದರೆ ಇದು ಗರ್ಭಪಾತಕ್ಕೆ ನೇರವಾದ ಗುಳಿಗೆಯಾಗಿದೆ. ಇನ್ನುಳಿದಂತೆ ಗರ್ಭಿಣಿ ಅನಾರೋಗ್ಯಕರ ಸಿದ್ಧ ಆಹಾರಗಳು, ಹೊರಗಿನಿಂದ ತಂದ ಸಾಗರ ಉತ್ಪನ್ನಗಳು, ಟಿನ್ ನಲ್ಲಿರುವ ಮೀನಿನ ಖಾದ್ಯಗಳು ಇತ್ಯಾದಿಗಳಿಂದ ದೂರವಿರುವುದೇ ಉತ್ತಮ. ಬನ್ನಿ ಆಹಾರ ತಜ್ಞರು ಸಲಹೆ ಮಾಡುವ ಆಹಾರಗಳಲ್ಲಿ ಪ್ರಮುಖವಾದುದನ್ನು ಸಂಗ್ರಹಿಸಿ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ನಿಯಮಿತವಾಗಿ ಬೆಳ್ಳುಳ್ಳಿಯ ಸೇವನೆ

ನಿಯಮಿತವಾಗಿ ಬೆಳ್ಳುಳ್ಳಿಯ ಸೇವನೆ

ಬೆಳ್ಳುಳ್ಳಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಗರ್ಭಿಣಿಯ ರಕ್ತದೊತ್ತಡ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ, ತನ್ಮೂಲಕ ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ. ಅಲ್ಲದೇ ದೇಹದ ತೂಕ ಅಗತ್ಯಮಟ್ಟದಲ್ಲಿರುವಂತೆಯೂ ನೋಡಿಕೊಳ್ಳುತ್ತದೆ. ಆದ್ದರಿಂದ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎಂದು ನಿಮ್ಮ ವೈದ್ಯರ ಸಲಹೆ ಪಡೆದುಕೊಂಡು ಆ ಪ್ರಕಾರ ಸೇವಿಸುವುದು ಉತ್ತಮ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ವಿಟಮಿನ್ ಎ ಮತ್ತು ಸಿ ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿದ್ದು ಇತರ ನ್ಯೂಟ್ರೀನ್ ಅಂಶಗಳನ್ನು ಇದು ಒಳಗೊಂಡಿದೆ. ತಾಯಿಗೆ ವಿಟಮಿನ್ ಅಗತ್ಯತೆ ಹೆಚ್ಚು ಬೇಕಾಗಿದ್ದು ಅದರ ಕೊರತೆಯನ್ನು ಕಲ್ಲಂಗಡಿ ಹಣ್ಣು ನೀಗಿಸುತ್ತದೆ. ಆದ್ದರಿಂದ ಕಲ್ಲಂಗಡಿ ಹಣ್ಣನ್ನು ದಿನಕ್ಕೆ ಮೂರು ಬಾರಿ ಅವರು ಸೇವಿಸುತ್ತಿರಬೇಕು.

ಕಬ್ಬಿಣ ಮತ್ತು ಫೋಲೇಟ್

ಕಬ್ಬಿಣ ಮತ್ತು ಫೋಲೇಟ್

ಗರ್ಭಾವಸ್ಥೆಯ ಎಲ್ಲಾ ತಿಂಗಳುಗಳಲ್ಲಿ ಕಬ್ಬಿಣ ಮತ್ತು ಫೋಲೇಟ್ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಏಕೆಂದರೆ ಮಗುವಿನ ಬೆಳವಣಿಗೆಗೆ ಇವು ಅಗತ್ಯವಾಗಿದ್ದು ಈ ಅಂಶಗಳು ಹೆಚ್ಚಿರುವ ಆಹಾರಗಳನ್ನು ನಿತ್ಯವೂ ಸೇವಿಸಬೇಕು. ಮೂರನೆಯ ತಿಂಗಳಲ್ಲಿ ಕೊಂಚ ಹೆಚ್ಚಾಗಿಯೇ ಸೇವಿಸುವುದು ಉತ್ತಮ. ಬೀಟ್ ರೂಟ್, ಚಿಕ್ಕು ಹಣ್ಣು, ಓಟ್ಸ್, ಬ್ರೊಕೋಲಿ, ಮೊಟ್ಟೆ ಮತ್ತು ಹಸಿಯಾಗಿ ತಿನ್ನಬಹುದಾದ ಎಲೆಗಳು ಮತ್ತು ತರಕಾರಿಗಳಲ್ಲಿ ಈ ಅಂಶಗಳು ಹೆಚ್ಚಿರುತ್ತವೆ.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಗರ್ಭಿಣಿಯ ಮತ್ತು ಮಗುವಿನ ಆರೋಗ್ಯಕ್ಕೆ ಅಗತ್ಯವಿರುವ ಹೆಚ್ಚಿನ ಪೋಷಕಾಂಶಗಳನ್ನು ಹಾಲು ನೀಡುತ್ತದೆ. ಮೂರನೆಯ ತಿಂಗಳ ಬಳಿಕ ಮಗುವಿನ ಮೂಳೆಗಳು ರೂಪುಗೊಳ್ಳತೊಡಗುವ ಕಾರಣ ಈ ಅವಧಿಗೂ ಮುನ್ನ ತಾಯಿಯ ದೇಹದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇರುವುದು ಅವಶ್ಯ. ಆದ್ದರಿಂದ ನಿತ್ಯವೂ ಹಾಲು ಕುಡಿಯುವ ಮೂಲಕ ಕ್ಯಾಲ್ಸಿಯಂ ಸಹಿತ ಇತರ ಖನಿಜಗಳನ್ನು ತಾಯಿಯ ದೇಹ ಪಡೆಯಲು ಸಾಧ್ಯ. ಆದರೆ ಹಾಲನ್ನು ನೇರವಾಗಿ ಕುಡಿದರೆ ಕ್ಯಾಲ್ಸಿಯಂ ದೇಹಕ್ಕೆ ಲಭಿಸುವ ಪ್ರಮಾಣ ಅತಿ ಕಡಿಮೆ ಇರುವ ಕಾರಣ ಕೊಂಚ ಜೇನು ಸೇರಿಸಿ ಕುಡಿಯುವ ಮೂಲಕ ಹಾಲಿನಲ್ಲಿರುವ ಕ್ಯಾಲ್ಸಿಯಂನ ಗರಿಷ್ಠ ಪ್ರಮಾಣವನ್ನು ಪಡೆದುಕೊಳ್ಳಬಹುದು.

ನುಗ್ಗೆಕಾಯಿ

ನುಗ್ಗೆಕಾಯಿ

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿನ ಮಧುಮೇಹವನ್ನು ನಿಯಂತ್ರಿಸಲು ನುಗ್ಗೆಕಾಯಿ ಸಹಕಾರಿಯಾಗಿದೆ. ರಕ್ತದ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಟ್ಟು ಈ ಸಂದರ್ಭದಲ್ಲಿ ಕಾಡುವ ತೊಂದರೆಗಳನ್ನು ನಿವಾರಿಸುತ್ತದೆ. ಗರ್ಭಧಾರಣೆಯ ಮಧುಮೇಹವಾದ ಮೆಲ್ಲಿಟಸ್ ಅನ್ನು ನಿಯಂತ್ರಣದಲ್ಲಿಡಲು ನುಗ್ಗೆ ಸಹಾಯಕವಾಗಿದೆ.

ಹಸಿರು ಸೊಪ್ಪು

ಹಸಿರು ಸೊಪ್ಪು

ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

X
Desktop Bottom Promotion