Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಾವಸ್ಥೆಯ ಪ್ರಥಮ ವಾರದಲ್ಲಿ ಕಂಡುಬರುವ ಲಕ್ಷಣಗಳು
ಗರ್ಭಾವಸ್ಥೆಯ ಸಂದರ್ಭದಲ್ಲಿ ಹೆಣ್ಣಿಗೆ ತಾಯ್ತನದ ಪುಳಕ ಒಂದೆಡೆಯಾದರೆ ಇನ್ನೊಂದೆಡೆ ಆ ಪುಳಕದಲ್ಲೂ ಕೆಲವೊಮ್ಮೆ ದೈಹಿಕ ಸಂಕಟಗಳನ್ನು ಬೇನೆಗಳನ್ನು ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ಯಾರಾದರೂ ಹಿರಿಯರಿದ್ದಾರೆ ಎಂದಾದಲ್ಲಿ ಅವರು ಈ ವಿಷಯಗಳನ್ನು ತಿಳಿ ಹೇಳುತ್ತಾರೆ. ಆದರೆ ಕಲವೊಂದು ಸಂದರ್ಭದಲ್ಲಿ ನಾವೇ ಇದನ್ನೆಲ್ಲಾ ತಿಳಿದುಕೊಳ್ಳಬೇಕಾದಂತಹ ಪರಿಸ್ಥಿತಿ ಕೂಡ ಬಂದೊದಗಬಹುದಾಗಿದ್ದು ಗರ್ಭಾವಸ್ಥೆಯ ಸಂದರ್ಭದಲ್ಲಿ ಉಂಟಾಗುವ ಲಕ್ಷಣಗಳನ್ನು ದೈಹಿಕ ಬದಲಾವಣೆಗಳನ್ನು ಅರಿತುಕೊಳ್ಳಬೇಕಾದ್ದು ಅತ್ಯವಶ್ಯಕವಾಗಿದೆ. ಗರ್ಭಿಣಿಯರೇ, ಪ್ರತಿದಿನ ಹತ್ತು ನಿಮಿಷದ ಧ್ಯಾನ ಅನುಸರಿಸಿ
ಹೊಟ್ಟೆಯ ಸಮಸ್ಯೆಗಳಾದ ಗ್ಯಾಸ್, ಮಲಬದ್ಧತೆ, ಕೋಮಲ ಸ್ತನಗಳು, ಆಯಾಸ, ಲಹರಿಯ ಬದಲಾವಣೆಗಳು ಬೆಳಗಿನ ಅನಾರೋಗ್ಯ ಮತ್ತು ಹಾರ್ಮೋನು ಬದಲಾವಣೆಗಳು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿದೆ. ಎಲ್ಲಾ ಗರ್ಭಿಣಿಯರಿಗೆ ಇದು ಸಾಮಾನ್ಯ ರೋಗ ಲಕ್ಷಣಗಳಾಗಿದ್ದು ಇನ್ನಷ್ಟು ಗರ್ಭಾವಸ್ಥೆಯ ಲಕ್ಷಣಗಳನ್ನು ನೀವು ತಿಳಿದುಕೊಳ್ಳಬೇಕಾಗಿದೆ. ಗರ್ಭಾವಸ್ಥೆಯ ಕೆಲವೊಂದು ಪೂರ್ವ ಅಂಶಗಳನ್ನು ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದು ಪ್ರಥಮ ವಾರದಲ್ಲಿ ಈ ಲಕ್ಷಣಗಳು ಗೋಚರಿಸಲಿದ್ದು ನಿಮಗೆ ಈ ಲಕ್ಷಣಗಳು ಕಂಡುಬಂದಲ್ಲಿ ಈ ಶುಭ ಸುದ್ದಿಯನ್ನು ಖಾತ್ರಿಪಡಿಸಿಕೊಳ್ಳಲು ಮರೆಯದಿರಿ..

ರಕ್ತಸ್ರಾವ
ಮುಟ್ಟಿನ ಸ್ರಾವಕ್ಕಿಂತಲೂ ತೆಳುವಾಗಿರುವ ರಕ್ತ ಸ್ರಾವ ನಿಮಗುಂಟಾಗಬಹುದು. ಗರ್ಭ ತಳೆದ 6-12 ದಿನಗಳ ನಂತರ ಇದು ಕಂಡುಬರುತ್ತದೆ.

ವಿಚಿತ್ರ ಬಾಯಿರುಚಿ
ಸಾಮಾನ್ಯವಾಗಿ ಪ್ರಥಮ ವಾರದಲ್ಲಿ, ಬಾಯಿಯಲ್ಲಿ ಲೋಹೀಯ ರುಚಿಯನ್ನು ನೀವು ಹೊಂದಿರಬಹುದು. ಕೆಟ್ಟ ಉಸಿರಾಟವನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ಗರ್ಭಾವಸ್ಥೆಯ ಚಿಹ್ನೆ ಇದಾಗಿದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಹಾರ್ಮೋನುಗಳ ಹೆಚ್ಚಾಗುವಿಕೆಯಿಂದ ಈ ರುಚಿ ಕಂಡುಬರುತ್ತದೆ.

ಕನಸು
ತಮ್ಮ ಗರ್ಭಾವಸ್ಥೆಯ ಪ್ರಥಮ ವಾರದಲ್ಲಿ ಸಾಮಾನ್ಯವಾಗಿ ಮಹಿಳೆಯರಿಗೆ ಕನಸು ಬೀಳುವುದು ಹೆಚ್ಚು ಎಂಬುದಾಗಿ ವಿಜ್ಞಾನ ಹೇಳುತ್ತದೆ. ನಿಮಗೆ ಚಿತ್ರವಿಚಿತ್ರ ವೈವಿಧ್ಯಮಯ ಕನಸು ಬೀಳುತ್ತಿದೆ ಎಂದಾದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ.

ಕಪ್ಪು ಮಚ್ಚೆಗಳು
ಗರ್ಭಾವಸ್ಥೆಯ ಸಂದರ್ಭದಲ್ಲಿ ಕಪ್ಪು ಮಚ್ಚೆಗಳು ಗರ್ಭಿಣಿ ಮುಖದಲ್ಲಿ ಸಾಮಾನ್ಯವಾಗಿರುತ್ತದೆ. ಇದನ್ನು ಮೆಲಾಸ್ಮ ಎಂದೂ ಕರೆಯಲಾಗುತ್ತದೆ. ಸೂರ್ಯನ ಸಂವೇದನಾತ್ಮಕ ಹೆಚ್ಚುವಿಕೆಯಿಂದ ಇದು ಉಂಟಾಗುತ್ತದೆ ಮತ್ತು ತ್ವಚೆಯ ವರ್ಣದ್ರವ್ಯಗಳನ್ನು ಬದಲಾಯಿಸುತ್ತದೆ.

ಆಯಾಸ
ಬೆಳೆಯುತ್ತಿರುವ ಮಗುವಿಗೆ ನ್ಯೂಟ್ರೀನ್ಗಳ ಪೂರೈಕೆಗಾಗಿ ದೇಹವು ಹೆಚ್ಚು ರಕ್ತವನ್ನು ಉತ್ಪತ್ತಿ ಮಾಡುವುದರಿಂದ ಮಹಿಳೆಗೆ ಹೆಚ್ಚು ಸುಸ್ತು ಆಯಾಸವಾಗುವುದು ಸಹಜವಾಗಿದೆ. ಗರ್ಭಾವಸ್ಥೆಯ ಪ್ರಥಮ ವಾರದಲ್ಲಿ ಆಯಾಸ ಹೆಚ್ಚು ಸಾಮಾನ್ಯವಾಗಿದೆ.

ಮೂತ್ರದ ಸಮಸ್ಯೆಗಳು
ನೀವು ಗರ್ಭಿಣಿಯಾಗಿರುವಾಗ ದೇಹವು ಸ್ವಯಂಚಾಲಿತವಾಗಿ ಹೆಚ್ಚಿನ ನೀರಿನಂಶವನ್ನು ಉತ್ಪತ್ತಿ ಮಾಡುವುದರಿಂದ ಕಿಡ್ನಿಯು ದ್ವಿಗುಣವಾಗಿ ಕೆಲಸ ಮಾಡುತ್ತದೆ. ಹ್ಯೂಮನ್ ಕ್ರೊನಿಯೋಕ್ ಗೊನಾಡೊಟ್ರೊಪಿನ್ ಎಂಬ ಹಾರ್ಮೋನ್ ಅನ್ನು ನೀವು ಉತ್ಪತ್ತಿ ಮಾಡುತ್ತಿರುತ್ತೀರಿ ಇದು ಶ್ರೋಣಿ ಪ್ರದೇಶದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದಾಗಿಯೇ ಪ್ರತೀ 2 ನಿಮಿಷಗಳಿಗೊಮ್ಮೆ ನಿಮಗೆ ಮೂತ್ರ ಶಂಕೆ ಮಾಡಬೇಕೆಂದು ಅನಿಸುತ್ತದೆ.

ತಲೆನೋವು
ಗರ್ಭಧಿರಸಿದ ಪ್ರಥಮ ವಾರದಲ್ಲಿ ಗರ್ಭಿಣಿಯನ್ನು ತಲೆನೋವು ಕಾಡುವುದು ಸಾಮಾನ್ಯವಾಗಿದೆ. ಈ ಸಮಯದಲ್ಲಿ ದೇಹವು ಉತ್ತಮ ರಕ್ತವನ್ನು ಉತ್ಪಾದಿಸುವುದರಿಂದ ಮತ್ತು ತನ್ನ ಹಾರ್ಮೋನುಗಳನ್ನು ಹೆಚ್ಚಿಸುವುದರಿಂದಾಗಿ ಕೂಡ ತಲೆನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಬದಲಾವಣೆಗಳು ಉಂಟಾಗುವುದರಿಂದ ತಲೆನೋವು ಕಾಡುತ್ತದೆ.

ಲಹರಿ ಬದಲಾವಣೆ
ಹಾರ್ಮೋನುಗಳ ಅಧಿಕವಾಗುವುದರಿಂದ ಮಹಿಳೆಯರು ತಮ್ಮ ಭಾವನೆಗಳಲ್ಲಿ ಅಸಮತೋಲವನ್ನು ಹೊಂದಿರುತ್ತಾರೆ. ಎಲ್ಲಾ ಸಮಯವೂ ಅವರ ಮೂಡ್ ಒಂದೇ ರೀತಿಯಾಗಿರುವುದಿಲ್ಲ. ಗರ್ಭಧಾರಣೆಯ ಪ್ರಥಮ ವಾರದಲ್ಲಿ ಕಂಡುಬರುವ ಚಿಹ್ನೆ ಇದಾಗಿದೆ.



Click it and Unblock the Notifications
