Latest Updates
-
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು!
ಸುಸೂತ್ರ ಪ್ರಸವಕ್ಕಾಗಿ ಗರ್ಭಿಣಿಯರಿಗೆ 10 ಕಿವಿಮಾತುಗಳು
ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿಯರಿಗೆ ಕೊಂಚ ಕಟ್ಟು ಕಟ್ಟಲೆಗಳು ಹೆಚ್ಚಾಗಿಯೇ ಇರುತ್ತವೆ. ಹಿತಮಿತವಾದ ನಡಿಗೆ, ಸೂಕ್ತ ವ್ಯಾಯಮ, ಸಮತೋಲಿತ ಆಹಾರ, ಕಟ್ಟುನಿಟ್ಟಿನ ಪಥ್ಯ ಹೀಗೆ ತರೇಹವಾರಿ ಪಟ್ಟಿಗಳು ಸಿದ್ಧಗೊಳ್ಳುತ್ತವೆ. ಇದು ಅವರ ದೇಹಕ್ಕೆ ಒಗ್ಗದಿದ್ದರೂ ಕಷ್ಟಪಟ್ಟಾದರೂ ಅದನ್ನು ಅನುಸರಿಸಲೇಬೇಕು. ಏಕೆಂದರೆ ತನ್ನದೇ ರಕ್ತ ಮಾಂಸ ಹಚ್ಚಿ ಉದರದೊಳಗೆ ಜೀವ ತಳೆಯುತ್ತಿರುವ ಕೂಸಿಗಾಗಿ ಸಲಹೆಗಳನ್ನು ಪಾಲಿಸುತ್ತಾಳೆ ಮತ್ತು ಗರ್ಭಾವಸ್ಥೆಯ ಒಂದೊಂದು ಕ್ಷಣವನ್ನು ಆಕೆ ಅನುಭವಿಸುತ್ತಾಳೆ.
ಗರ್ಭಾವಸ್ಥೆ ಹೆಣ್ಣಿನ ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿದೆ. ಹೆಣ್ಣು ಬೆಳೆದು ಬಾಲ್ಯಾವಸ್ಥೆಯನ್ನು ಕಳೆದು ಯವ್ವೌನಾವಸ್ಥೆಗೆ ಕಾಲಿಟ್ಟು ವಿವಾಹವಾಗಿ ಒಡಲಲ್ಲಿ ತನ್ನ ಚಿಗುರನ್ನು ಪಡೆದುಕೊಂಡಾಗ ಮಾತ್ರವೇ ಆಕೆಯ ಹೆಣ್ತನ ಸಂಪೂರ್ಣವಾಗುತ್ತದೆ ಎಂಬ ಮಾತಿದೆ. ನವಮಾಸಗಳು ತನ್ನ ಕಂದನನ್ನು ತನ್ನಲ್ಲಿ ಆಶ್ರಯಿಸಿಕೊಂಡು ಬರುವ ತಾಯಿಗೆ ಪ್ರಸವದ ನಂತರ ಪುಟ್ಟ ಕಾಲುಗಳನ್ನು ನೋಡಿದಾಗ ಅನುಭವಿಸಿದ ಕಷ್ಟ ತ್ಯಾಗ ಮಾಡಿದ ಸುಖದ ಕ್ಷಣಗಳು ಸಾರ್ಥಕ ಎಂದೆನಿಸಿಬಿಡುತ್ತದೆ. ಗರ್ಭಾವಸ್ಥೆಯಲ್ಲಿ ಉಂಟಾಗುವ ಹೆರಿಗೆ ನೋವಿನ ಲಕ್ಷಣಗಳು
ತಾಯ್ತನದ ಸಂಪೂರ್ಣ ಸುಖವನ್ನು ಆಕೆ ತನ್ನ ಮಗುವಿನೊಂದಿಗೆ ಕಳೆಯುತ್ತಾಳೆ. ಆದರೆ ಗರ್ಭಾವಸ್ಥೆಯ ಸಂದರ್ಭದಲ್ಲಿ ನಿಮ್ಮ ದೈಹಿಕ ಬೇಡಿಕೆಗಳನ್ನು ನೀವು ಈಡೇರಿಸಿಕೊಂಡು ಬಯಕೆಗಳನ್ನು ಅನುಭವಿಸುತ್ತಾ ತಾಯ್ತನದ ಸುಖವನ್ನು ನಿಮ್ಮಲ್ಲಿ ತುಂಬಿಕೊಳ್ಳಬಹುದು ಎಂಬ ಸಂತಸಕರ ವಿಚಾರವನ್ನೇ ಇಂದು ತಿಳಿಸುತ್ತಿದ್ದೇವೆ. ನಿಮ್ಮ ಗರ್ಭಾವಸ್ಥೆಯಲ್ಲಿ ನಿಮಗೆ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬುದರ ಅರಿವು ನಿಮಗಿರುವುದು ಅತ್ಯವಶ್ಯಕವಾಗಿದೆ. ಅಂತೆಯೇ ಈ ಬಗ್ಗೆ ವೈದ್ಯರಲ್ಲಿ ಸೂಕ್ತ ಸಮಾಲೋಚನೆಯನ್ನು ನಡೆಸುವುದು ಉತ್ತಮ ವಿಚಾರವಾಗಿದೆ.
ವೈದ್ಯರ ಸಲಹೆಯ ಮೇರೆಗೆ ನಿಮ್ಮ ಮನದಲ್ಲಿರುವ ಬಯಕೆಗಳನ್ನು ಈಡೇರಿಸಿಕೊಂಡು ನಿಮ್ಮನ್ನು ನೀವು ಸಂತಸಕರವಾಗಿ ಇಟ್ಟುಕೊಳ್ಳಬಹುದಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ಗರ್ಭಾವಸ್ಥೆಯಲ್ಲಿ ಮಸಾಜ್ ಮಾಡುವುದು ತಾಯಿಗೆ ಮತ್ತು ಭ್ರೂಣಕ್ಕೆ ಉತ್ತಮವಾದುದು ಎಂಬುದಾಗಿ ತಿಳಿದು ಬಂದಿದೆ. ಇದರಿಂದ ದೇಹದ ರಕ್ತ ಪರಿಚಲನೆ ಸರಾಗವಾಗಿ ರಕ್ತ ಹೆಪ್ಪುಗಟ್ಟುವಿಕೆ ಅವಕಾಶವಿರುವುದಿಲ್ಲವಂತೆ. ನಿಮ್ಮ ಪ್ರಸವ ಸಂದರ್ಭದಲ್ಲೂ ಇದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಶಾಲಿಯನ್ನಾಗಿಸುತ್ತದೆ. 8ನೇ ತಿಂಗಳ ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಮುನ್ನೆಚ್ಚರಿಕೆಗಳು
ಈ ಸಂದರ್ಭದಲ್ಲಿ ಲೈಂಗಿಕ ಸುಖವನ್ನು ಅನುಭವಿಸುವುದರಿಂದ ಒಳ್ಳೆಯ ಹಾರ್ಮೋನುಗಳನ್ನು ಬಿಡುಗಡೆ ಮಾಡಿ ನಿಮಗೆ ಆರಾಮವನ್ನುಂಟು ಮಾಡುತ್ತದೆಯಂತೆ. ಇನ್ನು ಕಾಫಿ ಕುಡಿಯುವ ಬಯಕೆ ನಿಮ್ಮದು ಎಂದಾದಲ್ಲಿ ಹಿತಮಿತವಾದ ಕಾಫಿ ಸೇವನೆಯನ್ನು ನೀವು ಮಾಡಬಹುದು. ಹಾಗಿದ್ದರೆ ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ಕುರಿತ ಹತ್ತು ಅಂಶಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದು ಇದರಿಂದ ನಿಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ನೀವು ಹೇಗಿರಬೇಕು ಎಂಬುದನ್ನು ತಿಳಿದಂತಾಗುತ್ತದೆ. ಬನ್ನಿ ಆ ಮಾಹಿತಿಗಳೇನು ಎಂಬುದನ್ನು ಅರಿಯೋಣ...

ಕಾಫಿ
ಕಾಫಿಯು ಕೆಫೇನ್ ಅಂಶವನ್ನು ಒಳಗೊಂಡಿರುವುದರಿಂದ ಇದು ನಿಮ್ಮ ಮಗುವಿಗೆ ಉತ್ತಮವಾಗಿರುವುದಿಲ್ಲ, ಆದರೆ ಹೆಚ್ಚು ಕುಡಿಯುವ ಬದಲಿಗೆ ಬೆಳಗ್ಗಿನ ಉಪಹಾರದ ನಂತರ ಸ್ವಲ್ಪ ಕಾಫಿ ಸೇವನೆ ನಿಮಗೆ ಹಿತವನ್ನುಂಟು ಮಾಡಬಹುದು.

ವ್ಯಾಯಮ
ಗರ್ಭಿಣಿಯಾಗುವುದಕ್ಕೂ ಮುನ್ನ ನೀವು ಅಭ್ಯಸಿಸುತ್ತಿದ್ದ ವ್ಯಾಯಾಮಗಳನ್ನು ಗರ್ಭಾವಸ್ಥೆಯ ಸಂದರ್ಭದಲ್ಲಿ ಅಭ್ಯಸಿಸಬಹುದಾಗಿದೆ.ನಿಮ್ಮ ದೇಹವನ್ನು ಇದು ಸುದೃಢವಾಗಿಸುವ ಜೊತೆಗೆ ಗರ್ಭಕೋಶವನ್ನು ದೃಢಗೊಳಿಸುತ್ತದೆ.

ಪ್ರಯಾಣ
ಪ್ರಯಾಣ ವೇಳೆಯಲ್ಲಿ ದೀರ್ಘ ಸಮಯ ಕುಳಿತುಕೊಳ್ಳುವುದು, ನಿಲ್ಲುವುದು ಮತ್ತು ನಡೆದಾಡುವುದನ್ನು ನೀವು ಮಾಡುವುದರಿಂದಾಗಿ ಗರ್ಭಿಣಿ ಸ್ತ್ರೀಯರಿಗೆ ಪ್ರಯಾಣ ಉತ್ತಮವಾದುದಾಗಿದೆ. ಪ್ರಯಾಣ ಮಾಡುವಾಗ ಮೃದುವಾದ ಹತ್ತಿಯ ದಿಂಬನ್ನು ಬೆನ್ನ ಹಿಂಭಾಗದಲ್ಲಿರಿಸಿಕೊಳ್ಳಿ ಇದು ನಿಮಗೆ ಹೆಚ್ಚು ಆರಾಮವನ್ನು ನೀಡುತ್ತದೆ.

ಮಾಂಸ
ಗರ್ಭಿಣಿಯಾಗಿದ್ದಾಗ ಮಾಂಸಾಹಾರ ಸೇವನೆ ಉತ್ತಮವಾದುದು, ಇದು ಕಬ್ಬಿಣದ ಅಂಶವನ್ನು ಒಳಗೊಂಡಿರುತ್ತದೆ. ಅಂತೆಯೇ ತಂಪಾದ ಮಾಂಸದ ವಿಷಯಕ್ಕೆ ಬಂದಾಗ ಅದನ್ನು ಮೊದಲೇ ಬೇಯಿಸಿಕೊಳ್ಳಬೇಕು ಎಂಬುದಾಗಿ ಸಲಹೆ ನೀಡುತ್ತಾರೆ. ತಂಪಿನ ಅಂಶವುಳ್ಳ ಮಾಂಸವು ಲಿಸ್ಟಿರಿಯಾವನ್ನು ಹೊಂದಿರಬಹುದಾಗಿದ್ದರಿಂದ, ಬ್ಯಾಕ್ಟೀರಿಯಾ ಬೆಳೆಯುತ್ತಿರುವ ಭ್ರೂಣಕ್ಕೆ ಅಪಾಯವನ್ನು ತಂದೊಡ್ಡಬಹುದು.

ಹಿಂಭಾಗದಲ್ಲಿ ಮಲಗುವುದು
ಗರ್ಭಿಣಿಯರು ಬೆನ್ನ ಹಿಂಭಾಗದಲ್ಲಿ ಮಲಗಬಾರದು ಎಂಬುದಾಗಿ ಸಲಹೆ ನೀಡುತ್ತಾರೆ. ಜರಾಯುವಿಗೆ ಕಡಿಮೆ ರಕ್ತವನ್ನು ಒದಗಿಸುವಂತೆ ಇದು ಮಾಡುತ್ತದೆ ಎಂಬ ಕಾರಣಕ್ಕೆ ಹೀಗೆ ಸಲಹೆ ಮಾಡಿದ್ದಾರೆ. ಆದರೆ ಹೆಚ್ಚಿನ ಮಹಿಳೆಯರಿಗೆ ಹಿಂಭಾಗದಲ್ಲಿ ಮಲಗುವುದು ಹೆಚ್ಚು ಇಷ್ಟವಾಗಿರುತ್ತದೆ ಆದರೆ ದೀರ್ಘ ಸಮಯದವರೆಗೆ ಈ ರೀತಿಯಲ್ಲಿ ನಿದ್ರೆ ಮಾಡದಿರಿ.

ದೀರ್ಘಕಾಲ ಸ್ನಾನ
ದಣಿದ ದೇಹಕ್ಕೆ ಬೆಚ್ಚಗಿನ ನೀರು ಮತ್ತು ಸುವಾಸಿತ ಸೋಪಿನ ಟಬ್ ಸ್ನಾನ ಆಹ್ಲಾದಕಾರಿಯಾಗಿರುತ್ತದೆ. ಗರ್ಭಿಣಿಯರು ಈ ರೀತಿ ಸ್ನಾನ ಮಾಡುವುದರಿಂದ ತುಸು ಆರಾಮ ದೊರೆಯುತ್ತದೆ. 98.6 ಡಿಗ್ರಿ ಫ್ಯಾರನ್ ಹೀಟ್ನಲ್ಲಿ ದೇಹದ ಉಷ್ಣತೆಯನ್ನು ನೀವು ಕಾಪಾಡಿಕೊಳ್ಳಬೇಕಾಗುತ್ತದೆ.

ಕೂದಲಿಗೆ ವಿವಿಧ ಬಣ್ಣಗಳ ಬಳಕೆ
ಮೊದಲ ತ್ರೈಮಾಸಿಕದ ನಂತರ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಸೂಕ್ತವಾದುದಾಗಿದೆ. ಆದರೆ ಪ್ರಥಮ ತ್ರೈಮಾಸಿಕದಲ್ಲಿ ಕೂದಲಿಗೆ ಬಣ್ಣಗಳ ಬಳಕೆಯನ್ನು ಮಾಡದಿರಿ. ಕೂದಲಿನ ಬಣ್ಣವು ಹೊರಸೂಸುವ ಪರಿಮಳವು ಗರ್ಭಿಣಿ ಸ್ತ್ರೀಯರ ಉಸಿರಾಟದಲ್ಲಿ ಬೆರೆತುಕೊಳ್ಳಬಾರದು.

ಹಾಲಿನ ಉತ್ಪನ್ನಗಳು
ಹಾಲಿನ ಉತ್ಪನ್ನಗಳನ್ನು ದೀರ್ಘ ಕಾಲ ಕೆಡದಂತೆ ಪಾಶ್ಚರೀಕರಣಗೊಳಿಸುವುದರಿಂದ ಇವುಗಳ ಸೇವನೆ ಉತ್ತಮವಾದುದಾಗಿದೆ. ಆದರೆ ಪಾಶ್ಚರೀಕರಿಸಿಲ್ಲದ ಹಾಲಿನ ಉತ್ಪನ್ನಗಳು ಲಿಸ್ಟರಿಯೊಸಿಸ್ ಅಪಾಯಕ್ಕೆ ನಿಮ್ಮನ್ನು ನೂಕಬಹುದು.

ಮಸಾಜ್
ಮಸಾಜ್ನ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ನುರಿತ ಮಸಾಜ್ ತಜ್ಞರಿಂದ ಈ ಕ್ರಿಯೆಯನ್ನು ಮಾಡಿಸಿಕೊಳ್ಳಿ. ಗರ್ಭಿಣಿ ಮಹಿಳೆಯರು ವಿಶ್ರಾಂತರಾಗಿ ಒತ್ತಡವನ್ನು ನಿವಾರಿಸಿಕೊಂಡಂತಿರಲು ತಿಂಗಳಿಗೊಮ್ಮೆಯಾದರೂ ಮಸಾಜ್ ಕ್ರಿಯೆಯನ್ನು ಮಾಡಿಸಿಕೊಳ್ಳಬೇಕು.

ಸಂಭೋಗ ಕ್ರಿಯೆ
ಗರ್ಭಾವಸ್ಥೆ ಸಂದರ್ಭದಲ್ಲಿ ಸಂಭೋಗ ಕ್ರಿಯೆ ಉತ್ತಮವಾದುದು. ಅಂತೆಯೇ ಗರ್ಭಪಾತಕ್ಕೆ ಇದು ಕಾರಣವಾಗುವುದಿಲ್ಲ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಹೆಣ್ಣು ಹಾರ್ಮೋನಲ್ ಮಟ್ಟವನ್ನು ಹೆಚ್ಚು ಆನಂದಿಸುವುದರಿಂದ ಉತ್ತಮ ಕಾಮೋದ್ರೇಕವನ್ನು ಪಡೆದುಕೊಳ್ಳುತ್ತಾರೆ.



Click it and Unblock the Notifications











